For Quick Alerts
ALLOW NOTIFICATIONS  
For Daily Alerts

ಆರೋಗ್ಯದ ಗಣಿ-ಎಲೆಮರೆ ಕಾಯಿಯಂತಿರುವ ಬೆಂಡೆಕಾಯಿ

|

ನೋಡುವುದಕ್ಕೆ ಮಹಿಳೆಯರ ಬೆರಳಿನಂತೇನೂ ಇರದ ಬೆಂಡೇಕಾಯಿಗೆ Ladies Finger ಎಂಬ ಈ ಪಟ್ಟ ಹೇಗೋ ದೊರಕಿಬಿಟ್ಟಿದೆ. ಸಾವಿರಾರು ವರ್ಷಗಳಿಂದ ಇದನ್ನು ಹಸಿಯಾಗಿ ಮತ್ತು ಬೇಯಿಸಿಕೊಂಡು ಸೇವಿಸುತ್ತಾ ಬರಲಾಗಿದೆ. ಇಡಿಯ ವರ್ಷ ಸಿಗುವ ಈ ತರಕಾರಿ ವಾಸ್ತವವಾಗಿ ವಿವಿಧ ವಿಟಮಿನ್ನುಗಳು, ಖನಿಜಗಳು ಮತ್ತು ಪೋಷಕಾಂಶಗಳ ಆಗರವಾಗಿದ್ದು ಅಗ್ಗವೂ ಆಗಿರುವುದರಿಂದ ಎಲ್ಲಾ ವರ್ಗದ ಜನರ ಮನೆಯ ಅಡುಗೆಯಲ್ಲಿ ಸಾಮಾನ್ಯವಾಗಿದೆ. ಅಲ್ಲದೇ ಇದರಲ್ಲಿರುವ ಕರಗದ ನಾರು ಮಲಬದ್ಧತೆಯಿಂದ ಕಾಪಾಡುತ್ತದೆ.

ಇದರ ಇನ್ನೊಂದು ಉತ್ತಮ ಗುಣವೆಂದರೆ ಇದನ್ನು ಶೈತ್ಯೀಕರಿಸಿ ಬಹಳ ದಿನಗಳವರೆಗೆ ಹಾಳಾಗದಂತೆ ಕಾಪಾಡಿಕೊಂಡು ಬರಬಹುದು. ಕ್ಯಾನುಗಳಲ್ಲಿ ತುಂಬಿ ಭದ್ರವಾಗಿ ಗಾಳಿಯಾಡದಂತೆ ಮಾಡಿ ವರ್ಷಗಟ್ಟಲೇ ಅಗತ್ಯವಿದ್ದಾಗ ಬಳಸಬಹುದು ಸಮುದ್ರದ ನಾವಿಕರು ತಮ್ಮೊಂದಿಗೆ ಕೊಂಡೊಯ್ಯುವ ಡಬ್ಬಿಯಲ್ಲಿ ಸಂರಕ್ಷಿಸಿದ ತರಕಾರಿಗಳಲ್ಲಿ ಬೆಂಡೆ ಸಹಾ ಒಂದು.

ಬೆಂಡೆಯಲ್ಲಿರುವ ಒಂದು ಮುಖ್ಯ ಪರಿಕರವೆಂದರೆ ಕರಗದ ನಾರು. ಇದು ಬೆಂಡೆಯನ್ನು ಕೊಯ್ದ ಬಳಿಕವೂ ಬೆಳೆಯುತ್ತಲೇ ಹೋಗುವುದರಿಂದ ಕೊಯ್ದ ಬಳಿಕವೂ ಒಂದೆರಡು ದಿನಗಳಲ್ಲಿಯೇ ಗಟ್ಟಿಯಾಗಿಬಿಡುತ್ತದೆ. ಇದನ್ನೇ ಬಲಿಯುವುದು ಎನ್ನುತ್ತೇವೆ. ಮಧುಮೇಹಕ್ಕೆ ರಾಮಬಾಣ ಬೆಂಡೆಕಾಯಿ!

ಆದ್ದರಿಂದ ಬೆಂಡೆಯನ್ನು ಆದಷ್ಟು ಎಳತಿರುವಾಗಲೇ ಸೇವಿಸುವುದು ಉತ್ತಮ. ಬೆಂಡೆಯನ್ನು ನಿಮ್ಮ ನೆಚ್ಚಿನ ತರಕಾರಿಯನ್ನಾಗಿಸಲು ಹಲವಾರು ಕಾರಣಗಳಿವೆ ಇವುಗಳಲ್ಲಿ ಪ್ರಮುಖವಾದ ಏಳು ಕಾರಣಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ವಿವರಿಸಲಾಗಿದೆ..

ಮಧುಮೇಹವನ್ನು ಹತೋಟಿಯಲ್ಲಿಡುತ್ತದೆ

ಮಧುಮೇಹವನ್ನು ಹತೋಟಿಯಲ್ಲಿಡುತ್ತದೆ

ಬೆಂಡೆಯಲ್ಲಿರುವ ಯೂಜಿನಾಲ್ (Eugenol) ಎಂಬ ಪೋಷಕಾಂಶವು ಸಕ್ಕರೆಯನ್ನು ಕರಗಿಸುವ ಕ್ರಿಯೆಯನ್ನು ನಿಧಾನಗೊಳಿಸಿ ರಕ್ತದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಇನ್ಸುಲಿನ್ ಉತ್ಪತ್ತಿಯಾಗಿ ಸಕ್ಕರೆಯ ಸದ್ಬಳಕೆಗೆ ಸಹಕರಿಸುತ್ತದೆ.

ಮಧುಮೇಹವನ್ನು ಹತೋಟಿಯಲ್ಲಿಡುತ್ತದೆ

ಮಧುಮೇಹವನ್ನು ಹತೋಟಿಯಲ್ಲಿಡುತ್ತದೆ

ಮಧುಮೇಹಿಗಳಿಗೆ ಈ ಗುಣ ವರದಾನವಾಗಿದ್ದು ಮಧುಮೇಹ ಹತೋಟಿಗೆ ಬರುತ್ತದೆ. ಅಲ್ಲದೇ ಬೆಂಡೆಯಲ್ಲಿರುವ ಹೆಚ್ಚಿನ ಪ್ರಮಾಣದ ಕರಗದ ನಾರು ಸಹಾ ಜೀರ್ಣಕ್ರಿಯೆಯನ್ನು ಕೊಂಚ ನಿಧಾನಗೊಳಿಸಿ ರಕ್ತಕ್ಕೆ ಸಕ್ಕರೆ ಸೇರುವ ಅವಧಿಯನ್ನು ದೀರ್ಘಗೊಳಿಸುತ್ತದೆ.

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಬೆಂಡೆಯ ಉತ್ತಮ ಗುಣವೆಂದರೆ ಜೀರ್ಣಕ್ರಿಯೆಯನ್ನು ಸುಲಭಗೊಳಿಸುವುದು. ಬೆಂಡೆಯನ್ನು ಕತ್ತರಿಸಿದಾಗ ಕೊಂಚ ಲೋಳೆಯಂತೆ ಕಾಣುವ ದ್ರವ (mucilage) ವಾಸ್ತವವಾಗಿ ಹೊಟ್ಟೆಯಲ್ಲಿ ಆಹಾರವು ನಿಧಾನವಾಗಿ ಚಲಿಸಲು ಮತ್ತು ಜೀರ್ಣಗೊಂಡ ಆಹಾರದಿಂದ ನೀರು ಮತ್ತು ಪೋಷಕಾಂಶಗಳನ್ನು ಹೀರಿಕೊಳ್ಳಲು ನೆರವಾಗುತ್ತದೆ. ಪರಿಣಾಮವಾಗಿ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ ಹಾಗೂ ವಿಸರ್ಜನೆಯೂ ಸುಲಲಿತವಾಗುತ್ತದೆ.

ತೂಕ ಇಳಿಸಲು ನೆರವಾಗುತ್ತದೆ

ತೂಕ ಇಳಿಸಲು ನೆರವಾಗುತ್ತದೆ

ಬೆಂಡೆಯಲ್ಲಿ ಕಡಿಮೆ ಪ್ರಮಾಣದ ಕ್ಯಾಲೋರಿಗಳು ಮತ್ತು ಹೆಚ್ಚಿನ ಪ್ರಮಾಣದ ಕರಗದ ನಾರು ಇದೆ. ಈ ನಾರನ್ನು ಕಗರಿಸುವ ಪ್ರಯತ್ನದಲ್ಲಿ ಕೊಂಚ ಪ್ರಮಾಣದ ಕೊಬ್ಬು ವ್ಯರ್ಥವಾಗಿ ಹೋಗುವುದರಿಂದ ತೂಕ ಸಹಜವಾಗಿ ಕಡಿಮೆಯಾಗುತ್ತದೆ.

ತೂಕ ಇಳಿಸಲು ನೆರವಾಗುತ್ತದೆ

ತೂಕ ಇಳಿಸಲು ನೆರವಾಗುತ್ತದೆ

ಅಲ್ಲದೇ ಕಡಿಮೆ ಕ್ಯಾಲೋರಿಗಳ ಕಾರಣ ದೇಹಕ್ಕೆ ಅಗತ್ಯವಾಗಿರುವ ಶಕ್ತಿಯನ್ನು ಅನಿವಾರ್ಯವಾಗಿ ಸಂಗ್ರಹಿಸಿರುವ ಕೊಬ್ಬನ್ನು ಬಳಸುವ ಮೂಲಕ ಪಡೆಯಬೇಕಾಗಿ ಬರುತ್ತದೆ. ಇದು ಇನ್ನೊಂದು ತರಹದಲ್ಲಿ ತೂಕ ಇಳಿಯುವಿಕೆಗೆ ನೆರವಾಗುತ್ತದೆ.

 ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಬೆಂಡೆಯಲ್ಲಿಯೂ ಉತ್ತಮ ಪ್ರಮಾಣದ ವಿಟಮಿನ್ ಸಿ ಇದೆ. ಇದು ನಿಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಬೆಂಡೆಯನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ ಹಲವು ವಿಧದ ಕಾಯಿಲೆಗಳಿಂದ ದೇಹವನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ.

ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ

ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ

ಬೆಂಡೆಯಲ್ಲಿರುವ ವಿಟಮಿನ್ ಸಿ ಮತ್ತು ಇತರ ಪೋಷಕಾಂಶಗಳು ಚರ್ಮಕ್ಕೆ ಒಳಗಿನಿಂದ ನೀಡುವ ಪೋಷಣೆಯ ಪರಿಣಾಮವಾಗಿ ಚರ್ಮ ತನ್ನ ಸಹಜ ಸೌಂದರ್ಯ ಮತ್ತು ಕಾಂತಿಯನ್ನು ಹೊಂದುತ್ತದೆ. ಇದಕ್ಕಾಗಿ ಎಳೆಯ ಬೆಂಡೆಯನ್ನು ಆಗಾಗ ಹಸಿಯಾಗಿ ತಿಂದರೆ ಹೆಚ್ಚು ಪರಿಣಾಮಕಾರಿಯಾಗಿದೆ.

ಕೆಲವು ವಿಧದ ಕ್ಯಾನ್ಸರ್ ಬರದಂತೆ ತಡೆಯುತ್ತದೆ

ಕೆಲವು ವಿಧದ ಕ್ಯಾನ್ಸರ್ ಬರದಂತೆ ತಡೆಯುತ್ತದೆ

ಒಂದು ಸಂಶೋಧನೆಯ ಪ್ರಕಾರ ಬೆಂಡೆಯಲ್ಲಿ ಇತರ ತರಕಾರಿಗಳಿಗಿಂತಲೂ ಹೆಚ್ಚಿನ ಪ್ರಮಾಣದ ಆಂಟಿ ಆಕ್ಸಿಡೆಂಟುಗಳಿದ್ದು ಇದು ಕರುಳಿನ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್ ಮತ್ತು ಬಾಯಿಯ ಕ್ಯಾನ್ಸರ್ ನಿಂದ ದೇಹವನ್ನು ರಕ್ಷಿಸುತ್ತದೆ.

ಕೆಲವು ವಿಧದ ಕ್ಯಾನ್ಸರ್ ಬರದಂತೆ ತಡೆಯುತ್ತದೆ

ಕೆಲವು ವಿಧದ ಕ್ಯಾನ್ಸರ್ ಬರದಂತೆ ತಡೆಯುತ್ತದೆ

ಅಲ್ಲದೇ ಕೆಲವು ಸಂದರ್ಭಗಳಲ್ಲಿ ನಮ್ಮ ಜೀವಕೋಶಗಳು ತಮ್ಮಿಂದ ತಾವೇ ಅನಗತ್ಯವಾಗಿ ಬೆಳೆದು ಕ್ಯಾನ್ಸರ್ ಗೆ ಕಾರಣವಾಗುತ್ತವೆ (mutation of cells), ಆದರೆ ಬೆಂಡೆ ಈ ಜೀವಕೋಶಗಳ ಬೆಳವಣಿಗೆಯನ್ನು ತಡೆಯಲು ಸಮರ್ಥವಾಗಿರುವುದರಿಂದ ನಿಮ್ಮ ನಿತ್ಯದ ಊಟದಲ್ಲಿ ಬೆಂಡೆಯನ್ನು ಅಗತ್ಯವಾಗಿ ಸೇರಿಸಲು ಮರೆಯದಿರಿ.

ಕೊಲೆಸ್ಟ್ರಾಲ್ ರೋಗಿಗಳಿಗೆ ಸೂಕ್ತವಾಗಿದೆ

ಕೊಲೆಸ್ಟ್ರಾಲ್ ರೋಗಿಗಳಿಗೆ ಸೂಕ್ತವಾಗಿದೆ

ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಇರುವ ರೋಗಿಗಳಿಗೆ ವೈದ್ಯರು ಹೆಚ್ಚಿನ ಆಹಾರಗಳನ್ನು ಸೇವಿಸದಂತೆ ಸಲಹೆ ಮಾಡುತ್ತಾರೆ. ಆದರೆ ಈ ರೋಗಿಗಳು ಬೆಂಡೆಕಾಯಿಯನ್ನು ಮಾತ್ರ ಸುರಕ್ಷಿತವಾಗಿ ಸೇವಿಸಬಹುದು. ಏಕೆಂದರೆ ಬೆಂಡೆಯಲ್ಲಿ ಯಾವುದೇ ಕೊಲೆಸ್ಟ್ರಾಲ್ ಆಗಲೀ ಕೊಲೆಸ್ಟ್ರಾಲ್ ಉಂಟುಮಾಡುವ ಕಣಗಳಾಗಲೀ ಇಲ್ಲದೇ ಇರುವುದರಿಂದ ಕೊಲೆಸ್ಟ್ರಾಲ್ ರೋಗಿಗಳ ಪಾಲಿನ ಪಂಚಾಮೃತವಾಗಿದೆ.

ಸಲಹೆ:

ಸಲಹೆ:

*ಬೆಂಡೆಯ ಸಾರು ಅಥವಾ ಪಲ್ಯ ಮಾಡುವ ಮೊದಲು ಕೊಂಚ ಎಣ್ಣೆಯಲ್ಲಿ ಹುರಿದುಕೊಂಡರೆ ಅದರ ಲೋಳೆ ಹೊರಬರದೇ ಸಾರು ಮತ್ತು ಪಲ್ಯಗಳು ಲೋಳೆರಹಿತವಾಗಿರುತ್ತವೆ.

ಬೆಂಡೆ ಎಳೆಯದಿದ್ದಷ್ಟೂ ಉತ್ತಮ. ಇದನ್ನು ಪರೀಕ್ಷಿಸಲು ತುದಿಭಾಗವನ್ನು ಮುರಿದು ನೋಡಿ.

*ಇದು ಮುರಿದು ತುಂಡಾಗಿ ಹೋಗಬೇಕು. ಅಲ್ಲಿಯೇ ಬಗ್ಗಿ ಇದ್ದರೆ ಅದು ಬಲಿತಿದೆ ಎಂದರ್ಧ. ಪರ್ಯಾಯವಾಗಿ ಬೆಂಡೆಯ ಮಧ್ಯಭಾಗದಲ್ಲಿ ಒಂದು ಅಂಚನ್ನು ಹೆಬ್ಬೆರಳಿನಿಂದ ನಯವಾಗಿ ಒತ್ತಿ.

ಸಲಹೆ:

ಸಲಹೆ:

*ಇದು ಸುಲಭವಾಗಿ ತುಂಡಾದ ಅನುಭವ ಬಂದರೆ ಮಾತ್ರ ಬೆಂಡೆ ಎಳೆಯದಾಗಿದೆ ಎಂದರ್ಥ.

*ಬೆಂಡೆ ಫ್ರೈ ಮಾಡುವುದಾದರೆ ತೊಟ್ಟಿನ ಭಾಗವನ್ನು ನಿವಾರಿಸಬೇಡಿ. ಫ್ರೈ ಮಾಡಿದ ಬಳಿಕವೇ ಕತ್ತರಿಸಿ ನಿವಾರಿಸಿ, ಇದರಿಂದ ಬೆಂಡೆಯನ್ನು ಬುಡದವರೆಗೂ ಸೀಳಲು ಮತ್ತು ಮಸಾಲೆ ತುಂಬಿಸಲು ಸಾಧ್ಯವಾಗುತ್ತದೆ.ತೊಟ್ಟು ತೆಗೆದರೆ ಪೂರ್ಣವಾಗಿ ತುಂಬಿಸಲು ಸಾಧ್ಯವಿಲ್ಲ. ಆಗ ತೊಟ್ಟಿನ ಭಾಗ ಚಪ್ಪೆಯಾಗಿಯೂ ತಳಭಾಗ ರುಚಿಯಾಗಿಯೂ ಇರುತ್ತದೆ.


English summary

Health Benefits of Lady Finger

Ladies finger has different names in different countries such as okra and bindi. From ancient times, this long, green, fruit vegetable is consumed as raw as well as cooked. Interesting fact is that it is an inexpensive vegetable that is the best friend of healthy dishes. It is also available all year round. . Experts say there are lot of reasons you must include ladies fingers in your diet. Let’s now discuss about 7 reasons you must include ladyfingers in your diet.
X
Desktop Bottom Promotion