Latest Updates
-
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ!
ಬೇವು: ಆರೋಗ್ಯದ ಪಾಲಿಗೆ ಸಿಹಿ ಸಂಜೀವಿನಿ!
ಬೇವು ಎಂದಾಕ್ಷಣ ಹೆಚ್ಚಿನವರ ಮನದಲ್ಲಿ ಮೂಡುವುದು ಒಗ್ಗರಣೆ, ತಪ್ಪಿದರೆ ಸೌಂದರ್ಯಕ್ಕಾಗಿ ಬಳಸುವ ಪರಿ. ಆದರೆ ಬೇವಿನ ಇತರ ಗುಣಗಳನ್ನು ಪರಿಗಣಿಸಿದರೆ ಇದೊಂದು ರುಚಿ ಹೆಚ್ಚಿಸುವ ಸಾಧನಕ್ಕಿಂತಲೂ ಆರೋಗ್ಯವನ್ನು ವೃದ್ಧಿಸುವ ಪರಿಕರವಾಗಿ ಹೆಚ್ಚು ಉಪಯುಕ್ತವಾಗಿದೆ. ಇಂದು ಬೇವಿನ ಉತ್ತಮ ಗುಣಗಳನ್ನು ಬೋಲ್ಡ್ ಸ್ಕೈ ತಂಡ ತಮಗೆ ಪರಿಚಯ ಮಾಡಿಕೊಡುತ್ತಿದೆ. ಹಳ್ಳಿ ಮದ್ದು ಬೇವಿನ ಲೇಪನ-ಸೌಂದರ್ಯದ ಕೀಲಿ ಕೈ
ಆರೋಗ್ಯದ ವಿಷಯ ಬಂದಾಗ ಬೇವಿನ ಬಳಕೆ ಅತ್ಯಂತ ಸುರಕ್ಷಿತವೂ ಯಾವುದೇ ಅಡ್ಡಪರಿಣಾಮಗಳಿಲ್ಲದ್ದೂ ಆಗಿರುವುದರಿಂದ ಅನುಮಾನರಹಿತರಾಗಿ ಬಳಸಬಹುದು. ಆದರೆ ಯಾವುದೇ ಆಯುರ್ವೇದೀಯ ಔಷಧಿಯಂತೆ ಬೇವು ಸಹಾ ತನ್ನ ಪರಿಣಾಮ ಬೀರಲು ಕೊಂಚ ಸಮಯಾವಕಾಶ ಬೇಡುವುದರಿಂದ ಇದರ ಪ್ರಭಾವ ನಿಧಾನಕ್ಕೆ ಕಂಡುಬರುತ್ತದೆ. ನಿತ್ಯದ ಉಪಯೋಗದಿಂದ ಬೇವಿನ ಗುಣಗಳು ನಮ್ಮ ದೇಹಕ್ಕೆ ಮಾಡುವ ಉಪಕಾರಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ...

ತಲೆಹೊಟ್ಟು ನಿವಾರಿಸುತ್ತದೆ
ಬೇವಿನ ಶಿಲೀಂಧ್ರನಾಶಕ ಮತ್ತು ಬ್ಯಾಕ್ಟೀರಿಯಾ ನಿವಾರಕ ಗುಣ ತಲೆಹೊಟ್ಟಿನ ನಿವಾರಣೆಗೆ ರಾಮಬಾಣವಾಗಿದೆ. ಇದಕ್ಕಾಗಿ ಬೇವಿನ ಎಲೆಗಳನ್ನು ನೀವು ಸ್ನಾನ ಮಾಡುವ ಬಿಸಿನೀರಿಗೆ ಸೇರಿಸಿ ಕೊಂಚ ಹೊತ್ತು ಬಿಡಿ ಬಳಿಕ ಈ ನೀರಿನಿಂದ ತಲೆಸ್ನಾನ ಮಾಡಿ. ಬಳಿಕ ತಲೆಯನ್ನು ಹೆಚ್ಚು ಒರೆಸಿಕೊಳ್ಳದೇ ಟವೆಲ್ಲಿನಿಂದ ಒತ್ತಿಗೊಂಡು ಮೇಲ್ಭಾಗವನ್ನು ಮಾತ್ರ ಹೀರಿಕೊಳ್ಳುವಂತೆ ಮಾಡಿ. ಒಳಗಣ ನೀರು ತಾನೇ ಒಣಗುವಂತೆ ಮಾಡಿ.

ತಲೆಹೊಟ್ಟು ನಿವಾರಿಸುತ್ತದೆ
ಇದು ತಲೆಹೊಟ್ಟನ್ನು ಸಡಿಲಗೊಳಿಸಿ ಸುಲಭವಾಗಿ ಕಳಚಿಕೊಳ್ಳಲು ನೆರವಾಗುತ್ತದೆ. ನಾಲ್ಕು ದಿನ ಸತತವಾಗಿ ಈ ವಿಧಾನ ಅನುಸರಿಸಿ ತಲೆಹೊಟ್ಟಿನಿಂದ ಬಹುತೇಕಪ್ರಮಾಣದಿಂದ ಮುಕ್ತರಾಗಿರಿ. ಬಳಿಕ ದಿನ ಬಿಟ್ಟು ದಿನ ಅನುಸರಿಸಿ.

ತುರಿಕೆಯನ್ನು ನಿವಾರಿಸುತ್ತದೆ
ಬೇವಿನ ಎಲೆಗಳನ್ನು ಅರೆದು ಲೇಪನ ತಯಾರಿಸಿ ತುರಿಕೆ ಇರುವ ಜಾಗಕ್ಕೆ ದಪ್ಪನಾಗಿ ಹಚ್ಚಿ. ತುರಿಕೆ ಕೂಡಲೇ ಕಡಿಮೆಯಾಗುತ್ತದೆ. ಆದರೂ ಲೇಪನವನ್ನು ಕನಿಷ್ಟ ಮೂರು ಘಂಟೆಗಳ ಕಾಲ ಹಾಗೇ ಇರಲಿ, ಬಳಿಕ ತಣ್ಣೀರಿನಿಂದ ತೊಳೆದುಕೊಳ್ಲಿ. ರಾತ್ರಿ ಮಲಗುವ ಮುನ್ನ ಹಚ್ಚಿ ಹಾಸಿಗೆಗೆ ತಾಗದಂತೆ ಬಟ್ಟೆಯ ಪಟ್ಟಿ ಮಾಡಿ ಮಲಗಿ ಬೆಳಿಗ್ಗೆದ್ದು ಸ್ನಾನ ಮಾಡುವುದು ಇನ್ನೂ ಉತ್ತಮ. ಇದರಿಂದ ತುರಿಕೆ ಕಡಿಮೆಯಾಗುವುದು ಮಾತ್ರವಲ್ಲ, ಹೊಸ ಚರ್ಮ ಬೆಳೆದು ಹಳೆದ ಚರ್ಮ ಪಕಳೆಯೆದ್ದು ಸುಲಭವಾಗಿ ನಿವಾರಿಸಲೂ ಸಾಧ್ಯವಾಗುತ್ತದೆ.

ಮೊಡವೆಗಳನ್ನು ಬಾರದಂತೆ ತಡೆಯುತ್ತದೆ
ಒಂದು ವೇಳೆ ಮುಖದಲ್ಲಿ ಚಿಕ್ಕದಾಗಿ ಮೊಡವೆಗಳು ಮೂಡುತ್ತಿದ್ದರೆ ಬೇವಿನ ಪುಡಿಯನ್ನು ತಣ್ಣೀರಿನಲ್ಲಿ ಬೆರೆಸಿ ನುಣುಪಾದ ಲೇಪನ ತಯಾರಿಸಿ ತೆಳುವಾಗಿ ಹಚ್ಚಿಕೊಳ್ಳಿ. ರಾತ್ರಿ ಹಚ್ಚಿ ಬೆಳಿಗ್ಗೆ ತಣ್ಣೀರಿನಿಂದ ತೊಳೆದುಕೊಳ್ಳಿ. ಇದು ಮೊಡವೆಗಳನ್ನು ಮಾಗಿಸುವುದು ಮಾತ್ರವಲ್ಲ, ಕಲೆಗಳನ್ನೂ ನಿಧಾನವಾಗಿ ನಿವಾರಿಸುತ್ತದೆ.

ಗಾಯಗಳನ್ನು ಬೇಗನೇ ಮಾಗುವಂತೆ ಮಾಡುತ್ತದೆ
ಯಾವುದೋ ಕಾರಣದಿಂದ ಚರ್ಮದಲ್ಲಿ ಕೊಯ್ದ, ಜಜ್ಜಿದ ಅಥವಾ ತರಚಿದ ಗಾಯಗಳಾಗಿದ್ದು ಮಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದರೆ ಇದಕ್ಕೆ ಬೇವಿನ ಲೇಪನ ಅತ್ಯುತ್ತಮ ಪರಿಹಾರವಾಗಿದೆ. ಇದಕ್ಕಾಗಿ ಬೇವಿನ ಎಲೆಗಳನ್ನು ಅರೆದು ನೇರವಾಗಿ ಗಾಯದ ಮೇಲೆ ಹಚ್ಚಿ. ಇದರ ಸೂಕ್ಷ್ಮಜೀವಿ ಪ್ರತಿರೋಧಕ ಗುಣದಿಂದಾಗಿ ಗಾಯ ಶೀಘ್ರವಾಗಿ ಮಾಗುವುದು ಮಾತ್ರವಲ್ಲ, ಕೀವು ಉಂಟಾಗುವುದನ್ನೂ ತಡೆಗಟ್ಟುತ್ತದೆ.

ಚರ್ಮವ್ಯಾಧಿಗಳನ್ನು ತಡೆಗಟ್ಟುತ್ತದೆ
ಇಸಬು (eczema), ಕೀವುಗುಳ್ಳೆ, ಕುರ ಮೊದಲಾದ ಚರ್ಮವ್ಯಾಧಿಗಳು ಚಿಕ್ಕದಂತೆ ಕಂಡುಬಂದರೂ ಇದರಿಂದಾಗುವ ತೊಂದರೆಗಳು ಮಾತ್ರ ಅಸಹನೀಯವಾಗಿದೆ. ಇದರಿಂದ ಪಾರಾಗಲು ಬೇವಿನ ಎಲೆಗಳನ್ನು ಅರೆದು ಮಾಡಿದ ಲೇಪನವನ್ನು ಬಾಧೆಗೊಳಗಾಗಿದ್ದ ಭಾಗದ ಮೇಲೆ ರಾತ್ರಿ ಹಚ್ಚಿ ಮರುದಿನ ಸ್ವಚ್ಛಗೊಳಿಸಿ. ದಿನದ ಹೊತ್ತಿನಲ್ಲಿಯೂ ಬಟ್ಟೆಗೆ ತಾಗದಂತೆ ತೆಳುವಾದ ಲೇಪನ ಹಚ್ಚಿ.

ಚರ್ಮದ ಕಾಂತಿ ಹೆಚ್ಚಿಸುತ್ತದೆ
ಬೇವಿನ ಎಣ್ಣೆಯಿಂದ ಆಗಾಗ ಮಸಾಜ್ ಮಾಡಿಕೊಳ್ಳುವ ಮೂಲಕ ಚರ್ಮಕ್ಕೆ ಅಗತ್ಯ ಪೋಷಣೆ ದೊರಕುತ್ತದೆ. ಇದು ಚರ್ಮದ ಸೆಳೆತವನ್ನು ಹೆಚ್ಚಿಸಿ ಕಾಂತಿಯನ್ನು ಹೆಚ್ಚಿಸುತ್ತದೆ.

ಸಲಹೆ:
1) ಬೇವಿನಲ್ಲಿ ಎರಡು ವಿಧಗಳಿವೆ. ಕರಿಬೇವು ಮತ್ತು ಕಹಿಬೇವು. ಒಗ್ಗರಣೆಗೆ ಕರಿಬೇವು ಉತ್ತಮವಾದರೆ ಮೇಲಿನ ಎಲ್ಲಾ ಚಿಕಿತ್ಸೆಗಳಿಗೆ ಕಹಿಬೇವು ಉತ್ತಮ.
2) ಕಹಿಬೇವಿನ ಮರಗಳಿರುವ ತೋಪಿನಲ್ಲಿ ಮುಂಜಾನೆ ನಡೆದಾಡುತ್ತಾ ಸೇವಿಸುವ ಗಾಳಿ ಹಲವು ರೀತಿಯಲ್ಲಿ ಆರೋಗ್ಯಕ್ಕೆ ಉತ್ತಮವಾಗಿವೆ.
ಎಚ್ಚರಿಕೆಗಳು: ಬೇವಿನ ಸೇವನೆ ಹಚ್ಚಾದರೆ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುತ್ತದೆ. ಆದ್ದರಿಂದ ಹೊಟ್ಟೆಗೆ ತೆಗೆದುಕೊಳ್ಳುವ ಬೇವಿನ ಎಲೆಗಳ ಪ್ರಮಾಣದಲ್ಲಿ ಮಿತಿ ಇರಲಿ
ಗರ್ಭಿಣಿಯರಿಗೆ ಬೇವು ಉತ್ತಮವಲ್ಲ, ಐದನೆಯ ತಿಂಗಳ ಬಳಿಕ ಬೇವಿನ ಸೇವನೆ ಗರ್ಭಪಾತಕ್ಕೆ ಕಾರಣವಾಗಬಹುದು.

ಸಲಹೆ:
ಗರ್ಭಿಣಿಯಾಗಬಯಸುವವರಿಗೂ ಬೇವು ಉತ್ತಮವಲ್ಲ.
*ಬೇವಿನ ಬೀಜದ ಎಣ್ಣೆಯನ್ನು ಕೇವಲ ಚರ್ಮದ ಹೊರಗಿನ ಪೋಷಣೆಗೆ ಮಾತ್ರ ಬಳಸಬೇಕೇ ಹೊರತು ಹೊಟ್ಟೆಗೆ ಹೋಗಬಾರದು. (ವಿಷಕಾರಿ)



Click it and Unblock the Notifications