ಆರೋಗ್ಯದ ಆಗರ ಸಿಹಿ ಜೇನಿನ ಮಹತ್ವ ಅರಿಯಿರಿ

By Manu
Subscribe to Boldsky

ಒಂದು ವೇಳೆ ನಿಮ್ಮ ಎಲ್ಲಾ ಆರೋಗ್ಯದ ತೊಂದರೆಗಳನ್ನು ಕೇವಲ ಒಂದು ಮಾತ್ರೆ ನುಂಗಿ ಪೂರ್ಣವಾಗಿ ಗುಣಪಡಿಸುವಂತಿದ್ದರೆ? ಇಂತಹ ಒಂದು ಮಾತ್ರೆಯನ್ನು ನೀವು ಹುಡುಕುತ್ತಿದ್ದರೆ ಈಗ ನಿಮ್ಮ ಹುಡುಕಾಟ ನಿಲ್ಲಿಸಿ. ಏಕೆಂದರೆ ಈ ಮಾತ್ರೆ ನಿಸರ್ಗ ನೀಡಿರುವ, ಎಂದೂ ಹಾಳಾಗದ ಆಹಾರ ಎಂದು ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲ್ಪಟ್ಟ ಅಪ್ಪಟ ಜೇನಿನ ರೂಪದಲ್ಲಿ ಲಭ್ಯವಿದೆ.

ಇದು ಅತ್ಯಂತ ಸಿಹಿಯಾಗಿರುವ ಜೊತೆಗೇ ಹಲವಾರು ಪೋಷಕಾಂಶಗಳನ್ನು ಹೊಂದಿರುವ ಅದ್ಭುತ ಆಹಾರವೂ ಆಗಿದೆ. ಇದರ ಎಡೆಬಿಡದ ಸೇವನೆಯಿಂದ ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ಈ ಜಗತ್ತಿನ ಅತಿ ಪುರಾತನ ಸಿಹಿಕಾರಕವಾಗಿ ಜೇನು ಬಳಸಲ್ಪಡುತ್ತಿದೆ. ಇದರ ಔಷಧೀಯ ಗುಣಗಳು ಹಲವಾರು ಕಾಯಿಲೆಗಳನ್ನು ಗುಣಪಡಿಸುವಲ್ಲಿ ನೆರವಾಗುತ್ತದೆ.

ಇದರ ಬ್ಯಾಕ್ಟೀರಿಯಾ ನಿವಾರಕ, ಶಿಲೀಂಧ್ರ ನಿವಾರಕ ಗುಣಗಳನ್ನು ಕಂಡುಕೊಂಡ ನಮ್ಮ ಪೂರ್ವಜರು ಸಾವಿರಾರು ವರ್ಷಗಳಿಂದಲೂ ಔಷಧದ ರೂಪದಲ್ಲಿ ಜೇನನ್ನು ಬಳಸುತ್ತಾ ಬಂದಿದ್ದಾರೆ. ಒಂದು ಚಮಚ ಜೇನಿನಲ್ಲಿ ಅರವತ್ತನಾಲ್ಕು ಕ್ಯಾಲೋರಿ ಇದೆ ಹಾಗೂ ಇದರಲ್ಲಿ ಕೊಬ್ಬು ಅಥವಾ ಕೊಲೆಸ್ಟ್ರಾಲ್ ಇಲ್ಲವೇ ಇಲ್ಲ.

ಇದರ ಸೇವನೆಯಿಂದ ದೇಹಕ್ಕೆ ಅಗತ್ಯವಾದ ವಿಟಮಿನ್ನುಗಳು, ಕೆಲವು ಕಿಣ್ವಗಳು, ಅಮೈನೋ ಆಮ್ಲ, ಖನಿಜಗಳಾದ ಕ್ಯಾಲ್ಸಿಯಂ, ಕಬ್ಬಿಣ, ಉಪ್ಪು, ಮೆಗ್ನೇಶಿಯಂ, ಫಾಸ್ಫೇಟ್ ಹಾಗೂ ಪೊಟ್ಯಾಶಿಯಂ ಗಳು ಲಭಿಸುತ್ತವೆ. ಇದರ ಬ್ಯಾಕ್ಟೀರಿಯಾ ನಿವಾರಕ ಗುಣ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ತಡೆಯುತ್ತದೆ. ಇದರ ಆಂಟಿ ಆಕ್ಸಿಡೆಂಟು ಗುಣ ದೇಹದಲ್ಲಿ ಕ್ಯಾನ್ಸರ್ ಉಂಟು ಮಾಡುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ದ ಹೋರಾಡುವ ಮೂಲಕ ಕೆಲವಾರು ಕ್ಯಾನ್ಸರ್ ಆವರಿಸುವ ಸಾಧ್ಯತೆಯನ್ನು ಇಲ್ಲವಾಗಿಸುತ್ತದೆ. ಬನ್ನಿ, ಇದರ ಸೇವನೆಯಿಂದ ಪಡೆಯಬಹುದಾದ ಪ್ರಯೋಜನಗಳ ಬಗ್ಗೆ ಅರಿಯೋಣ....

Amazing Benefits of Honey

*ಜೇನನ್ನು ಹಾಗೇ ಸೇವಿಸುವುದಕ್ಕಿಂತ ಬಿಸಿ ಹಾಲು ಅಥವಾ ಬಿಸಿಯಾದ ಟೀ ಜೊತೆಗೆ ಕದಡಿ ಕುಡಿಯುವುದರಿಂದ ಹೆಚ್ಚು ಪ್ರಯೋಜನವಿದೆ

* ಜೇನನ್ನು ಹಾಗೇ ಸೇವಿಸುವ ಅಗತ್ಯವಿದ್ದರೆ ಜೇನನ್ನು ಬಾಯಿಗೆ ಹಾಕಿಕೊಂಡ ತಕ್ಷಣ ನುಂಗಬೇಡಿ. ಕೆಲವು ಕ್ಷಣ ಬಾಯಿಯ ಲಾಲಾರಸದೊಡನೆ ಮಿಳಿತವಾಗಲಿ. ಆಗ ಇದರ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು.

* ಜೇನು ತನ್ನ ಪರಾಗವನ್ನು ಸಂಗ್ರಹಿಸುವ ಸ್ಥಳದಲ್ಲಿ ಹೇರಳವಾಗಿರುವ ಹೂವನ್ನು ಆಧರಿಸಿ ಆ ಜೇನನ್ನು ಗುರುತಿಸಬಹುದು. ಉದಾಹರಣೆಗೆ ಕಾಫಿ ತೋಟದಲ್ಲಿ ಸಂಗ್ರಹವಾದ ಜೇನು ಕಾಫಿ ಜೇನು, ಕಾಡಿನಲ್ಲಿ ವಿವಿಧ ಹೂಗಳ ಸಂಗ್ರಹವಾದುದು ಕಾಡುಜೇನು ಇತ್ಯಾದಿ. ಸಾಧ್ಯವಿದ್ದರೆ ಪ್ರತ್ಯೇಕ ಕಾಯಿಲೆಗೆ ಆಯುರ್ವೇದ ವೈದ್ಯರು ತಿಳಿಸಿದ ಪ್ರಕಾರದ ಜೇನನ್ನೇ ಬಳಸಿರಿ.

* ಔಷಧಿಯ ರೂಪದಲ್ಲಿ ಸೇವಿಸುವುದಾದರೆ ದಿನದ ಹೊತ್ತಿನಲ್ಲಿ ನೂರರಿಂದ ನೂರಿಪ್ಪತ್ತೈದು ಗ್ರಾಂ (ಸುಮಾರು ಮೂವತ್ತರಿಂದ ಮೂವತ್ತೈದು ಗ್ರಾಂ ಮೂರು ಹೊತ್ತಿನಂತೆ ಮತ್ತು ರಾತ್ರಿ ಇಪ್ಪತ್ತೈದರಿಂದ ಮೂವತ್ತು ಗ್ರಾಂ) ನಷ್ಟು ಜೇನನ್ನು ಸೇವಿಸಬೇಕು.

Amazing Benefits of Honey

*ಮಕ್ಕಳಿಗೆ ಔಷಧಿಯ ರೂಪದಲ್ಲಿ ನೀಡಬೇಕಾದರೆ ಪ್ರತಿದಿನ ಮೂವತ್ತು ಗ್ರಾಂ (ಪ್ರತಿ ಹೊತ್ತಿಗೆ ಹತ್ತು ಗ್ರಾಂ ನಂತೆ) ಬಳಸಬೇಕು. ಜೇನನ್ನು ಔಷಧಿಯ ರೂಪದಲ್ಲಿ ಕನಿಷ್ಟ ಎರಡು ತಿಂಗಳಾದರೂ ಉಪಯೋಗಿಸಬೇಕು. ಬಳಿಕ ಹದಿನೈದು ದಿನ ಖಾಲಿ ಬಿಟ್ಟು ಮತ್ತೆ ಚಿಕಿತ್ಸೆಯನ್ನು ಮುಂದುವರೆಸಬೇಕು.

*ಜಠರ ಮತ್ತು ಕರುಳುಗಳ ಮೂಲಕ ಜೇನು ಅತ್ಯಂತ ಸುಲಭವಾಗಿ ಹೀರಲ್ಪಡುವುದರಿಂದ ದೇಹಕ್ಕೆ ಅಗತ್ಯವಾದ ವಿಟಮಿನ್ ಮತ್ತು ಕ್ಯಾಲ್ಸಿಯಂ ಗಳನ್ನು ಸಿದ್ಧರೂಪದಲ್ಲಿ ನೀಡಲು ಅತ್ಯುತ್ತಮವಾದ ಆಹಾರವಾಗಿದೆ. ಇದೇ ಕಾರಣದಿಂದಾಗಿ ದೇಹ ಸುಲಭವಾಗಿ ಹೀರದ ಔಷಧಿಗಳನ್ನು ಜೇನಿನೊಂದಿಗೆ ನೀಡಿದಾಗ ಆ ಔಷಧಿಗಳೂ ಜೇನಿನ ಮೂಲಕ ಸುಲಭವಾಗಿ ಪಚನಗೊಂಡು ರಕ್ತಕ್ಕೆ ಸೇರುತ್ತವೆ.

* ಜೇನಿನ ಅತ್ಯುತ್ತಮ ಪ್ರಯೋಜನ ಪಡೆಯಬೇಕಾದರೆ ಅದನ್ನು ನಲವತ್ತು ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಿನ ಬಿಸಿಯಿರುವ ಹಾಲು ಅಥವಾ ಟೀಗಳಲ್ಲಿ ಬಳಸಬಾರದು. ಏಕೆಂದರೆ ಇದಕ್ಕಿಂತ ಹೆಚ್ಚು ಬಿಸಿ ಇದ್ದರೆ ಜೇನಿನ ಪೂರ್ಣ ಪ್ರಯೋಜನ ಸಾಧ್ಯವಾಗುವುದಿಲ್ಲ.

*ಜೇನು ಹಳೆಯದಾಗುತ್ತಿದ್ದಂತೆ ಹರಳುಗಟ್ಟಗೊಡಗುತ್ತದೆ. ಇದು ಜೇನು ಅಪ್ಪಟ ಎನ್ನುವುದನ್ನು ಸಾಬೀತುಪಡಿಸುತ್ತದೆ. ಲಾಭದ ಆಸೆಯಿಂದ ಬೆಲ್ಲದ ನೀರು ಸೇರಿಸಿದ ಜೇನು ಹರಳುಗಟ್ಟುವುದಿಲ್ಲ.

*ಹೊಟ್ಟೆಯಲ್ಲಿ ಆಮ್ಲೀಯತೆ ಹೆಚ್ಚಾಗಿ ಕರುಳುಹುಣ್ಣು ಆಗಿದ್ದು ಉರಿ ಅನುಭವಿಸುತ್ತಿರುವವರು ಊಟದ ಬಳಿಕ ಜೇನನ್ನು ಸೇವಿಸುವುದರಿಂದ ಉತ್ತಮ ಪರಿಣಾಮ ದೊರಕುತ್ತದೆ.

Amazing Benefits of Honey

*ಜೇನು ಎಂದಿಗೂ ಕೆಡುವುದಿಲ್ಲ

*ಜೇನನ್ನು ತೆರೆದಿಟ್ಟರೆ, ನೀರಿನ ಸಂಪರ್ಕಕ್ಕೆ ಬಂದರೆ ಅಥವಾ ನಲವತ್ತು ಡಿಗ್ರಿಗಳಿಗಿಂತ ಹೆಚ್ಚಿನ ತಾಪಮಾನದಲ್ಲಿಟ್ಟರೆ ಜೇನಿನ ಔಷಧೀಯ ಗುಣಗಳು ಕಡಿಮೆಯಾಗುತ್ತವೆ ಅಥವಾ ಕಾಣೆಯಾಗುತ್ತವೆ.

For Quick Alerts
ALLOW NOTIFICATIONS
For Daily Alerts

    English summary

    Amazing Benefits of Honey

    The benefits of honey go beyond its great taste. A great natural source of carbohydrates which provide strength and energy to our bodies, honey is known for its effectiveness in instantly boosting the performance, endurance and reduce muscle fatigue of athletes
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more