For Quick Alerts
ALLOW NOTIFICATIONS  
For Daily Alerts

ಕೊಬ್ಬಿನಾಂಶ ನಿಯಂತ್ರಿಸಲು ಮೊಸರು ಸೇವನೆ ಹೇಗಿರಬೇಕು?

By Super
|

ದೈನಂದಿನ ಆಹಾರ ಕ್ರಮದಲ್ಲಿ ನೀವು ಆರೋಗ್ಯಕರ ರೀತಿಯಲ್ಲಿ ಮೊಸರನ್ನು ಹೇಗೆ ಸೇವಿಸಬಹುದು ಎನ್ನುವುದು. ಆರೋಗ್ಯವಾಗಿರುವುದರ ಜತೆಗೆ ಮೊಸರನ್ನು ತಿನ್ನುವುದರಿಂದ ತೂಕ ಕಳಕೊಳ್ಳಬಹುದು. ಯಾಕೆಂದರೆ ಇದರಲ್ಲಿರುವ ಪ್ರೋಟೀನ್. ಇದು ನಿಮ್ಮ ಹೊಟ್ಟೆಯನ್ನು ತುಂಬಿದಂತೆ ಮಾಡಿ ಊಟ ಮಾಡಿದ ಗಂಟೆಗಳ ಕಾಲ ನಿಮಗೆ ಹಸಿವಾಗದಿರುವಂತೆ ಮಾಡುತ್ತದೆ.

ಅದಾಗ್ಯೂ ಮೊಸರು ತಿನ್ನುವಾಗ ಮಾಡುವಂತಹ ಕೆಲವೊಂದು ತಪ್ಪುಗಳಿಂದ ತೂಕ ಕಳಕೊಳ್ಳುವ ಸಾಧನವು ಕ್ಯಾಲರಿ ಬಾಂಬ್ ಆಗಬಹುದು. ಸಂಪೂರ್ಣ ಆರೋಗ್ಯ ಲಾಭಗಳನ್ನು ಪಡೆಯಬೇಕಾದರೆ ನಾವು ಕಡೆಗಣಿಸಬೇಕಾದ ಕೆಲವೊಂದು ಅಭ್ಯಾಸಗಳು.

Yogurt Mistakes That Make You Fat, Yogurt Mistakes

ಕ್ಯಾಲರಿ ಕಡೆ ಗಮನಹರಿಸಿ
ನೀವು ಸೇವಿಸುವ ಆಹಾರವನ್ನು ನಿಯಂತ್ರಿಸಿದರೆ ಆಗ ನಿಮ್ಮ ಕ್ಯಾಲರಿ ಲೆಕ್ಕವು ನೆರವಿಗೆ ಬರುತ್ತದೆ. ಆದರೆ ಕ್ಯಾಲರಿ ಕಡಿಮೆ ಇದೆಯೆಂದು ಹೇಳುವ ಪ್ಯಾಕ್ ಮಾಡಲ್ಪಟ್ಟ ಮೊಸರು ನಮಗೆ ತಪ್ಪು ಮಾಹಿತಿ ನೀಡುತ್ತದೆ. ಮೊಸರಿನ ಪ್ಯಾಕ್‌ನಲ್ಲಿ ಎಷ್ಟು ಮಟ್ಟಿನ ಕ್ಯಾಲರಿ ಇದೆ ಮತ್ತು ಇದರಲ್ಲಿರುವ ಪ್ರೋಟೀನ್ ಮಟ್ಟವನ್ನು ಕೂಡ ಗಮನಿಸಿ. ಒಂದು ಮೊಸರು ಪ್ಯಾಕ್‌ನಲ್ಲಿ 100 ಕ್ಯಾಲರಿಗಳಿವೆ ಎಂದು ಬರೆದಿರಬಹುದು. ಆದರೆ ಅದರಲ್ಲಿ ಕೇವಲ ಆರು ಗ್ರಾಂ ಪ್ರೋಟೀನ್ ಮಾತ್ರ ಇರಬಹುದು. ಇಂತಹ ಸನ್ನಿವೇಶದಲ್ಲಿ ನೀವು ಹೆಚ್ಚಿನ ಕ್ಯಾಲರಿ ಇರುವುದನ್ನು ಆಯ್ಕೆ ಮಾಡಿರಬಹುದು. ಆದರೆ ಇದರಲ್ಲಿ 12ರಿಂದ 15ರ ಗ್ರಾಂ ಪ್ರೋಟೀನ್ ನಿಮ್ಮನ್ನು ಮುಂದಿನ ಊಟದ ತನಕ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಆರೋಗ್ಯ ವರ್ಧಿಸುವ ಸೀಬೆಹಣ್ಣು ಎಲೆಗಳ ಅದ್ಭುತ ಚಿಕಿತ್ಸಾ ಗುಣಗಳು

ತಿನ್ನುವ ಮೊಸರಿನ ಗಾತ್ರ ಪರಿಗಣಿಸದೆ ಇರುವುದು
ಹೆಚ್ಚಿನ ಗಾತ್ರದ ಮೊಸರನ್ನು ತಿನ್ನುವುದು ನೀವು ಹೆಚ್ಚಿಗೆ ತಿಂದಂತೆ. ನೀವು ಕೇವಲ ಇದರ ಗಾತ್ರವನ್ನು ಕೇವಲ ಕಣ್ಣಿನಲ್ಲಿ ಮಾತ್ರ ಅಳೆಯಬೇಡಿ. ಸರಿಯಾಗಿ ಅದನ್ನು ಅಳೆಯಿರಿ(ನೀವು ಐಸ್‌ಕ್ರೀಂ ತಿನ್ನುವಾಗ ಅದನ್ನು ಅಳೆಯುವಂತೆ) ಇದರಿಂದ ನೀವು ಅತಿಯಾಗಿ ತಿನ್ನುವುದು ತಪ್ಪುತ್ತದೆ. ದೊಡ್ಡ ಬೌಲ್‌ನಲ್ಲಿ ಆರು ದೊಡ್ಡ ಗಾತ್ರದ ಚಮಚದಷ್ಟು ಮೊಸರು ಇರುತ್ತದೆ. ಇದರಿಂದ ಸಣ್ಣ ಬೌಲ್ ಬಳಸಿ.

ಮೊಸರಿಗೆ ಇತರ ಆಹಾರ ಸೇರಿಸುವುದು
ಸಾದಾ ಮೊಸರನ್ನು ಖರೀದಿಸುವುದು ಒಳ್ಳೆಯ ವಿಧಾನ. ಆದರೆ ಅದಕ್ಕೆ ಇತರ ಹೆಚ್ಚುವರಿ ಆಹಾರವನ್ನು ಸೇರಿಸುವುದು ನಿಮ್ಮ ಆರೋಗ್ಯಕರ ಆಹಾರ ಕ್ರಮಕ್ಕೆ ಮೋಸ ಮಾಡಿದಂತೆ. ಕೆಲವು ಜನರು ಸಿಹಿಗಾಗಿ ಜೇನು ಸೇರಿಸುತ್ತಾರೆ, ಸೀರಲ್, ಹಣ್ಣು ಮತ್ತು ಒಣಬೀಜಗಳನ್ನು ರುಚಿಗಾಗಿ ಬಳಸುತ್ತಾರೆ. ಇದೆಲ್ಲವೂ ಒಳ್ಳೆಯದೇ. ಆದರೆ ಕೆಲವೊಂದು ಅಪಾಯಗಳಿವೆ. ಹಣ್ಣು ಮತ್ತು ಒಣಬೀಜಗಳು ಆಸಿಡಿಟಿ ಉಂಟುಮಾಡುತ್ತದೆ. ಬೀಜಗಳು(ಇದರಲ್ಲಿ ಅಧಿಕ ಮಟ್ಟದ ಪ್ರೋಟೀನ್ ಇದೆ) ಒಂದು ಬೌಲ್ ಮೊಸರಿನಲ್ಲಿರುವ ಪ್ರೋಟೀನ್‌ನನ್ನು ಬಿಡುಗಡೆ ಮಾಡದಂತೆ ನೋಡಿಕೊಳ್ಳುತ್ತದೆ. ಮೊದಲನೇಯದಾಗಿ ನೀವು ಮೊಸರನ್ನು ತಿಂಡಿ ಮಧ್ಯೆ ಅಥವಾ ಸಂಪೂರ್ಣ ಉಪಹಾರವಾಗಿ ಸ್ವೀಕರಿಸುತ್ತೀರಾ ಎಂದು ನೋಡಿಕೊಳ್ಳಿ. ಕೇವಲ ತಿಂಡಿಯಾಗಿ ಬಳಸುವುದಾದರೆ ಒಂದು ಕಪ್ ಮೊಸರು ಬಳಸಿ, ಇದಕ್ಕೆ ಲಘುವಾದ ಬೀಜಗಳನ್ನು ಹಾಕಿ. ನೀವು ಇದನ್ನು ಉಪಹಾರವಾಗಿ ಬಳಸುವುದಾದರೆ ಇದಕ್ಕೆ ಸೀರಲ್ ಮತ್ತು ಕೆಲವೊಂದು ಬೀಜಗಳನ್ನು ಹಾಕಿ. ಕಣ್ಣಿನ ಸೋಂಕಿಗೆ ಕಾರಣವಾಗಿರುವ ಮದ್ರಾಸ್ ಕಣ್ಣಿನ ಲಕ್ಷಣಗಳೇನು?

ಕೊಬ್ಬು ಮುಕ್ತ
ಕೊಬ್ಬು ಮುಕ್ತವೆನ್ನುವುದು ಕೇವಲ ಒಂದು ನಾಟವಷ್ಟೇ. ಎಲ್ಲಾ ರೀತಿಯ ಮೊಸರಿನಲ್ಲಿ ನೈಸರ್ಗಿಕವಾಗಿ ಬಂದಿರುವಂತಹ ಸಕ್ಕರೆ ಅಂಶವಿರುತ್ತದೆ. ಯಾಕೆಂದರೆ ಇದು ಹಾಲಿನಿಂದ ಮಾಡಲ್ಪಟ್ಟಿರುತ್ತದೆ. ಆದರೆ ಕೆಲವರು ರುಚಿಗೆ ಮತ್ತಷ್ಟು ಸಕ್ಕರೆ ಬಳಸುತ್ತಾರೆ. ಒಂದು ಬೌಲ್‌ನಲ್ಲಿ 18 ಗ್ರಾಂಗಿಂತ ಹೆಚ್ಚಿನ ಸಕ್ಕರೆ ಅಥವಾ ಮೊಸರಿನ ಪ್ಯಾಕೇಟ್‌ನಲ್ಲಿ ಸಕ್ಕರೆ ಇದೆಯಂದು ಉಲ್ಲೇಖಿಸಿದ್ದರೆ ಬೇರೆ ರೀತಿಯ ಮೊಸರನ್ನು ಬಳಸಿ. ಇದರ ರುಚಿಯನ್ನು ಕೆಡಿಸಲು ಬಯಸದೆ ಇರುವುದರಿಂದ ಯಾರಿಗೂ ಇದನ್ನು ಕೊಬ್ಬು ಮುಕ್ತವಾಗಿಸಲು ಸಾಧ್ಯವಿಲ್ಲ. ಹೀಗೆ ಮಾಡುವುದಿದ್ದರೆ ಆಗ ಅಂಶಗಳ ಪಟ್ಟಿಯನ್ನು ಗಮನಿಸಿ, ಹೆಚ್ಚಿನ ಮಟ್ಟದ ಪ್ರೋಟೀನ್ ಮತ್ತು ಸಕ್ಕರೆ ಕಡಿಮೆ ಇರುವುದನ್ನು ಗಮನಿಸಿ.

ಜೈವಿಕ ಆಹಾರದ ಪ್ರಯತ್ನ
ಜೈವಿಕ ಆಹಾರವು ಪ್ರಯೋಜನಕಾರಿ ಎಂದು ಕೆಲವೊಂದು ಅಧ್ಯಯನಗಳು ಹೇಳಿವೆ. ಆದರೆ ಲಾಭಕ್ಕಾಗಿ ಹಾತೊರೆಯುತ್ತಿರುವ ಕಂಪನಿಗಳು ಇದನ್ನು ಅತ್ಯಾಧುನಿಕ ಐಟಿ ಪ್ರಾಡಕ್ಟ್ ಗಳನ್ನು ಜೈವಿಕ ಆಹಾರವೆಂದು ಬಿಂಬಿಸಬಹುದು. ಆದರೆ ಇದರಿಂದ ನೀವು ಮೂರ್ಖರಾಗಬೇಡಿ. ಜೈವಿಕ ಆಹಾರವೆಂದು ಹೇಳಿರುವ ಲೇಬಲ್‌ನ್ನು ನಂಬಬೇಡಿ. ಇದನ್ನು ಆರೋಗ್ಯಕಾರಿಯಲ್ಲ. ಹೆಚ್ಚಿನ ಮೊಸರು ತಿನ್ನುವುದು ಸಾಧ್ಯ. ಜೈವಿಕ ಆಹಾರಕ್ಕಾಗಿ ನೀವು ನಿಮ್ಮ ಆಹಾರ ಕ್ರಮದಲ್ಲಿ ಮೊಸರನ್ನು ಅತಿಯಾಗಿ ಬಳಸಬೇಕೆಂದಿಲ್ಲ. ತೇಗುವಿಕೆಯನ್ನು ತಡೆಗಟ್ಟಲು 15 ಸರಳ ಮನೆಮದ್ದುಗಳು

ಘನೀಕೃತ ಸಿಹಿತಿಂಡಿಗಾಗಿ
ನಿಮ್ಮ ಅನಾರೋಗ್ಯಕರ ತಿಂಡಿಯ ಅಭ್ಯಾಸವನ್ನು ಬಿಡಲು ಮೊಸರು ನಿಮಗೆ ನೆರವಾಗಬಹುದು (ಮೊಸರನ್ನು ವಿವಿಧ ಮೊಸರು ಪಾರ್ಲರ್‌ಗಳಲ್ಲಿ ಪಡೆಯುವವರಿಗಾಗಿ). ಅವರು ನಿಮ್ಮನ್ನು ತಪ್ಪುದಾರಿಗೆ ಎಳೆಯುತ್ತಾರೆ.
ಅವರು ನಿಮಗೆ ಸಂಪೂರ್ಣ ಕೊಬ್ಬು ಇರುವ ಮೊಸರನ್ನು ನೀಡಬಹುದು ಮತ್ತು ಇದನ್ನು ಗ್ರಾನೋಲಾದಿಂದ ಪ್ಯಾಕ್ ಮಾಡಿರಬಹುದು. ಗ್ರಾನೋಲಾದಿಂದ ನೀವು ಮೊಸರು ತಿಂದರೂ ನೀವು ತಿಂದ ಮೊಸರು ನಿಮ್ಮ ಹೊಟ್ಟೆ ತುಂಬಿದಂತೆ ಮಾಡುವುದಿಲ್ಲ. ನೀವು ಅವಸರದಲ್ಲಿದ್ದು ಮತ್ತು ಕಡುಬಯಕೆಯಲ್ಲಿದ್ದರೆ ಸಾಮಾನ್ಯವಾಗಿ ಪ್ಯಾಕ್ ಮಾಡಲ್ಪಟ್ಟಿರುವ ಮೊಸರನ್ನು ಬಳಸಿ ಅಥವಾ ಮನೆಯಲ್ಲಿ ಮಾಡಿರುವ ಮೊಸರು ಬಳಸಿ.

English summary

Yogurt Mistakes That Make You Fat, Yogurt Mistakes

Here's how to enjoy your daily dose of dahi in the healthiest way possible Beyond being healthy, eating yoghurt can be a great snack for weight loss.yoghurt mistakes that can turn this weight-loss weapon into a secret calorie bomb. Here are the habits to avoid, so you can reap its full health benefits:
Story first published: Friday, November 21, 2014, 17:23 [IST]
X
Desktop Bottom Promotion