For Quick Alerts
ALLOW NOTIFICATIONS  
For Daily Alerts

ಮಹಿಳೆಯರು ಖಿನ್ನತೆ ರೋಗಕ್ಕೆ ಗುರಿಯಾಗಲು ಕಾರಣಗಳೇನು?

|

ಖಿನ್ನತೆ ಬರಲು ವಯಸ್ಸು ಮತ್ತು ಲಿಂಗಗಳ ಭೇದವಿಲ್ಲ. ಪ್ರತಿಯೊಬ್ಬರು ತಮ್ಮ ಜೀವನದ ಒಂದು ಕಾಲ ಘಟ್ಟದಲ್ಲಿ ಖಿನ್ನತೆಗೆ ಗುರಿಯಾಗುತ್ತಾರೆ. ಇಂದಿನ ಆಧುನಿಕ ಯುಗದ ಕೆಲಸದ, ಕುಟುಂಬದ ಒತ್ತಡದ ಕಾರಣವಾಗಿ ಖಿನ್ನತೆಗೆ ಗುರಿಯಾಗುತ್ತಿರುತ್ತಾರೆ. ಕಾರಣ ಕೆಲಸದಲ್ಲಿ ಮೇಲಾಧಿಕಾರಿಗಳು ತಮ್ಮ ಪಾಲಿನ ಕೆಲಸವನ್ನು ತನ್ನ ಕೈಕೆಳಗಿರುವವರ ಮೇಲೆ ಹಾಕಿ ಅವರು ನಿಶ್ಚಿಂತೆಯಿಂದ ಕುಳಿತುಕೊಳ್ಳುತ್ತಾರೆ. ಈ ಗುರಿಗಳನ್ನು ಸಾಧಿಸಲಾಗದಿದ್ದಾಗ ಆ ನೌಕರರು ಖಿನ್ನತೆಗೆ ಗುರಿಯಾಗುತ್ತಾರೆ.

ಇದು ಸಾಮಾನ್ಯ ಬಿಡಿ, ಆದರೆ ಹೆಂಗಸರು ಅನುಭವಿಸುವ ಖಿನ್ನತೆಯು ಅತ್ಯಂತ ಭಿನ್ನವಾಗಿರುತ್ತದೆ. ಇದಕ್ಕೆ ನಾನಾ ಕಾರಣಗಳು ಇರುತ್ತವೆ. ಒಂದು ಸಂತಾನೋತ್ಪತ್ತಿ ಹಾರ್ಮೋನ್ ಆದರೆ, ಸಮಾಜವು ಸ್ತ್ರೀಯ ಮೇಲೆ ಹಾಕುವ ಒತ್ತಡವು ಸಹ ಆಕೆಗೆ ಖಿನ್ನತೆಯನ್ನು ನೀಡುತ್ತದೆ. ಒಂದು ವೇಳೆ ನೀವು ಖಿನ್ನತೆಯ ಮೂಲವನ್ನು ಹುಡುಕಿದರೆ ಅದಕ್ಕೆ ಪರಿಹಾರವನ್ನು ಸಹ ನೀವು ಕಂಡುಕೊಳ್ಳಬಹುದು.

What are the causes and effects of depression in women?

ಮಹಿಳೆಯರಲ್ಲಿ ಖಿನ್ನತೆಗೆ ಕಾರಣಗಳು
ವಂಶವಾಹಿಗಳು ಮತ್ತು ಮನೋಭಾವಗಳು ಮಹಿಳೆಯರಲ್ಲಿ ಮತ್ತು ಪುರುಷರಲ್ಲಿ ಭಿನ್ನತೆಯಿಂದ ಕೂಡಿರುತ್ತವೆ. ಮಹಿಳೆಯರಲ್ಲಿ ಎಲ್ಲರೂ ಖಿನ್ನತೆಯಿಂದ ಬಳಲುವುದಿಲ್ಲ. ಆದರೆ ಕೆಲವೊಂದು ವಿಚಾರಗಳು ಹೆಂಗಸರನ್ನು ಖಿನ್ನತೆಯ ಕೂಪಕ್ಕೆ ತಳ್ಳಿಬಿಡುತ್ತದೆ. ಅವುಗಳಲ್ಲಿ ಕೆಲವನ್ನು ಇಲ್ಲಿ ವಿವರಿಸಿದ್ದೇವೆ: ಖಿನ್ನತೆಯನ್ನು ಗುಣಪಡಿಸದಿದ್ದರೆ ಜೀವಕ್ಕೆ ಅಪಾಯ!

ಸಂತಾನ ಹೀನತೆ ಮತ್ತು ಗರ್ಭಾವಧಿ
ಹಾರ್ಮೋನುಗಳ ಬದಲವಾಣೆಯು ಮಹಿಳೆಯರಲ್ಲಿ ಸಂತಾನವಿಲ್ಲದಿದ್ದಾಗ ಸಹ ಕಾಣಿಸಿಕೊಳ್ಳುತ್ತವೆ. ಇನ್ನು ಆಕೆ ಗರ್ಭಿಣಿಯಾದಾಗ ಆಕೆಯಲ್ಲಿ ಹಲವಾರು ತೆರನಾದ ಹಾರ್ಮೋನುಗಳ ಬದಲಾವಣೆ ಕಂಡು ಬರುತ್ತದೆ. ಇದರ ಜೊತೆಗೆ ಗರ್ಭಾವಧಿಯ ಮುಂದುವರಿದ ಹಂತಗಳಲ್ಲಿ ಆಕೆಯು ಗರ್ಭಪಾತದ ಅಪಾಯವನ್ನು ಎದುರಿಸಬೇಕಾಗುತ್ತದೆ. ಈ ವಿಚಾರಗಳೆಲ್ಲವು ಸೇರಿ ಆಕೆಗೆ ಖಿನ್ನತೆಯನ್ನು ನೀಡುತ್ತವೆ.

ಆರೋಗ್ಯ ಸಮಸ್ಯೆಗಳು
ಹಲವಾರು ಹೆಂಗಸರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಇದರಲ್ಲಿ ಮಾನಸಿಕ ಸಮಸ್ಯೆಗಳು, ಡಯಟ್‍ನ ಪರಿಣಾಮಗಳು, ಅಂಗ ವೈಕಲ್ಯ, ಧೂಮಪಾನವನ್ನು ತೊರೆಯುವುದು, ಇತ್ಯಾದಿ ಸಮಸ್ಯೆಗಳು ಸೇರಿರುತ್ತವೆ. ಅದರಲ್ಲಿಯೂ ಮಹಿಳೆಯರಲ್ಲಿ ದೈಹಿಕ ಆರೋಗ್ಯವು ಸಮರ್ಪಕವಾಗಿರುವುದಿಲ್ಲ, ಆಗ ಆಕೆಯಲ್ಲಿ ಖಿನ್ನತೆ ತಾನೇ ತಾನಾಗಿ ಕಾಣಿಸಿಕೊಳ್ಳುತ್ತದೆ.

ಮುಟ್ಟು ನಿಲ್ಲುವ ಅವಧಿ
ಮುಟ್ಟು ನಿಲ್ಲುವ ಅವಧಿಯಲ್ಲಿ ಪ್ರತಿ ಹೆಂಗಸರು ಸಹ ವಿಭಿನ್ನವಾದ ರೀತಿಯ ಮಾನಸಿಕ ತುಮುಲಗಳನ್ನು ಅನುಭವಿಸುತ್ತಾರೆ. ಈ ಅವಧಿಯಲ್ಲಿ ಹೆಂಗಸರಲ್ಲಿ ಕಂಡು ಬರುವ ಮುಟ್ಟು ಸಂಪೂರ್ಣವಾಗಿ ನಿಲ್ಲುತ್ತದೆ. ಈ ಅವಧಿಯಲ್ಲಿ ಆಕೆಯು ಮಗುವಿಗೆ ಜನ್ಮ ನೀಡುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾಳೆ. ಈ ಅವಧಿಯಲ್ಲಿ ಗರ್ಭಾಶಯವು ಸಹ ಬದಲಾವಣೆಗಳಿಗೆ ಗುರಿಯಾಗುತ್ತದೆ. ಹೆಣ್ಣಿಗೆ ಖಿನ್ನತೆಯ ಇತಿಹಾಸವಿದ್ದಲ್ಲಿ, ಈ ಅವಧಿಯಲ್ಲಿ ಸಹ ಆಕೆ ಖಿನ್ನತೆಗೆ ಗುರಿಯಾಗುತ್ತಾಳೆ. ಖಿನ್ನತೆಯಿಂದ ಹೊರಬರಲು 20 ಟಿಪ್ಸ್

ಬಾಡಿ ಮಸಾಜ್ ವಿಚಾರ
ಹೆಣ್ಣು ತಾರುಣ್ಯಕ್ಕೆ ಕಾಲಿಟ್ಟಾಗ, ಈ ಅವಧಿಯಲ್ಲಿ ಲಿಂಗ ವ್ಯತ್ಯಾಸದ ಕಾರಣದಿಂದಾಗಿ ಖಿನ್ನತೆ ಕಂಡು ಬರುತ್ತದೆ. ಇದರ ಜೊತೆಗೆ ಹೆಣ್ಣು ಋತುಮತಿಯಾದಾಗ ಕಂಡು ಬರುವ ಲಿಂಗ ವ್ಯತ್ಯಾಸವು ಸಹ ಆಕೆಗೆ ಖಿನ್ನತೆಯನ್ನು ನೀಡುತ್ತದೆ. ದೇಹದಲ್ಲಿ ಕಾಣಿಸಿಕೊಳ್ಳುವ ಅತೃಪ್ತಿ ಸಹ ಆಕೆಯಲ್ಲಿ ಖಿನ್ನತೆಯನ್ನು ನೀಡುತ್ತದೆ. ಋತುಮತಿಯಾಗುವ ಅವಧಿಯಲ್ಲಿ ಕಾಣಿಸಿಕೊಳ್ಳುವ ಲೈಂಗಿಕ ಬೆಳವಣಿಗೆಯು ಸಹ ಆಕೆಯ ಖಿನ್ನತೆಗೆ ಪ್ರಮುಖ ಕಾರಣವಾಗಿರುತ್ತದೆ. ಆತ್ಮಹತ್ಯೆ ಯೋಚನೆಯನ್ನು ತಡೆಯಬಹುದೇ?

ಕೆಲಸದ ಹೊರೆ
ತಮ್ಮ ಸಾಮರ್ಥ್ಯವನ್ನು ಮೀರಿದ ಕೆಲಸದ ಹೊರೆಯನ್ನು ಹೊತ್ತುಕೊಳ್ಳುವ ಜನರಲ್ಲಿ ಖಿನ್ನತೆಯು ಕಂಡು ಬರುತ್ತದೆ. ಅದರಲ್ಲೂ ಗಂಡಸರಿಗೆ ಹೋಲಿಸಿದರೆ, ಮನೆಯಲ್ಲಿರುವ ಮತ್ತು ಕೆಲಸ ಮಾಡುವ ಹೆಂಗಸರಲ್ಲಿ ಒತ್ತಡವು ಅಧಿಕವಾಗಿ ಕಂಡು ಬರುತ್ತದೆ. ಸಂಶೋಧಕರ ಪ್ರಕಾರ ಗಂಡಸರಿಗಿಂತ ಹೆಂಗಸರಲ್ಲಿ ಒತ್ತಡವನ್ನು ಉಂಟು ಮಾಡುವ ಹಾರ್ಮೋನುಗಳು ಅಧಿಕವಾಗಿ ಕಂಡು ಬರುತ್ತವೆ.
ಹೆಂಗಸರಲ್ಲಿ ಒಂದಲ್ಲ ಒಂದು ಕಾರಣಗಳಿಗಾಗಿ ಖಿನ್ನತೆಯು ಕಾಣಿಸಿಕೊಳ್ಳುತ್ತದೆ. ಅದರಲ್ಲೂ ನಕಾರಾತ್ಮಕ ಮನೋಭಾವನೆಗಳು ಈ ಖಿನ್ನತೆಗೆ ಅವರನ್ನು ದೂಡುತ್ತದೆ. ಅದರ ಬದಲಿಗೆ ಧನಾತ್ಮಕವಾಗಿ ಆಲೋಚನೆ ಮಾಡುವುದರಿಂದ ಈ ಸಮಸ್ಯೆಯಿಂದ ಅವರು ಹೊರಬರಬಹುದು.

English summary

What are the causes and effects of depression in women?

Depression is not about a single size that fits people with all age as well as the gender. Today people are constantly getting themselves stressed out in the want of making their seniors and bosses happy after allotment of a project.
Story first published: Wednesday, November 5, 2014, 18:47 [IST]
X
Desktop Bottom Promotion