For Quick Alerts
ALLOW NOTIFICATIONS  
For Daily Alerts

ಹಣ್ಣುಗಳ ರಾಜ 'ಮಾವು' ಮಾರುಕಟ್ಟೆಗೆ ಕಾಲಿಡುತ್ತಿದ್ದಾನೆ ದಾರಿ ಬಿಡಿ!

By Lekhaka
|

ಮಾವಿನ ಹಣ್ಣಿನಲ್ಲಿ 10ಕ್ಕೂ ಹೆಚ್ಚಿನ ಆರೋಗ್ಯಕರ ಗುಣಗಳಿವೆ. ಮಾವಿನಹಣ್ಣಿನಲ್ಲಿ ಕೊಬ್ಬಿನಂಶ, ಕೊಲೆಸ್ಟ್ರಾಲ್ ಮತ್ತು ಸೋಡಿಯಂ ತೀರಾ ಕಡಿಮೆ ಪ್ರಮಾಣದಲ್ಲಿದೆ.ಅಲ್ಲದೆ ಇದರಲ್ಲಿ ನಾರಿನಂಶ, ವಿಟಮಿನ್ ಬಿ6, ವಿಟಮಿನ್ ಎ ಮತ್ತು ವಿಟಮಿನ್ ಯಥೇಚ್ಛವಾಗಿ ಹೊಂದಿರುವುದರಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶವನ್ನು ಒದಗಿಸುತ್ತದೆ. ಇದರ ಜೊತೆಗೆ ಮಾವಿನಲ್ಲಿ ರಂಜಕ, ಮ್ಯಾಗ್ನಿಷಿಯಂ ಮತ್ತು ಸತುವಿನಂತ ಖನಿಜಾಂಶಗಳು ಸಹ ಇವೆ.

ಬೀಟಾ ಕೆರೋಟಿನ್ ಅಂಶಕ್ಕೆ ಉತ್ತಮ ಮೂಲವಾಗಿದೆ. ಈ ಎಲ್ಲಾ oxidants ನಮ್ಮ ದೇಹದಲ್ಲಿನ ಫ್ರೀ ರಾಡಿಕಲ್ಸ್ (ಕಲ್ಮಶ) ಹತೋಟಿಯಲ್ಲಿಡುತ್ತವೆ. ಫ್ರೀ ರಾಡಿಕಲ್ಸ್ ನಮ್ಮ ಜೀವಕೋಶಗಳನ್ನು ಹಾನಿ ಮಾಡುವುದರಿಂದ ಹೃದಯಾಘಾತ, ಅವಧಿ ಪೂರ್ವ ವೃದ್ಧಾಪ್ಯ, ಕ್ಯಾನ್ಸರ್ ಮತ್ತು ನಮ್ಮನ್ನು ಕಾಡುವ ಇನ್ನಿತರ ರೋಗಗಳು ಉಂಟಾಗುವುದು. ಹಾಗಾಗಿ ಕಲ್ಮಶಗಳನ್ನು ಹೊರಹಾಕುವ ಆಹಾರಗಳನ್ನು ತಿನ್ನುವುದು ಒಳ್ಳೆಯದು. ಇಂತಹ ಆಹಾರಗಳಲ್ಲೊಂದು ಮಾವಿನ ಹಣ್ಣು. ಇದರ ಪ್ರಯೋಜನದ ಬಗ್ಗೆ ಈ ಕೆಳಗ್ಗೆ ನೀಡಲಾಗಿದೆ ನೋಡಿ

ತೂಕ ಇಳಿಸಲು ನೆರವಾಗುತ್ತದೆ

ತೂಕ ಇಳಿಸಲು ನೆರವಾಗುತ್ತದೆ

ತೂಕ ಇಳಿಸಲು ಇಚ್ಛಿಸುವವರು ಮಾವಿನ ಹಣ್ಣಿಗಿಂತ ಕಾಯಿಯೇ ಉತ್ತಮ. ಏಕೆಂದರೆ ಕಾಯಿಯನ್ನು ಜೀರ್ಣಿಸಿಕೊಳ್ಳಲು ಹೆಚ್ಚಿನ ಕೊಬ್ಬು ಅಗತ್ಯವಿರುವುದರಿಂದ ಶರೀರದಲ್ಲಿ ಸಂಗ್ರಹವಾಗಿದ್ದ ಕೊಬ್ಬು ಕರಗುತ್ತದೆ. ಅದೇ ಹಣ್ಣನ್ನು ಸೇವಿಸುವುದರಿಂದ ಕೊಬ್ಬು ಹೆಚ್ಚಾಗುತ್ತದೆ.

ಹುಳಿತೇಗು, ಗಂಟಲಲ್ಲಿ ಉರಿಯನ್ನು ಕಡಿಮೆಗೊಳಿಸುತ್ತದೆ

ಹುಳಿತೇಗು, ಗಂಟಲಲ್ಲಿ ಉರಿಯನ್ನು ಕಡಿಮೆಗೊಳಿಸುತ್ತದೆ

ಒಂದು ವೇಳೆ ಆಹಾರದಲ್ಲಿ ಏರುಪೇರಿನ ಮೂಲಕ ಹೊಟ್ಟೆಯಲ್ಲಿ ಉರಿ ಮತ್ತು ಹುಳಿತೇಗು ಮೊದಲಾದ ತೊಂದರೆಗಳು ಎದುರಾದರೆ ಹಸಿಮಾವಿನ ತುಂಡುಗಳನ್ನು ತಿನ್ನುವುದರಿಂದ ಕಡಿಮೆಯಾಗುತ್ತದೆ. ಆದರೆ ತಿನ್ನುವ ಮಾವಿನ ಕಾಯಿಯ ಪ್ರಮಾಣ ಕಡಿಮೆ ಇರಬೇಕಾದುದು ಅವಶ್ಯ.

ಗರ್ಭಿಣಿಯರಿಗೆ ಬೆಳಗ್ಗಿನ ವಾಕರಿಕೆಯನ್ನು ಕಡಿಮೆಗೊಳಿಸುತ್ತದೆ

ಗರ್ಭಿಣಿಯರಿಗೆ ಬೆಳಗ್ಗಿನ ವಾಕರಿಕೆಯನ್ನು ಕಡಿಮೆಗೊಳಿಸುತ್ತದೆ

ಗರ್ಭಿಣಿಯರಿಗೆ ಹುಳಿ ತಿನ್ನುವ ಬಯಕೆ ಹೆಚ್ಚಾಗುವುದರಿಂದ ಉಪ್ಪಿನಕಾಯಿ, ಲಿಂಬೆ, ಹುಣಸೆ ಮೊದಲಾದವುಗಳನ್ನು ಹೆಚ್ಚು ಸೇವಿಸುತ್ತಾರೆ. ಪರಿಣಾಮವಾಗಿ ಬೆಳಿಗ್ಗೆ ಎದ್ದಾಗ ಹೊಟ್ಟೆಭಾರವಾಗಿದ್ದು ವಾಕರಿಕೆ ಬಂದಂತಾಗುತ್ತದೆ. morning sickness ಎಂದು ಕರೆಯಲ್ಪಡುವ ಈ ವಾಕರಿಕೆಯಿಂದ ಬಿಡುಗಡೆ ಪಡೆಯಲು ಮಾವಿನಕಾಯಿ ಉತ್ತಮ ಪರಿಹಾರವಾಗಿದೆ.

 ದಿನಕ್ಕೆ ಅಗತ್ಯವಾದ ಶಕ್ತಿಯನ್ನು ನೀಡುತ್ತದೆ

ದಿನಕ್ಕೆ ಅಗತ್ಯವಾದ ಶಕ್ತಿಯನ್ನು ನೀಡುತ್ತದೆ

ದಿನದ ಚಟುವಟಿಕೆಯ ಬಳಿಕ ಮದ್ಯಾಹ್ನದ ಊಟದ ನಂತರ ಜೋಮು ಹತ್ತುವುದು ಸಾಮಾನ್ಯ. ದೇಹದಿಂದ ಶಕ್ತಿಯೂ ಉಡುಗಿದಂತೆ ಭಾಸವಾಗುತ್ತದೆ. ಊಟದ ಬಳಿಕ ಕೆಲವು ತುಂಡು ಮಾವಿನ ಕಾಯಿಗಳನ್ನು ತಿನ್ನುವುದರಿಂದ ದೇಹ ಮೊದಲಿನ ಚಟುವಟಿಕೆಯಿಂದ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ.

ಯಕೃತ್ತಿಗೂ ಒಳ್ಳೆಯದು

ಯಕೃತ್ತಿಗೂ ಒಳ್ಳೆಯದು

ಯಕೃತ್ತಿನ ತೊಂದರೆಗಳಿಗೆ ಮಾವಿನ ಕಾಯಿ ಉತ್ತಮವಾದ ಔಷದಿರೂಪದ ಆಹಾರವಾಗಿದೆ. ಹಸಿಮಾವಿನ ಕಾಯಿಯನ್ನು ಜಗಿದು ನುಂಗುವುದರಿಂದ ಪಿತ್ತಕೋಶ ಹೆಚ್ಚಿನ ಪಿತ್ತರಸವನ್ನು ಸ್ರವಿಸಲು ನೆರವಾಗುತ್ತದೆ. ಈ ರಸವು ಕರುಳಿನಲ್ಲಿ ಸೋಂಕು ಉಂಟುಮಾಡುವ ಬ್ಯಾಕ್ಟೀರಿಯಾಗಳಿಂದ ರಕ್ಷಿಸುತ್ತದೆ.

ಬೆವರುಸಾಲೆಯಿಂದ ರಕ್ಷಿಸುತ್ತದೆ

ಬೆವರುಸಾಲೆಯಿಂದ ರಕ್ಷಿಸುತ್ತದೆ

ಬೇಸಿಗೆಯ ಪರ್ಯಾಯ ಪರಿಣಾಮಗಳಾದ ಬೆವರುಸಾಲೆ ಮತ್ತು ಬೆವರುನಾತದಿಂದ ಮುಕ್ತಿ ಪಡೆಯಲು ಮಾವಿನಕಾಯಿಯ ಸೇವನೆ ಉತ್ತಮವಾಗಿದೆ.ಮಾವಿನ ಕಾಯಿಯಲ್ಲಿ ಬಿಸಿಲಿನ ಝಳವನ್ನು ಚರ್ಮವು ಸಹಿಸಲು ಸಾಧ್ಯವಾಗಿಸಲು ಹಲವು ಪೋಷಕಾಂಶಗಳಿವೆ.

 ರಕ್ತದ ಉತ್ಪಾದನೆ ಮತ್ತು ನರಗಳನ್ನು ದೃಢಗೊಳಿಸಲು ಉತ್ತಮವಾಗಿದೆ

ರಕ್ತದ ಉತ್ಪಾದನೆ ಮತ್ತು ನರಗಳನ್ನು ದೃಢಗೊಳಿಸಲು ಉತ್ತಮವಾಗಿದೆ

ಮಾವಿನ ಕಾಯಿಯಲ್ಲಿರುವ ವಿಟಮಿನ್ ಸಿ. ಕಾರಣದಿಂದ ಅಸ್ಥಿಮಜ್ಜೆಯಲ್ಲಿ ಹೊಸ ರಕ್ತ ಉತ್ಪತ್ತಿಯಾಗಲು ಸಹಕರಿಸುತ್ತದೆ. ಜೊತೆಗೇ ನರಗಳ ಒಳಭಾಗದ ಜೀವಕೋಶಗಳು ಹೆಚ್ಚು ಬಲಗೊಳ್ಳಲು ಅಗತ್ಯವಾದ ಪೋಷಕಾಂಶಗಳನ್ನು ನೀಡುವುದರಿಂದ ರಕ್ತಸಂಚಾರ ಸುಗಮಗೊಳ್ಳುತ್ತದೆ.

ಮಲಬದ್ಧತೆಯನ್ನು ನಿವಾರಿಸುತ್ತದೆ

ಮಲಬದ್ಧತೆಯನ್ನು ನಿವಾರಿಸುತ್ತದೆ

ನಾರು ಕಡಿಮೆ ಇರುವ ಆಹಾರಗಳನ್ನು ಸೇವಿಸುವುದರಿಂದ ಮಲಬದ್ಧತೆ ಉಂಟಾಗುತ್ತದೆ. ಒಂದು ವೇಳೆ ಮಲವಿಸರ್ಜನೆ ಸಮಯಕ್ಕೆ ಸರಿಯಾಗಿ ಆಗದೇ ಇದ್ದರೆ ಮತ್ತು ಕಷ್ಟಕರವಾಗಿದ್ದರೆ ಹಸಿಮಾವಿನ ಕೆಲವು ತುಂಡುಗಳನ್ನು ಸೇವಿಸುವುದರಿಂದ ಶೀಘ್ರ ಪರಿಹಾರ ದೊರಕುತ್ತದೆ. ಕೆಲವು ಮಾವಿನ ಕಾಯಿಯ ತುಂಡುಗಳಿಗೆ ಉಪ್ಪು ಚಿಮುಕಿಸಿ ಕೊಂಚ ಜೇನು ಸವರಿ ತಿನ್ನುವುದರಿಂದ ಉಪಶಮನ ದೊರಕುತ್ತದೆ.

ಅತಿ ಹೆಚ್ಚಾಗಿ ಬೆವರುವುದನ್ನು ತಡೆಯುತ್ತದೆ

ಅತಿ ಹೆಚ್ಚಾಗಿ ಬೆವರುವುದನ್ನು ತಡೆಯುತ್ತದೆ

ಬೇಸಿಗೆಯಲ್ಲಿ ಬೆವರುವುದು ದೇಹದ ತಾಪಮಾನವನ್ನು ಉಳಿಸಿಕೊಳ್ಳಲು ಅಗತ್ಯವಾಗಿದೆ. ಆದರೆ ಇತರ ಕಾರಣಗಳಿಂದ ಅಗತ್ಯಕ್ಕಿಂತಲೂ ಹೆಚ್ಚು ಪ್ರಮಾಣದ ಬೆವರು ಸುರಿಯುತ್ತಿದ್ದರೆ ಆ ಬೆವರಿನ ಮೂಲಕ ಉಪ್ಪು ಮತ್ತು ಕಬ್ಬಿಣಗಳೂ ಸೋರಿ ಹೋಗುತ್ತವೆ. ಮಾವಿನಕಾಯಿ ಈ ಕೊರತೆಯನ್ನು ಸರಿದೂಗಿಸುತ್ತದೆ. ದೇಹದ ತಾಪಮಾನವನ್ನು ಸಮದೂಗಿಸಿಕೊಳ್ಳಲು ಅಗತ್ಯವಿರುವಷ್ಟೇ ಬೆವರು ಹರಿಯಲು ಮಾವಿನ ಪೋಷಕಾಂಶಗಳು ನೆರವಾಗುತ್ತವೆ.

ಮಧುಮೇಹಿಗಳಿಗೆ ಸೂಕ್ತ

ಮಧುಮೇಹಿಗಳಿಗೆ ಸೂಕ್ತ

ಸಂಶೋಧನೆಗಳ ಪ್ರಕಾರ ಮಾವಿನಹಣ್ಣು ಪ್ರಾಕೃತಿಕವಾಗಿ ಮಧುಮೇಹದ ಮೇಲೆ ಹೋರಾಡುವ ಗುಣಗಳನ್ನು ಹೊಂದಿದೆ ಎಂದು ಧೃಢಪಟ್ಟಿದೆ. ಮಧುಮೇಹಿಗಳು ಮಾವಿನ ಹಣ್ಣನ್ನು ತಿನ್ನಬಾರದು ಎಂದು ಹೇಳುವುದು ಕೇವಲ ಒಂದು ಮೂಢನಂಬಿಕೆ. ಮಧುಮೇಹಿಗಳು ಇದರ ಸಿಹಿಗೆ ಭಯಪಡುತ್ತಾರೆ. ಆದರೆ ಸಂಶೋಧನೆಗಳು ಇದರಲ್ಲಿರುವ ಅಂಶಗಳು ಮಧುಮೇಹವನ್ನು ತಡೆಯಲು ಸಹಕರಿಸುತ್ತವೆ ಎಂದು ತಿಳಿಸಿದೆ.

ದೇಹದಿಂದ ಖನಿಜಗಳು ವ್ಯರ್ಥವಾಗುವುದನ್ನು ತಡೆಗಟ್ಟುತ್ತದೆ

ದೇಹದಿಂದ ಖನಿಜಗಳು ವ್ಯರ್ಥವಾಗುವುದನ್ನು ತಡೆಗಟ್ಟುತ್ತದೆ

ದೇಹಕ್ಕೆ ಸೊಪ್ಪು ಮತ್ತು ಮಾಂಸಾಹಾರದ ಮೂಲಕ ಲಭ್ಯವಾದ ಕಬ್ಬಿಣ ಮತ್ತು ಇತರ ಖನಿಜಗಳು ಮತ್ತು ಉಪ್ಪು ಸುಲಭವಾಗಿ ಬೆವರಿನ ಮೂಲಕ ನೀರಿನಲ್ಲಿ ಸೋರಿ ಹೋಗುತ್ತದೆ. ಮಾವಿನ ಕಾಯಿಯಲ್ಲಿರುವ ಪೋಷಕಾಂಶಗಳು ಸೋರಿ ಹೋಗುತ್ತಿರುವ ಈ ಖನಿಜದ ಕಣಗಳನ್ನು ಆಯಸ್ಕಾಂತದಂತೆ ಸೆಳೆದು ಉಳಿಸಿಕೊಳ್ಳುವುದರಿಂದ ಆರೋಗ್ಯಕ್ಕೆ ಉತ್ತಮವಾಗಿದೆ.

ಒಸಡುಗಳನ್ನು ಗಟ್ಟಿಗೊಳಿಸುತ್ತದೆ

ಒಸಡುಗಳನ್ನು ಗಟ್ಟಿಗೊಳಿಸುತ್ತದೆ

ಹಲ್ಲು ಮತ್ತು ಒಸಡುಗಳ ನಡುವಣ ಸಂದುಗಳಲ್ಲಿ ಆಹಾರ ಸಂಗ್ರಹವಾಗಿ ಕಾಲಕಾಲಕ್ಕೆ ಹಲ್ಲುಜ್ಜದೇ ಇದ್ದರೆ ಸೋಂಕು ಉಂಟಾಗಿ ಒಸಡುಗಳು ಸಡಿಲಗೊಳ್ಳುತ್ತವೆ. ಹಸಿಮಾವಿನ ಕಾಯಿಯನ್ನು ತಿನ್ನುವುದರಿಂದ ಒಸಡುಗಳಿಗೆ ಅಗತ್ಯವಾದ ಪೋಷಕಾಂಶಗಳು ಲಭ್ಯವಾಗಿ ಸಂದುಗಳನ್ನು ಕಿರಿದುಗೊಳಿಸುತ್ತದೆ. ಪರಿಣಾಮವಾಗಿ ಆಹಾರ ಸಂಗ್ರಹವಾಗುವ ಪ್ರಮಾಣವೂ ಕಡಿಮೆಯಾಗಿ ಹಲ್ಲು ಮತ್ತು ಒಸಡುಗಳ ಆರೋಗ್ಯ ಉತ್ತಮಗೊಳ್ಳುತ್ತದೆ. ದುರ್ವಾಸನೆಯೂ ಕಡಿಮೆಯಾಗುತ್ತದೆ.

ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಚಿರಯೌವನಕ್ಕೆ ನಮ್ಮ ಜೀವರಕ್ಷಣಾ ವ್ಯವಸ್ಥೆ ಅಗತ್ಯವಾಗಿದೆ. ಮಾವಿನ ಕಾಯಿಯಲ್ಲಿರುವ ಪೋಷಕಾಂಶಗಳು ಈ ಶಕ್ತಿಯನ್ನು ಹೆಚ್ಚಿಸಲು ಸಹಕರಿಸುವುದರಿಂದ ಆರೋಗ್ಯ ಉತ್ತಮಗೊಳ್ಳುತ್ತದೆ.

ಕಣ್ಣಿನ ಆರೋಗ್ಯಕ್ಕೆ ಅನುಕೂಲಕರ

ಕಣ್ಣಿನ ಆರೋಗ್ಯಕ್ಕೆ ಅನುಕೂಲಕರ

ಮಾವಿನ ಹಣ್ಣಿನ ಒಂದು ತುಂಡಿನಲ್ಲಿ ನಮ್ಮ ದೇಹಕ್ಕೆ ಒಂದು ದಿನಕ್ಕೆ ಅತ್ಯಗತ್ಯವಾಗಿರುವ ವಿಟಮಿನ್ ಎ ಇರುತ್ತದೆ. ಇದು ನಮ್ಮ ಕಣ್ಣಿನ ಆರೋಗ್ಯವನ್ನು ಹೆಚ್ಚಿಸುತ್ತದೆ. ದೃಷ್ಟಿ ದೋಷ ಮತ್ತು ಇರುಳು ಕುರುಡನ್ನು ಹಾಗು ಕಣ್ಣು ಡ್ರೈಯಾಗುವ ಸಮಸ್ಯೆಯನ್ನು ನಿವಾರಿಸುತ್ತದೆ.

ಬಿಸಿಲಿನ ಹೊಡೆತಕ್ಕೆ ಪರಿಹಾರ

ಬಿಸಿಲಿನ ಹೊಡೆತಕ್ಕೆ ಪರಿಹಾರ

ಮಾವಿನ ಹಣ್ಣಿನ ರಸವನ್ನು ಕುಡಿಯುವುದರಿಂದ ದೇಹ ತಂಪಾಗುತ್ತದೆ. ಆಯುರ್ವೇದದ ಪ್ರಕಾರ ಸಹ ಸೂರ್ಯನ ಬಿಸಿಲಿನ ಹೊಡೆತವನ್ನು ತಡೆಯಲು ನೀವು ಮಾವಿನ ಹಣ್ಣನ್ನು ಸೇವಿಸಬಹುದು. ಮಾವು ಮೂತ್ರಪಿಂಡಗಳಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ.

ಅಕಾಲಿಕ ನೆರಿಗೆ ಬೀಳದಂತೆ ತಡೆಯುತ್ತದೆ

ಅಕಾಲಿಕ ನೆರಿಗೆ ಬೀಳದಂತೆ ತಡೆಯುತ್ತದೆ

ಮಾವಿನ ಹಣ್ಣಿನಲ್ಲಿ ವಿಟಮಿನ್ ಎ ಮತ್ತು ವಿಟಮಿನ್ ಸಿ ಗಳು ಅತ್ಯಧಿಕ ಪ್ರಮಾಣದಲ್ಲಿರುತ್ತದೆ. ಇವು ದೇಹದಲ್ಲಿ ಕೊಲೆಜಿನ್ ಪ್ರೋಟೀನ್‍ಗಳನ್ನು ಉತ್ಪಾದಿಸುತ್ತವೆ. ಕೊಲೆಜಿನ್‍ಗಳು ರಕ್ತನಾಳಗಳನ್ನು ರಕ್ಷಿಸುತ್ತವೆ. ಇವು ಇದಕ್ಕೆ ಸಂಬಂಧಿಸಿದ ಕೋಶಗಳನ್ನು ರಕ್ಷಿಸಿ ಚರ್ಮವು ಸುಕ್ಕಾಗದಂತೆ ತಡೆಯುತ್ತವೆ.

ಮೊಡವೆಗಳನ್ನು ನಿವಾರಿಸುತ್ತದೆ

ಮೊಡವೆಗಳನ್ನು ನಿವಾರಿಸುತ್ತದೆ

ಮಾವಿನ ಹಣ್ಣಿನ ತಿರುಳನ್ನು ಮುಖದ ಮೇಲೆ ಉಜ್ಜಿ ಅಥವಾ ಇಡಿ. ನಂತರ 10 ನಿಮಿಷಗಳ ನಂತರ ಮುಖ ತೊಳೆಯಿರಿ. ಇದರಿಂದ ಮೊಡವೆಗಳು ನಿಯಂತ್ರಣಕ್ಕೆ ಬರುತ್ತವೆ. ಮಾವಿನ ಹಣ್ಣನ್ನು ತಿನ್ನುವುದರಿಂದ ಸಹ ಮೊಡವೆಗಳನ್ನು ನಿಯಂತ್ರಿಸಬಹುದು.

ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ

ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ

ಮಾವು ಅತಿ ಹೆಚ್ಚು ವಿಟಮಿನ್‍ಗಳನ್ನು ಹೊಂದಿದೆ. ಹಾಗಾಗಿ ಇದು ಆರೋಗ್ಯಕ್ಕೆ ಉತ್ತಮವೆಂದು ಬೇರೆ ಹೇಳಬೇಕಿಲ್ಲ. ಅಲ್ಲದೆ ಮಾವಿನಲ್ಲಿ ರಂಜಕ (4% ಪ್ರತಿ 156 ಮಿ.ಗ್ರಾಂ) ಮತ್ತು ಮ್ಯಾಗ್ನಿಷಿಯಂ (2% ಪ್ರತಿ 9 ಮಿ.ಗ್ರಾಂ) ಇರುತ್ತದೆ. ಹೀಗಾಗಿ ಮಾವಿನಹಣ್ಣು ರಕ್ತದೊತ್ತಡವನ್ನು ನಿವಾರಿಸಲು ಇರುವ ಪ್ರಕೃತಿ ದತ್ತ ಪರಿಹಾರವಾಗಿದೆ.

 ಮೆದುಳಿನ ಆರೋಗ್ಯವನ್ನು ಹೆಚ್ಚಿಸುತ್ತದೆ

ಮೆದುಳಿನ ಆರೋಗ್ಯವನ್ನು ಹೆಚ್ಚಿಸುತ್ತದೆ

ಮಾವಿನಹಣ್ಣಿನಲ್ಲಿ ವಿಟಮಿನ್ ಬಿ-6 ಅಧಿಕ ಪ್ರಮಾಣದಲ್ಲಿರುತ್ತದೆ. ಇದು ಮೆದುಳಿನ ಕಾರ್ಯಕ್ಷಮತೆಯನ್ನು ಅಧಿಕಗೊಳಿಸುತ್ತದೆ.

English summary

14 Health Benefits Of Green/ Raw Mango

Raw mango is one of the healthiest fruits you can try out in the beginning of summer. At every nook and corner you will see a cart loaded with raw mangoes and it is indeed a bliss to see people indulging in this lovely sour treat.
X
Desktop Bottom Promotion