For Quick Alerts
ALLOW NOTIFICATIONS  
For Daily Alerts

ಎಡ ಮಗ್ಗುಲಿಗೆ ಹೊರಳಿ ಮಲಗಿದರೆ ಹತ್ತಾರು ಅನುಕೂಲಗಳು..!

By Staff
|
ಎಡ ಮಗ್ಗುಲಲ್ಲಿ ಹೊರಳಿ ಮಲಗಿದರೆ ಹಲವಾರು ಅನುಕೂಲಗಳಿವೆ | Oneindia Kannada

ತನ್ನ ಬೆನ್ನ ಮೇಲೆ ಮಲಗುವ ಏಕೈಕ ಪ್ರಾಣಿ ಯಾವುದು ಗೊತ್ತೇ? ಅದೇ ಮನುಷ್ಯ. ನಮ್ಮ ದೇಹಕ್ಕೆ ಆಹಾರದಷ್ಟೇ ನಿದ್ರೆಯೂ ಮುಖ್ಯವಾಗಿದೆ. ಆದರೆ ನಿದ್ರಿಸುವಾಗ ಅನುಸರಿಸುವ ಭಂಗಿಯೂ ಅಗತ್ಯ. ಇದು ಸರಿಯಾಗಿದ್ದರೆ ಆರೋಗ್ಯವನ್ನು ವೃದ್ಧಿಸುತ್ತದೆ. ಅದೇ ತಪ್ಪು ಭಂಗಿ ನಿಮ್ಮ ಆರೋಗ್ಯವನ್ನು ಕೆಡಿಸಬಹುದು. ತಜ್ಞರ ಪ್ರಕಾರ ನಾವೆಲ್ಲಾರು ಇದುವರೆಗೆ ಮಲಗುವುದೇ ಹೀಗೆ ಎಂದು ತಿಳಿದುಕೊಂಡು ಬಂದಿರುವ ಬೆನ್ನ ಮೇಲೆ ಮಲಗುವುದು ತಪ್ಪು ಭಂಗಿ.

ಹೌದೇ? ಹಾಗಾದರೆ ಸರಿಯಾದ ಭಂಗಿ ಯಾವುದು ಎಂಬ ಪ್ರಶ್ನೆಗೆ ಅವರ ಉತ್ತರ ಎಡ ಮಗ್ಗಲಲ್ಲಿ ಮಲಗುವುದು ಅಂದರೆ ಎಡಗೈ ಕೆಳಗೆ ಬರುವಂತೆ ಅಡ್ಡಲಾಗಿ ಮಲಗುವುದು. ಸಾಮಾನ್ಯವಾಗಿ ಹೆಚ್ಚಿನ ಸಸ್ತನಿಗಳು ಹೊಟ್ಟೆಯಮೇಲೆ ಮಲಗಿದಂತೆ ಕಂಡುಬಂದರೂ ಕೊಂಚ ಎಡಕ್ಕೆ ಬಾಗಿರುವುದನ್ನು ಗಮನಿಸಬಹುದು. ನಮ್ಮ ಶರೀರದ ಅಂಗಗಳ ರಚನೆಯನ್ನು ಗಮನಿಸಿದರೆ ಎಡಕ್ಕೆ ಮಲಗುವುದರಿಂದ ಪಚನಾಂಗಗಳಿಗೆ ಅತಿ ಕಡಿಮೆ ಭಾರ ಬಿದ್ದು ಅವುಗಳ ಕ್ರಿಯೆ ಸರಾಗವಾಗಿ ನಡೆಯಲು ಸಾಧ್ಯವಾಗುತ್ತದೆ.

ಎಡಮಗ್ಗಲಲ್ಲಿ ಮಲಗುವುದರಿಂದ ಪಚನಕ್ರಿಯೆಗೂ ಹೊರತಾಗಿ ಇನ್ನೂ ಹಲವು ಪ್ರಯೋಜನಗಳಿವೆ. ಆದರೆ ಇದಕ್ಕೆ ವಿರುದ್ಧವಾಗಿ ಬಲಮಗ್ಗಲಿಗೆ ಮಲಗಿಕೊಂಡರೆ ಪಚನಕ್ರಿಯೆಯ ಬಳಿಕ ದೇಹದಲ್ಲಿ ಸಂಗ್ರಹವಾದ ವಿಷಕಾರಿ ವಸ್ತುಗಳು ಪೂರ್ಣವಾಗಿ ವಿಸರ್ಜನೆಯಾಗದೇ ದೇಹದಲ್ಲಿ ಸಂಗ್ರಹವಾಗುತ್ತಾ ಹೋಗುತ್ತವೆ .

ಅಲ್ಲದೇ ಹೆಚ್ಚಿನ ಭಾರ ಪಡೆದ ಪಚನಾಂಗಗಳು ಪೂರ್ಣವಾಗಿ ಕಾರ್ಯನಿರ್ವಹಿಸಲು ಹೆಚ್ಚಿನ ರಕ್ತ ಬೇಡುತ್ತವೆ. ಇದು ಹೃದಯದೊತ್ತಡ ಮೊದಲಾದ ಇತರ ತೊಂದರೆಗಳಿಗೆ ನಾಂದಿಯಾಗುತ್ತದೆ. ಎಡಮಗ್ಗಲಿಗೆ ಮಲಗಿದರೆ ಯಾವ ರೀತಿಯ ಪ್ರಯೋಜನಗಳಿವೆ ಎಂಬುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ತಿಳಿದು ಇಂದಿನಿಂದಲೇ ಅನುಸರಿಸಲು ಪ್ರಾರಂಭಿಸಿ...

ನಿಮ್ಮ ಮೂತ್ರಪಿಂಡ ಮತ್ತು ಯಕೃತ್‌ಗಳ ಕಾರ್ಯಕ್ಷಮತೆ ಹೆಚ್ಚುತ್ತವೆ

ನಿಮ್ಮ ಮೂತ್ರಪಿಂಡ ಮತ್ತು ಯಕೃತ್‌ಗಳ ಕಾರ್ಯಕ್ಷಮತೆ ಹೆಚ್ಚುತ್ತವೆ

ನಮ್ಮ ಶರೀರದ ಅನೈಚ್ಛಿಕ ಕಾರ್ಯದಲ್ಲಿ ಮೂತ್ರಪಿಂಡ ಮತ್ತು ಯಕೃತ್ ಪ್ರಮುಖ ಪಾತ್ರ ವಹಿಸುತ್ತವೆ. ಇವು ನಮ್ಮ ರಕ್ತವನ್ನು ಶೋಧಿಸಿ ಕಲ್ಮಶಗಳನ್ನು ಸಂಗ್ರಹಿಸಿ ಹೊರಹಾಕುವ ಕೆಲಸವನ್ನು ನಿದ್ದೆಯ ಸಮಯದಲ್ಲಿ ಹೆಚ್ಚಾಗಿ ಮಾಡುತ್ತವೆ.

ನಿಮ್ಮ ಮೂತ್ರಪಿಂಡ ಮತ್ತು ಯಕೃತ್‌ಗಳ ಕಾರ್ಯಕ್ಷಮತೆ ಹೆಚ್ಚುತ್ತವೆ

ನಿಮ್ಮ ಮೂತ್ರಪಿಂಡ ಮತ್ತು ಯಕೃತ್‌ಗಳ ಕಾರ್ಯಕ್ಷಮತೆ ಹೆಚ್ಚುತ್ತವೆ

ಎಡಮಗ್ಗಲಲ್ಲಿ ಮಲಗುವುದರಿಂದ ಇವುಗಳ ಮೇಲೆ ಯಾವುದೇ ಭಾರ ಬೀಳದ ಕಾರಣ ಇವುಗಳ ಕ್ಷಮತೆ ಅತಿ ಹೆಚ್ಚಾಗಿ ದೇಹದಿಂದ ಸಂಗ್ರಹವಾದ ಎಲ್ಲಾ ವಿಷಕಾರಿ ವಸ್ತುಗಳು ಹೊರಹಾಕಲು ಸಾಧ್ಯವಾಗುತ್ತದೆ.

Most Read: ಒಂದೇ ಒಂದು ರಸಗುಲ್ಲಾ ತಿಂದರೂ ಸಾಕು-ಆರೋಗ್ಯಕ್ಕೆ ಬಹಳ ಒಳ್ಳೆಯದು
ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಅನೈಚ್ಛಿಕ ಕಾರ್ಯಗಳಲ್ಲಿ ಇನ್ನೊಂದು ಅತಿ ಪ್ರಮುಖವಾದ ಕಾರ್ಯವೆಂದರೆ ಜೀರ್ಣಕ್ರಿಯೆ. ಎಡಮಗ್ಗಲಲ್ಲಿ ಮಲಗುವುದರಿಂದ ಜಠರ ಮತ್ತು ಮೇದೋಜೀರಕಾಂಗಗಳ ಮೇಲೆ ಯಾವುದೇ ಒತ್ತಡ ಬೀಳದೇ ಇವುಗಳು ತಮ್ಮ ಪೂರ್ಣ ಕ್ಷಮತೆಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ.

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಮೇದೋಜೀರಕ ಗ್ರಂಥಿಯಿಂದ ಸ್ರವಿತವಾಗುವ ರಸಗಳೂ ಪೂರ್ಣ ಪ್ರಮಾಣದಲ್ಲಿದ್ದು ಜೀರ್ಣಕ್ರಿಯೆಯಲ್ಲಿ ಸಹಕರಿಸುತ್ತದೆ. ಜಠರದಲ್ಲಿ ಪೂರ್ಣಪ್ರಮಾಣದಲ್ಲಿ ಜೀರ್ಣವಾದ ಆಹಾರ ಕರುಳುಗಳ ಕೆಲಸವನ್ನು ಸುಲಭಗೊಳಿಸುತ್ತದೆ. ಇದು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.

Most Read: ಪಪ್ಪಾಯ ಹಣ್ಣಿನ ಹೇರ್ ಮಾಸ್ಕ್-ಕೂದಲಿನ ಎಲ್ಲಾ ಸಮಸ್ಯೆಗೆ ತ್ವರಿತ ಪರಿಹಾರ

ಸುಖವಾದ ವಿಸರ್ಜನೆಗೆ ಸಹಕರಿಸುತ್ತದೆ

ಸುಖವಾದ ವಿಸರ್ಜನೆಗೆ ಸಹಕರಿಸುತ್ತದೆ

ನಮ್ಮ ಆಹಾರದ ಬಹುಪಾಲು ಜೀರ್ಣಗೊಂಡ ಬಳಿಕ ಅಗತ್ಯ ಕೆಲಸಗಳಿಗಾಗಿ ಹೀರಿಕೊಳ್ಳಲ್ಪಡುವುದು ಸಣ್ಣಕರುಳಿನಲ್ಲಿ. ಬಳಿಕ ಉಳಿದ ತ್ಯಾಜ್ಯ ದೊಡ್ಡ ಕರುಳಿಗೆ ರವಾನೆಯಾಗುತ್ತದೆ. ಮುಂದೆ ಓದಿ

ಸುಖವಾದ ವಿಸರ್ಜನೆಗೆ ಸಹಕರಿಸುತ್ತದೆ

ಸುಖವಾದ ವಿಸರ್ಜನೆಗೆ ಸಹಕರಿಸುತ್ತದೆ

ಎಡಮಗ್ಗಲಲ್ಲಿ ಮಲಗುವ ಮೂಲಕ ಈ ರವಾನೆ ಕೆಲಸಕ್ಕೆ ಗುರುತ್ವಾಕರ್ಷಣೆ ನೆರವಾಗುವುದರಿಂದ ಯಾವುದೇ ಕಷ್ಟವಿಲ್ಲದೇ ಸಣ್ಣಕರುಳಿನಿಂದ ತ್ಯಾಜ್ಯ ದೊಡ್ಡ ಕರುಳಿಗೆ ಬರುತ್ತದೆ. ಮರುದಿನ ದೊಡ್ಡ ಕರುಳಿನಲ್ಲಿ ಸಂಗ್ರಹವಾಗಿದ್ದ ತ್ಯಾಜ್ಯ ಸುಲಭವಾಗಿ, ಕಡಿಮೆ ಒತ್ತಡದಲ್ಲಿ ವಿಸರ್ಜನೆಗೊಳ್ಳಲು ಸಹಕಾರಿಯಾಗಿದೆ.

ಹೃದಯದ ಕ್ಷಮತೆ ಹೆಚ್ಚುತ್ತದೆ

ಹೃದಯದ ಕ್ಷಮತೆ ಹೆಚ್ಚುತ್ತದೆ

ಎಡಮಗ್ಗಲಲ್ಲಿ ಮಲಗುವುದರಿಂದ ಶರೀರದ ಅನೈಚ್ಛಿಕ ಕಾರ್ಯದಲ್ಲಿ ನಿರತರಾಗಿರುವ ಎಲ್ಲಾ ಅಂಗಗಳು ಕಡಿಮೆ ಹೊರೆ ಹೊತ್ತಿರುವ ಕಾರಣ ಇವುಗಳಿಗೆ ರಕ್ತ ಪೂರೈಸಲು ಹೃದಯಕ್ಕೆ ಹೆಚ್ಚಿನ ಶ್ರಮ ಬೇಕಾಗಿಲ್ಲ.

Most Read: ಬಾಳೆ ಎಲೆಯಲ್ಲಿ ಆಹಾರವನ್ನಿಟ್ಟು ಕಾಗೆಗೆ ಉಣಬಡಿಸುವ 'ಪಿತೃ ಪಕ್ಷದ' ಮಹತ್ವ

ಹೃದಯದ ಕ್ಷಮತೆ ಹೆಚ್ಚುತ್ತದೆ

ಹೃದಯದ ಕ್ಷಮತೆ ಹೆಚ್ಚುತ್ತದೆ

ಅಲ್ಲದೇ ಗುರುತ್ವಾಕರ್ಷಣೆಯ ಬಲದಿಂದಲೇ ಹೆಚ್ಚಿನ ಪ್ರಮಾಣ ಅಂಗಗಳಿಗೆ ಲಭ್ಯವಾಗುವುದರಿಂದ ಅಷ್ಟರ ಮಟ್ಟಿಗೆ ಹೃದಯದ ಭಾರ ಕಡಿಮೆಯಾಗುತ್ತದೆ. ಹೆಚ್ಚಿನ ಒತ್ತಡ ಅಗತ್ಯವಿಲ್ಲದಿರುವುದರಿಂದ ಹೃದಯಕ್ಕೆ ರಕ್ತ ಒಯ್ಯುವ ರಕ್ತನಾಳಗಳು (inferior vena cava) ಸಹಾ ಕಡಿಮೆ ಒತ್ತಡವನ್ನು ಅನುಭವಿಸುತ್ತವೆ. ಇದು ಹೃದಯದ ಕ್ಷಮತೆಯನ್ನು ಹೆಚ್ಚಿಸುತ್ತದೆ.

ಎದೆಯುರಿ ಮತ್ತು ಹೊಟ್ಟೆಯಲ್ಲಿ ಆಮ್ಲೀಯತೆಯನ್ನು ತಡೆಯುತ್ತದೆ

ಎದೆಯುರಿ ಮತ್ತು ಹೊಟ್ಟೆಯಲ್ಲಿ ಆಮ್ಲೀಯತೆಯನ್ನು ತಡೆಯುತ್ತದೆ

ಎಡಮಗ್ಗಲಲ್ಲಿ ಮಲಗುವುದರಿಂದ ಪಚನಗೊಂಡ ಆಹಾರ ಮುಂದೆ ಸಾಗಲು ಸುಲಭವಾಗುತ್ತದೆ. ಅಲ್ಲದೇ ಹಿಂದೆ ಸರಿಯುವ ಸಾಧ್ಯತೆಗಳೂ ಕಡಿಮೆಯಾಗುತ್ತದೆ. ಮುಂದೆ ಓದಿ

ಎದೆಯುರಿ ಮತ್ತು ಹೊಟ್ಟೆಯಲ್ಲಿ ಆಮ್ಲೀಯತೆಯನ್ನು ತಡೆಯುತ್ತದೆ

ಎದೆಯುರಿ ಮತ್ತು ಹೊಟ್ಟೆಯಲ್ಲಿ ಆಮ್ಲೀಯತೆಯನ್ನು ತಡೆಯುತ್ತದೆ

ಹಿಂದೆ ಸರಿದ ಆಹಾರ ಹೆಚ್ಚು ಆಮ್ಲೀಯವಾಗಿ ಹುಳಿತೇಗು, ಎದೆಯುರಿ, ಹೊಟ್ಟೆಯುರಿ ಮೊದಲಾದವುಗಳನ್ನು ಉಂಟುಮಾಡುತ್ತವೆ. ಎಡಮಗ್ಗಲಲ್ಲಿ ಮಲಗುವುದರಿಂದ ಇವೆಲ್ಲಾ ತೊಂದರೆಗಳು ಇಲ್ಲವಾಗುತ್ತವೆ.

ಬೆಳಗಿನ ಆಯಾಸವನ್ನು ಇಲ್ಲವಾಗಿಸುತ್ತದೆ

ಬೆಳಗಿನ ಆಯಾಸವನ್ನು ಇಲ್ಲವಾಗಿಸುತ್ತದೆ

ಎಡಮಗ್ಗಲಲ್ಲಿ ಮಲಗಿದ್ದಾಗ ಯಕೃತ್ ಮತ್ತು ಪಿತ್ತಕೋಶ ಸಡಿಲವಾಗಿದ್ದು ಇವುಗಳು ಯಾವುದೇ ಒತ್ತಡವಿಲ್ಲದೇ ಯಾವುದೇ ಪ್ರಮಾಣ ವ್ಯರ್ಥವಾಗದಂತೆ ಪಿತ್ತರಸವನ್ನು ಸ್ರವಿಸಬಹುದು.

Most Read: ಮನೆಯಲ್ಲಿ ಶಿವಲಿಂಗಕ್ಕೆ ಪೂಜೆ ಮಾಡುವಾಗ ಅಪ್ಪಿತಪ್ಪಿಯೂ ಇಂತಹ ತಪ್ಪುಗಳನ್ನು ಮಾಡಬೇಡಿ

ಬೆಳಗಿನ ಆಯಾಸವನ್ನು ಇಲ್ಲವಾಗಿಸುತ್ತದೆ

ಬೆಳಗಿನ ಆಯಾಸವನ್ನು ಇಲ್ಲವಾಗಿಸುತ್ತದೆ

ಇದು ಆಹಾರವನ್ನು ಪೂರ್ಣವಾಗಿ ಮತ್ತು ಸುಲಭವಾಗಿ ಜೀರ್ಣಿಸಿಕೊಳ್ಳಲು ಸಹಕರಿಸುವುದರಿಂದ ಮುಂಜಾನೆ ದೇಹಕ್ಕೆ ಹೆಚ್ಚಿನ ಶಕ್ತಿ ಲಭಿಸುತ್ತದೆ. ಪರಿಣಾಮವಾಗಿ ಮುಂಜಾನೆಯ ಆಯಾಸ ಇಲ್ಲವಾಗುತ್ತದೆ.

ಕೊಬ್ಬು ಕರಗುತ್ತದೆ ಮತ್ತು ಯಕೃತ್‌ನಲ್ಲಿ ಕೊಬ್ಬು ಸಂಗ್ರಹವಾಗುವುದು ತಪ್ಪುತ್ತದೆ

ಕೊಬ್ಬು ಕರಗುತ್ತದೆ ಮತ್ತು ಯಕೃತ್‌ನಲ್ಲಿ ಕೊಬ್ಬು ಸಂಗ್ರಹವಾಗುವುದು ತಪ್ಪುತ್ತದೆ

ಆಹಾರದಲ್ಲಿನ ಕೊಬ್ಬು ಕರಗಲು ಯಕೃತ್ ಮತ್ತು ಪಿತ್ತಕೋಶಗಳು ಸ್ರವಿಸುವ ಪಿತ್ತರಸ ಅಗತ್ಯವಾಗಿದೆ. ಇದಕ್ಕೆ emulsification ಎನ್ನುತ್ತಾರೆ. ಮುಂದೆ ಓದಿ

ಕೊಬ್ಬು ಕರಗುತ್ತದೆ ಮತ್ತು ಯಕೃತ್‌ನಲ್ಲಿ ಕೊಬ್ಬು ಸಂಗ್ರಹವಾಗುವುದು ತಪ್ಪುತ್ತದೆ

ಕೊಬ್ಬು ಕರಗುತ್ತದೆ ಮತ್ತು ಯಕೃತ್‌ನಲ್ಲಿ ಕೊಬ್ಬು ಸಂಗ್ರಹವಾಗುವುದು ತಪ್ಪುತ್ತದೆ

ಒಂದು ವೇಳೆ ಪಿತ್ತರಸದ ಪ್ರಮಾಣ ಸಾಕಷ್ಟು ಇಲ್ಲದಿದ್ದರೆ ಕೊಬ್ಬು ಕರಗದೇ ಯಕೃತ್ ನೊಳಗೇ ಉಳಿದುಬಿಡುತ್ತದೆ. ಇದಕ್ಕೆ fatty liver ಎಂದು ಕರೆಯುತ್ತಾರೆ. ಎಡಮಗ್ಗಲಲ್ಲಿ ಮಲಗುವುದರಿಂದ ಕೊಬ್ಬು ಉಳಿಯದಿರಲು ನೆರವಾಗಿ ಈ ಸ್ಥಿತಿಗೆ ಬರುವುದರಿಂದ ತಪ್ಪಿದಂತಾಗುತ್ತದೆ.

English summary

Important Health Benefits Of Sleeping On Left Side

You might be surprised to know that the position in which you sleep can improve or destroy your health. You may sleep in any position you feel comfortable. But do you know that sleeping on the left side has immense health benefits to offer you. Here are very important health benefits of sleeping on your left side.
X
Desktop Bottom Promotion