For Quick Alerts
ALLOW NOTIFICATIONS  
For Daily Alerts

ಸರ್ವ ರೋಗಕ್ಕೂ ರಾಮಬಾಣವಾಗಿರುವ ಬೆಂಡೆಕಾಯಿಯ ಪ್ರಯೋಜನಗಳೇನು?

By Super
|

ಇಡಿಯ ವಿಶ್ವದಲ್ಲಿ ಅತಿಹೆಚ್ಚಾಗಿ ಬಳಸಲ್ಪಡುವ ತರಕಾರಿಗಳ ಪಟ್ಟಿಯಲ್ಲಿ ಬೆಂಡೆಕಾಯಿ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಎಳೆಯ ಬೆಂಡೆಕಾಯಿಯನ್ನು ಹಸಿಯಾಗಿಯೂ, ಸಾರು, ಪಲ್ಯ, ಹುರಿದು, ಇತರ ತರಕಾರಿಗಳ ಜೊತೆಸೇರಿಸಿ ವಿವಿಧ ಭಕ್ಷ್ಯಗಳನ್ನು ಮಾಡಿ ಅನ್ನ, ಚಪಾತಿ, ರೊಟ್ಟಿಗಳೊಂದಿಗೆ ಸೇವಿಸಬಹುದಾದ ಬಹುಪಯೋಗಿ ತರಕಾರಿಯಾಗಿದೆ. ಇದರ ಪ್ರಯೋಜನಗಳೇನು ಎಂದು ಪಟ್ಟಿಮಾಡಹೊರಟರೆ ಬಹಳ ಉದ್ದದ ಪಟ್ಟಿ ಮಾಡಬೇಕಾಗಿ ಬರಬಹುದು.

ಕೊಂಚ ಬಲಿತ ಕೂಡಲೇ ನಾರು ದೃಢವಾಗುವ ಕಾರಣ ಎಳೆತಿರುವಾಗಲೇ ಅಡುಗೆ ಮಾಡಬೇಕಾಗಿರುವ ಬೆಂಡೆಕಾಯಿಯಲ್ಲಿ ಹಲವು ಪೋಷಕಾಂಶಗಳು ಕಡಿಮೆ ಪ್ರಮಾಣದಲ್ಲಿವೆ. ಇದೇ ಕಾರಣದಿಂದ ತೂಕ ಇಳಿಸಲು ಇಚ್ಛಿಸುವ ವ್ಯಕ್ತಿಗಳಿಗೆ ಉತ್ತಮವಾದ ಆಯ್ಕೆಯಾಗಿದೆ. ವಿವಿಧ ಖನಿಜಗಳು, ವಿಟಮಿನ್‌ಗಳು ಮತ್ತು ಮುಖ್ಯವಾಗಿ ಹೆಚ್ಚಿನ ಪ್ರಮಾಣದಲ್ಲಿರುವ ಕರಗದ ನಾರು ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. ಇದೇ ಕಾರಣಗಳಿಗಾಗಿ ಆಹಾರ ತಜ್ಞರು ಪ್ರತಿದಿನದ ಆಹಾರದಲ್ಲಿ ಬೆಂಡೆಕಾಯಿಯನ್ನು ಸೇರಿಸಲು ಸಲಹೆ ನೀಡುತ್ತಾರೆ. ಬೆಂಡೆಕಾಯಿಯನ್ನು ತರಕಾರಿಯಾಗಿ ಸೇವಿಸುವ ಮೂಲಕ ಪಡೆಯಬಹುದಾದ ಅಪಾರ ಪ್ರಯೋಜನಗಳಲ್ಲಿ ಪ್ರಮುಖವಾದ ಹದಿನೈದನ್ನು ಇಲ್ಲಿ ವಿವರಿಸಲಾಗಿದೆ. ಮಧುಮೇಹಕ್ಕೆ ರಾಮಬಾಣ ಬೆಂಡೆಕಾಯಿ!

ಮಲಬದ್ಧತೆಯನ್ನು ನಿವಾರಿಸುತ್ತದೆ

ಮಲಬದ್ಧತೆಯನ್ನು ನಿವಾರಿಸುತ್ತದೆ

ನಿಮ್ಮ ಆಹಾರದಲ್ಲಿ ಬೆಂಡೆಕಾಯಿಯನ್ನು ಸೇರಿಸುವ ಮೂಲಕ ಕರುಳುಗಳು ಆಹಾರದಲ್ಲಿರುವ ನೀರನ್ನು ಪೂರ್ಣವಾಗಿ ಹೀರಿಕೊಳ್ಳಲು ನೆರವಾಗುತ್ತದೆ. ಇದರಲ್ಲಿ ಸಮಪ್ರಮಾಣ್ದಲಿಲ್ರುವ ಕರುಗುವ ಮತ್ತು ಕರಗದ ನಾರು ಮಲಬದ್ದತೆಯಾಗದಂತೆ ತಡೆಯುತ್ತದೆ.

ತೂಕ ಕಳೆದುಕೊಳ್ಳಲು ಸಹಕಾರಿಯಾಗಿದೆ

ತೂಕ ಕಳೆದುಕೊಳ್ಳಲು ಸಹಕಾರಿಯಾಗಿದೆ

ಬೆಂಡೆಕಾಯಿಯಲ್ಲಿರುವ ಕರಗದ ನಾರನ್ನು ಜೀರ್ಣಿಸಿಕೊಳ್ಳಲು ನಮ್ಮ ಜೀರ್ಣಾಂಗಗಳಿಗೆ ಹೆಚ್ಚಿನ ಶಕ್ತಿಯ ಅವಶ್ಯಕತೆ ಇರುವುದರಿಂದ ದೇಹದಲ್ಲಿ ಶೇಖರವಾಗಿದ್ದ ಕೊಬ್ಬನ್ನು ವ್ಯಯಿಸಬೇಕಾಗಿ ಬರುತ್ತದೆ. ಇದೇ ಕಾರಣದಿಂದ ಪ್ರತಿದಿನದ ಬೆಂಡೆಕಾಯಿಯ ಸೇವನೆಯ ಮೂಲಕ ಶೀಘ್ರವಾಗಿ ತೂಕವನ್ನು ಕಳೆದುಕೊಳ್ಳಲು ಸಾಧ್ಯವಾಗುತ್ತದೆ.

ಮಧುಮೇಹ ಬರುವುದರಿಂದ ತಡೆಯುತ್ತದೆ

ಮಧುಮೇಹ ಬರುವುದರಿಂದ ತಡೆಯುತ್ತದೆ

ಬೆಂಡೆಕಾಯಿಯ ನಿಯಮಿತ ಸೇವನೆಯಿಂದ ದೇಹದಲ್ಲಿ ಉತ್ತಮ ಪ್ರಮಾಣದ ಇನ್ಸುಲಿನ್ ಉತ್ಪತ್ತಿಯಾಗಿ ಮಧುಮೇಹ ಬರುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ.

ರಕ್ತಹೆಪ್ಪುಗಟ್ಟಲು ಅಗತ್ಯವಾದ ವಿಟಮಿನ್ ಕೆ ನೀಡುತ್ತದೆ

ರಕ್ತಹೆಪ್ಪುಗಟ್ಟಲು ಅಗತ್ಯವಾದ ವಿಟಮಿನ್ ಕೆ ನೀಡುತ್ತದೆ

ಗಾಯವಾದಾಗ ರಕ್ತವು ಶೀಘ್ರವಾಗಿ ಹೆಪ್ಪುಗಟ್ಟಲು ಅಗತ್ಯವಾದ ವಿಟಮಿನ್ ಕೆ ಬೆಂಡೆಕಾಯಿಯಲ್ಲಿ ಸಮೃದ್ಧವಾಗಿದೆ. ಅಲ್ಲದೇ ಇದೇ ಪೋಷಕಾಂಶವು ಮೂಳೆಗಳನ್ನು ದೃಢಗೊಳಿಸಲೂ ನೆರವಾಗುತ್ತದೆ.

ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ಉಪಯುಕ್ತವಾಗಿದೆ

ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ಉಪಯುಕ್ತವಾಗಿದೆ

ಹೆರಿಗೆ ದಿನ ಸಮೀಪಿಸುತ್ತಿರುವ ಮತ್ತು ಬಾಣಂತಿಯರಿಗೆ ಹೆಚ್ಚಿನ ಕಬ್ಬಿಣದ ಅಂಶದ ಅಗತ್ಯವಿದೆ. ಬೆಂಡೆಕಾಯಿಯಲ್ಲಿ ಸಮಪ್ರಮಾಣದ ಕಬ್ಬಿಣದ ಅಂಶವಿದ್ದು ಹೆಚ್ಚಿನ ಶಕ್ತಿ ನೀಡಲು ಸಾಧ್ಯವಾಗುತ್ತದೆ.

ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ

ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ

ಬೆಂಡೆಕಾಯಿಯಲ್ಲಿರುವ ಇದರಲ್ಲಿ ಸಮಪ್ರಮಾಣದಲ್ಲಿರುವ ಕರುಗುವ ಮತ್ತು ಕರಗದ ನಾರು ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. ಕಾಲಕಾಲಕ್ಕೆ ಸುಲಭವಾಗಿ ವಿಸರ್ಜನೆಯ ತೊಂದರೆಯುಳ್ಳವರು ಹೆಚ್ಚು ನಾರನ್ನು ಹೊಂದಿರುವ ಆಹಾರಗಳನ್ನು ಸೇವಿಸಬೇಕು. ಮೈದಾ ಆಧಾರಿತ ಆಹಾರಗಳ ಬದಲಿಗೆ ಗೋಧಿ ಹಿಟ್ಟಿನ ರೊಟ್ಟಿ ಮತ್ತು ಬೆಂಡೆಕಾಯಿಯ ಪಲ್ಯ ಈ ನಿಟ್ಟಿನಲ್ಲಿ ಅಧ್ಬುತವಾದ ಆಹಾರವಾಗಿದೆ.

ಸೂರ್ಯನ ಪ್ರಖರ ಕಿರಣಗಳಿಂದ ಕಾಪಾಡುತ್ತದೆ

ಸೂರ್ಯನ ಪ್ರಖರ ಕಿರಣಗಳಿಂದ ಕಾಪಾಡುತ್ತದೆ

ಬಿಸಿಲಿನ ಝಳ ಹೆಚ್ಚಿರುವ ಪ್ರದೇಶಗಳಲ್ಲಿ ಕೊಂಚಕಾಲ ಬಿಸಿಲಿನಲ್ಲಿದ್ದರೆ ತಲೆ ತಿರುಗುತ್ತದೆ. ಬಿಸಿಲಿನ ಝಳದಿಂದ ಬಿಸಿಯಾಗಿರುವ ದೇಹವನ್ನು ತಂಪಾಗಿಸಲು ಹೆಚ್ಚಿನ ರಕ್ತ ವ್ಯಯವಾಗುವುದರಿಂದ ಮೆದುಳಿಗೆ ಅಗತ್ಯವಿದ್ದಷ್ಟು ರಕ್ತ ಪೂರೈಕೆಯಾಗದೇ ತಲೆ ಸುತ್ತುತ್ತದೆ. ಬೆಂಡೆಕಾಯಿಯನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ ಈ ಕೊರತೆಯ ವಿರುದ್ಧ ದೇಹ ಹೆಚ್ಚು ಬಲಶಾಲಿಯಾಗುತ್ತದೆ.

ಅಸ್ತಮಾ ರೋಗಿಗಳಿಗೆ ವರದಾನವಾಗಿದೆ

ಅಸ್ತಮಾ ರೋಗಿಗಳಿಗೆ ವರದಾನವಾಗಿದೆ

ಶ್ವಾಸಕೋಶಗಳು ಕೆಟ್ಟರಕ್ತದಿಂದ ಇಂಗಾಲದ ಡೈ ಆಕ್ಸೈಡ್ ಹೊರಹಾಕಿ ಆಮ್ಲಜನಕವನ್ನು ಸೇರಿಸುವ ಕೆಲಸ ಮಾಡುತ್ತವೆ. ಅಸ್ತಮಾ ರೋಗವಿರುವವರಲ್ಲಿ ಈ ಕ್ಷಮತೆ ಕಡಿಮೆಯಾಗಿರುತ್ತದೆ. ಆದರೆ ಬೆಂಡೆಕಾಯಿಯ ನಿಯಮಿತ ಸೇವನಿಯಿಂದ ಶ್ವಾಸಕೋಶದ ಶಕ್ತಿ ಹೆಚ್ಚಿತ್ತದೆ ಮತ್ತು ಅಸ್ತಮಾ ವಿರುದ್ದ ಹೋರಾಡಲು ಸಾಧ್ಯವಾಗುತ್ತದೆ.

ಕರುಳಿನ ಕ್ಯಾನ್ಸರ್ ಬರದಂತೆ ತಡೆಯುತ್ತದೆ

ಕರುಳಿನ ಕ್ಯಾನ್ಸರ್ ಬರದಂತೆ ತಡೆಯುತ್ತದೆ

ಮೈದಾ ಆಧಾರಿತ ಆಹಾರಗಳು ಚಿಕ್ಕಕರುಳು ಮತ್ತು ದೊಡ್ಡಕರುಳಿನಲ್ಲಿ ಗಟ್ಟಿಯಾಗಿ ಕರುಳಿನ ಒಳಗೋಡೆಗಳನ್ನು ಘಾಸಿಗೊಳಿಸುತ್ತವೆ. ಇದರ ಗಾಯಗಳು ಕರುಳಿನ ಕ್ಯಾನ್ಸರ್ ಗೆ ಕಾರಣವಾಗಿವೆ. ಬೆಂಡೆಕಾಯಿಯಲ್ಲಿರುವ ನಾರು ಈ ಆಹಾರವನ್ನು ಮೆದುಗೊಳಿಸಿ ಸುಲಭವಿಸರ್ಜನೆಗೆ ನೆರವಾಗುವ ಕಾರಣ ಕರುಳಿನ ಕ್ಯಾನ್ಸರ್ ಬರದಂತೆ ಕಾಪಾಡುತ್ತದೆ.

ವಿಟಮಿನ್ ಎ ಕೊರತೆಯನ್ನು ನೀಗಿಸುತ್ತದೆ

ವಿಟಮಿನ್ ಎ ಕೊರತೆಯನ್ನು ನೀಗಿಸುತ್ತದೆ

ಉತ್ತಮ ದೃಷ್ಟಿ, ರೋಗನಿರೋಧಕ ಶಕ್ತಿ, ಸಂತಾನೋತ್ಪತ್ತಿಗೆ ಅಗತ್ಯವಿರುವ ವಿಟಮಿನ್ ಎ ಬೆಂಡೆಕಾಯಿಯಲ್ಲಿ ಉತ್ತಮ ಪ್ರಮಾಣದಲ್ಲಿದೆ. ಅಲ್ಲದೇ ಹೃದಯ, ಶ್ವಾಸಕೋಶ, ಮೂತ್ರಪಿಂಡಗಳು ಸಮರ್ಥವಾಗಿ ಕಾರ್ಯನಿರ್ವಹಿಸಲೂ ವಿಟಮಿನ್ ಎ ಅಗತ್ಯವಾಗಿದೆ. ಬೆಂಡೆಕಾಯಿಯ ನಿಯಮಿತ ಸೇವನೆಯಿಂದ ವಿಟಮಿನ್ ಎ ಅಗತ್ಯಪ್ರಮಾಣದಲ್ಲಿ ಲಭ್ಯವಾಗುತ್ತದೆ.

ಹೃದಯಸಂಬಂಧಿ ರೋಗಗಳಿಂದ ರಕ್ಷಿಸುತ್ತದೆ

ಹೃದಯಸಂಬಂಧಿ ರೋಗಗಳಿಂದ ರಕ್ಷಿಸುತ್ತದೆ

ಬೆಂಡೆಕಾಯಿಯ ನಿಯಮಿತ ಸೇವನೆಯಿಂದ ರಕ್ತದಲ್ಲಿನ ಕೆಟ್ಟ ಕೊಲೆಸ್ಟರಲ್ ನಿಯಂತ್ರಣಕ್ಕೆ ಬರುತ್ತದೆ. ತನ್ಮೂಲಕ ಧಮನಿಗಳಲ್ಲಿ ಹರಿಯುವ ರಕ್ತಕ್ಕೆ ಅಗತ್ಯವಾದ ಒತ್ತಡ ಸಾಮಾನ್ಯ ಸ್ಥಿತಿಯಲ್ಲಿದ್ದರೆ ಸಾಕಾಗುತ್ತದೆ. ಹೃದಯ ಅಧಿಕರಕ್ತದೊತ್ತಡಕ್ಕೆ ಒಳಗಾಗದೇ ಹೃದಯಸಂಬಂಧಿ ರೋಗಗಳಿಂದ ದೂರವಿದ್ದಂತಾಗುತ್ತದೆ.

ಚರ್ಮದ ಕಾಂತಿ ಹೆಚ್ಚಿಸುತ್ತದೆ

ಚರ್ಮದ ಕಾಂತಿ ಹೆಚ್ಚಿಸುತ್ತದೆ

ಬೆಂಡೆಕಾಯಿಯಲ್ಲಿರುವ ವಿಟಮಿನ್ ಸಿ ಚರ್ಮದ ಕಾಂತಿಯನ್ನು ಹೆಚ್ಚಿಸಲು ಸಹಕರಿಸುತ್ತದೆ. ಅಲ್ಲದೇ ಚರ್ಮದಲ್ಲಿ ಉಂಟಾಗಿದ್ದ ಕಲೆಗಳನ್ನು ನಿವಾರಿಸಲೂ ಜೋತುಬಿದ್ದಿದ್ದ ಚರ್ಮವನ್ನು ಬಿಗಿಗೊಳಿಸಲೂ ಸಹಕರಿಸುತ್ತದೆ.

ತಲೆಹೊಟ್ಟು ನಿವಾರಿಸಲು ಸಹಕರಿಸುತ್ತದೆ

ತಲೆಹೊಟ್ಟು ನಿವಾರಿಸಲು ಸಹಕರಿಸುತ್ತದೆ

ತಲೆಹೊಟ್ಟನ್ನು ನಿವಾರಿಸಲು ಬೆಂಡೆಕಾಯಿಯನ್ನು ನೀರಿನಲ್ಲಿ ಕುದಿಸಿ ಸೋಸಿ ತಣಿಸಿದ ಬಳಿಕ ತಲೆಗೆ ಹಚ್ಚಿಕೊಂಡು ಸುಮಾರು ಇಪ್ಪತ್ತು ನಿಮಿಷಗಳ ಬಳಿಕ ತಣ್ಣೀರಿನಲ್ಲಿ ತೊಳೆದುಕೊಳ್ಳುವ ಮೂಲಕ ಉತ್ತಮ ಪರಿಣಾಮ ಕಂಡುಬರುತ್ತದೆ.

ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ

ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ

ವಿಟಮಿನ್ ಎ ಮೂಲಕ ಬೆಂಡೆಕಾಯಿ ಕಣ್ಣಿನ ಆರೋಗ್ಯವನ್ನು ವೃದ್ಧಿಸುತ್ತದೆ. ಜೊತೆಗೇ ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸಿ ರಕ್ತಹೀನತೆಯಿಂದ ಕಾಪಾಡುತ್ತದೆ.

ದೇಹಕ್ಕೆ ಅಗತ್ಯವಾದ ಆಂಟಿ ಆಕ್ಸಿಡೆಂಟುಗಳನ್ನು ಒದಗಿಸುತ್ತದೆ

ದೇಹಕ್ಕೆ ಅಗತ್ಯವಾದ ಆಂಟಿ ಆಕ್ಸಿಡೆಂಟುಗಳನ್ನು ಒದಗಿಸುತ್ತದೆ

ದೇಹದ ಆರೋಗ್ಯಕ್ಕಾಗಿ ವಿವಿಧ ಆಂಟಿ ಆಕ್ಸಿಡೆಂಟುಗಳ ಅಗತ್ಯವಿದೆ. ಇವುಗಳಲ್ಲಿ ಬಹುತೇಕವನ್ನು ಬೆಂಡೆಕಾಯಿ ಒದಗಿಸುವುದರಿಂದ ನಿಯಮಿತ ಸೇವನೆ ಅರೋಗ್ಯಕ್ಕೆ ಉತ್ತಮವಾಗಿದೆ.

ರಕ್ತದೊತ್ತಡ ಮತ್ತು ಹೃದಯದ ಅರೋಗ್ಯ

ರಕ್ತದೊತ್ತಡ ಮತ್ತು ಹೃದಯದ ಅರೋಗ್ಯ

ಬೆಂಡೆಕಾಯಿ ವಿಟಮಿನ್ ಮತ್ತು ಖನಿಜಾಂಶಗಳು,ಪೊಟ್ಯಾಷಿಯಂ ಅಧಿಕವಿರುವ ಆರೋಗ್ಯಕ್ಕೆ ಮುಖ್ಯವಾದ ತರಕಾರಿ.ದೇಹಕ್ಕೆ ಬೇಕಾದ ನೀರಿನಂಶವನ್ನು ಇದರಲ್ಲಿರುವ ಪೊಟ್ಯಾಷಿಯಂ ಕಾಪಾಡುತ್ತದೆ.ಜೊತೆಗೆ ಪೊಟ್ಯಾಷಿಯಂ,ಸಂಧಿ ಮತ್ತು ರಕ್ತ ಕಣಗಳ ವಿಶ್ರಾಂತಿಗೆ ಸಹಕರಿಸುತ್ತದೆ,ಇದರಿಂದ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಸಮಸ್ಯೆಗಳ ಸಂಭವ ಕಡಿಮೆಯಾಗುತ್ತದೆ.ಜೊತೆಗೆ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಸಂಧಿವಾತದ ಸಮಸ್ಯೆ ಬರುವುದು ತಪ್ಪುತ್ತದೆ.

ಚರ್ಮದ ಆರೋಗ್ಯ

ಚರ್ಮದ ಆರೋಗ್ಯ

ಇದರಲ್ಲಿರುವ ವಿಟಮಿನ್ ಎ ಚರ್ಮವನ್ನು ಸುಂದರವಾಗಿರಿಸುತ್ತದೆ.ಸುಕ್ಕು,ಮೊಡವೆ ಮುಂತಾದವುಗಳು ಸಂಭವಿಸದಂತೆ ತಡೆಯುತ್ತವೆ. ಫ್ರೀ ರಾಡಿಕಲ್ಸ್ ಅನ್ನು ಬೆಂಡೆಯಲ್ಲಿರುವ ಉತ್ಕರ್ಷಣ ಅಂಶ ಹಾನಿಗೊಳಗಾದ ಚರ್ಮವನ್ನು ಸರಿದೂಗಿಸಲು ಸಹಕರಿಸುತ್ತದೆ.

ಜೀರ್ಣಕಾರಿ

ಜೀರ್ಣಕಾರಿ

ಬೆಂಡೆಕಾಯಿ ಅಡುಗೆಯಲ್ಲಿ ಬಳಸುವುದರಿಂದ ನಿಮಗಾಗುವ ಮುಖ್ಯ ಆರೋಗ್ಯಕರ ಅಂಶವೆಂದರೆ ಇದು ನಾರಿನಂಶವನ್ನು ಸಂಪೂರ್ಣವಾಗಿ ದೇಹಕ್ಕೆ ಸೇರುವಂತೆ ಮಾಡುತ್ತದೆ.ಬೆಂಡೆಕಾಯಿಯಲ್ಲಿರುವ ನಾರಿನಂಶ ನಿಮ್ಮ ದೇಹದ ಜೀರ್ಣಕ್ರಿಯೆ ಸಕ್ರಿಯವಾಗಿ ನಡೆಯುವಂತೆ ನೋಡಿಕೊಳ್ಳುತ್ತದೆ.ಇದನ್ನು ಅಡುಗೆಗೆ ಬಳಸುವುದರಿಂದ ಮಲಬದ್ಧತೆ,ಗ್ಯಾಸ್ ಸಮಸ್ಯೆ,ಹೊಟ್ಟೆ ಉಬ್ಬರ ಇವುಗಳಾಗದಂತೆ ತಡೆಯುತ್ತದೆ.ಇದು ಡಯೇರಿಯಾವನ್ನು ಕೂಡ ತಡೆಯುತ್ತದೆ.ಜೊತೆಗೆ ದೇಹದಲ್ಲಿರುವ ಅಧಿಕ ಕೊಲೆಸ್ಟ್ರಾಲ್ ಅನ್ನು ತೆಗೆದುಹಾಕುತ್ತದೆ.

English summary

Health Benefits Of Lady's Finger Or Bhindi

What are the benefits of lady's finger? Well, the list would surely be quite long. Lady's finger also known as bhindi in Hindi is a vegetable that is grown in warm and tropical regions all over the world. It can be consumed in its raw form or it can be cooked and consumed as a curry/fry along with rice or roti.
X
Desktop Bottom Promotion