Latest Updates
-
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ
ಜೇನಿನ ಸಿಹಿ, ಬೇವಿನ ಕಹಿ-ಇದುವೇ ಸೌಂದರ್ಯದ ಕೀಲಿಕೈ
ಫಾಸ್ಟ್ ಫುಡ್ ಯುಗದಲ್ಲಿ ಎಲ್ಲವೂ ಫಾಸ್ಟ್ ಆಗಿರಬೇಕು ಮತ್ತು ಪ್ರತಿಯೊಂದು ಕಷ್ಟಪಡದೆ ನಮಗೆ ಸಿಗುವಂತಿರಬೇಕು. ಇದನ್ನೇ ಬಂಡವಾಳವಾಗಿಟ್ಟುಕೊಂಡು ಹಲವಾರು ಕಂಪೆನಿಗಳು ನಮ್ಮ ದೇಹದ ಸೌಂದರ್ಯ ವೃದ್ಧಿಸುವ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಬೇವಿನ ಸೌಂದರ್ಯವರ್ಧಕ ಗುಣಗಳು ಒಂದೇ, ಎರಡೇ?
ಈ ಉತ್ಪನ್ನಗಳು ನಮ್ಮ ಸೌಂದರ್ಯವನ್ನು ಹೆಚ್ಚಿಸುವುದರೊಂದಿಗೆ ಅಡ್ಡ ಪರಿಣಾಮ ಉಂಟುಮಾಡುವ ಸಾಧ್ಯತೆಗಳು ಇಲ್ಲದಿಲ್ಲ. ಇಂತಹ ಉತ್ಪನ್ನಗಳನ್ನು ಬಳಸುವ ಮೊದಲು ಎಚ್ಚರಿಕೆ ವಹಿಸಿಕೊಳ್ಳಬೇಕು. ಇದಕ್ಕೆ ಬದಲು ನಾವು ಮನೆಯಲ್ಲೇ ತಯಾರಿಸಿದ ಉತ್ಪನ್ನಗಳು ಬಳಸುವುದು ಒಳ್ಳೆಯದು. ಬೇವು: ಕಹಿಯಾದರೂ ಸೌಂದರ್ಯದ ವಿಷಯದಲ್ಲಿ ಸಿಹಿ
ಯಾಕೆಂದರೆ ನಮ್ಮ ಹಿರಿಯರು ಕೂಡ ಮನೆಯಲ್ಲೇ ತಯಾರಿಸಿದ ಸೌಂದರ್ಯ ವರ್ಧಕಗಳನ್ನು ಬಳಸಿ ತಮ್ಮ ಸೌಂದರ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ. ಹವಾಮಾನ, ಕಲುಷಿತ ವಾತಾವರಣ, ಹಾರ್ಮೋನು ವೈಪರಿತ್ಯ ಮತ್ತು ಸರಿಯಾದ ಆಹಾರ ಕ್ರಮವಿಲ್ಲದೆ ಇರುವ ಕಾರಣದಿಂದ ನಮ್ಮ ಚರ್ಮ ಅನಾರೋಗ್ಯಕ್ಕೆ ಒಳಗಾಗಿ ಕಾಂತಿಯನ್ನು ಕಳಕೊಳ್ಳುತ್ತದೆ. ಇಂತಹ ಸಮಸ್ಯೆಗಳನ್ನು ನಿವಾರಿಸಲು ಮನೆಯಲ್ಲಿ ಮದ್ದನ್ನು ತಯಾರಿಸಬಹುದು. ಜೇನುತುಪ್ಪ ಮತ್ತು ಬೇವಿನ ಮಿಶ್ರಣ ಚರ್ಮಕ್ಕೆ ಅದ್ಭುತವನ್ನೇ ಮಾಡಲಿದೆ. ಇದನ್ನು ತಯಾರಿಸುವ ಬಗ್ಗೆ ಇಂದಿನ ಲೇಖನದಲ್ಲಿ ತಿಳಿದುಕೊಳ್ಳಿ.... ತುಟಿಯ ಅಂದದ ರಕ್ಷಣೆಗೆ ಜೇನು ಒಂದಿದ್ದರೆ ಸಾಕು!

ಬೇಕಾಗುವ ಸಾಮಗ್ರಿಗಳು
*ಬೇವಿನ ಎಲೆ 3-4
*ಜೇನುತಪ್ಪು 1 ಚಮಚ

ಮಾಡುವ ವಿಧಾನ ಮತ್ತು ಹಚ್ಚಿಕೊಳ್ಳುವುದು ಹೇಗೆ
*ಸುಮಾರು 20 ನಿಮಿಷಗಳ ಕಾಲ ಬೇವಿನ ಎಲೆಯನ್ನು ನೀರಿನಲ್ಲಿ ನೆನೆಸಿಡಿ.
* ಬೇವಿನ ಎಲೆ ಮತ್ತು ಜೇನುತುಪ್ಪವನ್ನು ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿಕೊಳ್ಳಿ.
* ಈಗ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿಕೊಳ್ಳಿ.
* 15 ನಿಮಿಷ ಇದನ್ನು ಹಾಗೆ ಬಿಡಿ
* ಬಳಿಕ ಉಗುರುಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ ಮತ್ತು ಹಗುರ ಫೇಸ್ ವಾಶ್ ಬಳಸಿ. ಈ ಫೇಸ್ ಪ್ಯಾಕ್‌ನ್ನು ಬಳಸುವುದರಿಂದ ಆಗುವ ಲಾಭಗಳೇನು ಎಂಬುದನ್ನು ಮುಂದಿನ ಸ್ಲೈಡ್ ಕ್ಲಿಕ್ ಮಾಡಿ....

ಮೊಡವೆಗೆ ರಾಮಬಾಣ
ಬೇವು ಮತ್ತು ಜೇನಿನ ಮಿಶ್ರಣವು ಮುಖದಲ್ಲಿ ಮೂಡುವ ಮೊಡವೆಗಳನ್ನು ನಿವಾರಿಸುತ್ತದೆ ಮತ್ತು ಮೊಡವೆಗಳ ಕಲೆಗಳನ್ನು ತೆಗೆದುಹಾಕುತ್ತದೆ, ಅಲ್ಲದೆ ಇದರಲ್ಲಿ ಆ್ಯಂಟಿಬ್ಯಾಕ್ಟೀರಿಯಾ ಗುಣಗಳು ಇರುವ ಕಾರಣದಿಂದ ಮೊಡವೆ ಉಂಟುಮಾಡುವ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ.

ತ್ವಚೆಯ ಕಾಂತಿಗೆ
ಜೇನಿನಲ್ಲಿ ಚರ್ಮಕ್ಕೆ ತೇವಾಂಶ ನೀಡುವ ಗುಣಗಳು ಇವೆ. ಇದನ್ನು ಬೇವಿನೊಂದಿಗೆ ಸೇರಿಸಿದಾಗ ಅದು ಚರ್ಮದ ಪ್ರತಿಯೊಂದು ಕೋಶಗಳಿಗೆ ತೇವಾಂಶ ನೀಡುವುದು. ಇದರಿಂದ ಚರ್ಮವು ಮೃಧುವಾಗುವುದು, ಹಾಗೂ ತ್ವಚೆ ಕಾಂತಿ ಇನ್ನಷ್ಟು ವೃದ್ಧಿಸುತ್ತದೆ

ಗಾಯವನ್ನು ಶಮನ ಮಾಡಲು
ಸಣ್ಣಪುಟ್ಟ ಗಾಯ ಮತ್ತು ಸುಟ್ಟ ಗಾಯಗಳನ್ನು ನಿವಾರಿಸಲು ಜೇನು ಮತ್ತು ಬೇವು ಒಳ್ಳೆಯ ಮದ್ದು. ಇದರಲ್ಲಿ ನೈಸರ್ಗಿಕ ಉರಿಯೂತ ಗುಣಗಳು ಇರುವ ಕಾರಣದಿಂದ ಗಾಯವನ್ನು ಶಮನ ಮಾಡುವುದು.

ಕಪ್ಪು ಕಲೆ ಹಾಗೂ ಮೊಡವೆಗೆ ರಾಮಬಾಣ
ಈ ಪೇಸ್ಟ್ ಚರ್ಮದ ರಂಧ್ರಗಳ ಒಳಗೆ ಆಳವಾಗಿ ತಲುಪಿ ಅಲ್ಲಿರುವ ಧೂಳು ಮತ್ತು ಕಲ್ಮಶವನ್ನು ತೆಗೆದುಹಾಕುತ್ತದೆ. ಇದರಿಂದ ಕಪ್ಪು ಕಲೆ ಹಾಗೂ ಮೊಡವೆ ನಿವಾರಣೆಯಾಗುವುದು.



Click it and Unblock the Notifications











