For Quick Alerts
ALLOW NOTIFICATIONS  
For Daily Alerts

ಹಾಲು-ಜೇನಿನ ಜೋಡಿಯನ್ನು ಎಷ್ಟು ಹೊಗಳಿದರೂ ಸಾಲದು!

By Manu
|

ಅನ್ಯೋನ್ಯತೆಯನ್ನು ಬಿಂಬಿಸಲು ಹಿರಿಯರು ಹಾಲು ಮತ್ತು ಜೇನನ್ನು ಉದಾಹರಿಸುತ್ತಾರೆ. ಏಕೆಂದರೆ ಜೇನು ಹಾಲಿನಲ್ಲಿ ಸುಲಭವಾಗಿ ಬೆರೆತು ಸಿಹಿಯಾದ ಪೇಯವನ್ನಾಗಿಸುತ್ತದೆ. ಕೇವಲ ರುಚಿಯಲ್ಲಿ ಮಾತ್ರವಲ್ಲ, ಆರೋಗ್ಯಕರ ಗುಣದಲ್ಲೂ ಈ ಜೋಡಿ ಬಹುಪಯೋಗಿಯಾಗಿದೆ. ಅಲ್ಲದೇ ಇವೆರಡೂ ಸಹ ತಮ್ಮ ಉಪಶಮನಕಾರಿ ಗುಣಗಳಿಂದಾಗಿ ಸಾವಿರಾರು ವರ್ಷಗಳಿಂದ ಬಳಕೆಯಲ್ಲಿವೆ.

ಜೇನಿನಲ್ಲಿರುವ ಹಲವು ಆಂಟಿ ಆಕ್ಸಿಡೆಂಟುಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲದೇ ಜೇನು ಉತ್ತಮ ಬ್ಯಾಕ್ಟೀರಿಯಾ ಪ್ರತಿಜೀವಕ (antibiotic), ಉರಿಯೂತ ನಿವಾರಕ (anti inflammatory) ಮತ್ತು ಶಿಲೀಂಧ್ರ ನೀರೋಧಕ (antifungal) ವಾಗಿರುವುದರಿಂದ ಶ್ವಾಸನಾಳ ಮತ್ತು ಗಾಳಿಯಾಡುವ ಇಡಿಯ ವ್ಯವಸ್ಥೆಯನ್ನು ವೈರಸ್ಸುಗಳಿಂದ ಕಾಪಾಡುತ್ತದೆ. ಹೀಗೆ ಜೇನು ತುಪ್ಪವನ್ನು ನಾವು ಸಿಹಿಗಿಂತ ಹೆಚ್ಚಾಗಿ ಔಷಧಿಯಾಗಿಯೇ ಬಳಸುತ್ತೇವೆ ಎಂದರೆ ತಪ್ಪಾಗಲಾರದು. ಹಾಲಿಗೆ ಅರಿಶಿನ ಹಾಕಿ ಕುಡಿದರೆ ಹತ್ತಾರು ಲಾಭ

ಇನ್ನು, ಹಾಲು ಎಂದರೆ ನಮ್ಮ ಪಾಲಿಗೆ ಅಮೃತ. ಇದರಲ್ಲಿರುವ ವಿಟಮಿನ್ ಮತ್ತು ಖನಿಜಾಂಶಗಳು ನಮ್ಮದೇಹಕ್ಕೆ ತುಂಬಾ ಒಳ್ಳೆಯದು. ಹಾಲು ಒಂದು ಸೂಪರ್ ಫುಡ್ ಆಗಿ ಪರಿಗಣಿಸಲ್ಪಟ್ಟಿದೆ. ಏಕೆಂದರೆ ಇದರಲ್ಲಿ ವಿಟಮಿನ್ ಎ-ಬಿ,ಡಿ ಜೊತೆಗೆ ಕ್ಯಾಲ್ಸಿಯಂ ಮತ್ತು ಪ್ರಾಣಿಜನ್ಯ ಪ್ರೋಟಿನ್ ಹಾಗೂ ಲ್ಯಾಕ್ಟಿಕ್ ಆಮ್ಲವು ಇರುತ್ತದೆ. ಇದೆಲ್ಲ ಇರುವ ಈ ಪದಾರ್ಥವು ಸೂಪರ್ ಫುಡ್ ಆಗದೆ ಹೇಗೆ ಇರಲು ಸಾಧ್ಯ. ಈಗ ನಾವು ಹೇಳಲು ಹೋಗುತ್ತಿರುವ ವಿಚಾರ ಹಾಲು-ಜೇನಿನ ವಿಚಾರ.

ಹೌದು ಬೆಚ್ಚನೆಯ ಹಾಲಿನ ಜೊತೆಗೆ ಜೇನು ತುಪ್ಪವನ್ನು ಬೆರೆಸಿಕೊಂಡು ಸೇವಿಸುವುದರಿಂದ ದೊರೆಯುವ ಆರೋಗ್ಯಕಾರಿ ಪ್ರಯೋಜನಗಳ ಕುರಿತು ನಾವು ಇಂದು ನಿಮಗೆ ತಿಳಿಸುತ್ತೇವೆ. ಹಾಲು-ಜೇನು ಎಂಬುದೇ ಒಂದು ಅದ್ಭುತ ಮಿಶ್ರಣ. ಇವೆರಡನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇವಿಸುವುದರಿಂದ, ನಿಮ್ಮ ಒತ್ತಡ ಮಟ್ಟವನ್ನು ಕಡಿಮೆ ಮಾಡಿಕೊಂಡು ನಿಮ್ಮ ನರವ್ಯೂಹವನ್ನು ಆರಾಮಗೊಳಿಸಬಹುದು. ವಿಶೇಷವಾಗಿ ಮಲಗುವ ಮುನ್ನ ಇದನ್ನು ಸೇವಿಸುವುದರಿಂದ ಉತ್ತಮವಾಗಿ ನಿದ್ದೆ ಮಾಡಬಹುದು. ಇನ್ನೂ ಒಂದು ಉತ್ತಮ ಅಂಶವೆಂದರೆ ಬೆಚ್ಚಗಿನ ಹಾಲು ಮತ್ತು ಜೇನು ತುಪ್ಪವು ಜಠರದ ಇನ್‌ಫೆಕ್ಷನ್‌ಗಳನ್ನು ತಡೆಗಟ್ಟುತ್ತದೆ.

 ಒತ್ತಡದಿಂದ ಮುಕ್ತಿ ಪಡೆಯಿರಿ

ಒತ್ತಡದಿಂದ ಮುಕ್ತಿ ಪಡೆಯಿರಿ

ಹಾಲು ಮತ್ತು ಜೇನು ನೀಡುವ ಒಂದು ಉತ್ತಮ ಪ್ರಯೋಜನ ಎಂದರೆ, ಇವೆರಡನ್ನು ಒಟ್ಟಿಗೆ ಸೇವಿಸಿದಾಗ ನಮಗೆ ಒತ್ತಡದಿಂದ ಮುಕ್ತಿ ಸಿಕ್ಕುತ್ತದೆ. ಇವುಗಳು ಒತ್ತಡಕಾರಕ ನರಗಳನ್ನು ಶಾಂತಗೊಳಿಸುತ್ತವೆ. ಹೀಗೆ ನಮ್ಮನ್ನು ಒತ್ತಡದಿಂದ ಪಾರು ಮಾಡುತ್ತವೆ. ಒತ್ತಡದಿಂದ ಮುಕ್ತಿಯಾಗಬೇಕು ಎಂದು ನೀವು ಬಯಸಿದಲ್ಲಿ, ಬೆಚ್ಚಗಿನ ಹಾಲು ಮತ್ತು ಜೇನು ಅನ್ನು ದಿನಕ್ಕೆ ಎರಡು ಬಾರಿ ಸೇವಿಸಿ.

ಜೀರ್ಣಕ್ರಿಯೆಗೆ ಸಹಕರಿಸುತ್ತದೆ

ಜೀರ್ಣಕ್ರಿಯೆಗೆ ಸಹಕರಿಸುತ್ತದೆ

ಜೇನಿನಲ್ಲಿ prebiotics ಎಂಬ ರಾಸಾಯನಿಕವಿದೆ. ಇದು ಜಠರದಲ್ಲಿ ಜೀರ್ಣಕ್ರಿಯೆಯನ್ನು ಸುಲಭಗೊಳಿಸುವ ಕೆಲವು ಬ್ಯಾಕ್ಟೀರಿಯಾಗಳ ಹುಟ್ಟಿಗೆ ಕಾರಣವಾಗುತ್ತದೆ. ಈ ಬ್ಯಾಕ್ಟೀರಿಯಾಗಳು ಕರುಳಿಗೆ ರವಾನೆಯಾದ ಬಳಿಕ ಜೀರ್ಣಕ್ರಿಯೆಯಲ್ಲಿ ಸಹಕರಿಸಿ ಆಹಾರ ಸುಲಭವಾಗಿ ಪಚನವಾಗುವಂತೆ ನೋಡಿಕೊಳ್ಳುತ್ತವೆ. ಪರಿಣಾಮವಾಗಿ ಜೀರ್ಣಕ್ರಿಯೆ ಉತ್ತಮಗೊಂಡು ಆಹಾರದ ಪೋಷಕಾಂಶಗಳು ದೇಹಕ್ಕೆ ಸುಲಭವಾಗಿ ಲಭಿಸುತ್ತವೆ ಮತ್ತು ಆರೋಗ್ಯ ವೃದ್ಧಿಸುತ್ತದೆ.

ಚೆನ್ನಾಗಿ ನಿದ್ದೆ ಮಾಡಲು ಸಹಕರಿಸುತ್ತದೆ

ಚೆನ್ನಾಗಿ ನಿದ್ದೆ ಮಾಡಲು ಸಹಕರಿಸುತ್ತದೆ

ಬೆಚ್ಚಗಿನ ಹಾಲು ಮತ್ತು ಜೇನನ್ನು ನಿದ್ದೆ ಮಾಡುವ ಮುನ್ನ ಸೇವಿಸಿದರೆ, ಅದರಿಂದ ನಿಮ್ಮ ಮೆದುಳು ಪ್ರಶಾಂತಗೊಳ್ಳುತ್ತದೆ. ಜೇನು ಮೆದುಳಿನ ಚಟುವಟಿಕೆಗಳನ್ನು ಕಡಿಮೆಗೊಳಿಸುತ್ತದೆ ಮತ್ತು ಮೆದುಳಿನಲ್ಲಿ ಒರೆಕ್ಸಿನ್ ಎಂಬ ದ್ರವ ಬಿಡುಗಡೆ ಮಾಡುತ್ತದೆ. ಇದು ನಿಮಗೆ ಚೆನ್ನಾಗಿ ನಿದ್ದೆ ಮಾಡಲು ಸಹಕರಿಸುತ್ತದೆ.

ಮೂಳೆಯ ಆರೋಗ್ಯವನ್ನು ಸುಧಾರಿಸುತ್ತದೆ

ಮೂಳೆಯ ಆರೋಗ್ಯವನ್ನು ಸುಧಾರಿಸುತ್ತದೆ

ಹಾಲಿನಲ್ಲಿ ಅಧಿಕ ಪ್ರಮಾಣದ ಕ್ಯಾಲ್ಸಿಯಂ ಇರುವುದು ಎಲ್ಲರಿಗೂ ತಿಳಿದಿರುವ ವಿಚಾರವೇ. ಇದರ ಜೊತೆಗೆ ಜೇನು ತುಪ್ಪವನ್ನು ಬೆರೆಸಿಕೊಂಡು ಸೇವಿಸಿದರೆ ಮೂಳೆಗಳ ಆರೋಗ್ಯವು ಸುಧಾರಿಸುತ್ತದೆ. ಜೊತೆಗೆ ಇದು ಮುರಿದ ಮತ್ತು ನೋವುಂಟು ಮಾಡುವ ಮೂಳೆಗಳನ್ನು ಸಹ ಇದು ಗುಣಪಡಿಸುವ ಅಂಶಗಳನ್ನು ಒಳಗೊಂಡಿರುತ್ತದೆ.

ಸದೃಢತೆಯನ್ನು ಹೆಚ್ಚಿಸುತ್ತದೆ

ಸದೃಢತೆಯನ್ನು ಹೆಚ್ಚಿಸುತ್ತದೆ

ತಜ್ಞರ ಪ್ರಕಾರ ಹಸುವಿನ ಹಾಲಿಗಿಂತ ಬಾದಾಮಿ ಹಾಲು ನಮ್ಮ ದೇಹಕ್ಕೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆಯಂತೆ. ಒಂದು ಲೋಟ ಬಾದಾಮಿ ಹಾಲಿಗೆ ಸ್ವಲ್ಪ ಜೇನು ತುಪ್ಪವನ್ನು ಬೆರೆಸಿಕೊಳ್ಳಿ. ಇದನ್ನು ಬೆಳಗ್ಗೆ ಎದ್ದ ಕೂಡಲೆ ಮೊದಲು ಸೇವಿಸಿ. ಇದು ನಿಮ್ಮ ಇಡೀ ದಿನವನ್ನು ಚೈತನ್ಯದಾಯಕವಾಗಿ ಇರಿಸುತ್ತದೆ. ಬಾದಾಮಿ ಹಾಲಿನಲ್ಲಿ ಹಲವಾರು ಪೋಷಕಾಂಶಗಳು ಮತ್ತು ವಿಟಮಿನ್‌ಗಳು ಇರುತ್ತವೆ. ಇವು ನಿಮ್ಮನ್ನು ಲವಲವಿಕೆಯಿಂದ ಇರಿಸಲು ಸಹಾಯ ಮಾಡುತ್ತವೆ.

ಜಠರದ ಇನ್‌ಫೆಕ್ಷನ್ ಅನ್ನು ಹೋಗಲಾಡಿಸುತ್ತದೆ

ಜಠರದ ಇನ್‌ಫೆಕ್ಷನ್ ಅನ್ನು ಹೋಗಲಾಡಿಸುತ್ತದೆ

ಜಠರದ ಇನ್‌ಫೆಕ್ಷನ್ ಬಂದಾಗ ಔಷಧಿ ಅಂಗಡಿಯಲ್ಲಿ ದೊರೆಯುವ ಔಷಧಿಗಳನ್ನು ಸೇವಿಸದೆ, ಬೆಚ್ಚಗಿನ ಹಾಲು ಮತ್ತು ಅದಕ್ಕೆ ಸ್ವಲ್ಪ ಜೇನು ತುಪ್ಪವನ್ನು ಸೇರಿಸಿ ಸೇವಿಸುವುದರಿಂದ ಈ ಸಮಸ್ಯೆಯಿಂದ ಹೊರಬರಬಹುದು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಜಠರದ ಇನ್‌ಫೆಕ್ಷನ್ ಅನ್ನು ಹೋಗಲಾಡಿಸುತ್ತದೆ

ಜಠರದ ಇನ್‌ಫೆಕ್ಷನ್ ಅನ್ನು ಹೋಗಲಾಡಿಸುತ್ತದೆ

ಇದರಲ್ಲಿರುವ ಆಂಟಿಆಕ್ಸಿಡೆಂಟ್ ಮತ್ತು ಆಂಟಿ ಬ್ಯಾಕ್ಟೀರಿಯ ಗುಣಗಳು ಹೊಟ್ಟೆಯಲ್ಲಿರುವ ಕೀಟಾಣುಗಳನ್ನು ಕೊಂದು ನಿಮ್ಮ ಇನ್‌ಫೆಕ್ಷನ್ ಅನ್ನು ದೂರ ಮಾಡುತ್ತವೆ. ಜೊತೆಗೆ ನೀವು ಈ ಪೇಯವನ್ನು ಪ್ರತಿದಿನ ಸೇವಿಸುತ್ತಿದ್ದಲ್ಲಿ, ನಿಮ್ಮ ದೇಹದಲ್ಲಿರುವ ಟಾಕ್ಸಿನ್‌ಗಳನ್ನು ಸುಲಭವಾಗಿ ಹೊರ ಹಾಕಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

English summary

Health Benefits Of Drinking Warm Milk & Honey

The combination of warm milk and honey is considered to be an ancient healing beverage. The golden liquid is traditionally used for treating most of the health problems as it contains healing properties, antioxidants, antibacterial, and anti-fungal properties. Moreover, honey is a soothing ingredient and it can also treat organ problems and those related to respiration.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X