For Quick Alerts
ALLOW NOTIFICATIONS  
For Daily Alerts

ನಿಮ್ಮ ಮೊಡವೆಗಳು ನಿಮ್ಮ ಆರೋಗ್ಯವನ್ನು ತಿಳಿಸುತ್ತದಯೇ?

By Vani Naik
|

ಶುಭ್ರವಾದ ಹವಾಮಾನವಿದ್ದ ಭಾನುವಾರದ ಬೆಳ್ಳಂಬೆಳಿಗ್ಗೆ, ಆಪ್ತರನ್ನು ಭೇಟಿಯಾಗಲು ಒಂದು ಸೂಕ್ತವಾದ ಉಡುಪನ್ನು ಆರಿಸಿ ತಯಾರಾಗಲು ಹೊರಟಾಗ ಥಟ್ಟನೆ ಒಂದು ದೊಡ್ಡ ಮೊಡವೆ ನಿಮ್ಮನ್ನು ತಬ್ಬಿಬ್ಬಾಗಿಸುತ್ತದೆ. ತಕ್ಷಣಕ್ಕೆ ನೀವು ಮೇಕಪ್ಪಿನ ಮೂಲಕ ಮರೆಮಾಚಲು ಯತ್ನಿಸಬಹುದು.

ಪ್ರಯಾಣ ಮಾಡುವಾಗ ಪಾಲಿಸಬೇಕಾದ ಮೇಕಪ್ ಟಿಪ್ಸ್

ಆದರೆ ತಪ್ಪು ಎಲ್ಲಿ ನಡೆದಿದೆ ಎಂಬ ಕಾರಣವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ನೀವೂ ಕೂಡ ಹಣೆಯ ಮೇಲೆ ಮೂಡಿರುವ ಮೊಡವೆಗಳನ್ನು ಒಡೆಯುವವರ ಪೈಕಿ ಒಬ್ಬರಾಗುತ್ತೀರೋ ಅಥವಾ ಗಲ್ಲದ ಮೇಲೆ ಭೀತಿ ಹುಟ್ಟಿಸುವಂಥಹ ಘೋರ ಮೊಡವೆಗಳಿಂದ ಬಳಲುತ್ತೀರೋ?

What Does Your Pimple Say About Your Health?

ಮೊಡವೆಗಳು ನಮ್ಮ ಆರೋಗ್ಯದ ಬಗ್ಗೆ ತಿಳಿಸುತ್ತದೆ

ಮುಖದ ಮೇಲಿನ ಪ್ರತಿಯೊಂದು ಕಲೆಯೂ ಶರೀರದ ನಿರ್ದಿಷ್ಚವಾದ ಅಂಗಗಳ ಕಾರ್ಯ ನಿರ್ವಾಹಣೆಗೆ ಸಂಬಂಧ ಪಟ್ಟಿರುತ್ತದೆ. ಒಂದು ಕಡೆ ಮೊಡವೆ ಎದ್ದಿದೆ ಎಂದರೆ, ಶರೀರದ ಮತ್ತಾವುದೋ ಭಾಗದಲ್ಲಿ ಸಮಸ್ಯೆಯಾಗಿದೆ ಎಂದರ್ಥ. ಈ ಕೆಳಗೆ, ಹೇಗೆ ಮೊಡವೆಗಳು ನಮ್ಮ ಆರೋಗ್ಯದ ಬಗ್ಗೆ ತಿಳಿಸುತ್ತದೆ ಎಂಬುದನ್ನು ವಿವರಿಸಲಾಗಿದೆ.

ಮೊಡವೆ ನಿವಾರಿಸಲು ಈ ಫೇಸ್ ಪ್ಯಾಕ್ ಒಳ್ಳೆಯದು

ನಿಮ್ಮ ಮೊಡವೆಗಳು ನಿಮ್ಮ ಬಗ್ಗೆ ಏನು ಹೇಳುತ್ತದೆಯೆಂದು ತಿಳಿಯೋಣ

1. ಹಣೆಯ ಮೇಲಿನ ಮೊಡವೆಗಳು = ಹೊಟ್ಟೆಗೆ ಸಂಬಂಧ ಪಟ್ಟಿರುತ್ತದೆ.
ಹಣೆಯ ಮೇಲೆ ಮೊಡವೆಗಳು ಏಳುವುದು ನೇರವಾಗಿ ಹೊಟ್ಟೆಗೆ ಮತ್ತು ಆಹಾರ ಸೇವನೆಗೆ ಸಂಬಂಧ ಪಟ್ಟಿರುತ್ತದೆ. ಹೊಟ್ಟೆಗೆ ತಗಲಿರುವ ಸೋಂಕು ಕೂಡ ಇದಕ್ಕೆ ಕಾರಣವಾಗುತ್ತದೆ. ಆದ್ದರಿಂದ ಅತಿ ಹೆಚ್ಚಾದ ಜಂಕ್ ಆಹಾರದ ಸೇವನೆ ಮತ್ತು ಅತಿ ಹೆಚ್ಚಾದ ಸಕ್ಕರೆಯ ಸೇವನೆಗೆ ಕಡಿವಾಣ ಹಾಕಬೇಕಾಗುತ್ತದೆ. ಇದರ ಜೊತೆಗೆ ಹೆಚ್ಚು ನೀರನ್ನು ಕುಡಿಯಬೇಕಾಗುತ್ತದೆ.

2. ಹುಬ್ಬಿನ ನಡುವಿನ ಮೊಡವೆಗಳು = ಅತಿ ಹೆಚ್ಚು ಕೆಲಸ ನಿರ್ವಹಿಸುತ್ತಿರುವ ಪಿತ್ತಜನಕಾಂಗ ಅಂದರೆ ಲಿವರ್
ಹುಬ್ಬಿನ ನಡುವೆ ಮೊಡವೆಗಳು ಏಳುತ್ತಿವೆ ಎಂದರೆ ನಿಮ್ಮ ಲಿವರ್ ಅತಿ ಹೆಚ್ಚಾಗಿ ಕೆಲಸ ಮಾಡುತ್ತಿದೆ ಎಂದರ್ಥ. ಆದ್ದರಿಂದ ಮದ್ಯಪಾನ, ಮಾಂಸಾಹಾರ ಮತ್ತು ಸಂಸ್ಕರಿತ ಆಹಾರದ ಸೇವನೆಯನ್ನು ನಿಲ್ಲಿಸಬೇಕಾಗುತ್ತದೆ. ತಡರಾತ್ರಿ ಸ್ನ್ಯಾಕ್ಸ್ ಸೇವಿಸುವುದನ್ನು ಬಿಟ್ಟು ರಾತ್ರಿ ಒಳ್ಳೆಯ ನಿದ್ದೆಯನ್ನು ಮಾಡಬೇಕು. ಆದ್ದರಿಂದ ಡಿಟಾಕ್ಸ್ ಆಹಾರ ಪದ್ಧತಿಯನ್ನು ಒಂದು ವಾರದ ಮಟ್ಟಿಗಾದರೂ ಅಳವಡಿಸಿಕೊಂಡು ಶರೀರದ ವ್ಯವಸ್ಥೆಯನ್ನು ಪುನಃ ಕ್ರಿಯಾಶೀಲವನ್ನಾಗಿ ಮಾಡಿಕೊಳ್ಳಬೇಕು. ಜಿಎಮ್ ಆಹಾರ ಪದ್ಧತಿ ಅತ್ಯಂತ ಸೂಕ್ತ.

ಬಳಲಿದ ತ್ವಚೆಗೆ ಹೊಳಪನ್ನು ನೀಡುವ ಮಾರ್ಗಗಳು

3. ಕಣ್ಣಿನ ಸುತ್ತ ಹಾಗು ಕಪೋಲ ಭಾಗದಲ್ಲಿ ಏಳುವ ಮೊಡವೆಗಳು = ಅಸ್ಥಿರವಾದ ಮೂತ್ರಪಿಂಡ
ನಿಮ್ಮ ಕಣ್ಣಿನ ಸುತ್ತ, ಕಪೋಲ ಭಾಗ ಹಾಗು ಹುಬ್ಬಿನ ನಡುವೆ ಏಳುವ ಕೆಂಪು ಮೊಡವೆಗಳು ನಿಮ್ಮಲ್ಲಿರುವ ಮೂತ್ರಪಿಂಡದ ಸಮಸ್ಯೆ ಬಗ್ಗೆ ಸೂಚಿಸುತ್ತದೆ. ಹಾಗಾಗಿ ನೀವು ದೇಹದೊಳಗೆ ನೀರು ಹರಿಸಿ ಸ್ವಚ್ಛ ಮಾಡಬೇಕು. ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಬೇಕು ಮತ್ತು ನೀರಿನ ಅಂಶವುಳ್ಳ ಹಣ್ಣುಗಳಾದ ಕರಬೂಜ, ಕಲ್ಲಂಗಡಿಯನ್ನು ಹೆಚ್ಚಾಗಿ ಸೇವಿಸಬೇಕು. ಮೊಡವೆಗಳ ಸುತ್ತ ಕಪ್ಪು ವರ್ತುಲಗಳಿದ್ದರೆ, ಅದು ಖಚಿತವಾಗಿ ಡೀಹೈಡ್ರೇಷನ್ ಆಗಿರುತ್ತದೆ.

4. ಮೂಗಿನ ಮೇಲಿನ ಮೊಡವೆಗಳು = ಹೃದಯಕ್ಕೆ ಸಂಬಂಧಿಸಿದ ತೊಂದರೆ
ಮೂಗಿನ ಮೇಲಿನ ಮೊಡವೆಗಳು ಎಂದಾಕ್ಷಣ ನೀವು ಪ್ರೀತಿ ಪ್ರೇಮದ ಲಕ್ಷಣ ಎಂದು ತಿಳಿಯಬೇಡಿ. ಆದರೆ ಖಂಡಿತವಾಗಿ ಹೃದಯಕ್ಕೆ ಸಂಬಂಧಿಸಿರುತ್ತದೆ.ನಿಮ್ಮ ರಕ್ತದೊತ್ತಡದಲ್ಲಿ ಏರಿಳಿತಗಳಿದ್ದರೆ ಅಥವಾ ವಿಟಮಿನ್ ಬಿ ಕೊರತೆ ನಿಮ್ಮಲ್ಲಿದ್ದರೆ ನಿಮ್ಮ ಮೂಗಿನ ಮೇಲಿನ ಮೊಡವೆಗಳು ಅದನ್ನು ಸೂಚಿಸುತ್ತದೆ. ಶುಭ್ರವಾದ ಗಾಳಿ, ವಿಟಮಿನ್ ಬಿ ಸೇವನೆ ಮತ್ತು ದೈನಂದಿಕ ವ್ಯಾಯಾಮ ಮಾಡುವುದರಿಂದ ಈ ಸಮಸ್ಯೆಯನ್ನು ತಡೆಗಟ್ಟಬಹುದು.

5. ಗಲ್ಲ ಅಥವಾ ಕೆನ್ನೆಯ ಮೇಲಿನ ಮೊಡವೆಗಳು = ಶ್ವಾಸಕೋಶದ ತೊಂದರೆ
ನೀವು ಸಿಗರೇಟ್ ಸೇದುವವರಾಗಿದ್ದರೆ ಅಥವಾ ಉಸಿರಾಟಕ್ಕೆ ಸಂಬಂಧಿಸಿದ ಅಲರ್ಜಿ ಇದ್ದರೆ, ನಿಮ್ಮ ಕೆನ್ನೆಯ ಮೇಲೆ ಗುಳ್ಳೆಗಳೇಳುವುದು ಸಹಜ. ಸಿಗರೇಟ್ ಸೇದುವುದಕ್ಕೆ ಕಡಿವಾಣ ಹಾಕುವುದರಿಂದ ಮತ್ತು ಪ್ರತಿ ನಿತ್ಯ ಬೆಳಿಗ್ಗೆ ವ್ಯಾಯಾಮ ಮಾಡುವುದರಿಂದ ನೀವು ನಿಮ್ಮ ಶ್ವಾಸಕೋಶವನ್ನು ಆರೋಗ್ಯವಾಗಿಟ್ಟುಕೊಳ್ಳಬಹುದು. ದೇಹವನ್ನು ತಂಪಾಗಿಸುವ ಆಹಾರ ಮತ್ತು ಪಾನೀಯಗಳ ( ಅಂದರೆ ಸೌತೆಕಾಯಿ, ಕರಬೂಜ ಮತ್ತು ಹಣ್ಣಿನ ರಸ) ಸೇವನೆ ಮಾಡುವುದರಿಂದ ದೇಹದಲ್ಲಿನ ಉಷ್ಣಾಂಶವನ್ನು ಹೊರಹಾಕಲು ಸಹಾಯ ಮಾಡುತ್ತದೆ.

ಗಿಡ ಮೂಲಿಕೆಗಳನ್ನು ಒಣಗಿಸುವುದು ಹೇಗೆ?

6. ಗದ್ದದ ಮೇಲಿನ ಮೊಡವೆ = ಹಾರ್ಮೋನ್ ಅಸಮತೋಲನ
ಪಿಎಮ್ಎಸ್ -
ಈ ಮೂರು ಭಯಾನಕ ಅಕ್ಷರಗಳು ನಿಮ್ಮ ತ್ವಚೆಯ ಆರೋಗ್ಯವನ್ನು ನಾಶಮಾಡಬಹುದು. ಪೀರಿಯಡ್ಸ್ ದಿನಗಳು ಇಲ್ಲದಿದ್ದಾಗಲೂ ನಿಮ್ಮ ಗದ್ದದ ಮೇಲೆ ಮೊಡವೆಗಳು ಸದಾ ಇದ್ದರೆ, ಇದಕ್ಕೆ ಕಾರಣ ಹಾರ್ಮೋನ್ ಅಸಮತೋಲನವಾಗಿರುತ್ತದೆ. ಆಗ ನೀವು ನಿಮ್ಮ ತ್ವಚೆಯ ಆರೈಕೆಗೆ ಗೈನಕಾಲೊಜಿಸ್ಟ್ ಗೆ ಸಂಪರ್ಕಿಸಬಹುದು.

English summary

What Does Your Pimple Say About Your Health?

What Does Your Pimple Say About Your Health?
X
Desktop Bottom Promotion