For Quick Alerts
ALLOW NOTIFICATIONS  
For Daily Alerts

ಮುತ್ತಿನಂತಹ ಸುಂದರ ಹಲ್ಲುಗಳಿಗಾಗಿ ಡಯಟ್ ಸಲಹೆಗಳು

|

ಅಗತ್ಯವಾದ ಪೋಷಕಾಂಶಗಳನ್ನು ಹೊಂದಿರುವ ಆಹಾರವು ನಿಮ್ಮ ಹಲ್ಲು ಮತ್ತು ದವಡೆಗಳ ಆರೋಗ್ಯವನ್ನು ದ್ವಿಗುಣಗೊಳಿಸುತ್ತದೆ. ಇದಕ್ಕಾಗಿಯೇ ನಾವು ನಮ್ಮ ಹಲ್ಲುಗಳ ಆರೋಗ್ಯವನ್ನು ಕಾಪಾಡಲು ಡಯಟ್ ಸಲಹೆಗಾರರನ್ನು ಸಹ ಅವಲಂಬಿಸಿರುತ್ತೇವೆ. ಪರಿಹಾರಕ್ಕಿಂತ ನಿಯಂತ್ರಣ ಒಳ್ಳೆಯದು ಎಂಬ ಸಾರ್ವಕಾಲಿಕ ನೀತಿ ಇಲ್ಲಿ ಸಹ ಅನ್ವಯವಾಗುತ್ತದೆ.

Important diet tips for perfect healthy teeth

ನವ ದೆಹಲಿಯ ಸಫ್ದಾರ್‌ಜಂಗ್ ಆಸ್ಪತ್ರೆಯ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR)ನ ದಂತ ವೈದ್ಯೆ ಮತ್ತು ರಿಸರ್ಚ್ ಟ್ರೈನಿ ಆಗಿರುವ ಡಾ. ಕಾಂಚನ್ ಸಾವ್ಲಾನಿಯವರು " ರೋಗಿಗಳು ಆರೋಗ್ಯಕಾರಿ ಆಹಾರ ತಿನ್ನುವ ಅಭ್ಯಾಸವನ್ನು ಬೆಳೆಸಿಕೊಳ್ಳಲು ಆಹಾರದ ಪಿರಮಿಡ್ ಸಾಮಾನ್ಯವಾಗಿ ಸಹಾಯ ಮಾಡುತ್ತದೆ" ಎಂದು ಹೇಳುತ್ತಾರೆ. ಇಂದು, ನಾವು ಆ ಆಹಾರದ ಪಿರಮಿಡನ್ನು ಒಮ್ಮೆ ನೋಡಿಕೊಂಡು ಬರೋಣ. ಮುತ್ತಿನಂತಹ ಬಿಳುಪಿನ ದಂತ ಪಂಕ್ತಿಗಾಗಿ ಸರಳ ಸಲಹೆಗಳು

ಸುರಕ್ಷಾ ಆಹಾರಗಳು:
ಕ್ಯಾರಿಯೊಸ್ಟೆಟಿಕ್ ಅಂಶಗಳನ್ನು ಒಳಗೊಂಡಿರುವ ಆಹಾರಗಳನ್ನು ಸುರಕ್ಷಾ ಆಹಾರಗಳು ಎಂದು ಗುರುತಿಸಲಾಗುತ್ತದೆ. ಇವುಗಳಲ್ಲಿ ಕ್ಯಾಲ್ಸಿಯಂ ಮತ್ತು ಫಾಸ್ಫೇಟ್‌ಗಳು ಅಧಿಕವಾಗಿರುತ್ತವೆ. ಉದಾ: ಕಡಲೆ ಬೀಜ, ಲೆಕ್ಟಿನ್, ಕೋಕೊ, ಪನ್ನೀರ್, ಇತ್ಯಾದಿಗಳು. ಇವುಗಳು ತಿಂಗಳಾನುಗಟ್ಟಲೆಯಿಂದ ಬಾಯಿಯಲ್ಲಿ ಶೇಖರಗೊಂಡ ಬ್ಯಾಕ್ಟೀರಿಯಾಗಳನ್ನು ಹೋಗಲಾಡಿಸುವ ಶಕ್ತಿಯನ್ನು ಹೊಂದಿರುತ್ತವೆ. ಜೊತೆಗೆ ಇವು ಹಲ್ಲಿನ ಎನಾಮೆಲ್‌ ಮೇಲೆ ಒಂದು ಸುರಕ್ಷಣಾ ಪದರವನ್ನು ನಿರ್ಮಿಸುತ್ತವೆ. ಕುಡಿಯುವ ನೀರಿನಲ್ಲಿರುವ ಫ್ಲೋರೈಡ್ ( ಅಂದಾಜು 1 ppm) ಮತ್ತು ಡಯಟ್ ನಿಮ್ಮ ಹಲ್ಲುಗಳನ್ನು ಕುಳಿ ನಿವಾರಕಗಳನ್ನಾಗಿಸುತ್ತದೆ.

ಬ್ರೆಡ್‌, ದ್ವಿದಳ ಧಾನ್ಯಗಳು:
ರೋಟಿ, ಪರೋಟಾಗಳು ಮತ್ತು ದಾಲಿಯಾ, ಕಾರ್ನ್‌ಫ್ಲಾಕ್ಸ್ ಮುಂತಾದ ಪರಿಪೂರ್ಣ ಧಾನ್ಯಗಳ ಆಹಾರಗಳು. ಜೊತೆಗೆ ಸಂಸ್ಕರಿಸಿದ ಧಾನ್ಯಗಳಿಂದ ಮಾಡಿದ ನೂಡಲ್ಸ್, ಪಾಸ್ತಾಗಳು, ಬಿಸ್ಕೆಟ್‌ಗಳು ಮತ್ತು ಇನ್ನಿತರ ಬೇಕರಿ ಪದಾರ್ಥಗಳು. ಇದರ ಜೊತೆಗೆ ಪಿಷ್ಟ ಪದಾರ್ಥಗಳು ಮತ್ತು ಸಕ್ಕರೆ ಅಂಶವಿರುವ ಕಾರ್ಬೋಹೈಡ್ರೇಟ್ ಒಳಗೊಂಡಿರುವ ಪದಾರ್ಥಗಳು ನಮ್ಮ ದಂತ ಕುಳಿಗಳಿಗೆ ಪ್ರಮುಖ ಕಾರಣವಾಗುತ್ತವೆ.

ಹಣ್ಣುಗಳು ಮತ್ತು ತರಕಾರಿಗಳು
ಇವುಗಳು ನಮ್ಮ ಆಹಾರಕ್ಕೆ ಕೇವಲ ಬಣ್ಣವನ್ನು ಮಾತ್ರ ನೀಡುವುದಿಲ್ಲ. ಜೊತೆಗೆ ಇವುಗಳನ್ನು ಅಗಿಯುವ ಮೂಲಕ ನಮ್ಮ ಬಾಯಿಯಲ್ಲಿ ಲಾಲಾ ರಸವು ಅಧಿಕವಾಗಿ ಉತ್ಪಾದನೆಯಾಗುತ್ತದೆ. ಹಸಿರು ಸೊಪ್ಪುಗಳಲ್ಲಿ ವಿಟಮಿನ್ ಎ ಮತ್ತು ಪ್ರೋಟಿನ್‌ಗಳು ಅಧಿಕವಾಗಿರುತ್ತವೆ. ಇವುಗಳು ನಿಮ್ಮ ಹಲ್ಲುಗಳು ಮತ್ತು ಮೂಳೆಗಳ ಉತ್ತಮ ಆಕಾರಕ್ಕೆ ಕೊಡುಗೆ ನೀಡುತ್ತವೆ. ದಂತಕುಳಿ ಸಮಸ್ಯೆ: ತ್ವರಿತವಾಗಿ ಶಮನಗೊಳಿಸುವ ಮನೆಮದ್ದುಗಳು

ಹಾಲು ಮತ್ತು ಹಾಲಿನ ಉತ್ಪನ್ನಗಳು
ಇವು ನಿಮ್ಮ ಆಹಾರದ ಅತ್ಯುತ್ತಮ ಕ್ಯಾಲ್ಸಿಯಂ ಆಕರಗಳು. ಪ್ರತಿಯೊಬ್ಬರು ಒಂದು ದಿನಕ್ಕೆ 250-500 ಮಿ.ಲೀ ಹಾಲನ್ನು ಕುಡಿಯಬೇಕು. ಕಡಿಮೆ ಕೊಬ್ಬಿರುವ ಪಾಶ್ಚರೀಕರಿಸಿದ ಹಾಲು ಈ ನಿಟ್ಟಿನಲ್ಲಿ ತುಂಬಾ ಒಳ್ಳೆಯದು. ಏಕೆಂದರೆ ಸಂಸ್ಕರಿಸದ ಹಾಲು ಸೇವಿಸಿದರೆ ಅದರಿಂದ ರಕ್ತದಲ್ಲಿ ಕೊಲೆಸ್ಟ್ರಾಲ್ ಪ್ರಮಾಣವು ಅಧಿಕಗೊಳ್ಳುವ ಸಂಭವವಿರುತ್ತದೆ.

ಮಾಂಸ, ಮೀನು, ಕೋಳಿ ಮಾಂಸ ಮತ್ತು ಮೊಟ್ಟೆಗಳು
ಮಾಂಸಗಳಲ್ಲಿ ಅಧಿಕ ಪ್ರಮಾಣದ ಪ್ರೋಟೀನ್‍ಗಳು, ಕಬ್ಬಿಣ, ಸತು, ಮತ್ತು ವಿಟಮಿನ್‌ಗಳು ಇರುತ್ತವೆ. ಬಿ12 ಎಂಬ WHO ಆಹಾರ ಮಾರ್ಗದರ್ಶಿಯ ಪ್ರಕಾರ ಒಬ್ಬ ವಯಸ್ಕನು ಪ್ರತಿ ದಿನ 2-3 ಬಾರಿ (ಅಂದಾಜು 110 ಗ್ರಾಂ) ಮಾಂಸವನ್ನು ತಿನ್ನಬೇಕಂತೆ. ಇಲ್ಲವಾದಲ್ಲಿ ಅದಕ್ಕೆ ಸರಿಸಮನಾದ ಟೊಪು, ಬೀನ್ಸ್, ಬೇಳೆಗಳು ಮತ್ತು ಇನ್ನಿತರ ಅಧಿಕ ವಿಟಮಿನ್ ಇರುವ ತರಕಾರಿಗಳನ್ನು ಸೇವಿಸಬೇಕಂತೆ. ಹಲ್ಲು ನೋವನ್ನು ಶಮನಗೊಳಿಸಲು ಸೂಕ್ತ ಪರಿಹಾರ

ಕೊಬ್ಬು, ಎಣ್ಣೆ ಮತ್ತು ಸಿಹಿ ತಿಂಡಿಗಳು
ಯಾವಾಗಲು PUFA (ಪಾಲಿ ಆನ್‌ಸ್ಯಾಚುರೇಟೇಡ್ ಫ್ಯಾಟ್ಟಿ ಆಸಿಡ್) ಅಧಿಕವಾಗಿರುವ ಎಣ್ಣೆಗಳನ್ನೆ ಬಳಸಿ. ಅಂದರೆ ಕುಸುಬೆ, ಸೂರ್ಯಕಾಂತಿ, ಕಾರ್ನ್, ಸೋಯಾಬಿನ್, ವೀಟ್ ಜೆರ್ಮ್ ಎಣ್ಣೆ ಇತ್ಯಾದಿಗಳನ್ನು ಸೇವಿಸಿ. ನಿಯಮಿತವಾಗಿ ಸಿಹಿ ತಿಂಡಿಗಳು, ಚಾಕೊಲೆಟ್‌ಗಳು, ಕ್ಯಾರಮೆಲ್‌ಗಳನ್ನು ಮತ್ತು ಕೆನೆಭರಿತ ಬಿಸ್ಕೆಟ್‌ಗಳನ್ನು ಸೇವಿಸುವುದನ್ನು ನಿಲ್ಲಿಸಿ. ಇದರಿಂದ ಹಲ್ಲಿನ ಆರೋಗ್ಯ ಗಣನೀಯವಾಗಿ ಕ್ಷೀಣಿಸುತ್ತದೆ.

English summary

Important diet tips for perfect healthy teeth

A diet rich in essential nutrients invigorates your gums and teeth. This is the reason why diet counseling is an important aspect for dental caries prevention and for ensuring a pearly white smile.
X
Desktop Bottom Promotion