For Quick Alerts
ALLOW NOTIFICATIONS  
For Daily Alerts

ಎಚ್ಚರ: ಬೇಸಿಗೆಯ ಉರಿ ಬಿಸಿಲಿನ ಧಗೆಯನ್ನು ನಿರ್ಲಕ್ಷಿಸಬೇಡಿ!

By Super
|

ಬೇಸಿಗೆಯ ದಿನಗಳಲ್ಲಿ, ಸೆಖೆ, ಧೂಳು, ಬಾಯಾರಿಕೆ ನಿತ್ಯದ ಬವಣೆಗಳಾಗಿವೆ. ಬೇಸಿಗೆಯಲ್ಲಿ ದೇಹಕ್ಕೆ ಹೆಚ್ಚಿನ ನೀರಿನ ಅಗತ್ಯವಿದೆ. ಶರೀರವನ್ನು ಬೇಸಿಗೆಯ ದಿನಗಳನ್ನು ಸಮರ್ಥವಾಗಿ ಎದುರಿಸಲು ತಯಾರಿಗೊಳಿಸುವುದು ಬಿಸಿಲಿನ ಝಳಕ್ಕೆ ಬಲಿಯಾದ ಬಳಿಕ ಕೈಗೊಳ್ಳುವ ಕ್ರಮಕ್ಕಿಂತ ಉತ್ತಮವಾಗಿದೆ. ಅದರಲ್ಲೂ ವಿಶೇಷವಾಗಿ ಹೆಚ್ಚಿನ ದೈಹಿಕ ವ್ಯಾಯಾಮ ಮಾಡುವವರು ಪೂರ್ಣ ತಯಾರಿಯಿಲ್ಲದೇ ದೇಹದಂಡಿಸುವುದು ಒಳ್ಳೆಯದಲ್ಲ.

ಕೊಂಚ ಬಿಸಿ ಏನು ತಾನೇ ಮಾಡೀತು ಎಂದು ಸರ್ವಥಾ ಉದಾಸೀನ ಬೇಡ. ಏಕೆಂದರೆ ವಾತಾವರಣದ ಬಿಸಿ ಮತ್ತು ದೈಹಿಕ ಶ್ರಮದ ಬಿಸಿ ಎರಡೂ ಕೂಡಿ ದೇಹದ ತಾಪಮಾನವನ್ನು ವಿಪರೀತವಾಗಿ ಏರಿಸುತ್ತವೆ. ದೇಹದ ತಂಪುಗೊಳಿಸುವ ಸಾಮರ್ಥ್ಯವನ್ನು ಈ ಬಿಸಿ ಮೀರಿದರೆ ಹೃದಯದ ಬಡಿತ ಅತೀವ ಹೆಚ್ಚಾಗಿ ಕುಸಿಯಲೂಬಹುದು. ಅತೀವ ಬಿಸಿ ದೇಹಕ್ಕೆ ಯಾವ ರೀತಿಯಲ್ಲಿ ತೊಂದರೆ ನೀಡಬಹುದು ಎಂಬ ಮಾಹಿತಿಯನ್ನು ಈಗ ನೋಡೋಣ ಎಚ್ಚರ: ಬೇಸಿಗೆ ಕಾಲದ ರೋಗ ಹಾವಳಿಯ ಬಗ್ಗೆ ನಿಗಾ ಇರಲಿ!

ಪ್ರಜ್ಞಾಶೂನ್ಯತೆ ಆವರಿಸಬಹುದು

How Summer Heat Affects Your Body

ಬಿಸಿಲಿನಲ್ಲಿ ಸಾಲಾಗಿ ನಿಂತು ಎಂದಿಗೂ ತಡವಾಗಿಯೇ ಬರುವ ಶಾಸಕರಿಗಾಗಿ ಕಾಯುವ ಮಕ್ಕಳ ಸಾಲನ್ನು ಗಮನಿಸಿದ್ದೀರಾ? ಬಿಸಿಲು ಏರುತ್ತಿದ್ದಂತೆ ಒಬ್ಬಿಬ್ಬರಾದರೂ ನಿಂತಿದ್ದಲ್ಲೇ ಪ್ರಜ್ಞೆ ತಪ್ಪಿ ಬೀಳುತ್ತಾರೆ. ಏಕೆಂದರೆ ಪ್ರಖರ ಬಿಸಿಲಿನ ಕಿರಣಗಳಲ್ಲಿರುವ ಅತಿನೇರಳೆ ಕಿರಣಗಳು ಚರ್ಮದ ಮೂಲಕ ದೇಹದ ಬಿಸಿಯನ್ನು ಹೆಚ್ಚಿಸುತ್ತಾ ಹೋಗುತ್ತವೆ. ಈ ಬಿಸಿಯನ್ನು ಕಡಿಮೆಗೊಳಿಸಲು ಬೆವರುವುದು ಮಾತ್ರವಲ್ಲ, ಗಾಳಿಯಾಡುವುದೂ ಮುಖ್ಯ. ನಿಂತಲ್ಲೇ ನಿಂತಿದ್ದರೆ ಅಥವಾ ಚಟುವಟಿಕೆ ಕಡಿಮೆಯಾದರೆ ಬಿಸಿ ಕಡಿಮೆಯಾಗದೇ ದೇಹ ತನ್ನ ಎಲ್ಲಾ ಸಾಮಥ್ಯವನ್ನು ತಣಿಸಲು ಉಪಯೋಗಿಸುತ್ತದೆ.
ಇದೇ ಕಾರಣಕ್ಕೆ ಮೆದುಳಿಗೆ ರಕ್ತಸಂಚಾರ ಕಡಿಮೆಯಾಗಿ ಪ್ರಜ್ಞಾಶೂನ್ಯತೆ ಆವರಿಸಿ ಕುಸಿದುಬೀಳುವುದು ಅನಿವಾರ್ಯವಾಗುತ್ತದೆ. ಹಾಗಾಗಿ ನೇರವಾದ ಬಿಸಿಲಿನ ಕಿರಣಗಳಿಂದ ಸಾಧ್ಯವಾದಷ್ಟು ದೂರವಿರಿ. ವಿಶೇಷವಾಗಿ ಮಕ್ಕಳನ್ನು ಎಂದಿಗೂ ಬಿಸಿಲಿನಲ್ಲಿ ನಿಲ್ಲಿಸಬೇಡಿ. ಎಷ್ಟೇ ಪ್ರಮುಖ ವ್ಯಕ್ತಿಯೇ ಆಗಲಿ ಮಕ್ಕಳನ್ನು ಬಿಸಿಲಿನಲ್ಲಿ ನಿಲ್ಲಿಸಿ ಸ್ವಾಗತಿಸುವ ಅಗತ್ಯ ಬೇಡ. ಯಾವುದೇ ವ್ಯಕ್ತಿ ತನಗಾಗಿ ಮಕ್ಕಳು ಪ್ರಜ್ಞೆ ತಪ್ಪುವುದನ್ನು ಖಂಡಿತಾ ಸಹಿಸಲಾರ.

ಸ್ನಾಯು ಸೆಳೆತ ಎದುರಾಗಬಹುದು


ನಮ್ಮ ಸ್ನಾಯುಗಳ ಕಾರ್ಯಕ್ಷಮತೆಗೆ ನೀರು ಅತ್ಯಂತ ಅಗತ್ಯವಾಗಿದೆ. ಬಿಸಿಲಿನಲ್ಲಿ ಹೆಚ್ಚಿನ ನೀರು ದೇಹದ ಬಿಸಿಯನ್ನು ತಣಪುಗೊಳಿಸಲೇ ಉಪಯೋಗವಾಗುವುದರಿಂದ ಸ್ನಾಯುಗಳಿಗೆ ಲಭ್ಯವಾಗುವ ನೀರು ಕೊಂಚ ಕಡಿಮೆಯಾಗುತ್ತದೆ. ಬಿಸಿ ಹೆಚ್ಚಿದ್ದಾಗ ವ್ಯಾಯಾಮ ಮಾಡುವುದರಿಂದ ಸ್ನಾಯುಗಳು ನೀರಿನ ಅತೀವ ಕೊರತೆಯನ್ನು ಅನುಭವಿಸುತ್ತವೆ. ದೇಹ ಈಗ ವ್ಯಾಯಾಮ ಬೇಡ ಎಂದು ನೋವಿನ ಮೂಲಕ ಎಚ್ಚರಿಕೆ ನೀಡುತ್ತದೆ. ಒಂದು ವೇಳೆ ಈ ಸೂಚನೆಯನ್ನು ಅಲಕ್ಷಿಸಿ ವ್ಯಾಯಾಮ ಮಾಡಿದರೆ ಕೂಡಲೇ ಸಂಕುಚಿತಗೊಂಡ ಸ್ನಾಯುಗಳು ಪೂರ್ವಸ್ಥಿತಿಗೆ ಬರದೇ ಅಲ್ಲೇ ಉಳಿದುಕೊಳ್ಳುತ್ತದೆ. ಇದನ್ನೇ ಸೆಡೆತ ಎನ್ನುತ್ತೇವೆ. ನರಗಳು ಮಡಚಿಕೊಂಡು ಅತೀವ ನೋವು ಪ್ರಾರಂಭವಾಗುತ್ತದೆ. ಕೂಡಲೇ ವೈದ್ಯಕೀಯ ನೆರವು ದೊರಕದಿದ್ದರೆ ಪ್ರಾಣಾಪಾಯವೂ ಎದುರಾಗಬಹುದು.

ಉಷ್ಣಾಘಾತ (Heat Stroke)


ವಿಪರೀತ ಬಿಸಿಯಿಂದ ದೇಹ ತನ್ನ ಸಾಮರ್ಥ್ಯ ಮೀರಿ ಕಾರ್ಯನಿರ್ವಹಿಸುವುದರಿಂದ ದೇಹದ ಇತರ ಕಾರ್ಯಗಳಿಗೆ ಶಕ್ತಿ ಸಾಲದೇ ಆ ವ್ಯವಸ್ಥೆಗಳು ಕುಸಿಯಬಹುದು. ಇದನ್ನೇ ಉಷ್ಣಾಘಾತ (Heat Stroke) ಎಂದು ಕರೆಯುತ್ತಾರೆ. ಈ ಸ್ಥಿತಿಗೆ ಒಳಗಾದ ವ್ಯಕ್ತಿಗಳು ಹೆಚ್ಚಿನ ಕಿರಿಕಿರಿ, ಗೊಂದಲ, ತುರಿಕೆಯನ್ನು ಅನುಭವಿಸುತ್ತಾರೆ. ನಿತ್ರಾಣದಿಂದ ಕುಸಿದು ಬೀಳುತ್ತಾರೆ. ಮರುಭೂಮಿಯಲ್ಲಿ ನೀರಿಲ್ಲದೇ ಹೀಗೆ ಕುಸಿದು ಬಿದ್ದು ಸಾವನ್ನಪ್ಪಿದವರನ್ನು ಮರುಭೂಮಿ ಕೊಂದಿದೆ ಎನ್ನುತ್ತಾರೆ. (desert kills) ಈ ಸ್ಥಿತಿಯಲ್ಲಿರುವ ವ್ಯಕ್ತಿಯನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯದಿದ್ದರೆ ಪ್ರಮುಖ ಅಂಗಗಳು ವಿಫಲಗೊಳ್ಳಬಹುದು ಅಥವಾ ಪ್ರಾಣಕ್ಕೇ ಕುತ್ತು ಎದುರಾಗಬಹುದು. ಬೇಸಿಗೆಯಲ್ಲಿ ದೇಹದ ಅಧಿಕ ಉಷ್ಣತೆಯನ್ನು ತಗ್ಗಿಸಿಕೊಳ್ಳುವುದು ಹೇಗೆ?

ವಾಕರಿಕೆ (Nausea)


ಅತೀವ ಬಿಸಿಯಿಂದ ದೇಹದ ಜೀರ್ಣಶಕ್ತಿಯೂ ಬಾಧೆಗೊಳಗಾಗುತ್ತದೆ. ಜಠರ ಮತ್ತು ಕರುಳುಗಳಲ್ಲಿ ನೀರು ಕಡಿಮೆಯಾಗಿ ಆಮ್ಲೀಯತೆ ಮತ್ತು ಅನಿಲಗಳು ಹೆಚ್ಚುತ್ತವೆ. ಇದರಿಂದ ಹೊಟ್ಟೆಯಲ್ಲಿ ಉರಿ ಮತ್ತು ಹುಳಿತೇಗು ಎದುರಾಗುತ್ತದೆ. ಈ ಸಮಯದಲ್ಲಿ ಹೆಚ್ಚಿನ ದ್ರವಾಹಾರಗಳನ್ನು ಸೇವಿಸಬೇಕು. ಇಲ್ಲದಿದ್ದರೆ ವಾಕರಿಕೆ, ತೇಗು ಮೊದಲಾದ ತೊಂದರೆಗಳು ಎದುರಾಗಬಹುದು.

ದೇಹಕ್ಕೆ ಅಗತ್ಯವಿರುವಷ್ಟು ನೀರು ಲಭ್ಯವಾಗದೇ ಇರುವುದು (Dehydration)


ಅತೀವ ಬಿಸಿಯಿಂದ ದೇಹಕ್ಕೆ ಅಗತ್ಯವಿರುವಷ್ಟು ನೀರು ಲಭ್ಯವಾಗದೇ ಜೀವಕೋಶಗಳು ಸೊರಗುತ್ತವೆ. ಪರಿಣಾಮವಾಗಿ ಚರ್ಮ ಬಿಳಿಚಿಕೊಳ್ಳುತ್ತದೆ, ನೆರಿಗೆಗಳು ಮೂಡುತ್ತವೆ. ಸ್ನಾಯುಗಳು ಸೊರಗಿ ಶಕ್ತಿಹೀನವಾಗುತ್ತವೆ. ನರಗಳು ಉಬ್ಬುತ್ತವೆ. ಈ ಸ್ಥಿತಿಯನ್ನೇ ದೇಹ ಒಣಗುವುದು ಎಂದು ಕರೆಯುತ್ತೇವೆ. ಇದರಿಂದ ತಪ್ಪಿಸಿಕೊಳ್ಳಲು ಸಾಕಷ್ಟು ಪ್ರಮಾಣದಲ್ಲಿ ನೀರು ಮತ್ತು ದ್ರವಾಹಾರಗಳನ್ನು ಸೇವಿಸುವುದು ಅಗತ್ಯವಾಗಿದೆ.

ಸುಸ್ತು (Exhaustion)


ಬಿಸಿ ಹೆಚ್ಚಿದ್ದಾಗ ಯಾವುದೇ ದೈಹಿಕ ಚಟುವಟಿಕೆಗೆ ಹೆಚ್ಚಿನ ಶಕ್ತಿ ಬೇಕಾಗುತ್ತದೆ. ಇದು ದೇಹದ ಉಳಿದ ಶಕ್ತಿಯನ್ನೆಲ್ಲಾ ಕಬಳಿಸುವುದರಿಂದ ಸುಸ್ತು ಬೇಗನೇ ಆವರಿಸುತ್ತದೆ. ಪರಿಣಾಮವಾಗಿ ತಲೆನೋವು, ತಲೆಸುತ್ತು ಮೊದಲಾದ ತೊಂದರೆಗಳು ಆವರಿಸುತ್ತದೆ. ಬಿಸಿ ಹೆಚ್ಚಿರುವ ದೇಶಗಳಲ್ಲಿ ಮಧ್ಯಾಹ್ನದ ಹೊತ್ತು ಕಡ್ಡಾಯವಾಗಿ ಕಾರ್ಮಿಕರಿಗೆ ರಜೆ ನೀಡುವುದು ಇದೇ ಕಾರಣಕ್ಕೆ. ನಮ್ಮ ಕರಾವಳಿ, ಲಕ್ಷದ್ವೀಪ, ಅಂಡಮಾನ್ ಗಳಲ್ಲಿಯೂ ಮದ್ಯಾಹ್ನದಿಂದ ಸಂಜೆಯವರೆಗೆ ಇಡಿಯ ನಗರ ಬಂದ್ ಆಗಿರುತ್ತದೆ. ಈ ಸಮಯದಲ್ಲಿ ಸಾಕಷ್ಟು ನೀರು ಸೇವಿಸಿ ತಣ್ಣನೆಯ ಗಾಳಿಯಾಡುವ ಸ್ಥಳದಲ್ಲಿ ವಿಶ್ರಾಂತಿ ಪಡೆಯುವುದು ಉತ್ತಮ ಪರಿಹಾರವಾಗಿದೆ.
English summary

How Summer Heat Affects Your Body

Do you know how how heat affects your body? Well, as the summer season is approaching, the first thing your must focus on is protecting yourself from the summer heat. you should not venture into such activities at least in the extreme heat conditions.
X
Desktop Bottom Promotion