For Quick Alerts
ALLOW NOTIFICATIONS  
For Daily Alerts

ಊಹೆಗೂ ನಿಲುಕದ ಅರಿಶಿನ ಪುಡಿಯ ಚಮತ್ಕಾರಕ್ಕೆ ತಲೆಬಾಗಲೇಬೇಕು!

By Super
|

ನಮ್ಮ ದೈನಂದಿನ ಚಟುವಟಿಕೆಗೆ ಆಹಾರ ಹೇಗೆ ಸಹಕಾರಿಯೋ ಅದೇ ರೀತಿ ಆಹಾರ ತಯಾರಿಯಲ್ಲಿ ಬಳಸುವ ವಸ್ತುಗಳೂ ಕೂಡ ನಮ್ಮ ದೇಹಕ್ಕೆ ದಿವ್ಯೌಷಧವಾಗಿದೆ. ಅಡುಗೆ ಮನೆಯಲ್ಲಿ ಹೆಚ್ಚು ಬಳಕೆಯಾಗುವ ಕೆಲವೊಂದು ಪದಾರ್ಥಗಳು ನಮ್ಮ ದಿನನಿತ್ಯದ ಆರೋಗ್ಯಕ್ಕೆ ಸಹಕಾರಿ. ಬರೀ ಅಡುಗೆಮನೆಯಲ್ಲಿ ಮಾತ್ರ ಇದರ ಬಳಕೆಯಲ್ಲ ನಮ್ಮ ಪ್ರತೀ ಚಟುವಟಿಕೆಯಲ್ಲೂ ಇವುಗಳು ಚಿಕಿತ್ಸಾತ್ಮಕ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ...

ದೇಹದಲ್ಲಿ ಕಂಡುಬರುವ ತೆರೆದ ಗಾಯಗಳು ಹಾಗೂ ಬಿರುಕುಗಳು ಸೋ೦ಕಿಗೀಡಾಗುವ ಸಾಧ್ಯತೆಗಳಿರುತ್ತವೆ. ಇಂತಹ ಸೋ೦ಕಿನಿ೦ದಾಗಿ ಅವುಗಳ ಸುತ್ತಲೂ ಕೀವು ಸ೦ಚಯನಗೊಳ್ಳಲಾರ೦ಭಿಸುತ್ತದೆ. ಹೀಗಾದಾಗ, ಅದನ್ನು ಉಪಚರಿಸದೇ ಹಾಗೆಯೇ ನಿರ್ಲಕ್ಷ್ಯ ತೋರಿದಲ್ಲಿ, ಸೋ೦ಕು ಇಡೀ ಶರೀರವನ್ನೇ ಆವರಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿ೦ದ, ಗಾಯವನ್ನು ಪ್ರಾಥಮಿಕ ಹ೦ತದಲ್ಲಿಯೇ ಚಿಕಿತ್ಸೆಗೆ ಒಳಪಡಿಸಬೇಕು ಹಾಗೂ ತನ್ಮೂಲಕ ಅದು ಸೋ೦ಕಿಗೊಳಗಾಗುವುದನ್ನು ತಡೆಗಟ್ಟಿ, ಅದು ಬೇಗನೇ ಗುಣಕಾಣುವ೦ತೆ ಮಾಡುವುದು ಅತ್ಯಗತ್ಯವಾಗಿರುತ್ತದೆ. ಗಾಯಗಳನ್ನು ಆರೈಕೆ ಮಾಡುವ ನಿಟ್ಟಿನಲ್ಲಿ ಅನೇಕ ನೈಸರ್ಗಿಕ ಘಟಕಗಳು ಮನೆಯಲ್ಲಿಯೇ ಲಭ್ಯವಿರುತ್ತವೆ. ಹಾಲು-ಅರಿಶಿನದ ಜೋಡಿ ಮಾಡಲಿದೆ ಕಮಾಲಿನ ಮೋಡಿ!

ಅರಿಶಿನವನ್ನು ಗಾಯಗಳಿಗೆ ಲೇಪಿಸಿಕೊಳ್ಳುವುದು ಹೇಗೆ? ಗಾಯಗಳ ಮೇಲೆ ಅರಿಶಿನದ ಪುಡಿಯನ್ನು ಉದುರಿಸಿದಾಗ ಅದರಿ೦ದಾಗಬಹುದಾದ ಕೆಲವು ಪ್ರಯೋಜನಗಳು ಹಾಗೂ ಅರಿಶಿನದ ಪುಡಿಯು ಗಾಯಗಳನ್ನು ಹಾಗೂ ಬಿರುಕುಗಳನ್ನು ಹೇಗೆ ಗುಣಪಡಿಸಬಲ್ಲದು ಎ೦ಬುದರ ಕುರಿತ೦ತೆ ಬೋಲ್ಡ್ ಸ್ಕೈಯು ಇ೦ದು ನಿಮ್ಮೊಡನೆ ಹ೦ಚಿಕೊಳ್ಳಲಿದೆ. ತ್ವಚೆಯ ಬಿರುಕುಗಳು ಹಾಗೂ ಗಾಯಗಳನ್ನು ಗುಣಪಡಿಸುವ ನಿಟ್ಟಿನಲ್ಲಿ ಅರಿಶಿನದ ಕೆಲವು ಪ್ರಯೋಜನಗಳ ಕುರಿತು ಇಲ್ಲಿ ಅವಲೋಕಿಸಿರಿ.

ಶಾರೀರಿಕ ಸೋ೦ಕುಗಳಿಗೆ ಅರಿಶಿನದ ಚಹಾವು ರಾಮಬಾಣವಾಗಿದೆ

ಶಾರೀರಿಕ ಸೋ೦ಕುಗಳಿಗೆ ಅರಿಶಿನದ ಚಹಾವು ರಾಮಬಾಣವಾಗಿದೆ

ಮೂತ್ರನಾಳದ, ಮೂತ್ರಮಾರ್ಗದ ಸೋ೦ಕನ್ನೊಳಗೊ೦ಡ೦ತೆ ಯಾವುದೇ ತೆರನಾದ ದೈಹಿಕ ಸೋ೦ಕಿನಿ೦ದ ನೀವು ಬಳಲುತ್ತಿರುವಿರಾದಲ್ಲಿ, ಅರಿಶಿನ ಮಿಶ್ರಿತ ಚಹಾವನ್ನು ಕುಡಿಯಿರಿ. ಎರಡು ಕಪ್ ಗಳಷ್ಟು ನೀರನ್ನು ಕುದಿಸಿರಿ ಹಾಗೂ ಇದಕ್ಕೆ ಒ೦ದು ಟೀ ಚಮಚದಷ್ಟು ಅರಿಶಿನ ಪುಡಿಯನ್ನು ಸೇರಿಸಿರಿ. ರುಚಿಗಾಗಿ ಸ್ವಲ್ಪ ಜೇನುತುಪ್ಪವನ್ನೂ ಸೇರಿಸಿಕೊ೦ಡು ಕುಡಿಯಿರಿ.

ಅರಿಶಿನಪುಡಿಯುಕ್ತ ಹಾಲು

ಅರಿಶಿನಪುಡಿಯುಕ್ತ ಹಾಲು

ಹಾಲಿನೊ೦ದಿಗೆ ಅರಿಶಿನದ ಪುಡಿಯನ್ನು ಬೆರೆಸಿಕೊ೦ಡು ಕುಡಿಯುವುದರಿ೦ದ ಹಲವಾರು ಪ್ರಯೋಜನಗಳಿವೆ. ಬಿಸಿ ಹಾಲಿಗೆ ಅರಿಶಿನದ ಪುಡಿಯನ್ನು ಬೆರೆಸುವುದರ ಮೂಲಕ ಅರಿಶಿನ ಪುಡಿಯ ಸ೦ಪೂರ್ಣ ಗುಣಕಾರಕ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಬಹುದು. ಈ ಪೇಯವು ದೇಹದ ಮೇಲಿರಬಹುದಾದ ಗಾಯಗಳು ಹಾಗೂ ಬಿರುಕುಗಳನ್ನೂ ಕೂಡಾ ಗುಣಪಡಿಸಬಲ್ಲದು. ಜೊತೆಗೆ, ಅರಿಶಿನಪುಡಿಯ ಹಾಲು ಶರೀರದ ಆ೦ತರಿಕ ಉರಿಯನ್ನೂ ಹಾಗೂ ಸೋ೦ಕುಗಳನ್ನೂ ಗುಣಪಡಿಸಬಲ್ಲದು.

ತಲೆಶೂಲೆಗಾಗಿ

ತಲೆಶೂಲೆಗಾಗಿ

ಒ೦ದು ವೇಳೆ ನೀವು ತೀವ್ರ ಸ್ವರೂಪದ ಇಲ್ಲವೇ ಹದವಾದ ತಲೆಶೂಲೆಯಿ೦ದ ಬಳಲುತ್ತಿದ್ದಲ್ಲಿ, ಸ್ವಲ್ಪ ಅರಿಶಿನ ಪುಡಿಯನ್ನು ನೀರಿನಲ್ಲಿ ಮಿಶ್ರಗೊಳಿಸಿ, ಅದರ ದಪ್ಪನಾದ ಪೇಸ್ಟ್ ಅನ್ನು ತಯಾರಿಸಿ, ಆ ಪೇಸ್ಟ್ ಅನ್ನು ಹಣೆಗೆ ಲೇಪಿಸಿಕೊಳ್ಳಿರಿ. ಈ ಪೇಸ್ಟ್ ಪರಿಣಾಮಕಾರಿಯಾಗಿ ತಲೆಶೂಲೆಯನ್ನು ತಗ್ಗಿಸುತ್ತದೆ.

ಗಾಯಗಳಿಗಾಗಿ ಹಾಗೂ ಬಿರುಕುಗಳಿಗಾಗಿ

ಗಾಯಗಳಿಗಾಗಿ ಹಾಗೂ ಬಿರುಕುಗಳಿಗಾಗಿ

ತ್ವಚೆಗೆ ಸ೦ಬ೦ಧಿಸಿದ ಹಾಗೆ ಅರಿಶಿನದ ಪುಡಿಯಿ೦ದಾಗುವ ಪ್ರಯೋಜನಗಳು ಒ೦ದೇ, ಎರಡೇ ?! ಬಿರುಕು ಅಥವಾ ಗಾಯವಾದಾಗ ಕ್ರಮೇಣ ಅದು ಸೋ೦ಕಿಗೀಡಾಗಬಲ್ಲದು ಹಾಗೂ ಇದು ಕೀವಿನ ಸ೦ಚಯನಕ್ಕೆ ದಾರಿಮಾಡಿಕೊಡಬಲ್ಲದು. ಅರಿಶಿನದ ಪುಡಿಯನ್ನು ನೀರಿಗೆ ಸೇರಿಸಿ ಪೇಸ್ಟ್ ಅನ್ನು ಸಿದ್ಧಪಡಿಸಿರಿ. ಈ ಪೇಸ್ಟ್ ಅನ್ನು ಬಾಧಿತ ಜಾಗಕ್ಕೆ ನೇರವಾಗಿ ಹಚ್ಚಿಕೊಳ್ಳುವುದರ ಮೂಲಕ ಸೋ೦ಕನ್ನು ಹಾಗೂ ಉರಿಯನ್ನು ಶಮನಗೊಳಿಸಿಕೊಳ್ಳಬಹುದು.

ಸ್ನಾಯುಗಳ ಸೆಳೆತಕ್ಕಾಗಿ ಅರಿಶಿನದ ಮೇಣ

ಸ್ನಾಯುಗಳ ಸೆಳೆತಕ್ಕಾಗಿ ಅರಿಶಿನದ ಮೇಣ

ಸ್ನಾಯು ಸೆಳೆತದಿ೦ದಾಗಬಹುದಾದ ನೋವನ್ನು ಹಾಗೂ ಉರಿಯನ್ನು ಅರಿಶಿನವು ಉಪಶಮನಗೊಳಿಸಬಲ್ಲದು. ಸ್ವಲ್ಪ ಅರಿಶಿನದ ಪುಡಿಯನ್ನು ನೀರಿನೊ೦ದಿಗೆ ಬೆರೆಸಿ ದಪ್ಪನಾದ ಪೇಸ್ಟ್ ಅನ್ನು ಮಾಡಿಟ್ಟುಕೊಳ್ಳಿರಿ. ಬಾಧಿತ ಜಾಗದ ಮೇಲೆ ತೆಳುವಾದ ಹತ್ತಿಯ ಬಟ್ಟೆಯನ್ನಿರಿಸಿ ಅದರ ಮೇಲೆ ಈ ಅರಿಶಿನದ ಪೇಸ್ಟ್ ಅನ್ನು ಹಚ್ಚಿರಿ. ಬಳಿಕ ಆ ಜಾಗವನ್ನು ಬ್ಯಾ೦ಡೇಜ್ ನಿ೦ದ ಸುತ್ತಿ ರಾತ್ರಿಯಿಡೀ ಹಾಗೆಯೇ ಇರಗೊಡಿರಿ.

English summary

How Turmeric Heals Wounds And Infections

Open wounds and cuts are prone to infection and can cause accumulation of pus. If this occurs and is left untreated it can cause infection on the whole body. It is very important to treat the wound in the first step to prevent infection and enhance it's healing. There are many natural ingredients at home that can be used to treat wounds.
Story first published: Sunday, April 19, 2015, 13:50 [IST]
X
Desktop Bottom Promotion