For Quick Alerts
ALLOW NOTIFICATIONS  
For Daily Alerts

ಆಶ್ಚರ್ಯ:ವೈದ್ಯ ಲೋಕವನ್ನೇ ತಲ್ಲಣಗೊಳಿಸಿದ ಬೇವಿನ ಬೀಜ!

By Manu
|

ಬೇವು ಮತ್ತು ಬೇವಿನ ಉತ್ಪನ್ನಗಳನ್ನು 4000 ವರ್ಷಗಳಿಂದಲೂ ನಮ್ಮ ಆಯುರ್ವೇದದಲ್ಲಿ ಬಳಸಿಕೊಂಡು ಬರಲಾಗುತ್ತಿದೆ. ಇದೇನು ಅಂತಹ ಅಚ್ಚರಿಗೆ ದೂಡುವ ವಿಚಾರವೇನಲ್ಲ ಬಿಡಿ. ನಾವು ದಿನ ನಿತ್ಯದಲ್ಲಿಯೂ ಸಹ ಬೇವಿನ ಉಪಯೋಗವನ್ನು ತಿಳಿದು ಅಥವಾ ತಿಳಿಯದೆ ಬಳಸುತ್ತಿರುತ್ತೇವೆ.

ಆದರೆ ಕುತೂಹಲಕಾರಿ ವಿಚಾರವೇನೆಂದರೆ, ಬೇವಿನ ಬೀಜಗಳಲ್ಲಿಯೂ ಅದ್ಭುತವಾದ ಪ್ರಯೋಜನಗಳು ಅಡಗಿವೆಯಂತೆ. ಅವುಗಳನ್ನು ತಿಳಿಯಲು ನೀವು ಕುತೂಹಲದಿಂದ ನೋಡುತ್ತಿರುವಿರಲ್ಲವೇ? ಮುಂದೆ ಓದಿ! ಬೇವು: ಆರೋಗ್ಯದ ಪಾಲಿಗೆ ಸಿಹಿ ಸಂಜೀವಿನಿ!

ಬೇವಿನ ಬೀಜಗಳನ್ನು ಯಾವುದಕ್ಕೆ ಬಳಸುತ್ತಾರೆ?
ಹಲವಾರು ವೈದ್ಯಕೀಯ ಚಿಕಿತ್ಸೆಗಳಲ್ಲಿ ಬೇವನ್ನು ಬಳಸುವುದು ರಹಸ್ಯವಾಗೇನು ಉಳಿದಿಲ್ಲ. ಇದನ್ನು ಹೃದ್ರೋಗ, ವೈರಲ್ ಕಾಯಿಲೆಗಳು, ಕಣ್ಣಿನ ಕಾಯಿಲೆ, ಕರುಳಿನ ಸಮಸ್ಯೆಗಳು ಇತ್ಯಾದಿಗಳಿಗೆ ಬಳಸಲಾಗುತ್ತದೆ. ಹಲವಾರು ಮನೆಗಳಲ್ಲಿ ಇದನ್ನು ಕೀಟ ನಾಶಕವಾಗಿ ಬಳಸುತ್ತಾರೆ. ಜೇನಿನ ಸಿಹಿ, ಬೇವಿನ ಕಹಿ-ಇದುವೇ ಸೌಂದರ್ಯದ ಕೀಲಿಕೈ

ಬಟ್ಟೆಗಳು ಮತ್ತು ಆಹಾರ ಪದಾರ್ಥಗಳಿಗೆ ಬರುವ ಕೀಟಗಳನ್ನು ಇದು ದೂರವಿಡುತ್ತದೆ. ಬೇವಿನ ಬೀಜಗಳಿಂದ ಹಲವಾರು ಪ್ರಯೋಜನಗಳು ದೊರೆಯುತ್ತವೆ. ಅದರ ಟಾಪ್ 10 ಉಪಯೋಗಗಳನ್ನು ಮುಂದೆ ನೋಡಿ!

ತ್ವಚೆಯ ಆರೈಕೆ

ತ್ವಚೆಯ ಆರೈಕೆ

ಬೇವಿನ ಎಣ್ಣೆಯು ಅತಿ ಹೆಚ್ಚು ಬಳಸಲ್ಪಡುವ ಗಿಡಮೂಲಿಕೆಯ ಉತ್ಪನ್ನವಾಗಿದೆ. ಇದರ ಪ್ರಯೋಜನಗಳನ್ನು ಬಳಸಿಕೊಂಡು ತಯಾರಿಸಲಾಗಿರುವ ಸೋಪ್‌ಗಳನ್ನು, ಕ್ರೀಮ್, ಲೋಷನ್, ಫೇಸ್ ವಾಶ್,ಇತ್ಯಾದಿಗಳನ್ನು ನೀವು ಕಾಣಬಹುದು. ಇದು ಸ್ವಾಭಾವಿಕವಾದ ಆಂಟಿ ಫಂಗಲ್ ಮತ್ತು ಆಂಟಿಸೆಪ್ಟಿಕ್ ಅಂಶಗಳನ್ನು ಒಳಗೊಂಡಿರುವುದರಿಂದ ಇದನ್ನು ವಿವಿಧ ಬಗೆಯ ತ್ವಚೆಯ ಸಮಸ್ಯೆಗಳಿಗೆ ಅಂದರೆ,ಸೋರಿಯಾಸಿಸ್, ಕಜ್ಜಿ, ಮೊಡವೆ, ರಿಂಗ್‌ವರ್ಮ್‌ ಇತ್ಯಾದಿಗಳಿಗೆ ಬಳಸಲಾಗುತ್ತದೆ.

ಕೂದಲಿನ ಆರೈಕೆ

ಕೂದಲಿನ ಆರೈಕೆ

ಬೇವಿನ ಎಣ್ಣೆಯನ್ನು ಮುಖ್ಯವಾಗಿ ಗಿಡಮೂಲಿಕೆಗಳ ಶಾಂಪೂವಿಗೆ ಬಳಸಲಾಗುತ್ತದೆ. ಈ ಎಣ್ಣೆ ಇರುವ ಶಾಂಪೂಗಳನ್ನು ಬಳಸುವುದರಿಂದ ಕೂದಲಿನ ಮೇಲೆ ಅದ್ಭುತ ಪರಿಣಾಮ ಉಂಟಾಗುತ್ತದೆ. ನಿಮ್ಮ ಕೂದಲನ್ನು ಬೇವಿನ ಶಾಂಪೂವಿನಿಂದ ತೊಳೆದುಕೊಳ್ಳುವುದರಿಂದ ಅದರ ಆರೋಗ್ಯವು ಹೆಚ್ಚಾಗುತ್ತದೆ ಮತ್ತು ಅಕಾಲಿಕ ನೆರೆತದ ಸಮಸ್ಯೆಯು ದೂರಾಗುತ್ತದೆ.

ಕಣ್ಣು ಮತ್ತು ಕಿವಿಗಳಿಗೆ ಮುಲಾಮು

ಕಣ್ಣು ಮತ್ತು ಕಿವಿಗಳಿಗೆ ಮುಲಾಮು

ಬೇವಿನ ಬೀಜಗಳ ತಿರುಳನ್ನು ಕಣ್ಣು ಮತ್ತು ಕಿವಿಗಳಿಗೆ ಮುಲಾಮಾಗಿ ಬಳಸಲಾಗುತ್ತದೆ. ಅಂದರೆ ಇದನ್ನು ಆಂಟಿ ಬ್ಯಾಕ್ಟೀರಿಯಾವಾಗಿ ಕಣ್ಣು ಮತ್ತು ಕಿವಿಗಳಿಗೆ ಆಯಿಂಟ್‌ಮೆಂಟ್ (ಮುಲಾಮು) ರೀತಿ ಬಳಸಲಾಅಗುತ್ತದೆ.

ಮಲೇರಿಯಾವನ್ನು ತಡೆಯುತ್ತದೆ

ಮಲೇರಿಯಾವನ್ನು ತಡೆಯುತ್ತದೆ

ಆಯುರ್ವೇದ ಔಷಧದ ವ್ಯವಸ್ಥೆಯಲ್ಲಿ ಬೇವನ್ನು ಮಲೇರಿಯಾ ನಿವಾರಿಸಲು ಬಳಸುತ್ತಾರೆ. ಅಧ್ಯಯನಕಾರರ ಪ್ರಕಾರ, ಬೇವಿನ ಬೀಜದ ವಾಸನೆಯು ಸೊಳ್ಳೆಗಳನ್ನು ದೂರವಿರಿಸುತ್ತದೆಯಂತೆ, ಇದರಿಂದ ಅವುಗಳು ಸುತ್ತ ಮುತ್ತ ಮೊಟ್ಟೆಗಳನ್ನು ಇಡುವುದಿಲ್ಲ. ಪರಿಶುದ್ಧವಾದ ಬೇವಿನ ಎಣ್ಣೆಯು ಮೊಟ್ಟೆ ಇಡಲು ಬರುವ ಸೊಳ್ಳೆಗಳನ್ನು ತನ್ನ ವಾಸನೆಯಿಂದಲೆ ದೂರ ಓಡಿಸುತ್ತದೆ. ಹೀಗೆ ಇದು ಮಲೇರಿಯಾವನ್ನು ತಡೆಯುತ್ತದೆ.

ಜನನ ನಿಯಂತ್ರಣ

ಜನನ ನಿಯಂತ್ರಣ

ಮಹಿಳೆ ಮತ್ತು ಪುರುಷರು ಇಬ್ಬರಲ್ಲೂ ಜನನ ನಿಯಂತ್ರಣಕ್ಕೆ ಬೇವು ಒಳ್ಳೆಯ ಪರಿಹಾರವಾಗಿರುತ್ತದೆ. ಈ ಬೇವಿನ ಎಣ್ಣೆಯನ್ನು ಮಹಿಳೆಯರಲ್ಲಿ ಜನನ ನಿಯಂತ್ರಣಕ್ಕಾಗಿ ಲೂಬ್ರಿಕೆಂಟ್ ಆಗಿ ಸಹ ಬಳಸಲಾಗುತ್ತದೆ. ಒಂದು ವೇಳೆ ನೀವು ಮಕ್ಕಳಿಗಾಗಿ ಎದುರು ನೋಡುತ್ತಿದ್ದಲ್ಲಿ, ಬೇವನ್ನು ಬಳಸುವುದನ್ನು ನಿಲ್ಲಿಸಬೇಕು.

ಚಿಗಟಗಳು ಮತ್ತು ನೊಣಗಳು

ಚಿಗಟಗಳು ಮತ್ತು ನೊಣಗಳು

ಬೇವಿನ ಎಣ್ಣೆಯು ನಿಮ್ಮ ಸಾಕು ಪ್ರಾಣಿಗಳಿಗೆ ಕಾಟ ಕೊಡುವ ಚಿಗಟಗಳಿಂದ ಮುಕ್ತಿಯನ್ನು ನೀಡುತ್ತದೆ. ಈ ಬೇವಿನ ಎಣ್ಣೆಯನ್ನು ಮೃದುವಾಗಿ ನಿಮ್ಮ ಸಾಕು ಪ್ರಾಣಿಯ ತುಪ್ಪಳದ ಮೇಲೆ ಲೇಪಿಸಿ. ಇದರಿಂದ ನಿಮ್ಮ ಸಾಕು ಪ್ರಾಣಿಗೆ ಆರೋಗ್ಯಕರ ಕೋಟ್ ಸಹ ಲಭ್ಯವಾಗುತ್ತದೆ. ಮತ್ತು ಅದರ ತುಪ್ಪಳಕ್ಕೆ ಮೆರಗು ಸಹ ದೊರೆಯುತ್ತದೆ. ಇದು ನಿಮ್ಮ ಸಾಕು ಪ್ರಾಣಿಗಳಿಗೆ ಯಾವುದೇ ಹಾನಿಯನ್ನು ಸಹ ಉಂಟು ಮಾಡುವುದಿಲ್ಲ. ಆದ್ದರಿಂದ ಅವುಗಳ ಆರೋಗ್ಯದ ಕುರಿತು ನೀವು ಚಿಂತಿಸುವ ಅಗತ್ಯವಿರುವುದಿಲ್ಲ.

ಮಣ್ಣಿಗೆ ಫಲವತ್ತತೆಯನ್ನು ಒದಗಿಸುತ್ತದೆ

ಮಣ್ಣಿಗೆ ಫಲವತ್ತತೆಯನ್ನು ಒದಗಿಸುತ್ತದೆ

ಬೇವಿನ ಬೀಜದಿಂದ ಎಣ್ಣೆಯನ್ನು ತೆಗೆದ ನಂತರ ಉಳಿಯುವ ತಿರುಳು ಮಣ್ಣಿನ ಫಲವತ್ತತೆಯನ್ನು ಅಧಿಕಗೊಳಿಸುವ ಅಂಶಗಳನ್ನು ಹೊಂದಿದೆ. ಇದು ಮಣ್ಣಿನಲ್ಲಿರುವ ಸಾರಜನಕ ನಾಶವಾಗುವುದನ್ನು ತಪ್ಪಿಸಿ, ಅದರ ಫಲವತ್ತತೆಯನ್ನು ಕಾಪಾಡುತ್ತದೆ.

ಕೀಟಗಳನ್ನು ದೂರವಿಡುತ್ತದೆ

ಕೀಟಗಳನ್ನು ದೂರವಿಡುತ್ತದೆ

ಬೇವಿನ ಎಣ್ಣೆಯು ಕೀಟಗಳನ್ನು ದೂರವಿರಿಸುವ ಅದ್ಭುತ ಔಷಧಿಯಾಗಿರುತ್ತದೆ. ಕಂಬಳಿ ಹುಳು, ಜೀರುಂಡೆ, ಪತಂಗಗಳು ಮುಂತಾದ ಕೀಟಗಳಿಂದ ನಿಮ್ಮ ಮನೆಯನ್ನು ಮತ್ತು ಗಿಡಗಳನ್ನು ರಕ್ಷಿಸಲು ಇದು ನೆರವು ನೀಡುತ್ತದೆ. ಮನೆಯಲ್ಲಿನ ಇರುವೆಗಳು, ಜೀರಳೆಗಳು, ನೊಣಗಳು ಮತ್ತು ತಿಗಣೆಗಳನ್ನು ಸಹ ಇದು ನಿವಾರಿಸುತ್ತದೆ.

ಕೀಟನಾಶಕ

ಕೀಟನಾಶಕ

ಸಾವಯವ ಕೃಷಿಕರು ಬೇವಿನ ಎಣ್ಣೆಯನ್ನು ತಮ್ಮ ಬೆಳೆಗಳಿಗೆ ಕೀಟನಾಶಕವಾಗಿ ಬಳಸುತ್ತಾರೆ. ಇದಕ್ಕಾಗಿ ಬೇವಿನ ಬೀಜಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ, ಬೆಳಗ್ಗೆ ಆ ನೀರನ್ನು ಕೀಟನಾಶಕವಾಗಿ ಬಳಸುತ್ತಾರೆ. ಈ ನೀರಿನ ಸ್ಪ್ರೇಯು ಕೀಟಗಳು ಬೆಳೆಗಳಲ್ಲಿ ಮೊಟ್ಟೆಗಳನ್ನು ಇಡದಂತೆ ತಡೆದು, ಕೀಟಗಳ ಸಂತಾನೋತ್ಪತ್ತಿಯನ್ನು ತಡೆಯುತ್ತದೆ ಮತ್ತು ಕೀಟಗಳನ್ನು ಕೊಲ್ಲುತ್ತದೆ.

ಇತರೆ ಕಾಯಿಲೆಗಳನ್ನು ಗುಣಪಡಿಸುತ್ತದೆ

ಇತರೆ ಕಾಯಿಲೆಗಳನ್ನು ಗುಣಪಡಿಸುತ್ತದೆ

ಬೇವಿನ ಬೀಜಗಳು ಇತರೆ ಕಾಯಿಲೆಗಳನ್ನು ಸಹ ಗುಣಪಡಿಸುತ್ತದೆ. ಇದು ತಿನ್ನಲು ಮತ್ತು ಕುಡಿಯಲು ಕಹಿಯಾಗಿದ್ದರು ಸಹ ಇದರಿಂದ ಅದ್ಭುತವಾದ ಆರೋಗ್ಯಕಾರಿ ಪ್ರಯೋಜನಗಳು ದೊರೆಯುತ್ತವೆ. ಇದರ ಟೀಯು ನಿಮ್ಮ ಮೂತ್ರಪಿಂಡ, ಪ್ರೋಸ್ಟೇಟ್ ಮತ್ತು ಮೂತ್ರಕೋಶಗಳಿಗೆ ತೊಂದರೆ ಕೊಡುವ ಕಾಯಿಲೆಗಳನ್ನು ಗುಣಪಡಿಸುತ್ತದೆ.

English summary

Amazing Uses Of Neem Seeds

Did you know that neem has been used as an Ayurvedic medicine for over 4000 years? It is not a big surprise because we now know about all the wonderful benefits that it provides. But then, even the seeds of neem do have a lot of benefits. Would you like to know what they are? Read on!
X
Desktop Bottom Promotion