For Quick Alerts
ALLOW NOTIFICATIONS  
For Daily Alerts

ನೀರು ಕುಡಿಯುವುದು ಕಡಿಮೆ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ!

By Super
|

ನಮ್ಮ ದೇಹಕ್ಕೆ ಪ್ರತಿದಿನ ಎಂಟು ಲೋಟದಷ್ಟು ಶುದ್ಧವಾದ ನೀರಿನ ಅಗತ್ಯವಿದೆ ಎಂದು ಪರಿಣಿತರು ತಿಳಿಸುತ್ತಾರೆ. ಆದರೆ ಹೆಚ್ಚಿನವರು ಈ ಮಾತನ್ನು ಉಪೇಕ್ಷಿಸಿ ಕುಡಿಯದಿದ್ದರೆ ಏನಾಗುತ್ತದೆ ಎಂಬ ಮೊಂಡು ಹಠವನ್ನು ಹಿಡಿಯುತ್ತಾರೆ. ಇವರ ನಂಬಿಕೆಯಂತೆ ಮರುಭೂಮಿಯ ಬಿರುಬಿಸಿಲಿನಲ್ಲಿದ್ದವರಿಗೆ ಮಾತ್ರ ನೀರು ಪದೇ ಪದೇ ಕುಡಿಯುವ ಅಗತ್ಯವಿರುತ್ತದೆ. ಬೆಚ್ಚನೆ ನೀರಿನ ಜೊತೆ ಲಿಂಬೆ ಮತ್ತು ಜೇನು ಸೇವನೆ ಏಕೆ ಮಹತ್ವಪೂರ್ಣ

ನಗರದಲ್ಲಿರುವ ನಮಗೆ ಮೂರು ಹೊತ್ತಿನ ಊಟದ ಜೊತೆ ನೀರು ಕುಡಿದರೆ ಸಾಕು. ಅಷ್ಟಕ್ಕೂ ಪದೇ ಪದೇ ನೀರು ಕುಡಿಯುತ್ತಿದ್ದರೆ ಪದೇ ಪದೇ ಮೂತ್ರಕ್ಕೂ ಹೋಗಬೇಕಾಗುತ್ತದೆ. ಸಮಯವಿಲ್ಲದ ನಮಗೆ ಶೌಚಾಲಯಗಳನ್ನು ಹುಡುಕುತ್ತ ಇರಲಿಕ್ಕೆ ವ್ಯವಧಾನ ಎಂಬ ಮಾತುಗಳನ್ನಾಡುತ್ತಾರೆ.

ಆದರೆ ದೇಹ ಈ ಮಾತುಗಳನ್ನು ಕೇಳುವುದಿಲ್ಲ. ಮರುಭೂಮಿಯಲ್ಲಿದ್ದರೂ ಶೀತಲ ಪ್ರದೇಶದಲ್ಲಿದ್ದರೂ ನಮ್ಮ ದೇಹಕ್ಕೆ ನಿಯಮಿತವಾಗಿ ನೀರಿನ ಸರಬರಾಜು ಆಗುತ್ತಲೇ ಇರಬೇಕು. ಇಲ್ಲದಿದ್ದರೆ ದೇಹ ಒಣಗಲು ತೊಡಗುತ್ತದೆ. ಇದರ ಪರಿಣಾಮಗಳು ಥಟ್ಟನೇ ಹೊರಬರುವುದಿಲ್ಲ. ನಿಧಾನವಾಗಿ ಇದರ ಪರಿಣಾಮಗಳು ಹೊರಬರಲು ಪ್ರಾರಂಭವಾಗುತ್ತವೆ. ದೀರ್ಘಕಾಲದ ಉಪೇಕ್ಷೆ ಸರಿಪಡಿಸಲಾಗದ ತೊಂದರೆಗಳನ್ನೂ ಉಂಟುಮಾಡಬಹುದು (ಚರ್ಮದಲ್ಲಿ ಅಳಿಸಲಾರದ ಕಲೆ ಮೊದಲಾದವು). ಈ ತೊಂದರೆಗೆ ಸಿಲುಕಿಕೊಳ್ಳದೇ ಇರಲು ಈ ಬಗ್ಗೆ ಕೆಲವು ಅತಿ ಅಗತ್ಯವಾದ ಹದಿಮೂರು ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ. ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ಆಗುವ 10 ಲಾಭಗಳು

ಸುಸ್ತು, ದೇಹದಲ್ಲಿ ಶಕ್ತಿ ಉಡುಗಿದಂತಾಗುವುದು

ಸುಸ್ತು, ದೇಹದಲ್ಲಿ ಶಕ್ತಿ ಉಡುಗಿದಂತಾಗುವುದು

ನಮ್ಮ ದೇಹದ ಪ್ರತಿ ಜೀವಕೋಶದ ಕೆಲಸಕ್ಕೆ ನೀರು ಅತ್ಯಗತ್ಯವಾಗಿದೆ. ನೀರಿನ ಕೊರತೆಯಿಂದ ಪ್ರತಿ ಜೀವಕೋಶಕ್ಕೆ ಲಭ್ಯವಾಗುತ್ತಿರುವ ನೀರು ಕಡಿಮೆಯಾಗುತ್ತಾ ಹೋಗುತ್ತಿದ್ದಂತೆ ಜೀವಕೋಶಗಳ ಕಾರ್ಯಕ್ಷಮತೆಯೂ ಉಡುಗುತ್ತಾ ಹೋಗುತ್ತದೆ. ಪರಿಣಾಮವಾಗಿ ಸುಸ್ತು ಆವರಿಸುತ್ತದೆ. ನಿಲ್ಲಲೂ ನಡೆದಾಡಲೂ ಸಾಧ್ಯವಿಲ್ಲದಂತಾಗಿ ಕುಸಿದು ಬೀಳುವ ಸಾಧ್ಯತೆ ಇರುತ್ತದೆ. ಒಟ್ಟಾರೆ ಇಡಿಯ ದೇಹದ ಶಕ್ತಿಯೇ ಉಡುಗುತ್ತದೆ.

ಅವಧಿಗೂ ಮುನ್ನ ಆವರಿಸುವ ವೃದ್ಧಾಪ್ಯ

ಅವಧಿಗೂ ಮುನ್ನ ಆವರಿಸುವ ವೃದ್ಧಾಪ್ಯ

ವಯೋಸಹಜವಾಗಿ ಕೂದಲು ಹಣ್ಣಾಗತೊಡಗುತ್ತಿದ್ದಂತೆಯೇ ಅದನ್ನು ಕಪ್ಪುಮಾಡಿಕೊಳ್ಳಲು ಏನೇನೋ ಕಸರತ್ತು ಮಾಡುವ ನಾವು ನಮ್ಮ ದೇಹ ಮುಪ್ಪಿನತ್ತ ಶೀಘ್ರವಾಗಿ ಸರಿಯುತ್ತಿರುವುದಕ್ಕೆ ಹೆಚ್ಚು ಕಾಳಜಿ ವಹಿಸುತ್ತಿಲ್ಲ. ಈಗ ತಾನೇ ಹುಟ್ಟಿದ ಮಗುವಿನ ದೇಹದ ಎಂಭತ್ತು ಪ್ರತಿಶತ ನೀರಿನಿಂದ ತುಂಬಿದೆ. ವಯಸ್ಸಾಗುತ್ತಿದ್ದಂತೆ ಈ ಶೇಖಡಾವಾರು ಪ್ರಮಾಣ ಕಡಿಮೆಯಾಗುತ್ತಾ ಹೋಗುತ್ತದೆ. ಮುಪ್ಪಿನತ್ತ ಸರಿಯುತ್ತಿದ್ದಂತೆ ಸುಮಾರು ಎಪ್ಪತ್ತು ಪ್ರತಿಶತಕ್ಕೆ ಬಂದು ತಲುಪುತ್ತದೆ. ಕಡಿಮೆ ನೀರು ಕುಡಿಯುವುದರಿಂದ ನಾವೇ ನಮ್ಮ ಕೈಯಾರೆ ಮುಪ್ಪನ್ನು ಬೇಗ ಬಾ ಎಂದು ಕರೆದಂತಾಗುತ್ತದೆ.

ಹೆಚ್ಚಿನ ತೂಕ ಮತ್ತು ಸ್ಥೂಲಕಾಯ

ಹೆಚ್ಚಿನ ತೂಕ ಮತ್ತು ಸ್ಥೂಲಕಾಯ

ನೀರು ಕುಡಿಯದೇ ಇರುವುದರಿಂದ ದೇಹ ಬೇಡುವ ನೀರಿನ ಹಸಿವನ್ನು ಆಹಾರದ ಅಗತ್ಯ ಎಂದು ತಪ್ಪಾಗಿ ಅರ್ಥೈಸಿಕೊಂಡು ನೀರಿನ ಬದಲು ಹೆಚ್ಚಿನ ಕೊಬ್ಬು ಮತ್ತು ಸಕ್ಕರೆ ಇರುವ ಆಹಾರಗಳನ್ನು ಸೇವಿಸುವುದರಿಂದ ಅನಗತ್ಯವಾಗಿ ಕೊಬ್ಬು ತುಂಬಿಕೊಂಡು ದೇಹ ಸ್ಥೂಲವಾಗುತ್ತದೆ ಹಾಗೂ ತೂಕ ಹೆಚ್ಚುತ್ತದೆ.

ಅತಿಹೆಚ್ಚಿನ ಅಥವಾ ಅತಿಕಡಿಮೆ ರಕ್ತದೊತ್ತಡದ ತೊಂದರೆಗಳು

ಅತಿಹೆಚ್ಚಿನ ಅಥವಾ ಅತಿಕಡಿಮೆ ರಕ್ತದೊತ್ತಡದ ತೊಂದರೆಗಳು

ರಕ್ತದಲ್ಲಿರುವ ಪ್ಲಾಸ್ಮಾ ಅಥವಾ ದ್ರವ ಸಹಾ ನೀರಿನಿಂದ ಕೂಡಿದೆ. ನೀರಿನ ಕೊರತೆಯಿಂದ ದೇಹ ಸೊರಗಲು ರಕ್ತದಲ್ಲಿನ ನೀರಿನ ಪ್ರಮಾಣ ಕಡಿಮೆಯಾಗುವುದು ಪ್ರಮುಖ ಕಾರಣವಾಗಿದೆ. ಇದರಿಂದ ರಕ್ತ ಗಾಢವಾಗುತ್ತಾ ಹೋಗುವ ಕಾರಣ ಹೃದಯ ಹೆಚ್ಚಿನ ಒತ್ತಡದಿಂದ ರಕ್ತವನ್ನು ದೂಡಬೇಕಾಗುತ್ತದೆ. ಇದರಿಂದ ರಕ್ತದೊತ್ತಡ ಹೆಚ್ಚುತ್ತದೆ. ರಕ್ತದಲ್ಲಿ ಇನ್ನೂ ನೀರು ಕಡಿಮೆಯಾದರೆ ರಕ್ತನಾಳಗಳಲ್ಲಿ ಪೂರ್ತಿಯಾಗಿ ತುಂಬುವಷ್ಟು ರಕ್ತ ಇಲ್ಲದೇ ಇರುವುದರಿಂದ ಹೃದಯಕ್ಕೆ ಒತ್ತಡ ನೀಡುವ ಅಗತ್ಯ ಕಡಿಮೆಯಾಗುತ್ತಾ ಹೋಗುತ್ತದೆ. ಇದರಿಂದ ಹೃದಯದೊತ್ತಡ ಕಡಿಮೆಯಾಗುತ್ತದೆ. ಈ ಸ್ಥಿತಿ ಮಾರಣಾಂತಿಕವಾಗಿದೆ.

ಹೆಚ್ಚುವ ಕೊಲೆಸ್ಟ್ರಾಲ್

ಹೆಚ್ಚುವ ಕೊಲೆಸ್ಟ್ರಾಲ್

ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಜೀವಕೋಶಗಳಲ್ಲಿರುವ ನೀರು ಸಹಾ ಬಳಕೆಯಾಗುತ್ತಾ ಹೋಗುತ್ತದೆ. ಈ ಕೊರತೆಯನ್ನು ನೀಗಿಸಲು ನಮ್ಮ ರೋಗ ನಿರೋಧಕ ವ್ಯವಸ್ಥೆ ಜೀವಕೋಶಗಳಲ್ಲಿ ಕೊಲೆಸ್ಟ್ರಾಲ್ ಉತ್ಪತ್ತಿಮಾಡುತ್ತದೆ. ಹೀಗೆ ಪ್ರತಿ ಜೀವಕೋಶದಲ್ಲಿ ಸಂಗ್ರಹವಾಗುವ ಕೊಲೆಸ್ಟ್ರಾಲ್ ಒಟ್ಟಾರೆಯಾಗಿ ಆರೋಗ್ಯಕ್ಕೆ ಮಾರಕವಾಗಿದೆ.

ಮಲಬದ್ಧತೆಯ ತೊಂದರೆ ಎದುರಾಗುತ್ತದೆ

ಮಲಬದ್ಧತೆಯ ತೊಂದರೆ ಎದುರಾಗುತ್ತದೆ

ನಮ್ಮ ಜೀರ್ಣಕ್ರಿಯೆಗೆ ನೀರು ಅತ್ಯಂತ ಅಗತ್ಯವಾಗಿದೆ. ಸರಿಸುಮಾರು ಆಹಾರ ಪಚನವಾಗಿ ಕಟ್ಟಕಡೆಯ ಅಂಗವಾದ ದೊಡ್ಡ ಕರುಳಿನಲ್ಲಿ ಬರುವವರೆಗೂ ನೀರು ಸರಿಸುಮಾರು ಅರ್ಧಭಾಗದಷ್ಟಿರುತ್ತದೆ. ದೊಡ್ಡಕರುಳು ಹೆಚ್ಚಿನ ನೀರನ್ನು ಹೀರಿ ತ್ಯಾಜ್ಯವನ್ನು ವಿಸರ್ಜಿಸುತ್ತದೆ. ಒಂದು ವೇಳೆ ನೀರಿನ ಕೊರತೆಯುಂಟಾದರೆ ದೊಡ್ಡ ಕರುಳು ಏನೂ ನೀರನ್ನು ಉಳಿಸದೇ ಹೀರಿಕೊಳ್ಳುವುದರಿಂದ ತ್ಯಾಜ್ಯ ನೀರಿಲ್ಲದೇ ಗಟ್ಟಿ ಮರದ ಕೊರಡಿನಂತಾಗಿ ವಿಸರ್ಜನೆ ಕಷ್ಟಕರವಾಗುತ್ತದೆ. ಇದರ ವಿಪರೀತ ಪರಿಣಾಮಗಳಾದ ಮೂಲವ್ಯಾಧಿ, ರಕ್ತಸ್ರಾವ ಮೊದಲಾದ ತೊಂದರೆಗಳೂ ಎದುರಾಗಬಹುದು.

ಜೀರ್ಣಕ್ರಿಯೆಯಲ್ಲಿ ವ್ಯತ್ಯಯ

ಜೀರ್ಣಕ್ರಿಯೆಯಲ್ಲಿ ವ್ಯತ್ಯಯ

ಜೀರ್ಣಕ್ರಿಯೆಗೆ ನೀರು ಅತ್ಯಗತ್ಯವಾಗಿದ್ದು ನೀರಿನ ಕೊರತೆಯಿಂದ ಆಹಾರ ಪೂರ್ಣವಾಗಿ ಜೀರ್ಣವಾಗದೇ ಆಮ್ಲೀಯತೆಯಿಂದ ಕೂಡಿದ್ದು ಕರುಳುಗಳ ಒಳಗೋಡೆಗಳ ಮೇಲೆ ಪ್ರಭಾವ ಬೀರಬಹುದು. ಕರುಳಿನ ಹುಣ್ಣು ಆಗುವುದು ಇದೇ ಕಾರಣಕ್ಕಾಗಿ.

ವಾಯುಪ್ರಕೋಪ, ಹೊಟ್ಟೆ ಮತ್ತು ಕರುಳುಗಳಲ್ಲಿ ಹುಣ್ಣು

ವಾಯುಪ್ರಕೋಪ, ಹೊಟ್ಟೆ ಮತ್ತು ಕರುಳುಗಳಲ್ಲಿ ಹುಣ್ಣು

ನಮ್ಮ ಜಠರದಲ್ಲಿ ಉತ್ಪತ್ತಿಯಾಗುವ ಜಠರರಸ ಅತಿ ಆಮ್ಲೀಯವಾಗಿದ್ದು ನೀರಿನೊಂಗಿದೆ ಮಿಶ್ರಣವಾದ ಬಳಿಕ ಆಹಾರವನ್ನು ಸರಿಯಾಗಿ ಜೀರ್ಣೀಸಿಕೊಳ್ಳುವಷ್ಟು ಮೃದುವಾಗುತ್ತದೆ. ನೀರಿನ ಕೊರತೆಯಾದರೆ ಆಹಾರ ಸರಿಯಾಗಿ ಜೀರ್ಣವಾಗದೇ ಹಲವು ಅನಿಲಗಳು ಉತ್ಪತ್ತಿಯಾಗುತ್ತವೆ. ಇನ್ನೂ ಹೆಚ್ಚಿನ ತೊಂದರೆ ಎಂದರೆ ಪ್ರಬಲವಾದ ಆಮ್ಲೀಯ ದ್ರವ ಹೊಟ್ಟೆಯ ಒಳಗೋಡೆಯನ್ನೇ ಸುಡುತ್ತದೆ. ಈಗ ಹೊಟ್ಟೆಯ ಒಳಭಾಗ ಈ ತೊಂದರೆಯಿಂದ ತಪ್ಪಿಸಿಕೊಳ್ಳಲು ಜೇನಿನಷ್ಟು ಗಟ್ಟಿಯಾದ ದ್ರವವನ್ನು ಸ್ರವಿಸುತ್ತದೆ. ಇದರಿಂದ ವಾಯುಪ್ರಕೋಪ, ಹೊಟ್ಟೆ, ಕರುಳುಗಳ ಒಳಗೆ ಹುಣ್ಣು ಮೊದಲಾದ ತೊಂದರೆಗಳು ಪ್ರಾರಂಭವಾಗುತ್ತವೆ.

ಶ್ವಾಸಸಂಬಂಧಿ ಅಂಗಗಳಲ್ಲಿ ತೊಂದರೆ

ಶ್ವಾಸಸಂಬಂಧಿ ಅಂಗಗಳಲ್ಲಿ ತೊಂದರೆ

ನಮ್ಮ ಮೂಗಿನಿಂದ ಪ್ರಾರಂಭವಾಗಿ ಶ್ವಾಸಕೋಶದ ಒಳಭಾಗದಲ್ಲಿ ಕವಲು ಕವಲಾಗಿರುವವರೆಗೂ ಇರುವ ಶ್ವಾಸನಾಳದ ಜಾಲವಷ್ಟೂ ತೇವವಾಗಿದೆ. ಗಾಳಿಯಲ್ಲಿ ತೇಲಿಬರುವ ಧೂಳು ಮತ್ತು ಇತರ ಹಗುರ ಕಣಗಳನ್ನು ಇವು ಅಂಟಿಸಿಕೊಂಡು ಶ್ವಾಸಕೋಶವನ್ನು ರಕ್ಷಿಸುತ್ತವೆ. ಬಳಿಕ ಸಿಂಬಳದ ರೂಪದಲ್ಲಿ ಈ ಕಣಗಳು ವಿಸರ್ಜನೆಯಾಗುತ್ತವೆ. ಒಂದು ವೇಳೆ ದೇಹದಲ್ಲಿ ನೀರಿನ ಅಂಶ ಕಡಿಮೆಯಾದರೆ ಈ ತೇವಾಂಶ ಕಡಿಮೆಯಾಗಿ ಧೂಳಿನ ಕಣಗಳನ್ನು ಆಕರ್ಷಿಸಲಾರದಷ್ಟು ಒಣಗುತ್ತವೆ. ಇದರಿಂದ ಶ್ವಾಸಕೋಶಗಳಿಗೆ ಹಲವು ರೀತಿಯ ರೋಗಗಳು ಅಂಟುವ ಸಂಭವವಿರುತ್ತದೆ.

ಆಮ್ಲ-ಪ್ರತ್ಯಾಮ್ಲಗಳ ಸಮತೋಲನದಲ್ಲಿ ಏರುಪೇರು

ಆಮ್ಲ-ಪ್ರತ್ಯಾಮ್ಲಗಳ ಸಮತೋಲನದಲ್ಲಿ ಏರುಪೇರು

ನಮ್ಮ ಜಠರದಲ್ಲಿ ಸಾಕಷ್ಟು ನೀರು ಇಲ್ಲದೇ ಇರುವುದರಿಂದ ಆಮ್ಲ-ಪ್ರತ್ಯಾಮದಲ್ಲಿನ ಸಮತೋಲನ ಏರುಪೇರಾಗಿ ಜೀರ್ಣಕ್ರಿಯೆಯಲ್ಲಿ ಬಾಧೆಯುಂಟಾಗುತ್ತದೆ. ಅರೆಜೀರ್ಣಗೊಂಡ ಆಹಾರ ಇನ್ನಷ್ಟು ಆಮ್ಲೀಯವಾಗಿರುತ್ತದೆ.

ಚರ್ಮದಲ್ಲಿ ತುರಿಕೆ, ಚರ್ಮಸಂಬಂಧಿ ರೋಗಗಳು ಎದುರಾಗಬಹುದು

ಚರ್ಮದಲ್ಲಿ ತುರಿಕೆ, ಚರ್ಮಸಂಬಂಧಿ ರೋಗಗಳು ಎದುರಾಗಬಹುದು

ನಮ್ಮ ದೇಹ ಪ್ರತಿದಿನ ಸುಮಾರು ಆರುನೂರರಿಂದ ಏಳುನೂರು ಮಿಲಿಲೀಟರ್ ನೀರನ್ನು ಬೆವರಿನ ಮೂಲಕ ಹೊರಹಾಕುತ್ತದೆ. ವಾಸ್ತವವಾಗಿ ನಮ್ಮ ಚರ್ಮ ಲಕ್ಷಾಂತರ ಸೂಕ್ಷ್ಮರಂಧ್ರಗಳಿಂದ ಕೂಡಿದೆ. ಈ ರಂಧ್ರಗಳ ಮೂಲಕ ನೀರಿನ ಪಸೆ ಹೊರಹೋಗುತ್ತಾ ಇರಬೇಕು. ಒಂದು ವೇಳೆ ನೀರಿನ ಕೊರತೆಯಾದರೆ ಈ ರಂಧ್ರಗಳು ಒಣಗಿ ಗಾಳಿಯಲ್ಲಿರುವ ಸೂಕ್ಷ್ಮ ಮತ್ತು ಹಾನಿ ಎಸಗುವ ಕ್ರಿಮಿಗಳು ಚರ್ಮ ಪ್ರವೇಶಿಸಿ ರೋಗ ಹುಟ್ಟುಹಾಕಬಹುದು. ಇದರಿಂದ ತುರಿಕೆ, ದದ್ದು, ಹುಳಕಡ್ಡಿ, ಎಕ್ಸಿಮಾ ಮೊದಲಾದ ಚರ್ಮರೋಗಗಳು ಎದುರಾಗಬಹುದು.

ಮೂತ್ರಕೋಶದಲ್ಲಿ ಸೋಂಕು, ಉರಿ ಉಂಟಾಗಬಹುದು

ಮೂತ್ರಕೋಶದಲ್ಲಿ ಸೋಂಕು, ಉರಿ ಉಂಟಾಗಬಹುದು

ನೀರಿನ ಕೊರತೆಯಿಂದ ಮೂತ್ರಕೋಶಗಳು ಸಂಗ್ರಹಿಸುವ ದ್ರವ ಅತಿ ಕ್ಷಾರೀಯವಾಗುತ್ತದೆ. ಇದು ಮೂತ್ರನಾಳ ಮತ್ತು ಮೂತ್ರಸಂಬಂಧಿ ಇತರ ಅಂಗಗಳ ಒಳಭಾಗವನ್ನು ಘಾಸಿಗೊಳಿಸಿ ಉರಿ ತರಿಸುತ್ತದೆ. ಇದರ ಉಲ್ಬಣ ರೂಪವಾದ Cystitis ಎದುರಾದರೆ ಮೂತ್ರನಾಳದ ಒಳಭಾಗ ಬಿರುಕುಬಿಟ್ಟು ರಕ್ತಸೋರುವ ಸಂಭವವಿರುತ್ತದೆ.

ಸಂಧಿವಾತಕ್ಕೂ (Rheumatism) ಕಾರಣವಾಗಬಹುದು

ಸಂಧಿವಾತಕ್ಕೂ (Rheumatism) ಕಾರಣವಾಗಬಹುದು

ನೀರಿನ ಕೊರತೆಯಿಂದ ರಕ್ತದಲ್ಲಿರುವ ವಿಷಕಾರಿ ವಸ್ತುಗಳ ಸಾಂದ್ರತೆ ಹೆಚ್ಚುತ್ತಾ ಹೋಗುತ್ತದೆ. ಈ ಪರಿಸ್ಥಿತಿಯಿಂದ ಮೂಳೆಸಂಧಿಗಳಲ್ಲಿ ಅಗತ್ಯವಾದ ಪೋಷಕಾಂಶಗಳು ಲಭ್ಯವಾಗದೇ ಮೂಳೆಗಳ ಚಲನೆಗೆ ಅಗತ್ಯವಾದ ಜಾರುಕದ್ರವ ಉತ್ಪತ್ತಿಯಾಗದೇ ಹೋಗುತ್ತದೆ. ಪರಿಣಾಮವಾಗಿ ಸಂಧಿವಾತದ ತೊಂದರೆ ಎದುರಾಗುತ್ತದೆ.

English summary

Disorders Caused by Lack of Water

Most people don’t think they need to worry about dehydration. To them, dehydration is something that happens to travelers in the desert when they run out of water. This list of 13 symptoms will inspire you to go get a glass of water. have a look
X
Desktop Bottom Promotion