For Quick Alerts
ALLOW NOTIFICATIONS  
For Daily Alerts

ಜೀರ್ಣಕ್ರಿಯೆ ವೃದ್ಧಿಸುವ ಶಕ್ತಿ-ಇಂತಹ ಹಣ್ಣುಗಳಲ್ಲಿ ಅಡಗಿದೆ

By Super
|

ನಾವು ಊಟ ಮಾಡಿದ ಮೇಲೆ ಆಹಾರವು ಜೀರ್ಣವಾಗಿ ಅದರ ಪೌಷ್ಟಿಕಾಂಶಗಳು ದೇಹಕ್ಕೆ ಸಕಾಲದಲ್ಲಿ ಸೇರುವುದು ಪ್ರಾಕೃತಿಕವಾದ ಸಹಜ ಕ್ರಿಯೆ. ಆದರೆ ಜೀರ್ಣಕ್ರಿಯೆಯು ಸುಗಮವಾಗಲು ನಾವು ಸೇವಿಸುವ ಆಹಾರದ ಮೇಲೆ ಅವಲಂಬಿತವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಆಹಾರಗಳ ಸೇವನೆಯು ವ್ಯತಿರಿಕ್ತವಾಗಿದ್ದು, ಬಗೆಬಗೆಯ ರುಚಿರುಚಿಯಾದ ತರಹೇವಾರಿ ಆಹಾರಗಳನ್ನು ಸೇವಿಸುವ ಪರಂಪರೆ ಗಣನೀಯವಾಗಿ ಏರಿಕೆ ಕಂಡಿದೆ.

ಈಗಿನ ಆಹಾರ ಶೈಲಿಗಳಲ್ಲಿ ರುಚಿಗೆ ಹೆಚ್ಚು ಒತ್ತು ನೀಡುತ್ತಿದ್ದು, ಪೌಷ್ಠಿಕಾಂಶಗಳ ಬಗ್ಗೆ ಮತ್ತು ಆರೋಗ್ಯಕ್ಕೆ ಉಪಯುಕ್ತತೆಯ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಹಾಗಾಗಿಯೇ ಇತ್ತೀಚೆಗೆ ಜೀರ್ಣಕ್ರಿಯೆ ಸಂಬಂಧಿತ ಅನೇಕ ರೋಗಗಳು ಕಾಣಿಸಿಕೊಳ್ಳಲು ಕಾರಣವಾಗುತ್ತಿದೆ. ಇದರಲ್ಲಿ ಸಂಸ್ಕರಿಸಿದ ಆಹಾರಗಳ ಸೇವನೆಯೂ ಸಹ ಪ್ರಮುಖವಾದ ಕಾರಣವಾಗಿದೆ. ಸಂಸ್ಕರಿಸಿದ ಆಹಾರಗಳು ನಿಮ್ಮ ಜೀರ್ಣಕ್ರಿಯೆಯ ವ್ಯವಸ್ಥೆಯ ಮೇಲೆ ಹೆಚ್ಚು ಒತ್ತಡ ಹೇರಿ ದಣಿವಾಗುವಂತೆ ಮಾಡುತ್ತದೆ. ಆಂಟಾಸಿಡ್ಸ್ ಅಥವಾ ಹಣ್ಣುಗಳ ಉಪ್ಪಿನ ದೀರ್ಘಕಾಲದ ಸೇವನೆಯು ನಿಮ್ಮ ಆರೋಗ್ಯಕ್ಕೆ ಉತ್ತಮವಾದ ಅಭ್ಯಾಸವಲ್ಲ. ಜೀರ್ಣಕ್ರಿಯೆಗೆ ಸಹಕಾರಿಯಾಗಲು ಮತ್ತು ಜೀರ್ಣಕ್ರಿಯೆ ವ್ಯವಸ್ಥೆಯು ಸುಗಮವಾಗಿ ಕಾರ್ಯನಿರ್ವಹಿಸುವಂತೆ ಮಾಡಲು ಮೊದಲಿಗೆ ನಮ್ಮ ಹೊಟ್ಟೆಯನ್ನು ಹಿತಗೊಳಿಸಬೇಕು, ಅದಕ್ಕೆಂದೇ ಊಟವಾದ ಬಳಿಕ ಕೆಲವೊಂದು ಹಣ್ಣುಗಳನ್ನು ಸೇವಿಸುವುದು ಅತ್ಯವಶ್ಯಕ

ಉದಾಹರಣೆಗೆ ಬಾಳೆಹಣ್ಣು ಮತ್ತು ಪಪ್ಪಾಯಿಗಳನ್ನು ಖಾಲಿಹೊಟ್ಟೆಯಲ್ಲಿ ಬೆಳಿಗ್ಗೆ ಸೇವಿಸಿ ಇನ್ನೊಂದು ಬಗೆಯ ಹಣ್ಣನ್ನು ದಿನದ ಬೇರಾವುದಾದರೂ ಹೊತ್ತಿನಲ್ಲಿ ಸೇವಿಸುವ ಮೂಲಕ ಉತ್ತಮ ಆರೋಗ್ಯ ದೊರಕುತ್ತದೆ. ಬಾಳೆ ಮತ್ತು ಪಪ್ಪಾಯಿಯಲ್ಲಿ ಕರಗದ ನಾರು ಹೆಚ್ಚಿರುವ ಜೊತೆಗೇ ಸೋಡಿಯಂ ಮತ್ತಿತರ ಲವಣಗಳೂ ಹೆಚ್ಚಿನ ಪ್ರಮಾಣದಲ್ಲಿದ್ದು ಜೀರ್ಣಕ್ರಿಯೆಯನ್ನು ವೃದ್ಧಿಸುತ್ತವೆ. ಇವು ದಿನವಿಡೀ ಚಟುವಟಿಕೆಯಿಂದಿರಲು ನೆರವಾಗುತ್ತವೆ.

ವ್ಯತಿರಿಕ್ತವಾಗಿ ಕೆಲವು ಹಣ್ಣುಗಳನ್ನು ಊಟವಾದ ಬಳಿಕವೇ ಸೇವಿಸುವುದು ಉತ್ತಮ. ಇದು ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. ಸೀಬೆ, ಅನಾನಸ್ ಮೊದಲಾದವುಗಳಲ್ಲಿ ನಾರು ಮತ್ತು ಕಿಣ್ವಗಳು ಹೇರಳವಾಗಿದ್ದು ಪಚನಾಂಗಗಳನ್ನು ಸುಸ್ಥಿತಿಯಲ್ಲಿಡಲು ನೆರವಾಗುತ್ತವೆ. ಜೀರ್ಣಿಸಿಕೊಳ್ಳಲು ಹೆಚ್ಚಿನ ಶ್ರಮ ಬೇಡುವ ಆಹಾರಗಳಾದ ಪ್ರೋಟೀನು ಮತ್ತು ಎಣ್ಣೆಗಳನ್ನು ಜೀರ್ಣಿಸಿಕೊಳ್ಳಲೂ ಇವು ನೆರವಾಗುತ್ತವೆ. ಊಟದ ಬಳಿಕ ಸೇವಿಸಲು ಉತ್ತಮವಾದ ಹಣ್ಣುಗಳ ಬಗ್ಗೆ ಅಮೂಲ್ಯ ಮಾಹಿತಿಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ.

ಸೀಬೆಹಣ್ಣು

ಸೀಬೆಹಣ್ಣು

ಪೇರಳೆ ಹಣ್ಣು ಎಂದೂ ಕರೆಯಲ್ಪಡುವ ಸೀಬೆಹಣ್ಣು ಕರುಳುಗಳಿಗೆ ಉತ್ತಮವಾದ ಆಹಾರವಾಗಿದೆ. ಅದರಲ್ಲೂ ಒಳಭಾಗ ಕೆಂಪಗಿರುವ ಚಂದ್ರು ಪೇರಳೆಯಲ್ಲಿ ಜೀರ್ಣಕ್ರಿಯೆಯನ್ನು ಹೆಚ್ಚಿಸುವ ಹಲವು ಪೋಷಕಾಂಶಗಳಿವೆ. ಇತ್ತೀಚಿನ ಸಂಶೋಧನೆಯ ಪ್ರಕಾರ ಸೀಬೆಯ ತಿರುಳು ಮತ್ತು ಗಟ್ಟಿಯಾದ ಬೀಜಗಳು ಮಲಬದ್ಧತೆಯನ್ನು ತಡೆಯಲು ಸಮರ್ಥವಾಗಿವೆ.ಇದರಲ್ಲಿ ಕೊಲೆಸ್ಟ್ರಾಲ್, ಸೋಡಿಯಂ ಮತ್ತು ಕೊಬ್ಬು ಇಲ್ಲದೇ ಇರುವ ಕಾರಣ ಮಧುಮೇಹಿಗಳಿಗೂ ಸೂಕ್ತವಾದ ಹಣ್ಣು ಆಗಿದೆ. ಇದರಲ್ಲಿರುವ 190 ಮಿಲಿಗ್ರಾಂ ಪೊಟ್ಯಾಶಿಯಂ ಜೀರ್ಣಕ್ರಿಯೆಗೆ ಅಗತ್ಯವಿದ್ದಷ್ಟು ಸರಿಯಾದ ಪ್ರಮಾಣದಲ್ಲಿರುವ ಕಾರಣ ಊಟವಾದ ಬಳಿಕ ಸೇವಿಸಲು ಅತ್ಯುತ್ತಮವಾದ ಹಣ್ಣು ಆಗಿದೆ. ಆದರೆ ಕರುಳಿನಲ್ಲಿ ಹುಣ್ಣು ಇರುವವರಿಗೆ ಈ ಹಣ್ಣು ಸಲ್ಲದು.

ಸೇಬುಹಣ್ಣು

ಸೇಬುಹಣ್ಣು

ಸೇಬಿನಲ್ಲಿಯೂ ಉತ್ತಮ ಪ್ರಮಾಣದ ಕರಗುವ ನಾರು ಇದ್ದು ಅಜೀರ್ಣತೆಯಿಂದ ಬಳಲುತ್ತಿರುವವರಿಗೆ ಹೇಳಿ ಮಾಡಿಸಿದ ಆಹಾರವಾಗಿದೆ. ಈ ತೊಂದರೆ ಇರುವವರು ಮದ್ಯಾಹ್ನ ಮತ್ತು ರಾತ್ರಿಯ ಊಟವಾದ ಹದಿನೈದು ನಿಮಿಷಗಳ ಬಳಿಕ ಒಂದು ಸೇಬುಹಣ್ಣನ್ನು ಸೇವಿಸುವ ಮೂಲಕ ಅಜೀರ್ಣತೆಯ ತೊಂದರೆಯಿಂದ ಸಾಕಷ್ಟು ಆರಾಮ ಪಡೆಯಬಹುದು.

ರಾಸ್ಬೆರಿ

ರಾಸ್ಬೆರಿ

ಅಜೀರ್ಣತೆಯಿಂದ ಬಳಲುತ್ತಿರುವ ಮಧುಮೇಹಿಗಳಿಗೆ ಸೂಕ್ತವಾದ ಆಹಾರವೆಂದರೆ ರಾಸ್ಬೆರಿ ಹಣ್ಣುಗಳು. ಈ ಪುಟ್ಟ ಹಣ್ಣುಗಳಲ್ಲಿ ಉತ್ತಮ ಪ್ರಮಾಣದ ನಾರು ಮತ್ತು ಕಡಿಮೆ ಸಕ್ಕರೆ ಮಧುಮೇಹಿಗಳಿಗೆ ಹೇಳಿ ಮಾಡಿಸಿದ ಆಹಾರವನ್ನಾಗಿಸಿದೆ. ಅಲ್ಲದೇ ಇದರಲ್ಲಿ ಕಡಿಮೆ ಇರುವ ಕ್ಯಾಲೋರಿಗಳು ಮಧುಮೇಹಿಗಳಿಗೆ ಸುಲಭವಾಗಿ ಜೀರ್ಣಿಸಿಕೊಳ್ಳಲೂ ಸಾಧ್ಯವಾಗುತ್ತದೆ.

ಪಪ್ಪಾಯಿ ಹಣ್ಣು

ಪಪ್ಪಾಯಿ ಹಣ್ಣು

ಜೀರ್ಣಶಕ್ತಿಯನ್ನು ಕೇವಲ ಒಂದೇ ದಿನದಲ್ಲಿ ಹೆಚ್ಚಿಸಲು ಪೊಪ್ಪಾಯಿ ಹಣ್ಣು ತಿನ್ನುವುದು ಉತ್ತಮ. ಇದರಲ್ಲಿ ಉತ್ತಮ ಪ್ರಮಾಣದಲ್ಲಿರುವ ವಿಟಮಿನ್ ಸಿ ಆಮಶಂಕೆಯಿಂದ ನಷ್ಟವಾಗಿರುವ ಶಕ್ತಿಯನ್ನು ಮರುಪೂರೈಸಲು ಶಕ್ತವಾಗಿದೆ. ಅಲ್ಲದೇ ಇದರಲ್ಲಿರುವ ಪಪಾಯಿನ್ ಎಂಬ ಪೋಷಕಾಂಶ ಪ್ರೋಟೀನುಗಳನ್ನು ಒಡೆದು ಜೀರ್ಣಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತವೆ.

ಬಾಳೆಹಣ್ಣು

ಬಾಳೆಹಣ್ಣು

ಜೀರ್ಣಶಕ್ತಿಯನ್ನು ಹೆಚ್ಚಿಸಲು ಮತ್ತು ಕರುಳುಗಳಲ್ಲಿ ಆಹಾರ ಪ್ರವಹಿಸುವ ಕ್ರಿಯೆಯನ್ನು ಸುಲಭಗೊಳಿಸಲು ಬಾಳೆಹಣ್ಣು ಅತಿ ಉಪಯುಕ್ತವಾಗಿದೆ. ಆದ್ದರಿಂದ ಬೆಳಗ್ಗಿನ ಹೊತ್ತು ಮತ್ತು ಊಟದ ಬಳಿಕ ಸೇವಿಸಲು ಉತ್ತಮವಾಗಿದೆ.

ಅನಾನಸ್

ಅನಾನಸ್

ಅನಾನಸ್ ಹಣ್ಣನ್ನು ತಿಂದ ಬಳಿಕ ನಾಲಿಗೆಯಲ್ಲಿ ಉಳಿಯುವ ನವಿರಾದ ತುರಿಕೆಯ ಕಾರಣ ಕೆಲವರು ಇದನ್ನು ತಿನ್ನಲು ಇಷ್ಟಪಡುವುದಿಲ್ಲ. ಆದರೆ ಜೀರ್ಣಕ್ರಿಯೆಯನ್ನು ಪರಿಗಣಿಸಿದರೆ ಇದು ಆರೋಗ್ಯಕರ ಆಹಾರವಾಗಿದೆ. ಇದರಲ್ಲಿರುವ ಬ್ರೋಮಿಲೈನ್ ಎಂದ ಕಿಣ್ವ ಆಹಾರವನ್ನು ಒಡೆಯಲು ನೆರವಾಗುತ್ತದೆ.

ಅಂಜೂರ

ಅಂಜೂರ

ಒಂದು ಕಪ್ ಒಣ ಅಂಜೂರದಲ್ಲಿ ಹದಿನೈದು ಗ್ರಾಂ ನಷ್ಟು ಕರಗದ ನಾರು ಇರುವ ಕಾರಣ ಜೀರ್ಣಕ್ರಿಯೆಗೆ ಸಹಕರಿಸಲು ಅತ್ಯುತ್ತಮವಾದ ಆಹಾರವಾಗಿದೆ. ಜೀರ್ಣಕ್ರಿಯೆಯನ್ನು ಹೆಚ್ಚಿಸಲು ಊಟದ ಬಳಿಕ ಸುಮಾರು ಒಂದು ಕಪ್ ನಷ್ಟು ಒಣ ಅಂಜೂರವನ್ನು ತಿನ್ನುವುದು ವಿಹಿತ.

ಬೆಣ್ಣೆಹಣ್ಣು

ಬೆಣ್ಣೆಹಣ್ಣು

ಪೋಷಕಾಂಶಗಳ ಪಟ್ಟಿಯನ್ನು ಪರಿಗಣಿಸಿದರೆ ಬೆಣ್ಣೆಹಣ್ಣಿನಷ್ಟು ಉತ್ತಮವಾದ ಆರೋಗ್ಯಕರ ಹಣ್ಣು ಇನ್ನೊಂದಿಲ್ಲ. ಊಟದ ಬಳಿಕ ಸುಮಾರು ಅರ್ಧದಷ್ಟು ಬೆಣ್ಣೆ ಹಣ್ಣಿನ ತಿರುಳನ್ನು ಸೇವಿಸುವ ಮೂಲಕ ಜೀರ್ಣಗೊಳ್ಳಲು ಕಷ್ಟಕರವಾದ ಆಹಾರಗಳೂ ಸುಲಭವಾಗಿ ಜೀರ್ಣವಾಗುತ್ತವೆ.

English summary

Eat These Fruits To Improve Digestion

Super-foods should be a must add to your daily diet since they provide you with all the nutrients and proteins. According to the experts, one must consume at least two to three types of fruits everyday to gain the required energy. Fruits like banana and papaya should be consumed early in morning and preferably on an empty stomach. These two fruits are rich in fibre and sodium along with other elements which are good to keep you active right through the day.
X
Desktop Bottom Promotion