For Quick Alerts
ALLOW NOTIFICATIONS  
For Daily Alerts

ಹಾಲು-ಅರಿಶಿನದ ಜೋಡಿ ಮಾಡಲಿದೆ ಕಮಾಲಿನ ಮೋಡಿ!

By Super
|

ಶೀತ, ನೆಗಡಿ, ಜ್ವರ, ಹೊಟ್ಟೆನೋವು, ಮಹಿಳೆಯರಿಗೆ ಮಾಸಿಕ ದಿನಗಳಲ್ಲಿ ಕಾಡುವ ಕೆಳಹೊಟ್ಟೆನೋವು ಮೊದಲಾದ ಎಲ್ಲಾ ಸಾಮಾನ್ಯ ತೊಂದರೆಗಳಿಗೆ ಅಜ್ಜಿ ನೀಡುವ ಔಷಧಿ ಒಂದೇ-ಅದೇ ಅರಿಶಿನ ಸೇರಿಸಿದ ಬಿಸಿ ಹಾಲು. ಹಾಲು ಮತ್ತು ಅರಿಸಿನ ಎರಡೂ ಉತ್ತಮವಾದ ಪ್ರತಿಜೀವಕ (antibiotic) ಗಳಾಗಿವೆ. ಇವೆರಡ ಜೋಡಿ ವಿವಿಧ ತೊಂದರೆಗಳನ್ನು ಯಶಸ್ವಿಯಾಗಿ ನಿವಾರಿಸುವುದು ಮಾತ್ರವಲ್ಲ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲೂ ನೆರವಾಗುತ್ತವೆ. ದೇಹದಲ್ಲಿ ಹೇಗೋ ಪ್ರವೇಶ ಪಡೆದಿರುವ ಅತಿ ಸೂಕ್ಷ್ಮ ಕ್ರಿಮಿಗಳನ್ನೂ ಆಹಾರದ ಮೂಲಕ ಹೊಟ್ಟೆ ಸೇರಿರುವ ವಿಷಕಾರಿ ವಸ್ತುಗಳನ್ನೂ ಹೊರಹಾಕಲು ಸಹಕರಿಸುತ್ತವೆ.

ಅಮೇರಿಕಾದಲ್ಲಿ ಇಂತಹ ತೊಂದರೆಗಳಿಗೆ ಕೋಳಿಮಾಂಸದ ಬಿಸಿಬಿಸಿ ಸೂಪ್ ಮಾಡಿ ಕುಡಿಸುತ್ತಾರೆ. ಅಂತೆಯೇ ಭಾರತದ ಬಹುತೇಕ ಎಲ್ಲಾ ರಾಜ್ಯಗಳಲ್ಲಿ, ಅಷ್ಟೇ ಏಕೆ, ಶ್ರೀಲಂಕಾ, ಸಿಂಗಪುರ, ಮಾಲ್ಡೀವ್ಸ್ ಮೊದಲಾದ ಏಷಿಯಾ ದೇಶಗಳಲ್ಲಿಯೂ ಸುಮಾರು ಹದಿನಾಲ್ಕನೇ ಶತಮಾನದಿಂದ ಔಷಧಿಯ ರೂಪದಲ್ಲಿ ಉಪಯೋಗಿಸಲ್ಪಡುತ್ತಿದೆ. ಬಾಂಗ್ಲಾದೇಶದಲ್ಲಂತೂ ಅರಿಶಿನ ಇಲ್ಲದ ಅಡುಗೆಯೇ ಇಲ್ಲ. ಅಪ್ಪಟ ಹೊಂಬಣ್ಣದ ಪುಡಿಯಾದ ಅರಿಶಿನ ಪುಡಿ ಮತ್ತು ಹಸುವಿನ ಹಾಲಿನ ಜೋಡಿ ಹತ್ತು ಹಲವು ರೋಗಗಳಿಗೆ ಸಮರ್ಥವಾದ ಪರಿಹಾರವಾಗಿದೆ.

ಅಡುಗೆಯಲ್ಲಿಯೂ ಅರಿಶಿನವನ್ನು ಅಲ್ಪಪ್ರಮಾಣದಲ್ಲಿ ಬಹುತೇಕ ಎಲ್ಲಾ ಪಲ್ಯಗಳಲ್ಲಿ ಉಪಯೋಗಿಸಲಾಗುತ್ತದೆ. ಆದರೆ ಅರಿಶಿನ ಸಂಜೀವಿನಿಯಲ್ಲ. ಇದರ ಪ್ರಭಾವ ಅತಿ ಹೆಚ್ಚೂ ಅಲ್ಲ. ಹಾಗಾಗಿ ಚಿಕ್ಕಪುಟ್ಟ ಆರೋಗ್ಯದ ತೊಂದರೆಗಳಿಗೆ ಈ ಜೋಡಿ ಸೂಕ್ತವೇ ಹೊರತು ಉಲ್ಬಣಿಸಿದ ರೋಗಕ್ಕೆ ವೈದ್ಯರ ಸಲಹೆ ಪಡೆಯುವುದು ಅವಶ್ಯವಾಗಿದೆ.

ಅರಿಶಿನದ ಹಾಲು ತಯಾರಿಸುವ ಬಗೆ

ಅರಿಶಿನದ ಹಾಲು ತಯಾರಿಸುವ ಬಗೆ

ಸುಲಭ ವಿಧಾನ: ಒಂದು ಲೋಟ ಹಸುವಿನ ಹಾಲಿಗೆ ಸುಮಾರು ಅರ್ಧ ಚಮಚದಿಂದ ಒಂದು ಚಮಚದಷ್ಟು ಅರಿಶಿನ ಪುಡಿ ಹಾಕಿ ಕುದಿಯಲು ಪ್ರಾರಂಭವಾದ ಬಳಿಕ ಇಳಿಸಿ ತಣಿಯಲು ಬಿಡಿ. ರುಚಿಗಾಗಿ ಕೊಂಚ ಜೇನನ್ನೂ ಸೇರಿಸಬಹುದು.

ಸಾಂಪ್ರಾದಾಯಿಕ ವಿಧಾನ: ಹಸಿಯಾಗಿರುವ ಅರಿಶಿನದ ಕೊಂಬಿನ ಸುಮಾರು ಒಂದು ಇಂಚಿನಷ್ಟು ತುಂಡನ್ನು ಜಜ್ಜಿ ಕುದಿಯುತ್ತಿರುವ ಹಾಲಿನಲ್ಲಿ ಸೇರಿಸಿ. ಈಗ ಉರಿಯನ್ನು ಅತಿಚಿಕ್ಕದಾಗಿ ಮಾಡಿ ಮುಚ್ಚಳ ಮುಚ್ಚದೇ ಸುಮಾರು ಹದಿನೈದು ನಿಮಿಷ ಕುದಿಸಿ. ಬಳಿಕ ಅರಿಶಿನದ ತುಂಡನ್ನು ಸೋಸಿ ತೆಗೆಯಿರಿ. ಈ ಹಾಲನ್ನು ತಣಿದ ಬಳಿಕವೇ ಕುಡಿಯಿರಿ. ಈ ಹಾಲನ್ನು ಮತ್ತೆ ಬಿಸಿ ಮಾಡಬಾರದು.

ಶ್ವಾಸಸಂಬಂಧಿ ರೋಗಗಳು

ಶ್ವಾಸಸಂಬಂಧಿ ರೋಗಗಳು

ಸಾಮಾನ್ಯವಾಗಿ ಗಾಳಿಯ ಮೂಲಕ ತೇಲಿ ಬರುವ ಅತಿಸೂಕ್ಷ್ಮ ಕ್ರಿಮಿ, ವೈರಸ್ ಮತ್ತು ಬ್ಯಾಕ್ಟೀರಿಯಾಗಳು ಹಾಗೂ ಹೂವಿನ ಪರಾಗಗಳು ನಮ್ಮ ಶ್ವಾಸನಳಿಕೆಗಳ ಒಳಗೆ ಸೋಂಕು ಹರಡುತ್ತವೆ. ಇದರಿಂದ ಶ್ವಾಸಕೋಶ ಕಟ್ಟಿಕೊಳ್ಳುತ್ತದೆ. ರೋಗ ನಿರೋಧಕ ಶಕ್ತಿ ಇದನ್ನು ಎದುರಿಸಲು ಗಂಟಲು, ಮೂಗಿನ ಒಳಭಾಗ ಶ್ವಾಸನಾಳದ ಒಳಭಾಗಗಳನ್ನು ಹೆಚ್ಚು ತೇವವಾಗಿಸುವುದರಿಂದ ಕಫ, ಸೈನಸ್ ಸೋಂಕು ಮತ್ತು ಸುರಿಯುವ ಮೂಗು ಎದುರಾಗುತ್ತದೆ. ಅರಿಶಿನದಲ್ಲಿರುವ ಸೂಕ್ಷ್ಮಜೀವಿ ಪ್ರತಿರೋಧಕ (anti-microbial) ಗುಣಗಳು ಈ ಸೂಕ್ಷ್ಮ ಜೀವಿಗಳನ್ನು ಎದುರಿಸಿ ಕಫದ ಮೂಲಕ ಹೊರಹೋಗಲು ನೆರವಾಗುತ್ತದೆ. ಶ್ವಾಸನಾಳಗಳನ್ನು ಕಿರಿದುಗೊಳಿಸಿ ಉಸಿರಾಟದ ತೊಂದರೆಗೆ ಒಳಪಡಿಸುವ ಅಸ್ತಮಾ ಮತ್ತು ಬ್ರಾಂಕೈಟಿಸ್ ರೋಗಗಳಿಗೂ ಅರಿಶಿನದ ಹಾಲು ಉತ್ತಮ ಪರಿಹಾರ ನೀಡುತ್ತದೆ.

ಕ್ಯಾನ್ಸರ್

ಕ್ಯಾನ್ಸರ್

ನಮ್ಮ ದೇಹದಲ್ಲಿ ಯಾವುದಾದರೊಂದು ವಿಧದ ಜೀವಕೋಶಗಳು ಅವಶ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಾ ಹೋಗುವ ಅತಿರೇಕಕ್ಕೇ ಕ್ಯಾನ್ಸರ್ ಎಂದು ಕರೆಯುತ್ತೇವೆ. ಈ ಅತಿರೇಕ ಆ ಜೀವಕೋಶದ ಡಿಎನ್ಎ ಅನ್ನೇ ಪ್ರಭಾವಕ್ಕೆ ಒಳಪಡಿಸುವುದರಿಂದ ಅಂಗವನ್ನು ಕಸಿ ಮಾಡದೇ ನಿರ್ವಾಹವಿಲ್ಲವಾಗುತ್ತದೆ. ಉಲ್ಬಣಗೊಂಡ ಬಳಿಕ ನಿಯಂತ್ರಣ ಸಾಧ್ಯವಿಲ್ಲ. ಯಾವ ಅಂಗದ ಜೀವಕೋಶಗಳು ಇದರ ಬಾಧೆಗೊಳಗಾಗಿದೆಯೋ ಆ ಭಾಗದ ಕ್ಯಾನ್ಸರ್ ಎಂದು ಕರೆಯಲಾಗುತ್ತದೆ. ಸ್ತನ, ಚರ್ಮ, ಶ್ವಾಸಕೋಶ, ಪ್ರಾಸ್ಟ್ರೇಟ್ ಗ್ರಂಥಿ, ಮತ್ತು ದುಗ್ದ ಗ್ರಂಥಿಗಳಿಗೆ ಕಾರಣವಾಗುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳನ್ನು ಅರಿಶಿನ ಮತ್ತು ಹಾಲಿನ ಮಿಶ್ರಣದ ಸೇವನೆಯ ಮೂಲಕ ನಿಯಂತ್ರಿಸಬಹುದೆಂದು ಸಂಶೋಧನೆಗಳ ಮೂಲಕ ಕಂಡುಹಿಡಿಯಲಾಗಿದೆ. ಜೊತೆಗೇ ಕ್ಯಾನ್ಸರ್ ಗೆ ಖೀಮೋಥೆರಪಿ (chemotherapy) ಎಂಬ ಚಿಕಿತ್ಸೆಯನ್ನು ನೀಡಲಾಗುತ್ತದೆ. ಇದರ ಅಡ್ಡಪರಿಣಾಮಗಳ ಪ್ರಭಾವದಿಂದ ಹಸಿವಿಲ್ಲದಿರುವುದು, ತಲೆಗೂದಲು ಬೋಳಾಗುವುದು, ಸುಸ್ತು, ಮುಖದೊಳಗೆ ಮತ್ತು ಗಂಟಲಿನಲ್ಲಿ ವ್ರಣಗಳು, ವಾಕರಿಕೆ, ವಾಂತಿ, ಮಲಬದ್ದತೆ, ರಕ್ತಕಣಗಳ ಸಂಖ್ಯೆಯಲ್ಲಿ ಇಳಿತ, ಲೈಂಗಿಕ ದೌರ್ಬಲ್ಯ, ಚಿಂತನೆಯಲ್ಲಿ ಕುಂಠಿತತೆ ಮೊದಲಾದವು ಕಂಡುಬರುತ್ತವೆ. ಅರಿಶಿನ ಸೇರಿಸಿದ ಹಾಲಿನ ಸತತ ಸೇವನೆಯಿಂದ ಈ ಅಡ್ಡ ಪರಿಣಾಮಗಳನ್ನು ಬಹುತೇಕ ಪ್ರಮಾಣದಲ್ಲಿ ತಡೆಹಿಡಿಯಬಹುದು.

ಉರಿಯೂತ ನಿವಾರಕವಾಗಿದೆ (anti inflammatory)

ಉರಿಯೂತ ನಿವಾರಕವಾಗಿದೆ (anti inflammatory)

ಅರಿಶಿನದ ಹಾಲು ಉತ್ತಮ ಉರಿಯೂತ ನಿವಾರಕವಾಗಿದ್ದು ಹೊಟ್ಟೆಯಲ್ಲಿನ ಉರಿ ಕಡಿಮೆಯಾಗಲು ಸಹಕರಿಸುತ್ತದೆ. ಉರಿಯೂತದ ಕಾರಣ ಉದ್ಭವವಾಗುವ ಸಂಧಿವಾತಕ್ಕೂ (arthritis) ಉತ್ತಮ ಪರಿಹಾರವಾಗಿದೆ.ಇದೇ ಕಾರಣಕ್ಕೆ ಅರಿಶಿನದ ಹಾಲನ್ನು 'ನೈಸರ್ಗಿಕ ಆಸ್ಪಿರಿನ್' ಎಂದು ಆಯುರ್ವೇದದಲ್ಲಿ ಕರೆಯಲಾಗಿದೆ. ಈ ಹಾಲು ತಲೆನೋವು, ಊತ ಮತ್ತು ನೋವು ನಿವಾರಣೆಗೂ ಉತ್ತಮ ಔಷಧಿಯಾಗಿದೆ.

ಕೆಮ್ಮು ಮತ್ತು ಶೀತಕ್ಕೆ

ಕೆಮ್ಮು ಮತ್ತು ಶೀತಕ್ಕೆ

ದೇಹದ ರೋಗ ನಿರೋಧಕ ಶಕ್ತಿಯು ದೇಹದೊಳಗೆ ಪ್ರವೇಶಿಸಿದ ವೈರಾಣುಗಳನ್ನು ಹೊರಹಾಕಲು ಪ್ರಯೋಗಿಸುವ ತಂತ್ರವಾದ ಶೀತ ಮತ್ತು ಕೆಮ್ಮಿಗೆ ಅರಿಶಿನದ ಹಾಲು ಉತ್ತಮ ಪರಿಹಾರವಾಗಿದೆ. ಇದರ ಬ್ಯಾಕ್ಟೀರಿಯಾ ನಿವಾರಕ ಗುಣಗಳು ಶೀತಕ್ಕೆ ಕಾರಣವಾದ ಕ್ರಿಮಿಗಳನ್ನು ನಿವಾರಿಸುವುದರಿಂದ ರೋಗ ನಿರೋಧಕ ಶಕ್ತಿಗೆ ಮತ್ತಷ್ಟು ನೀರು ಸುರಿಸುವ ಅಗತ್ಯವಿಲ್ಲದೇ ಹೋಗಿ ಶೀತ, ನೆಗಡಿ ಮತ್ತು ಕೆಮ್ಮು ಕಡಿಮೆಯಾಗುತ್ತದೆ.

ಉರಿ ಮತ್ತು ನೋವಿಗೆ

ಉರಿ ಮತ್ತು ನೋವಿಗೆ

ಬ್ಯಾಕ್ಟೀರಿಯಾಗಳ ಪ್ರಭಾವದಿಂದ ಶೀತ, ಜ್ವರ ಬಂದು ಮೈಕೈ ನೋವು, ಮೂಳೆಗಳ ಸಂದುಗಳಲ್ಲಿ ನೋವು ಅಥವಾ ಉರಿ ಕಾಣಿಸಿಕೊಂಡಿದ್ದರೆ ಅರಿಶಿನದ ಹಾಲು ಉತ್ತಮ ಪರಿಣಾಮ ನೀಡುತ್ತದೆ. ಜೊತೆಗೇ ಹಾಲಿನಲ್ಲಿರುವ ಕ್ಯಾಲ್ಸಿಯಂ ನಿಂದ ಮೂಳೆಗಳು ಮತ್ತು ಮೆದುಳುಬಳ್ಳಿಗಳು ಹೆಚ್ಚು ದೃಢಗೊಳ್ಳುತ್ತವೆ.

ಉತ್ಕರ್ಷಣ ನಿರೋಧಕವಾಗಿದೆ (Antioxidant)

ಉತ್ಕರ್ಷಣ ನಿರೋಧಕವಾಗಿದೆ (Antioxidant)

ಅರಿಶಿನದ ಹಾಲಿನಲ್ಲಿರುವ ಉತ್ಕರ್ಷಣ ನಿರೋಧಕ ಗುಣದಿಂದ ದೇಹವನ್ನು ಒಳಗಿನಿಂದ ಶಿಥಿಲವಾಗಿಸುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ಪ್ರಭಾವವನ್ನು ಅರಿಶಿನದ ಹಾಲು ಕಡಿಮೆಗೊಳಿಸುತ್ತದೆ. ಈ ಫ್ರೀ ರ್‍ಯಾಡಿಕಲ್ಲುಗಳು ಕ್ಯಾನ್ಸರ್ ಸಹಿತ ಹಲವು ರೋಗಗಳಿಗೆ ಕಾರಣವಾಗಬಲ್ಲುದು.

ರಕ್ತವನ್ನು ಶುದ್ಧೀಕರಿಸುತ್ತದೆ

ರಕ್ತವನ್ನು ಶುದ್ಧೀಕರಿಸುತ್ತದೆ

ಆಯುರ್ವೇದದ ಪ್ರಕಾರ ರಕ್ತವನ್ನು ಶುದ್ಧೀಕರಿಸಲು ಅರಿಶಿನದ ಹಾಲು ಉತ್ತಮವಾಗಿದೆ. ಇದರಿಂದ ಪ್ರತಿ ರಕ್ತಕಣಕ್ಕೆ ಅಗತ್ಯವಾದ ಪೋಷಕಾಂಶಗಳು ಲಭ್ಯವಾಗಿ ಹೆಚ್ಚಿನ ಚಟುವಟಿಕೆಯಿಂದ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಜೊತೆಗೇ ದುಗ್ಧನಾಳ (lymphatic system) ವ್ಯವಸ್ಥೆಯನ್ನೂ ಉತ್ತಮಗೊಳಿಸುವುದರಿಂದ ರಕ್ತನಾಳಗಳ ಒಳಗೆ ಸೇರಿಕೊಂಡಿದ್ದ ಕಲ್ಮಶ ಮತ್ತು ಜಿಡ್ಡುಗಳನ್ನು ಹೊರಹಾಕಲೂ ಸಾಧ್ಯವಾಗುತ್ತದೆ.ರಕ್ತದಲ್ಲಿರುವ ನೀರಿನ ಅಂಶವಾದ ಪ್ಲಾಸ್ಮಾವನ್ನೂ ಹೆಚ್ಚಿಸುವ ಮೂಲಕ ರಕ್ತ ಸುಗಮವಾಗಿ ಹರಿಯಲು ನೆರವಾಗುತ್ತದೆ.

ಯಕೃತ್ ನಲ್ಲಿರುವ ವಿಷಗಳನ್ನು ಹೊರಹಾಕುತ್ತದೆ

ಯಕೃತ್ ನಲ್ಲಿರುವ ವಿಷಗಳನ್ನು ಹೊರಹಾಕುತ್ತದೆ

ದುಗ್ಧನಾಳ (lymphatic system) ವ್ಯವಸ್ಥೆಯಲ್ಲಿ ಸುಧಾರಣೆಯಾಗುವ ಮೂಲಕ ಯಕೃತ್ (liver) ನಲ್ಲಿರುವ ವಿಷಕಾರಿ ವಸ್ತುಗಳನ್ನು ಹೊರಹಾಕಲು ನೆರವಾಗುತ್ತದೆ.

ಮೂಳೆಗಳು ಸದೃಢವಾಗುತ್ತವೆ

ಮೂಳೆಗಳು ಸದೃಢವಾಗುತ್ತವೆ

ಹಾಲಿನಲ್ಲಿರುವ ಕ್ಯಾಲ್ಸಿಯಂ ಮೂಳೆಗಳ ಬಲವನ್ನು ಹೆಚ್ಚಿಸಲು ನೆರವಾಗುತ್ತದೆ. ಕ್ರಿಕೆಟ್ ಲೋಕದ ಸವ್ಯಸಾಚಿ ಸಚಿನ್ ಟೆಂಡೂಲ್ಕರ್ ತಮ್ಮ ಮೂಳೆಗಳಿಗಾಗಿ ಪ್ರತಿದಿನ ಕುಡಿಯುವ ಪೇಯವೇ ಅರಿಶಿನ ಸೇರಿಸಿದ ಹಾಲು. ಮೂಳೆ ಮತ್ತು ಹಲ್ಲುಗಳಿಗೆ ಉತ್ತಮ ಪ್ರಮಾಣದಲ್ಲಿ ಕ್ಯಾಲ್ಸಿಯಂ ದೊರಕಿರುವ ಕಾರಣ ಮೂಳೆಗಳು ಟೊಳ್ಳಾಗುವುವಿಕೆ ಮತ್ತು ಗುಳ್ಳೆಗಳು ಸೇರಿಕೊಳ್ಳುವುದು (osteoporosis) ಮೊದಲಾದ ತೊಂದರೆಗಳಿಂದ ತಪ್ಪಿಸಿಕೊಂಡಂತಾಗುತ್ತದೆ.

ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ

ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ

ಅರಿಶಿನ ಉತ್ತಮ ನಂಜುನಿರೋಧಕವೂ (antiseptic) ಆಗಿರುವುದರಿಂದ ಜೀರ್ಣಾಂಗಳ ಕ್ಷಮತೆಯನ್ನು ಹೆಚ್ಚಿಸುತ್ತದೆ. ಇದರಿಂದ ಜೀರ್ಣಕ್ರಿಯೆ ಸರಾಗವಾಗಿ ನಡೆದು ಕರುಳುಹುಣ್ಣು, ಅಲ್ಸರ್ ಮೊದಲಾದ ತೊಂದರೆಗಳಿಗೆ ಒಳಗಾಗುವುದನ್ನು ತಪ್ಪಿಸುತ್ತದೆ. ಅಲ್ಲದೇ ಬೇಧಿ, ಅಜೀರ್ಣಕ್ಕೆ ಒಳಗಾಗುವುದನ್ನೂ ತಡೆಯುತ್ತದೆ.

ಮಹಿಳೆಯ ಮಾಸಿಕ ದಿನಗಳ ತೊಂದರೆ ನಿವಾರಣೆಯಾಗುತ್ತದೆ

ಮಹಿಳೆಯ ಮಾಸಿಕ ದಿನಗಳ ತೊಂದರೆ ನಿವಾರಣೆಯಾಗುತ್ತದೆ

ಮಹಿಳೆಯರು ತಮ್ಮ ಮಾಸಿಕ ದಿನಗಳಲ್ಲಿ ಕೆಳಹೊಟ್ಟೆಯ ನೋವಿಗೆ ಒಳಗಾಗುತ್ತಾರೆ. ಅರಿಶಿನ ಮತ್ತು ಹಾಲು ಉತ್ತಮ ಸೆಳೆತ ನಿವಾರಕವಾಗಿವೆ (antispasmodic). ಇದರಿಂದ ಸೆಳೆತಗೊಂಡಿದ್ದ ಸ್ನಾಯುಗಳು ಸಡಿಲಗೊಂಡು ಸರಾಗವಾದ ರಕ್ತಪರಿಚಲನೆ ಹೆಚ್ಚುತ್ತದೆ. ಪರಿಣಾಮವಾಗಿ ನೋವು ಶೀಘ್ರವಾಗಿ ಕಡಿಮೆಯಾಗಿ ದಿನನಿತ್ಯದ ಕೆಲಸಗಳಿಗೆ ಮರಳಲು ಅನುಕೂಲವಾಗುತ್ತದೆ. ಗರ್ಭಿಣಿಯರು ಅರಿಶಿನದ ಹಾಲನ್ನು ನಿಯಮಿತವಗಿ ಸೇವಿಸುತ್ತಾ ಬರುವುದರಿಂದ ಸುಲಭ ಹೆರಿಗೆಯಾಗಲು ಸಾಧ್ಯವಾಗುತ್ತದೆ. ಬಾಣಂತಿಯರು ಶೀಘ್ರವಾಗಿ ಚೇತರಿಸಿಕೊಳ್ಳಲು, ತಾಯಿಹಾಲು ಹೆಚ್ಚಲು, ಗರ್ಭಕೋಶ ಶೀಘ್ರವಾಗಿ ಸ್ವಸ್ಥಾನ ಸೇರಲು ಈ ಅಧ್ಬುತ ಪೇಯ ನೆರವಾಗುತ್ತದೆ.

ಚರ್ಮ ಕೆಂಪಗಾಗಿರುವ ತೊಂದರೆ ನಿವಾರಣೆಗೆ

ಚರ್ಮ ಕೆಂಪಗಾಗಿರುವ ತೊಂದರೆ ನಿವಾರಣೆಗೆ

ಪುರಾತನ ಈಜಿಪ್ಟಿನ ರಾಣಿ ಸತತವಾಗಿ ಅರಿಶಿನದ ಹಾಲು ಸೇವಿಸುತ್ತಿದ್ದುದರ ಪರಿಣಾಮವಾಗಿ ಅವಳ ಚರ್ಮ ಹೊಂಬಣ್ಣದಂತೆ ಮಿನುಗುತ್ತಿತ್ತು ಎಂದು ಇತಿಹಾಸದಲ್ಲಿ ವರ್ಣಿಸಲಾಗಿದೆ. ಚರ್ಮದ ಕಾಂತಿಗೆ ಅರಿಶಿನದ ಹಾಲು ಉತ್ತಮವಾಗಿದೆ. ಇದಕ್ಕಾಗಿ ಹತ್ತಿನ ಉಂಡೆಯಿಂದ ಅರಿಶಿನದ ಹಾಲನ್ನು ತೋಯಿಸಿ ಮುಖ, ಕುತ್ತಿಗೆ, ಕೈಕಾಲುಗಳಿಗೆ ಹಚ್ಚಿ ಹದಿನೈದು ನಿಮಿಷ ಒಣಗಲು ಬಿಡಿ. ವಿಶೇಷವಾಗಿ ಕೆಂಪಗಾದ ಮತ್ತು ತುರಿಕೆಯಿರುವ, ಕಲೆಗಳಿರುವ ಸ್ಥಳಗಳಲ್ಲಿ ಹೆಚ್ಚಾಗಿ ಹಚ್ಚಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ, ಸೋಪು ತಾಗಿಸಬೇಡಿ. ಇದರಿಂದ ಚರ್ಮದ ತೊಂದರೆಗಳು ನಿವಾರಣೆಯಾಗಿ ಕಾಂತಿಯುಕ್ತ ಚರ್ಮ ನಿಮ್ಮದಾಗುತ್ತದೆ.

ತೂಕ ಇಳಿಸಿಕೊಳ್ಳಲೂ ಸಹಕಾರಿಯಾಗಿದೆ

ತೂಕ ಇಳಿಸಿಕೊಳ್ಳಲೂ ಸಹಕಾರಿಯಾಗಿದೆ

ಅರಿಶಿನ ಮತ್ತು ಹಾಲನ್ನು ಅರಗಿಸಲು ಕರುಳುಗಳು ಹೆಚ್ಚಿನ ಕೊಬ್ಬನ್ನು ಬಳಸಬೇಕಾಗಿ ಬರುವುದರಿಂದ ತೂಕ ಇಳಿಯಲೂ ಸಹಕಾರಿಯಾಗಿವೆ.

ಚರ್ಮದ ತುರಿಕೆಯನ್ನು ಕಡಿಮೆಗೊಳಿಸುತ್ತದೆ

ಚರ್ಮದ ತುರಿಕೆಯನ್ನು ಕಡಿಮೆಗೊಳಿಸುತ್ತದೆ

ಚರ್ಮದಲ್ಲಿ ತುರಿಕೆಯುಂಟಾಗಿದ್ದರೆ ಅರಿಶಿನ ಮತ್ತು ಹಾಲಿನ ಸೇವನೆಯಿಂದ ಶೀಘ್ರವೇ ಗುಣವಾಗುತ್ತದೆ. ಎಚ್ಚರಿಕೆ ವಹಿಸಬೇಕಾದ ಸಂಗತಿಯೆಂದರೆ ತುರಿಕೆಯಾಗಿರುವ ಸ್ಥಳವನ್ನು ಉಗುರಿನಿಂದ ತುರಿಸಿಕೊಂಡಷ್ಟೂ ತುರಿಕೆ ಹೆಚ್ಚುತ್ತಾ ಹೋಗುತ್ತದೆ. ಹಾಗಾಗಿ ತುರಿಸಿಕೊಳ್ಳಲೇಬೇಕಾದ ಅನಿವಾರ್ಯವಿದ್ದರೆ ನಯವಾದ ಬಟ್ಟೆ ಅಥವಾ ಕಾಗದದಿಂದ ಒತ್ತಡವಿಲ್ಲದೇ ಉಜ್ಜಿಕೊಳ್ಳುವ ಮೂಲಕ ಕೆರೆತವನ್ನು ಕಡಿಮೆ ಮಾಡಿಕೊಳ್ಳಬಹುದು.ಅಲ್ಲದೇ ತುರಿಕೆಯ ಜಾಗಕ್ಕೆ ಸೋಪು ತಗುಲದಂತೆಯೂ ಎಚ್ಚರಿಕೆ ವಹಿಸಿ.

ನಿದ್ರಾಹೀನತೆಯನ್ನು ಹೋಗಲಾಡಿಸುತ್ತದೆ

ನಿದ್ರಾಹೀನತೆಯನ್ನು ಹೋಗಲಾಡಿಸುತ್ತದೆ

ಬಿಸಿ ಹಾಲಿನಲ್ಲಿ ಅರಿಶಿನದ ಪುಡಿಯನ್ನು ಸೇರಿಸಿ ರಾತ್ರಿ ಮಲಗುವ ಮುನ್ನ ಕುಡಿಯುವುದರಿಂದ ಉತ್ತಮ ಮತ್ತು ತಡೆರಹಿತ ನಿದ್ದೆಗೆ ಶರಣಾಗಬಹುದು. ಇದಕ್ಕೆ ಕಾರಣ ಟ್ರ್ಪಿಪ್ಟೋಫ್ಯಾನ್ (tryptophan) ಎಂಬ ಅಮೈನೋ ಆಮ್ಲ. ಇದು ಸುಖನಿದ್ದೆಗೆ ಸೋಪಾನವಾಗಿದೆ.

ಉಸಿರಾಟದ ತೊಂದರೆ

ಉಸಿರಾಟದ ತೊಂದರೆ

ಅರಿಶಿನ ಹಾಲು ಬ್ಯಾಕ್ಟೀರಿಯಾದ ಸೋಂಕುಗಳು ಮತ್ತು ವೈರಸ್ ಸೋಂಕುಗಳು ಆಕ್ರಮಿಸುವುದನ್ನು ವಿರೋಧಿಸುತ್ತದೆ. ಇದು ಉಸಿರಾಟದ ಸಂಬಂಧಿ ತೊಂದರೆಗಳನ್ನು ನಿವಾರಿಸುತ್ತದೆ. ನಿಮ್ಮ ದೇಹ ಉಷ್ಣವಾಗಿದ್ದರೆ ಮತ್ತು ಉಸಿರಾಟ ಹಾಗೂ ಸೈನೆನ್ ಸಮಸ್ಯೆಗಳನ್ನು ಇದು ಹೋಗಲಾಡಿಸುತ್ತದೆ. ಅಲ್ಲದೇ ಅಸ್ತಮಾ ಹಾಗೂ ಗಂಟಲೂತದಿಂದ ಕೂಡ ನಿವಾರಣೆ ಹೊಂದಬಹುದು.

ಸಂಧಿವಾತ

ಸಂಧಿವಾತ

ಅರಿಶಿನ ಹಾಲು, ಸಂಧಿವಾತವನ್ನು ಹೋಗಲಾಡಿಸಲು ಮತ್ತು ಸಂಧಿವಾತಕ್ಕೆ ಕಾರಣವಾದ ಊತವನ್ನು ನಿವಾರಿಸಲು ಸಹಾಯಮಾಡುತ್ತದೆ. ಕೀಲು ಮತ್ತು ಸ್ನಾಯುಗಳಲ್ಲಿನ ನೋವುಗಳನ್ನೂ ಸಹ ನಿವಾರಿಸುವಲ್ಲಿ ಸಹಕಾರಿಯಾಗಿದೆ.

English summary

Amazing Benefits Of Turmeric Milk For Beauty And Health

Milk have natural antibiotic properties. Including these two natural ingredients in your everyday diet can prevent diseases and infections. While there are some health benefits associated with the orange-yellow spice, it is not a cure-all, and drinking it with milk does not enhance the benefits.
X
Desktop Bottom Promotion