For Quick Alerts
ALLOW NOTIFICATIONS  
For Daily Alerts

ಎಲೆಮರೆ ಕಾಯಿ ಆಲೂಗಡ್ಡೆಯ ಸ್ಪೆಷಾಲಿಟಿ ಒಂದೇ, ಎರಡೇ?

|

ಆಲೂಗಡ್ಡೆ ಸಾಮಾನ್ಯವಾಗಿ ಎಲ್ಲೆಡೆಯು ಕಂಡು ಬರುವ ತರಕಾರಿ.ಇದು ಹಸಿವನ್ನು ನೀಗಿಸುತ್ತದೆ ಮತ್ತು ರುಚಿಕರವಾಗಿಯೂ ಇರುತ್ತದೆ. ಇವುಗಳಲ್ಲಿ ಕಾರ್ಬೊಹೈಡ್ರೆಟ್‌ಗಳು, ಪ್ರೋಟೀನ್‌ಗಳು (ಅಮೈನೊ ಆಮ್ಲಗಳು) ಮತ್ತು ಹಲವಾರು ವಿಟಮಿನ್‌ಗಳು ಹಾಗು ಖನಿಜಾಂಶಗಳು ಇದರಲ್ಲಿರುತ್ತವೆ. ಇದು ವಿಟಮಿನ್ ಸಿ, ಎ, ಮತ್ತು ಬಿ, ಫೋಲಿಕ್ ಆಮ್ಲ, ಕ್ಯಾಲ್ಸಿಯಂ, ಪೊಟಾಶಿಯಂ ಮತ್ತು ಫಾಸ್ಫರಸ್ ಇತ್ಯಾದಿಗಳನ್ನು ಹೊಂದಿರುತ್ತದೆ.

ಈ ಆಲೂಗಡ್ಡೆ ರಸವನ್ನು ಸೇವಿಸುವುದರಿಂದ ಹಲವಾರು ಆರೋಗ್ಯಕಾರಿ ಪ್ರಯೋಜನಗಳು ಲಭ್ಯವಾಗುತ್ತವೆ. ಬನ್ನಿ ಅದರ ಪ್ರಯೋಜನವನ್ನು ಹೇಗೆ ಪಡೆಯುವುದು ಎಂದು ತಿಳಿದುಕೊಂಡು ಬರೋಣ. ಆಲೂಗಡ್ಡೆಯ ಕರಾಮತ್ತಿನಲ್ಲಿದೆ ಕೇಶ ಸಮಸ್ಯೆಗೆ ಪರಿಹಾರ

ಹೆಪಟೈಟಿಸ್ ಅನ್ನು ನಿವಾರಿಸುತ್ತದೆ

Health Benefits Of Potato Juice

ಇದು ಒಂದು ವೈರಲ್ ಇನ್‍ಫೆಕ್ಷನ್ ಆಗಿದ್ದು, ಕರುಳಿನ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ. ಆಲುಗಡ್ಡೆ ರಸವು ಕರುಳನ್ನು ಮತ್ತು ಪಿತ್ತ ಕೋಶವನ್ನು ಸ್ವಚ್ಛ ಮಾಡುತ್ತದೆ. ಇದಕ್ಕೆ ಇದರಲ್ಲಿರುವ ಆಂಟಿ ಆಕ್ಸಿಡೆಂಟ್‌ ಅಂಶಗಳೇ ಕಾರಣ. ಬಹುತೇಕ ದೇಶಗಳಲ್ಲಿ, ಇದನ್ನು ಹೆಪಟೈಟಿಸ್‌ಗೆ ಚಿಕಿತ್ಸೆಯಾಗಿ ಬಳಸುತ್ತಾರೆ.

ಕ್ಯಾನ್ಸರ್ ಚಿಕಿತ್ಸೆ


ಆಲೂಗಡ್ಡೆಗಳ ರಸವನ್ನು ಕುಡಿಯುವುದರಿಂದ ಕ್ಯಾನ್ಸರನ್ನು ನಿವಾರಿಸಬಹುದು. ಜೊತೆಗೆ ಇದು ಕ್ಯಾನ್ಸರ್ ಕೋಶಗಳ ವಿರುದ್ಧ ಸಹ ಹೋರಾಡುತ್ತದೆ. ಇದು ನಮ್ಮ ದೇಹದಲ್ಲಿ ಹಾನಿಯುಂಟು ಮಾಡುವ ಕ್ಯಾನ್ಸರ್ ಕೋಶಗಳ ವಿರುದ್ಧ ಸಹ ಹೋರಾಡುತ್ತದೆ. ಇದು ಆಲೂಗಡ್ಡೆ ರಸದ ಒಂದು ಉತ್ತಮ ಪ್ರಯೋಜನವಾಗಿದೆ.

ಕೀಲು ನೋವು ಮತ್ತು ಉರಿಬಾವು


ಆಲೂಗಡ್ಡೆ ರಸವನ್ನು ಸೇವಿಸುವುದರಿಂದ ಕೀಲು ನೋವು ಮತ್ತು ಉರಿಬಾವಿನಿಂದ ನಿವಾರಣೆಯನ್ನು ಪಡೆಯಬಹುದು. ಇದಕ್ಕೆ ಇದರಲ್ಲಿರುವ ಉರಿಬಾವು ನಿರೋಧಕ ಅಂಶಗಳೇ ಕಾರಣ ಎಂದು ಹೇಳಬಹುದು. ಈ ರಸವನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಇದು ಸಹ ಆಲೂಗಡ್ಡೆಯಿಂದ ದೊರೆಯುವ ಒಂದು ಉತ್ತಮ ಪ್ರಯೋಜನವಾಗಿದೆ.

ಕೊಲೆಸ್ಟ್ರಾಲ್ ಚಿಕಿತ್ಸೆ


ಆಲೂಗಡ್ಡೆ ರಸದಿಂದ ಆರೋಗ್ಯಕ್ಕೆ ಹೇಗೆ ಲಾಭ ದೊರೆಯುತ್ತದೆ? ಆಲೂಗಡ್ಡೆ ರಸವು ದೇಹದಲ್ಲಿರುವ ಕೊಲೆಸ್ಟ್ರಾಲನ್ನು ಕಡಿಮೆ ಮಾಡುತ್ತದೆ ಮತ್ತು ಇದರಿಂದ ಹೃದ್ರೋಗ ಸಮಸ್ಯೆಯು ದೂರವಾಗಿ ಹೃದಯಾಘಾತ ಬರುವುದಿಲ್ಲ.

ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ


ಆಲೂಗಡ್ಡೆ ರಸವು ದೇಹದಲ್ಲಿರುವ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಇದನ್ನು ದಿನ ನಿತ್ಯ ಸೇವಿಸುವುದರಿಂದ ಈ ಪ್ರಯೋಜನವನ್ನು ನಿಮ್ಮದಾಗಿಸಿಕೊಳ್ಳಬಹುದು. ಬೆಳಗ್ಗೆ ಎದ್ದ ಕೂಡಲೆ, ಉಪಾಹಾರ ಸೇವಿಸುವ ಒಂದು ಗಂಟೆ ಮೊದಲು ಆಲೂಗಡ್ಡೆ ರಸವನ್ನು ಸೇವಿಸಿ. ಇದಕ್ಕೆ ಸ್ವಲ್ಪ ಜೇನುತುಪ್ಪವನ್ನು ಸಹ ಬೆರೆಸಿಕೊಂಡು ಸೇವಿಸಿಅಬಹುದು. ಇದರಿಂದ ರುಚಿ ದೊರೆಯುತ್ತದೆ, ತೂಕವು ಕರಗುತ್ತದೆ.
English summary

Health Benefits Of Potato Juice

Potato juice is rich in nutrients as they are destroyed during cooking. This time try having potatoes in a healthy way. Have a juice of potatoes for it's immense health benefits. Today, Boldsky will share will you some health benefits of potato juice. Have a look at some uses of raw potato juice for health.
X
Desktop Bottom Promotion