For Quick Alerts
ALLOW NOTIFICATIONS  
For Daily Alerts

ಚಕಿತಗೊಳಿಸುವ ಆಲೀವ್ ಎಣ್ಣೆ ಮಾಡುವ ಅದ್ಭುತ ಕರಾಮತ್ತು!

By Arpitha Rao
|

ಇತ್ತೀಚಿನ ದಿನಗಳಲ್ಲಿ ಆಲೀವ್ ಎಣ್ಣೆಯನ್ನು ಸಾಕಷ್ಟು ಬಳಸಲಾಗುತ್ತಿದೆ. ವಿಜ್ಞಾನವು ಇದರ ಬಗ್ಗೆ ಸಂಶೋಧನೆ ನಡೆಸಿ ಆಲೀವ್ ಎಣ್ಣೆಯಿಂದ ಸಾಕಷ್ಟು ಅನುಕೂಲತೆಗಳಿವೆ ಎಂಬುದು ಬೆಳಕಿಗೆ ಬಂದಿವೆ.ಆಲೀವ್ ಎಣ್ಣೆಯ ಅನುಕೂಲತೆ ಬಗ್ಗೆ ತಿಳಿಯಲು ಈ ಕೆಳಗೆ ನೀಡಲಾಗಿದೆ. .

ಹೃದಯ ರೋಗಗಳು
ಅಲೀವ್ ಎಣ್ಣೆ ಕೊಲೆಸ್ಟ್ರಾಲ್, ಟ್ರೈಗ್ಲಿಸರಿಡ್ಸ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಅದಲ್ಲದೆ ಕೊಬ್ಬಿನ ಅಂಶವಿರುವ ಎಚ್ ಡಿ ಎಲ್ ಕೊಲೆಸ್ಟ್ರಾಲ್ ಪ್ರಮಾಣವನ್ನು ಕೂಡ ಸಮತೋಲನದಲ್ಲಿ ಇಡುತ್ತದೆ.ಇದರ ಜೊತೆಗೆ ಅಪಧಮನಿಗಳ ಸ್ಥಿತಿಸ್ಥಾಪಕ ಉಂಟು ಮಾಡುತ್ತದೆ. ಪ್ರತಿದಿನ ಎರಡು ಚಮಚ ಅಲೀವ್ ಎಣ್ಣೆ ಬಳಸುವುದರಿಂದ ಪಾರ್ಶ್ವವಾಯು ಮತ್ತು ಹೃದಯಾಘಾತ ಸಮಸ್ಯೆಗಳನ್ನು ತಡೆಯಬಹುದು.

ಆಸ್ಟಿಯೊಪೊರೋಸಿಸ್(ಅಸ್ಥಿರಂದ್ರತೆ)
ಆಲೀವ್ ಎಣ್ಣೆಯ ಹೇರಳವಾದ ಬಳಕೆಯಿಂದ ಕ್ಯಾಲ್ಸಿಯಂ ಮತ್ತು ಖನಿಜಾಂಶಗಳು ಮೂಳೆಯನ್ನು ಸದೃಡಗೊಳಿಸುತ್ತವೆ. ದೇಹವು ಕ್ಯಾಲ್ಸಿಯಂನ್ನು ಸುಲಭವಾಗಿ ಹೀರಿಕೊಳ್ಳುವುದರಿಂದ ಆಸ್ಟಿಯೊಪೊರೋಸಿಸ್ ಬರದಂತೆ ತಡೆಯುತ್ತದೆ.

Food-lovers have never entirely forgotten the delightful golden fluid, but in recent years, a new awareness of the benefits of olive oil has been born. Science has turned its investigative eye upon it in recent years, and numerous studies have only reinforced the notion that olive oil is an amazing substance with numerous benefits.

ಮಧುಮೇಹ
ಆಲೀವ್ ತೈಲದಲ್ಲಿ ಅಪರ್ಯಾಪ್ತ ಕೊಬ್ಬುಗಳು ಕಡಿಮೆ ಇವೆ ಎಂದು ಸಾಬೀತಾಗಿದೆ. ಮಧ್ಯಮ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್ ಇವುಗಳು ಇರುವುದರಿಂದ ಮಧುಮೇಹವನ್ನು ತಡೆಯುತ್ತದೆ. ಇದು ರಕ್ತದಲ್ಲಿ ಸಕ್ಕರೆ ಪ್ರಮಾಣ ಕಡಿಮೆ ಮಾಡಿ ಇನ್ಸುಲಿನ್ ಪ್ರಮಾಣ ಹೆಚ್ಚಿಸಲು ಸಹಾಯ ಮಾಡುತ್ತವೆ. ಆಲೀವ್ ಎಣ್ಣೆ ನೀಡುತ್ತೆ ಕೋಮಲ ತ್ವಚೆ

ಸೌಂದರ್ಯ ಅನುಕೂಲತೆಗಳು:

*ಚರ್ಮವನ್ನು ಸುಂದರವಾಗಿಸುತ್ತದೆ
ಮೊಡವೆ ಮತ್ತು ಬ್ಲಾಕ್ ಹೆಡ್ಸ್ ಗಳಾದಾಗ ತೈಲ ಬಳಸುವುದು ಸೂಕ್ತವಲ್ಲ ಎಂದೆನಿಸಿದರೂ ಕೂಡ ಆಲೀವ್ ಎಣ್ಣೆ ಮತ್ತು ಉಪ್ಪನ್ನು ಬಳಸುವುದರಿಂದ ಮೊಡವೆ ಹೋಗಲಾಡಿಸಿ ಸೌಂದರ್ಯ ವೃದ್ಧಿಯಾಗುತ್ತದೆ.ಆಲೀವ್ ಎಣ್ಣೆ ಚರ್ಮದ ತೇವಾಂಶ ಕಾಪಾಡಿಕೊಳ್ಳಲು ಸೂಕ್ತ.ನಿಮ್ಮದು ಒಣ ಚರ್ಮವಾಗಿದ್ದರೆ ಮುಖ ಮತ್ತು ದೇಹಕ್ಕೆ ಇದನ್ನು ಹಚ್ಚಿ ಮಸಾಜ್ ಮಾಡುವುದರಿಂದ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು.ಮೊಣಕೈ ಮತ್ತು ಮೊಣಕಾಲುಗಳು ಹೆಚ್ಚು ಒಣಗಿದಂತಿರುತ್ತವೆ ಆಲೀವ್ ಎಣ್ಣೆ ಬಳಸುವುದರಿಂದ ಇದರ ತೇವಾಂಶ ಹೆಚ್ಚಿಸಬಹುದು. ಆಲೀವ್ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಚರ್ಮಕ್ಕೆ ಪುನರ್ ಚೇತನ ದೊರೆಯುತ್ತದೆ.ಇದು ಯಾವುದೇ ರೀತಿ ಕಲೆಗಳು ಆಗದಂತೆ ತಡೆಯುತ್ತದೆ. ದೇಹಕ್ಕೆ ವರದಾನವಾಗಿರುವ ಆಲೀವ್ ಎಣ್ಣೆಯ ವಿಶೇಷತೆ ಏನು?

*ಕೂದಲು ಮತ್ತು ನೆತ್ತಿಯ ತೇವಾಂಶ ಕಾಪಾಡುತ್ತದೆ
ನೀವು ಒಣಗಿದ,ಹೊಟ್ಟು ಹೊಂದಿದ ನೆತ್ತಿಯನ್ನು ಹೊಂದಿದ್ದರೆ ಅಲೀವ್ ಆಯಿಲ್ ಬಳಸುವುದು ಸೂಕ್ತ.ಆಲೀವ್ ಎಣ್ಣೆಯನ್ನು ನೆತ್ತಿಗೆ ಹಚ್ಚಿ ಮಸಾಜ್ ಮಾಡಿ ಹೊಳೆಯುವ ಕೂದಲನ್ನು ಪಡೆಯಿರಿ.ಆಲೀವ್ ಎಣ್ಣೆ ಕೂದಲನ್ನು ಹೆಚ್ಚು ಜಿಡ್ಡು ಮಾಡುವುದಿಲ್ಲ.ವಾರದಲ್ಲಿ ಒಮ್ಮೆ ಹಚ್ಚಿ ಅರ್ಧ ಗಂಟೆಯ ನಂತರ ಸ್ನಾನ ಮಾಡುವುದರಿಂದ ಕೂದಲು ಸುಂದರವಾಗುತ್ತದೆ.ಸೀಳು ಕೂದಲು ನಿಮ್ಮದಾಗಿದ್ದರೆ ಆಲೀವ್ ಎಣ್ಣೆಯನ್ನು ಸ್ವಲ್ಪ ಬೆಚ್ಚಗೆ ಮಾಡಿ ಬಳಸಿ.ಆದರೆ ಆಲೀವ್ ಎಣ್ಣೆಯನ್ನು ಹೆಚ್ಚು ಬಿಸಿ ಮಾಡಬೇಡಿ ಇದರಿಂದ ಎಣ್ಣೆಯಲ್ಲಿರುವ ಪೋಷಕಾಂಶಗಳು ನಾಶವಾಗುತ್ತವೆ.ಹೊಳೆಯುವ ಕೂದಲನ್ನು ಪಡೆಯಲು ಈ ಎಣ್ಣೆಯೊಂದಿಗೆ ಮೊಟ್ಟೆಯನ್ನು ಕೂಡ ಬಳಸಬಹುದು.

*ಸೆಲ್ಯುಲೈಟ್ ಕಡಿಮೆ ಮಾಡುತ್ತದೆ
ಕಾಫಿಯಲ್ಲಿರುವ ಕೆಫಿನ್ ಅಂಶ ನಂತರದ ದಿನಗಳಲ್ಲಿ ಸೆಲ್ಯುಲೈಟ್ ಪ್ರಮಾಣವನ್ನು ತಗ್ಗಿಸಬಹುದು. ಜೊತೆಗೆ ಕಾಫಿಯಲ್ಲಿರುವ ಕೆಫಿನ್ ಅಂಶ ರಕ್ತನಾಳಗಳನ್ನು ಸಡಿಲಗೊಳಿಸುತ್ತದೆ ಇದರಿಂದ ತಾತ್ಕಾಲಿಕವಾಗಿ ಅಂಗಾಂಶಗಳು ಬಿಗಿಗೊಳ್ಳುತ್ತದೆ.ಜೊತೆಗೆ ಪರಿಚಲನೆಯನ್ನು ಹೆಚ್ಚಿಸಿ ನೀರಿನ ಅಂಶ ಕಡಿಮೆ ಮಾಡಿ ಸೆಲ್ಯೂಲೈಟ್ ಅಂಶ ಹೆಚ್ಚಿಸುತ್ತದೆ.ಆಲೀವ್ ಎಣ್ಣೆಯನ್ನು ನೇರವಾಗಿ ಚರ್ಮಕ್ಕೆ ಹಚ್ಚುವುದರಿಂದ ಸುಂದರವಾಗಿಸಿಕೊಳ್ಳಬಹುದು.

English summary

ಆಲೀವ್ ಎಣ್ಣೆಯಿಂದಾಗುವ ಸೌಂದರ್ಯ ಮತ್ತು ಆರೋಗ್ಯದ ಅನುಕೂಲತೆಗಳು

Food-lovers have never entirely forgotten the delightful golden fluid, but in recent years, a new awareness of the benefits of olive oil has been born. Science has turned its investigative eye upon it in recent years, and numerous studies have only reinforced the notion that olive oil is an amazing substance with numerous benefits.
Story first published: Friday, November 21, 2014, 19:18 [IST]
X
Desktop Bottom Promotion