For Quick Alerts
ALLOW NOTIFICATIONS  
For Daily Alerts

ಕೆಂಪು ಈರುಳ್ಳಿ ವೈದ್ಯಲೋಕದ ಸಂಜೀವಿನಿ

By Manu
|

ನಮ್ಮಲ್ಲಿ ಸರ್ವೇಸಾಧಾರಣ ಒಂದು ಪೂರ್ವಾಗ್ರಹ ನಂಬಿಕೆಯಿದೆ. ಅಂದರೆ ಕೆಲವು ಆಹಾರ ಪದಾರ್ಥಗಳನ್ನು ನಾವು ಅವು ಸೇವಿಸುವ ಜನರ ಅಥವಾ ಜಾನುವಾರುಗಳಿಗೆ ತಳಕು ಹಾಕಿಕೊಂಡು 'ಇದು ನಮಗಲ್ಲ' ಎಂಬ ತೀರ್ಮಾನಕ್ಕೆ ಬಂದುಬಿಟ್ಟಿದ್ದೇವೆ. ಉದಾಹರಣೆಗೆ ಹುರುಳಿ. ಇದನ್ನು ಎತ್ತುಗಳಿಗೆ ತಿನ್ನಿಸುವ ಕಾರಣ ಹುರುಳಿಯನ್ನು ಹೆಚ್ಚಿನವರು ಎತ್ತಿನ ಖಾದ್ಯ ಎಂದೇ ತಿಳಿದು ಮನೆಗೆ ತರುವ ಗೋಜಿಗೇ ಹೋಗುವುದಿಲ್ಲ. ಅದೇ ಪಂಚತಾರಾ ಹೋಟೆಲುಗಳಲ್ಲಿ ಹುರುಳಿಯ ಸೂಪ್ (lentil soup) ಎಂದು ಸಿಗುವ ಖಾದ್ಯಕ್ಕೆ ದುಬಾರಿ ಬೆಲೆ!

ಇದೇ ರೀತಿ ಈರುಳ್ಳಿ ಸಹಾ, ಹೆಚ್ಚಿನವರು ಈರುಳ್ಳಿಯು ಬಾಯಿಯ ದುರ್ವಾಸನೆಗೆ ಕಾರಣವಾಗಿರುವುದರಿಂದ ಇದನ್ನು ಇಷ್ಟಪಡುವುದಿಲ್ಲ. ಆದರೆ ಬಾಯಿ ವಾಸನೆಯನ್ನು ದೂರವಿಟ್ಟಾಗ ಈರುಳ್ಳಿಯು ಹೆಚ್ಚುವರಿ ಆರೋಗ್ಯ ಗುಣಗಳನ್ನು ತನ್ನಲ್ಲಿ ಇರಿಸಿಕೊಂಡಿದೆ. ಅದರಲ್ಲೂ ಕೆಂಪು ಈರುಳ್ಳಿ ನಿಮ್ಮ ದೈನಂದಿನ ಆಹಾರದಲ್ಲಿ ಹೆಚ್ಚು ಉಪಯುಕ್ತ ಎಂದೆನಿಸಲಿದೆ. ನೀವು ಸಸ್ಯಾಹಾರಿಯಾಗಿರಿ ಮಾಂಸಾಹಾರಿಯಾಗಿರಿ ನಿಮ್ಮನ್ನು ಆರೋಗ್ಯಕಾರಿಯಾಗಿಸಿ ಸುದೃಢವಾಗಿಸುತ್ತದೆ. ಕಣ್ಣಲ್ಲಿ ನೀರು ತರಿಸಿದರೂ ಆರೋಗ್ಯ ಕಾಪಾಡುವ ಈರುಳ್ಳಿ

ಕೆಂಪು ಈರುಳ್ಳಿಗೆ ಸ್ಪ್ಯಾನಿಶ್ ಈರುಳ್ಳಿ ಎಂಬ ಅನ್ವರ್ಥ ನಾಮವೂ ಇದ್ದು ಆಹಾರಗಳಲ್ಲಿ ತನ್ನ ಉಪಯುಕ್ತತೆಗಳನ್ನು ಇದು ಇನ್ನೊಮ್ಮೆ ಸಾಧಿಸಿದೆ. ಆರೋಗ್ಯಕಾರಿ ನ್ಯೂಟ್ರಿನ್‌‎ಗಳನ್ನು ಇವುಗಳು ಒಳಗೊಂಡಿದ್ದು ಆರೋಗ್ಯಕಾರಿ ಪೋಷಕಾಂಶಗಳನ್ನು ಹೊಂದಿವೆ. ನಿಮ್ಮ ಆಹಾರ ಕ್ರಮದಲ್ಲಿ ಅಗತ್ಯವಾಗಿ ನೀವು ಕೆಂಪು ಈರುಳ್ಳಿಯನ್ನು ಸೇರಿಸಲೇಬೇಕಾಗಿರುವುದರಿಂದ ಹಸಿರು ಸಲಾಡ್ ರೂಪದಲ್ಲಿ ಕೂಡ ಇವುಗಳ ಸೇವನೆಯನ್ನು ಮಾಡಬಹುದಾಗಿದೆ. ಹೆಚ್ಚಿನ ಸಂದರ್ಭಗಳಲ್ಲಿ ಜನರು ಕೆಂಪು ಈರುಳ್ಳಿಯ ಬಳಕೆಯನ್ನು ಸಲಾಡ್‌‎ಗಳಲ್ಲಿ ಮಾಡುತ್ತಾರೆ. ಮನೆಗಳಲ್ಲಿ, ಹೋಟೆಲ್‌ಗಳಲ್ಲಿ ಕೆಂಪು ಈರುಳ್ಳಿ ಹೆಚ್ಚು ಪ್ರಸಿದ್ಧವಾಗಿದ್ದು ಬಳಸುವವರಿಗೆ ಇದು ವರದಾಯಕ ಎಂದೆನಿಸಿದೆ. ಇಂದಿನ ಲೇಖನದಲ್ಲಿ ಕೆಂಪು ಈರುಳ್ಳಿಯ ಕೆಲವೊಂದು ಆರೋಗ್ಯಕಾರಿ ಪ್ರಯೋಜನಗಳನ್ನು ನಾವು ಪಟ್ಟಿ ಮಾಡಿದ್ದು ಈರುಳ್ಳಿಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಿ.

ಹೃದಯದ ಆರೋಗ್ಯಕ್ಕೆ

ಹೃದಯದ ಆರೋಗ್ಯಕ್ಕೆ

ಹೃದಯ ಇಡಿಯ ದೇಹಕ್ಕೆ ರಕ್ತ ಪೂರೈಸಲು ಸತತವಾಗಿ ಬಡಿಯುತ್ತಲೇ ಇರಬೇಕು. ಇದಕ್ಕಾಗಿ ಹೃದಯಕ್ಕೂ ರಕ್ತಪೂರೈಕೆಯ ಅಗತ್ಯವಿದೆ.ಈ ರಕ್ತನಾಳಗಳಲ್ಲಿ ಕೊಂಚವಾದರೂ ರಕ್ತ ಹೆಪ್ಪುಗಟ್ಟಲು ತೊಡಗಿದರೆ ನಿಧಾನವಾಗಿ ಹೃದಯಸ್ತಂಭನದ ಸಾಧ್ಯತೆಗಳು ಹೆಚ್ಚುತ್ತಾ ಹೋಗುತ್ತವೆ. ಹಾಗಾಗಿ ಕೆಂಪು ಈರುಳ್ಳಿಯ ನಿಯಮಿತ ಸೇವನೆಯಿಂದ ಈ ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಕಡಿಮೆಯಾಗಿ ಹೃದಯದ ಕ್ಷಮತೆ ಹೆಚ್ಚುತ್ತದೆ, ತನ್ಮೂಲಕ ಆರೋಗ್ಯ ಉತ್ತಮಗೊಳ್ಳುತ್ತದೆ.

ವ್ಯಾಧಿಗಳು ಮತ್ತು ಶಿಲೀಂಧ್ರ ತಡೆಗೆ ಅಲಿಸಿನ್ ಪುನರುಜ್ಜೀವನ ಗುಣಗಳು

ವ್ಯಾಧಿಗಳು ಮತ್ತು ಶಿಲೀಂಧ್ರ ತಡೆಗೆ ಅಲಿಸಿನ್ ಪುನರುಜ್ಜೀವನ ಗುಣಗಳು

ಕ್ಯುರೆಸಿಟೀನ್ ಅಲ್ಲದೆ ಕೆಂಪು ಈರುಳ್ಳಿಯು ಮಾನವನ ರೋಗಗಳ ಮೇಲೆ ಪರಿಣಾಮಕಾರಿ ಅಂಶಗಳನ್ನು ಉಂಟುಮಾಡುವ ಅಲಿಸಿನ್ ಅನ್ನು ಇದು ಹೊಂದಿದೆ. ಹೃದಯದ ಆರೋಗ್ಯಕ್ಕೆ ಇದು ಅತ್ಯುತ್ತಮ ಎಂದೆನಿಸಿದೆ. ಕ್ಯಾನ್ಸರ್ ಉಂಟುಮಾಡುವ ರೋಗಾಣುಗಳ ವಿರುದ್ಧ ಹೋರಾಡಿ ನಿಮ್ಮ ದೇಹದೊಳಗೆ ಈ ರೋಗಾಣುಗಳ ಅಭಿವೃದ್ಧಿಯನ್ನು ಇದು ತಡೆಯುತ್ತದೆ. ನಿತ್ಯವೂ ಈ ಈರುಳ್ಳಿಯನ್ನು ಸೇವಿಸುವುದರಿಂದ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ನಿಯಂತ್ರಣದಲ್ಲಿರಿಸುತ್ತದೆ. ಇತರ ರೋಗಗಳನ್ನು ಗುಣಪಡಿಸುವ ದಿವ್ಯ ಔಷಧವಾಗಿ ಕೆಂಪು ಈರುಳ್ಳಿ ಸ್ಥಾನ ಪಡೆದುಕೊಂಡಿದೆ. ಅಲಿಸಿನ್ ತಲೆಹೊಟ್ಟಿಗೂ ರಾಮಬಾಣ ಎಂದೆನಿಸಿದೆ.

ಕೆಂಪು ಈರುಳ್ಳಿಗಳಲ್ಲಿ ಕ್ಯುರೆಸಿಟೀನ್ ಅಧಿಕ

ಕೆಂಪು ಈರುಳ್ಳಿಗಳಲ್ಲಿ ಕ್ಯುರೆಸಿಟೀನ್ ಅಧಿಕ

ಕೆಂಪು ಈರುಳ್ಳಿಗಳು ಕ್ಯುರೆಸಿಟೀನ್ ಅನ್ನು ಅಧಿಕವಾಗಿ ಒಳಗೊಂಡಿವೆ. ಶಿಲೀಂಧ್ರ ವಿರೋಧಿ, ಉರಿಯೂತ ಮತ್ತು ಉತ್ಕರ್ಷಣ ನಿರೋಧಕ ಲಕ್ಷಣಗಳನ್ನು ಕ್ಯುರೆಸಿಟೀನ್ ಒಳಗೊಂಡಿದ್ದು ಕೆಂಪು ಈರುಳ್ಳಿಗಳಲ್ಲಿ ಇದು ಯಥೇಚ್ಛವಾಗಿದೆ. ಕ್ಯಾನ್ಸರ್ ವಿರೋಧಿ ಗುಣವನ್ನು ಈ ತರಕಾರಿ ಹೊಂದಿರುವುದಾಗಿ ಆಧುನಿಕ ವಿಜ್ಞಾನವು ಪತ್ತೆಹಚ್ಚಿದೆ. ಸಾಮಾನ್ಯ ಶೀತ ಮತ್ತು ಜ್ವರದ ಸಂದರ್ಭಗಳಲ್ಲೂ ಕೆಂಪು ಈರುಳ್ಳಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಒಟ್ಟಿನಲ್ಲಿ ವೈದ್ಯಕೀಯ ಲೋಕವು ಕೆಂಪು ಈರುಳ್ಳಿಯ ಆರೋಗ್ಯಕಾರಿ ಅಂಶಗಳನ್ನು ಸ್ವೀಕರಿಸಿದೆ.

ಓರ್ಗನ್ ಸಲ್ಫರ್ ಹೇರಳವಾಗಿದೆ

ಓರ್ಗನ್ ಸಲ್ಫರ್ ಹೇರಳವಾಗಿದೆ

ಪ್ರಾಸ್ಟೇಟ್ ಮತ್ತು ಹೊಟ್ಟೆಯ ಕ್ಯಾನ್ಸರ್‎ನೊಂದಿಗೆ ಹೋರಾಡುವ ಓರ್ಗನ್ ಸಲ್ಫರ್ ಅನ್ನು ಕೆಂಪು ಈರುಳ್ಳಿ ಯಥೇಚ್ಛವಾಗಿ ಪಡೆದುಕೊಂಡಿದೆ. ಪ್ರಾಸ್ಟೇಟ್ ಗ್ರಂಥಿಗಳು ಮತ್ತು ಹೊಟ್ಟೆಯಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಡುವ ತಡೆಗೋಡೆಯನ್ನು ಓರ್ಗನ್ ಸಲ್ಫರ್ ರಚಿಸುತ್ತದೆ ಎಂಬುದಾಗಿ ವೈದ್ಯಕೀಯ ಲೋಕ ಅಂಗೀಕರಿಸಿದೆ. ಆದ್ದರಿಂದಲೇ ಕ್ಯಾನ್ಸರ್ ರೋಗಿಗಳನ್ನು ಉಪಚರಿಸಲು ಕೆಂಪು ಈರುಳ್ಳಿಯ ಮೇಲೆ ಸಂಶೋಧನೆಗಳನ್ನು ಕೈಗೊಳ್ಳಲಾಗುತ್ತಿದೆ.

ಒನಿಯೊನಿನ್ ಎ ಕೂಡ ಅತಿಮುಖ್ಯ

ಒನಿಯೊನಿನ್ ಎ ಕೂಡ ಅತಿಮುಖ್ಯ

ಹಲವಾರು ಕಾಯಿಲೆಗಳಿಂದ ಸಂಭವಿಸುವ ಉರಿಯೂತ ಮತ್ತು ನೋವನ್ನು ತೊಡೆದು ಹಾಕಲು ಒನಿಯೊನಿನ್ ಎ ಅತಿಮುಖ್ಯವಾದುದು. ಪ್ರತಿರಕ್ಷಣಾ ಜೀವಕೋಶಗಳನ್ನು ನಿಗ್ರಹಿಸಿ ನೋವನ್ನು ತಾತ್ಕಾಲಿಕವಾಗಿ ಮತ್ತು ಶಾಶ್ವತವಾಗಿ ಕಡಿಮೆ ಮಾಡುತ್ತದೆ. ಅಲರ್ಜಿ, ಅಸ್ತಮಾ, ಸಂಧಿವಾತದ ಸಮಸ್ಯೆ ಇರುವ ಜನರು ಕೆಂಪು ಈರುಳ್ಳಿಯನ್ನು ಸೇವಿಸಿ ಅದ್ಭುತ ಪ್ರಯೋಜವನ್ನು ಪಡೆದುಕೊಂಡಿದ್ದಾರೆ. ಕೆಂಪು ಈರುಳ್ಳಿಯ ಅತಿಮುಖ್ಯ ಪ್ರಯೋಜನಗಳು ಇವುಗಳಾಗಿದ್ದು ನಮ್ಮ ನಿತ್ಯದ ಆಹಾರದಲ್ಲಿ ಇವುಗಳ ಸೇವನೆನ್ನು ಪ್ರಮುಖವಾಗಿಸಿವೆ. ಇದು ಹೊರಸೂಸೂವ ದುರ್ವಾಸನೆಯನ್ನು ಬದಿಗಿಟ್ಟು ಅದ್ಭುತ ಅಂಶಗಳನ್ನು ನಮ್ಮದಾಗಿಸಿಕೊಳ್ಳೋಣ.

English summary

Health Benefits Of Red Onions in kannada

Most people dislike eating onions due to the stinky smell it leaves inside the mouth. They have their own reasons to dislike onions, and are not wrong to some extent as well. However, this stinking smell does not make the onions untouchables. As a matter of fact, onions, especially the red onions, have loads of health benefits that make them absolutely an indivisible part of the human food habits.
Story first published: Tuesday, November 24, 2015, 11:17 [IST]
X
Desktop Bottom Promotion