For Quick Alerts
ALLOW NOTIFICATIONS  
For Daily Alerts

ಹೋಟೆಲ್ ಊಟ ಆರೋಗ್ಯಕ್ಕೆ ಮಾರಕ ಹೇಗೆ?

By Super
|

ಇಂದು ತಿಂಗಳಿಗೊಂದೆರಡು ಬಾರಿ ಹೊರಗೆ ಊಟ ಮಾಡುವುದು ಐಶಾರಾಮದ ಒಂದು ಮಜಲಾಗಿದೆ. ಆದರೆ ಇಂದು ನಮ್ಮ ನಗರದಿಂದ ಹಳ್ಳಿ ಹಳ್ಳಿಯವರೆಗೆ ಲಗ್ಗೆ ಇಟ್ಟಿರುವ ಧಿಡೀರ್ ಹೋಟೆಲುಗಳು ಹಾಗೂ ಪಾಶ್ಚಾತ್ಯ ಆಹಾರಗಳು ಆರೋಗ್ಯಕ್ಕೆ ಮಾರಕ ಎಂದು ಹಲವು ಸಂಶೋಧನೆಗಳಿಂದ ತಿಳಿದುಬಂದಿದೆ. ಹಿಂದೆ ಒಳಗೆ ಕುಳಿತು ತಿನ್ನಬಹುದಾದ ಹೋಟೆಲುಗಳು ಹೆಚ್ಚಿದ್ದವು. ಬಳಿಕ ಒಳಗೆ ನಿಂತು ತಿನ್ನುವ ದರ್ಶಿನಿಗಳು ಬಂದವು ಈಗ ಫೋನ್ ಮಾಡಿದರೆ ಮನೆಗೇ ಆಹಾರವನ್ನು ತಲುಪಿಸುವ ಫಾಸ್ಟ್ ಫುಡ್‌ಗಳಿವೆ.

ಇವುಗಳ ಜಾಹೀರಾತುಗಳು ಎಷ್ಟು ಆಕರ್ಷಕವಾಗಿರುತ್ತವೆಂದರೆ ನೋಡಿದವರು ಕೊಳ್ಳದೇ ಇದ್ದರೂ ಕೊಳ್ಳುವ ಮನಸ್ಸನ್ನಂತೂ ಮಾಡಿಯೇ ಇರುತ್ತಾರೆ. ಈ ಆಹಾರಗಳು ಅತ್ಯಂತ ಸ್ವಚ್ಛ ಹಾಗೂ ಉತ್ತಮ ಗುಣಮಟ್ಟವನ್ನು ಹೊಂದಿದ್ದರೂ ಅವುಗಳಲ್ಲಿ ಅಗತ್ಯಕ್ಕಿಂತಲೂ ಅತಿಹೆಚ್ಚಾಗಿರುವ ಪೋಷಕಾಂಷಗಳು ನಿಮ್ಮ ದೇಹದಲ್ಲಿ ಕೊಬ್ಬನ್ನು ಹೆಚ್ಚಿಸಿ ನಿಮ್ಮ ಆರೋಗ್ಯವನ್ನು ಕೆಡಿಸುತ್ತವೆ.

ಪಟ್ಟಣ ಹಾಗೂ ನಗರಗಳಲ್ಲಿ ದಾರಿಬದಿಯಲ್ಲಿಯೂ ಸಾವಿರಾರು ಸಿದ್ಧ ಆಹಾರಗಳನ್ನು ಮಾರುವ ಅಂಗಡಿಗಳಿವೆ. ಆದರೆ ಈ ಆಹಾರಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಸ್ಥೂಲಕಾಯ, ಮಧುಮೇಹ ಹಾಗೂ ಹಲವು ವಿಧದ ಕ್ಯಾನ್ಸರ್ ಕಾಯಿಲೆಗಳು ಬರುವ ಸಂಭವವಿರುತ್ತದೆ. ಆದುದರಿಂದ ಹೊರಗಿನ ತಿಂಡಿಗಳನ್ನು ಮಾರುವ ಯಾವುದೇ ಅಂಗಡಿಯಿರಲಿ, ಅದು ಒಂದಲ್ಲ ಒಂದು ರೀತಿಯಿಂದ ನಮ್ಮ ಆರೋಗ್ಯಕ್ಕೆ ಮಾರಕವಾಗಿದೆ. ಈ ತಿಂಡಿಗಳಿಂದ ದೂರವಿರಲು ಈ ಹತ್ತು ಸಲಹೆಗಳು ನೆರವಾಗುತ್ತವೆ.

ತರಕಾರಿಗಳನ್ನು ಸ್ವಚ್ಛವಾಗಿ ತೊಳೆದಿರುವುದಿಲ್ಲ

Why Eating Out Is Unhealthy?

ಹೊರಗಿನ ತಿಂಡಿ ಮಾಡುವವರಿಗೆ ತರಕಾರಿಗಳನ್ನು ಹೆಚ್ಚಲು, ತೊಳೆಯಲು ಸರಿಯಾದ ಸೌಲಭ್ಯಗಳಿರುವುದಿಲ್ಲ. ಹಾಗಾಗಿ ಅವರು ತಮ್ಮ ಮನೆಗಳಲ್ಲಿ ಇವನ್ನು ಸಿದ್ಧಪಡಿಸಿಕೊಂಡು ಬರುತ್ತಾರೆ. ಮಾನವ ಸಹಜ ಸ್ವಭಾವದಿಂದ ಮೊದಮೊದಲು ಈ ಬಗ್ಗೆ ವಹಿಸುತ್ತಿದ್ದ ಕಾಳಜಿ ದಿನಕಳೆದಂತೆ ಕಡಿಮೆಯಾಗುತ್ತಾ ಬಂದು ತರಕಾರಿಗಳನ್ನು ಸರಿಯಾಗಿ ತೊಳೆಯದೇ, ಹಲವು ಬಾರಿ ತೊಳೆಯದೇ ಅದರಿಂದಲೇ ವ್ಯಂಜನಗಳನ್ನು ತಯಾರಿಸಲಾಗುತ್ತದೆ. ಇದರಿಂದ ಕೀಟನಾಶಕ ಹಾಗೂ ಬ್ಯಾಕ್ಟೀರಿಯಾಗಳು ನೇರವಾಗಿ ಗ್ರಾಹಕನ ಹೊಟ್ಟೆ ಸೇರಿ ಸ್ವಾಸ್ಥ್ಯ ಕೆಡಿಸುತ್ತವೆ.

ಒಮ್ಮೆ ಬಳಸಿದ ಎಣ್ಣೆಯೇ ಬಾರಿಬಾರಿ ಉಪಯೋಗಿಸಲಾಗುತ್ತದೆ

ಕರಿಯಲು ಬಳಸಲಾಗುವ ಎಣ್ಣೆಯನ್ನು ಬದಲಿಸದೇ ಪದೇ ಪದೇ ಅದನ್ನೇ ಉಪಯೋಗಿಸಲಾಗುತ್ತದೆ. ಎಣ್ಣೆ ಕಡಿಮೆಯಾದರೆ ಹಳೆಯ ಎಣ್ಣೆಯನ್ನು ಎಸೆಯದೇ ಇದೇ ಎಣ್ಣೆಗೆ ಹೊಸ ಎಣ್ಣೆಯನ್ನು ಸುರಿದು ಮತ್ತೆ ಕರಿಯಲಾಗುತ್ತದೆ. ಹಲವು ಬಾರಿ ಕರಿದ ಎಣ್ಣೆ ಆರೋಗ್ಯಕ್ಕೆ ಮಾರಕವಾಗಿದ್ದು ತಿಂಡಿಗಳ ಮೂಲಕ ಗ್ರಾಹಕನ ಹೊಟ್ಟೆ ಕೆಡಿಸುತ್ತವೆ. ಅತಿಸಾರ, ಮಲಬದ್ಧತೆ ಮೊದಲಾದ ತೊಂದರೆಗಳು ಎದುರಾಗುತ್ತವೆ.

ಮಾಂಸವನ್ನು ಸರಿಯಾಗಿ ಬೇಯಿಸಿರುವುದಿಲ್ಲ

ಸಾಧಾರಣವಾಗಿ ಹಾದಿಬದಿ ಸಿಗುವ ಮಾಂಸಾಹಾರದ ಖಾದ್ಯಗಳಲ್ಲಿ ಬಳಸಲಾಗುವ ಮಾಂಸ ಸಾಧಾರಣವಾಗಿ ಅಂಗಡಿಯಲ್ಲಿ ಕಡೆಯಲ್ಲಿ ಉಳಿದ ಮಾಂಸವಾಗಿರುತ್ತದೆ. ಅಗ್ಗವಾಗಿ ಸಿಗುವ ಈ ಮಾಂಸ ಬಹಳ ಹೊತ್ತು ತೆರೆದ ಗಾಳಿಯಲ್ಲಿಟ್ಟಿದ್ದುದರಿಂದ ನಿಧಾನವಾಗಿ ಅದರಲ್ಲಿ ಕ್ರಿಮಿಗಳು ಕಾಣಿಸಿಕೊಳ್ಳುತ್ತವೆ. ಕೆಲವೊಮ್ಮೆ ಸಮಯದ ಆಭಾವದಿಂದ ಈ ಮಾಂಸವನ್ನು ಪೂರ್ಣವಾಗಿ ಬೇಯಿಸದೇ ಖಾದ್ಯ ತಯಾರಿಸಲಾಗುತ್ತದೆ. ಸಾಯದ ಕ್ರಿಮಿಗಳು ನೇರವಾಗಿ ಗ್ರಾಹಕನ ಹೊಟ್ಟೆ ಸೇರಿ ಆಸ್ಪತ್ರೆಯ ದಾರಿ ತೋರಿಸುತ್ತವೆ.

ಟ್ರಾನ್ಸ್ ಫ್ಯಾಟಿ ಆಮ್ಲ ಬಹಳ ಹೆಚ್ಚಾಗಿರುತ್ತದೆ

trans fatty acids (TFAs) ಎಂಬ ಕೊಬ್ಬು ನಮ್ಮ ಆರೋಗ್ಯಕ್ಕೆ ಮಾರಕವಾಗಿದೆ. ಇದು ಸಾಧಾರಣವಾಗಿ ತಣ್ಣಗಾದಾದ ಗಟ್ಟಿಯಾಗುವ ಎಣ್ಣೆಗಳ ಮೂಲಕ ಲಭ್ಯವಾಗುತ್ತದೆ. ಉದಾಹರಣೆಗೆ ವನಸ್ಪತಿ, ಡಾಲ್ಡಾ, ಪಾಮ್ ಎಣ್ಣೆ ಮೊದಲಾದವು. ಬೆಲೆಯಲ್ಲಿ ಅಗ್ಗವಾಗಿರುವ ಈ ಎಣ್ಣೆಗಳನ್ನು ಈ ಅಂಗಡಿಗಳಲ್ಲಿ ಬಳಸಲಾಗುತ್ತದೆ. ಈ ಎಣ್ಣೆಯ ತಿಂಡಿಗಳನ್ನು ಸೇವಿಸುವುದರಿಂದ ರಕ್ತದಲ್ಲಿ ಕೆಟ್ಟ ಕೊಲೆಸ್ಟರಾಲ್ ಹೆಚ್ಚುತ್ತದೆ, ಮಧುಮೇಹ, ಹೃದಯಸಂಬಂಧಿ ಕಾಯಿಲೆಗಳು ಹೆಚ್ಚುತ್ತವೆ.

English summary

Why Eating Out Is Unhealthy?

Eating out is unhealthy, period. If you are leading a busy lifestyle and dining out frequently, you should make a point to eat at home more often. Here are some of the effects of eating food outside. Take a look at why eating out is so bad for you.
X
Desktop Bottom Promotion