For Quick Alerts
ALLOW NOTIFICATIONS  
For Daily Alerts

ಬಿರುಬೇಸಿಗೆಯ ಧಗೆಯನ್ನು ತಂಪಾಗಿಸುವ ಶುಂಠಿ ಜ್ಯೂಸ್!

By Super
|

ಆಯುರ್ವೇದದ ಹಲವು ಔಷಧಿಗಳಿಗೆ ಮೂಲವಾಗಿರುವ, ಭಾರತೀಯ ಕಷಾಯ ಮತ್ತು ಪಾನೀಯಗಳು ಸಾವಿರಾರು ವರ್ಷಗಳಿಂದಲೂ ಬಳಕೆಯಲ್ಲಿದೆ. ಒಂದು ಮಾಹಿತಿಯ ಪ್ರಕಾರ ಸುಮಾರು ಐದು ಸಾವಿರ ವರ್ಷಕ್ಕಿಂತ ಹಿಂದಿನ ಕಾಲದಿಂದಲೂ ಈ ಶುಂಠಿ ಭಾರತದ ಮನೆಮನೆಯಲ್ಲಿ ಅಡುಗೆಗೆ ಮತ್ತು ಔಷಧಿಗಾಗಿ ಉಪಯೋಗಿಸಲ್ಪಡುತ್ತಾ ಬಂದಿದೆ. ಆಹಾ! ಬಿಸಿ ಬಿಸಿ ಶುಂಠಿ ಚಹಾದ ಅತ್ಯುನ್ನತ ಪ್ರಯೋಜನಗಳೇನು?

ಇದರಲ್ಲಿರುವ ವಿವಿಧ ವಿಟಮಿನ್‌ಗಳು, ಮ್ಯಾಂಗನೀಸ್ ಮತ್ತು ತಾಮ್ರದಂತಹ ಖನಿಜಗಳು ದೇಹದ ಕಾರ್ಯಕ್ಷಮತೆಗೆ ಅತಿ ಅಗತ್ಯವಾಗಿವೆ. ಶುಂಠಿಯನ್ನು ಅರೆದು, ರಸ ತೆಗೆದು, ಮಸಾಲೆಯಲ್ಲಿ ಮಿಶ್ರಣ ಮಾಡಿ, ನೀರಿನಲ್ಲಿ ಕುದಿಸಿ ಮೊದಲಾದ ವಿವಿಧ ರೀತಿಯಲ್ಲಿ ಬಳಸಬಹುದು. ಈ ಲೇಖನದಲ್ಲಿ ಶುಂಠಿಯ ರಸವನ್ನು ತೆಗೆದು ಸೇವಿಸುವುದರ ಮಹತ್ವವನ್ನು ನೀಡಲಾಗಿದೆ.

ಶುಂಠಿ ರಸದ ಜ್ಯೂಸ್ ತಯಾರಿಸುವುದು ಹೇಗೆ?

ಶುಂಠಿ ರಸದ ಜ್ಯೂಸ್ ತಯಾರಿಸುವುದು ಹೇಗೆ?

ಶುಂಠಿಯ ಆರೋಗ್ಯವಂತ ಭಾಗದ ಸಿಪ್ಪೆ ಸುಲಿದು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿ. ಈ ತುಂಡುಗಳನ್ನು ಮಿಕ್ಸಿಯಲ್ಲಿ ಹಾಕಿ ತುಂಡುಗಳು ಅರ್ಧ ಮುಳುಗುವಷ್ಟು ನೀರು ಹಾಕಿ ಸುಮಾರು ಒಂದರಿಂದ ಎರಡು ನಿಮಿಷ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈ ನೀರನ್ನು ಚಹಾ ಸಾಣಿಸುವ ಜರಡಿಯಲ್ಲಿ ಸೋಸಿ ನಾರನ್ನು ಹೊರತೆಗೆಯಿರಿ. ಈ ನೀರಿಗೆ ನಿಮಗೆ ಇಷ್ಟವಾದ ಸ್ವಾದವನ್ನು ಸೇರಿಸಿ. ಉಪ್ಪು, ಮೆಣಸಿನ ಪುಡಿ ಲಿಂಬೆ ಸೇರಿಸಿ ಖಾರವಾದ ಜ್ಯೂಸ್ ಮಾಡಬಹುದು. ಅಥವಾ ಬೆಲ್ಲ ಅಥವಾ ಸಕ್ಕರೆ ಸೇರಿಸಿ ಸಿಹಿಯಾದ ಜ್ಯೂಸ್ ಸಹಾ ಮಾಡಬಹುದು. ಅಗತ್ಯಕ್ಕೆ ತಕ್ಕಷ್ಟು ನೀರು ಸೇರಿಸಿ ತಣ್ಣಗಿರುವಂತೆಯೇ

ಕ್ಯಾನ್ಸರ್ ಬರದಂತೆ ತಡೆಯುತ್ತದೆ

ಕ್ಯಾನ್ಸರ್ ಬರದಂತೆ ತಡೆಯುತ್ತದೆ

ಶುಂಠಿರಸದ ಸೇವನೆಯಿಂದ ದೇಹದಲ್ಲಿ ಕ್ಯಾನ್ಸರ್ ಕಾರಕಕಣಗಳ ವಿರುದ್ದ ಸೆಣೆಸಲು ದೇಹ ನಿರೋಧಕ ಶಕ್ತಿಗೆ ಹೆಚ್ಚಿನ ಬಲ ದೊರಕುತ್ತದೆ. ಸಂಶೋಧನೆಯಲ್ಲಿ ಕಂಡುಕೊಂಡಿರುವ ಪ್ರಕಾರ ವಿಶೇಷವಾಗಿ ಸ್ತನ ಕ್ಯಾನ್ಸರ್ ಗೆ ಕಾರಣವಾಗುವ ಕಣಗಳ ವಿರುದ್ದ ಹೋರಾಡುವ ಶಕ್ತಿಯನ್ನು ಶುಂಠಿ ಹೊಂದಿದೆ.

ರಕ್ತದೊತ್ತಡವನ್ನು ಕಡಿಮೆಗೊಳಿಸುತ್ತದೆ

ರಕ್ತದೊತ್ತಡವನ್ನು ಕಡಿಮೆಗೊಳಿಸುತ್ತದೆ

ಶುಂಠಿರಸದ ಸೇವನೆಯಿಂದ ರಕ್ತ ಅಗತ್ಯಕ್ಕಿಂತ ಹೆಚ್ಚು ಗಾಢವಾಗಿದ್ದರೆ (ಅಂದರೆ ರಕ್ತದಲ್ಲಿರುವ ನೀರಿನ ಅಂಶವಾದ ಪ್ಲಾಸ್ಮಾ ಕಡಿಮೆಯಾಗಿದ್ದರೆ) ಆ ತೊಂದರೆ ನಿವಾರಣೆಯಾಗುತ್ತದೆ. ಪ್ಲಾಸ್ಮಾ ಕೊರತೆಯಿಂದ ರಕ್ತಸಂಚಾರಕ್ಕೆ ಹೆಚ್ಚಿನ ಒತ್ತಡ ಬೇಕಾಗಿದ್ದುದು ಈಗ ಕಡಿಮೆ ಒತ್ತಡ ಸಾಕಾಗುತ್ತದೆ. ಪ್ರತಿದಿನ ಒಂದು ಲೋಟ ಶುಂಠಿರಸಕ್ಕೆ ಕೆಲವು ಹನಿ ಜೇನನ್ನು ಸೇರಿಸಿ ಕುಡಿಯುವುದರಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ.

ವಿವಿಧ ನೋವುಗಳನ್ನು ಕಡಿಮೆಗೊಳಿಸುತ್ತದೆ

ವಿವಿಧ ನೋವುಗಳನ್ನು ಕಡಿಮೆಗೊಳಿಸುತ್ತದೆ

ತಲೆನೋವಿನ ಅತ್ಯುಗ್ರ ರೂಪವಾದ ಮೈಗ್ರೇನ್ ತಲೆನೋವಿಗೆ ಶುಂಠಿ ಉತ್ತಮ ಪರಿಹಾರವಾಗಿದೆ. ತಲೆನೋವು ಪ್ರಾರಂಭವಾಗುತ್ತಲೇ ಶುಂಠಿರಸವನ್ನು ಹಣೆಗೆ ಹಚ್ಚುವುದರಿಂದ ತಲೆನೋವು ಹತೋಟಿಗೆ ಬರುತ್ತದೆ. ಶುಂಠಿಯಲ್ಲಿರುವ ಉರಿಶಾಮಕ ಗುಣ ವಿವಿಧ ನೋವುಗಳನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಅಲ್ಲದೇ ಉರಿತರಿಸುವ ಕಣಗಳಿಂದ ನರಗಳ ಒಳಗಿನಿಂದ ಉರಿಯಾಗುವುದನ್ನು ತಡೆಯುತ್ತದೆ. ಪರಿಣಾಮವಾಗಿ ನರಗಳ ಮೂಲಕ ರಕ್ತ ಸರಾಗವಾಗಿ ನೋವಿರುವ ಕಡೆಗೆ ಹರಿದು ನೋವು ಮತ್ತು ಉರಿಯನ್ನು ಕಡಿಮೆಗೊಳಿಸಲು ನೆರವಾಗುತ್ತದೆ.

ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ

ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ

ಶುಂಠಿರಸದ ಸೇವನೆ ಜೀರ್ಣಕ್ರಿಯೆಗೆ ಉತ್ತಮವಾಗಿದೆ. ಜಠರದಲ್ಲಿ ಆಹಾರ ಕರಗುವ ಕ್ರಿಯೆಯನ್ನು ಉದ್ರೇಕಿಸಿ ಕರಗಿದ ಆಹಾರ ಶೀಘ್ರದಲ್ಲಿ ಚಿಕ್ಕಕರುಳಿಗೆ ರವಾನೆಯಾಗಲು ನೆರವಾಗುತ್ತದೆ. ಇದರಿಂದಾಗಿ ಹೊಟ್ಟೆಯಲ್ಲಿ ಹೆಚ್ಚು ಹೊತ್ತು ಆಹಾರ ಉಳಿದುಕೊಳ್ಳುವ ಕಾರಣದಿಂದಾಗಿ ಉದ್ಭ್ಹವವಾಗುವ ಹೊಟ್ಟೆಯುರಿ, ಹುಳಿತೇಗು, ಎದೆಯುರಿ, ಹೊಟ್ಟೆಯುಬ್ಬರ, ಮೊದಲಾದ ತೊಂದರೆಗಳು ನಿವಾರಣೆಯಾಗುತ್ತವೆ.

ಸಂಧಿವಾತ (Arthritis) ನಿಂದ ರಕ್ಷಿಸುತ್ತದೆ

ಸಂಧಿವಾತ (Arthritis) ನಿಂದ ರಕ್ಷಿಸುತ್ತದೆ

ಶುಂಠಿರಸದ ಉರಿಯೂತ ನಿವಾರಕ ಗುಣದಿಂದಾಗಿ ಮೂಳೆಗಳ ಸಂದುಗಳಲ್ಲಿ ಮತ್ತು ಥೈರಾಯ್ಡ್ ಗ್ರಂಥಿಯ ಸ್ರವಿಕೆಯ ಕೊರತೆಯಿಂದ ಬಳಲುತ್ತಿರುವ ರೋಗಿಗಳು ಶೀಘ್ರ ಗುಣಮುಖರಾಗುವರು.

ಕೆಟ್ಟ ಕೊಲೆಸ್ಟ್ರಾಲ್ ತೊಲಗಿಸುತ್ತದೆ

ಕೆಟ್ಟ ಕೊಲೆಸ್ಟ್ರಾಲ್ ತೊಲಗಿಸುತ್ತದೆ

ಶುಂಠಿರಸ ಜೀರ್ಣಗೊಂಡು ರಕ್ತಕ್ಕೆ ರವಾನೆಯಾದ ಬಳಿಕ ರಕ್ತನಾಳಗಳ ಒಳಗೆ ಕವಲು ಮತ್ತು ಬಿರುಕುಗಳಿರುವಲ್ಲಿ ಸಂಗ್ರಹವಾಗಿದ್ದ ಕೆಟ್ಟ ಕೊಲೆಸ್ಟ್ರಾಲ್ ಜಿಡ್ಡನ್ನು ಸಡಿಲಗೊಳಿಸಿ ನಿವಾರಿಸಲು ನೆರವಾಗುತ್ತದೆ. ತನ್ಮೂಲಕ ಮುಂದಿನ ದಿನಗಳಲ್ಲಿ ಹೃದಯಕ್ಕೆ ಹೆಚ್ಚಿನ ಒತ್ತಡ ನೀಡಬೇಕಾಗಿ ಬರುವುದಿದ್ದುದನ್ನು ತಡೆಯುತ್ತದೆ. ಹೃದಯಾಘಾತದ ಸಂಭವತೆಯನ್ನು ಕಡಿಮೆಗೊಳಿಸುತ್ತದೆ.

ಶೀತಕ್ಕೆ ರಾಮಬಾಣವಾಗಿದೆ

ಶೀತಕ್ಕೆ ರಾಮಬಾಣವಾಗಿದೆ

ಮಳೆಯಲ್ಲಿ ನೆಂದು ಶೀತ ನೆಗಡಿ ಹತ್ತಿಸಿಕೊಂಡಿದ್ದವರಿಗೆ ಅಜ್ಜಿ ಮಾಡಿಕೊಡುತ್ತಿದ್ದ ಕಷಾಯವೆಂದರೆ ಶುಂಠಿ, ಕರಿಮೆಣಸು, ಜೀರಿಗೆ ಬೆರೆಸಿದ ಖಾರವಾದ ನೀರು. ಶುಂಠಿರಸದ ಸೇವನೆಯಿಂದ ಶೀತ, ನೆಗಡಿ, ಮೊದಲಾದ ತೊಂದರೆಗಳು ಶೀಘ್ರವೇ ನಿವಾರಣೆಯಾಗುತ್ತದೆ. ಶುಂಠಿರಸದಲ್ಲಿರುವ ವೈರಸ ವಿರೋಧಿ ಗುಣ ಶೀತಕ್ಕೆ ಕಾರಣವಾಗುವ ವಿವಿಧ ವೈರಸ್ ಗಳನ್ನು ನಿವಾರಿಸುವಲ್ಲಿ ನೆರವಾಗುತ್ತದೆ. ಜೊತೆಗೇ ದೇಹದ ರೋಗ ನಿರೋಧಕ ಶಕ್ತಿಯನ್ನು ಆ ವೈರಸ್ಸಿಗೆ ಹೋರಾಡಲು ಸಜ್ಜುಗೊಳಿಸಿ ಮುಂದೆಂದೂ ದೇಹ ಆ ವೈರಸ್ಸಿಗೆ ತುತ್ತಾಗದಂತೆ ನೋಡಿಕೊಳ್ಳುತ್ತದೆ. ಇದೇ ಕಾರಣದಿಂದ ನಮಗೆ ಪ್ರತಿಬಾರಿಯೂ ಹೊಸ ಹೊಸ ವೈರಸ್ಸಿನ ಕಾರಣವೇ ಶೀತ ಉಂಟಾಗುತ್ತದೆ.

ಕೂದಲಿಗೆ ಪೋಷಣೆ ನೀಡುತ್ತದೆ

ಕೂದಲಿಗೆ ಪೋಷಣೆ ನೀಡುತ್ತದೆ

ಶುಂಠಿರಸದ ನಿತ್ಯ ಸೇವನೆಯಿಂದ ತಲೆಗೂದಲು ದಟ್ಟವಾಗುತ್ತದೆ. ಉತ್ತಮ ಪರಿಣಾಮ ಪಡೆಯಲು ಶುಂಠಿರಸವನ್ನು ಸುಮಾರು ಒಂದಕ್ಕೆ ಮೂರು ಪ್ರಮಾಣದಷ್ಟು ನೀರನ್ನು ಸೇರಿಸಿ ತಲೆಗೆ ಹಚ್ಚಿಕೊಳ್ಳಬಹುದು. ತಲೆಯ ಚರ್ಮಕ್ಕೆ ಉರಿ ಅನಿಸಿದರೆ ನೀರಿನ ಪ್ರಮಾಣವನ್ನು ಸ್ವಲ್ಪ ಹೆಚ್ಚಿಸಬಹುದು. ಶುಂಠಿ ಉತ್ತಮ ಕಂಡೀಶನರ್ ನಂತೆ ಕಾರ್ಯನಿರ್ವಹಿಸುವುದರಿಂದ ತಲೆಯ ಹೊಟ್ಟನ್ನು ನಿವಾರಿಸಿ ತಲೆಗೂದಲ ಬೆಳವಣಿಗೆಗೆ ನೆರವಾಗುತ್ತದೆ.

ಮುಖದ ಮೊಡವೆಗಳನ್ನು ನಿವಾರಿಸುತ್ತದೆ

ಮುಖದ ಮೊಡವೆಗಳನ್ನು ನಿವಾರಿಸುತ್ತದೆ

ಶುಂಠಿರಸದ ಸೇವನೆಯಿಂದ ಮುಖದ ಮೊಡವೆ, ಕುರು, ಬ್ಲಾಕ್ ಹೆಡ್ ಮತ್ತು ಇತರ ತೊಂದರೆಗಳು ನಿವಾರಣೆಯಾಗುತ್ತವೆ. ಜೊತೆಗೇ ಮತ್ತೆ ಮರುಕಳಿಸದಂತೆ ನೋಡಿಕೊಳ್ಳುತ್ತದೆ.

ಕಫ, ಮೂಗು ಕಟ್ಟಿರುವುದನ್ನು ನಿವಾರಿಸುತ್ತದೆ

ಕಫ, ಮೂಗು ಕಟ್ಟಿರುವುದನ್ನು ನಿವಾರಿಸುತ್ತದೆ

ಶುಂಠಿರಸದ ಸೇವನೆಯಿಂದ ಗಂಟಲಲ್ಲಿ ಕಫ ಕಟ್ಟಿರುವುದು ಕರಗಿ ಉಸಿರಾಟ ಸರಾಗವಾಗುತ್ತದೆ. ಕಟ್ಟಿದ ಮೂಗನ್ನೂ ತೆರೆದು ಸರಾಗ ಉಸಿರಾಟಕ್ಕೆ ನೆರವಾಗುತ್ತದೆ.

English summary

Top health benefits of Ginger juice

The health benefits of Ginger have been well known to Indians even 5000 years ago. Ginger contains many vitamins and also manganese & copper, all of which are very essential for proper functioning of the body.
X
Desktop Bottom Promotion