For Quick Alerts
ALLOW NOTIFICATIONS  
For Daily Alerts

ಒಂದು ತಿಂಗಳಲ್ಲೇ ತೂಕ ಕಳೆದುಕೊಳ್ಳಲು ಸುಲಭ ಉಪಾಯಗಳು

By Super
|

ತೂಕ ಕಳೆದುಕೊಳ್ಳುವಲ್ಲಿ ನಮ್ಮ ಪ್ರಯತ್ನಗಳಿಗೇಕೆ ನಮ್ಮ ಶರೀರ ಸ್ಪಂದಿಸುತ್ತಿಲ್ಲ ಎಂಬ ನಿಟ್ಟಿನಲ್ಲಿ ಯೋಚಿಸಿದರೆ ಇದಕ್ಕೆ ಉತ್ತರ ದೊರಕುತ್ತದೆ. ನಾವು ಸೇವಿಸುವ ಆಹಾರದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪೌಷ್ಟಿಕಾಂಶಗಳಿರುವುದು, ನಾವು ಮಾಡಿದ ವ್ಯಾಯಾಮ ಶೇಖರಗೊಂಡ ಕೊಬ್ಬನ್ನು ಕರಗಿಸದೇ ಅಂದು ಸಿಕ್ಕ ಆಹಾರದ ಪಾತ್ರವನ್ನಷ್ಟೇ ಕಬಳಿಸಿರುವುದು ಇದಕ್ಕೆ ಕಾರಣಗಳು. ಈ ನಿಟ್ಟಿನಲ್ಲಿ ಅತ್ಯಂತ ಸೂಕ್ತವಾದ ಎಂಟು ಆಹಾರ ವಿಧಾನಗಳನ್ನು ವಿವರಿಸಲಾಗಿದೆ. ಇಳಿಸಿದ ತೂಕವನ್ನು ಕಾಯ್ದುಕೊಳ್ಳಲು 11 ಸುಲಭ ಸಲಹೆಗಳು

ಉಪಾಹಾರ


ಯಾವುದೇ ಕಾರಣಕ್ಕೂ ಬೆಳಗ್ಗಿನ ಉಪಾಹಾರವನ್ನು ತ್ಯಜಿಸಬಾರದು. ಏಕೆಂದರೆ ಮಲಗಿ ಎದ್ದ ಬಳಿಕ ಮೆದುಳಿಗೆ ಹೆಚ್ಚಿನ ರಕ್ತದ ಅಗತ್ಯವಿದ್ದು ಉಪಾಹಾರವಿಲ್ಲದಿದ್ದರೆ ರಕ್ತದಲ್ಲಿ ಆಮ್ಲಜನಕ ಸಾಕಷ್ಟು ಲಭ್ಯವಾಗದೇ ಮೆದುಳಿನ ಚಟುವಟಿಕೆಗಳಲ್ಲಿ ಬಾಧೆಯುಂಟಾಗುತ್ತದೆ. ಆದರೆ ಹೆಚ್ಚಿನ ಪ್ರಮಾಣದಲ್ಲಿ ಸೇವಿಸದಿರುವುದು ಜಾಣತನ. ಎಣ್ಣೆಯ ತಿಂಡಿಗಳಿಗಿಂತ ಹಬೆಯಲ್ಲಿ ಬೇಯಿಸಿದ ಅಂದರೆ ಇಡ್ಲಿ, ಕಡುಬು, ಶ್ಯಾವಿಗೆ ಮೊದಲಾದವು ದೇಹಕ್ಕೆ ಅತ್ಯುತ್ತಮವಾಗಿದೆ.

ನೀರು


ತೂಕ ಕಳೆದುಕೊಳ್ಳಬೇಕೆಂದಿದ್ದರೆ ಸಾಕಷ್ಟು ನೀರು ಕುಡಿಯುತ್ತಿರಿ. ದೇಹಕ್ಕೆ ಪ್ರತಿದಿನ ಮೂರು ಲೀಟರಿನಷ್ಟು ನೀರು ಬೇಕು. ಆದರೆ ಈ ನೀರನ್ನು ಒಂದೆರಡು ಬಾರಿಗೆ ಕುಡಿದುಬಿಡುವುದಕ್ಕಿಂತ ಸ್ವಲ್ಪ ಸ್ವಲ್ಪವಾಗಿ ಪ್ರತಿ ಘಂಟೆಗೊಮ್ಮೆ ಅಥವಾ ಎರಡು ಘಂಟೆಗೊಮ್ಮೆ ಕುಡುಯುವುದು ತೂಕ ಕಳೆದುಕೊಳ್ಳಲು ನೆರವಾಗುವ ಗುಟ್ಟು. ಬೆಳಿಗ್ಗೆ ಎದ್ದ ತಕ್ಷಣ ಹಾಗೂ ರಾತ್ರಿ ಮಲಗುವ ಮುನ್ನ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಬೇಕು.

ಪ್ರೋಟೀನ್


ಬೆಳಗ್ಗಿನ ಉಪಾಹಾರದಲ್ಲಿ ಹೆಚ್ಚಿನ ಪ್ರೋಟೀನ್ ಯುಕ್ತ ಆಹಾರಗಳನ್ನು ಸೇವಿಸಿವುದು ತೂಕ ಕಳೆದುಕೊಳ್ಳಲು ಸಹಕಾರಿ. ಮೊಟ್ಟೆ, ಧಾನ್ಯಗಳು, ಮೊಳಕೆ ಬರಿಸಿದ ಕಾಳುಗಳು, ಓಟ್ಸ್ ಮೊದಲಾದವುಗಳನ್ನು ಸೇವಿಸಬಹುದು. ಈ ಆಹಾರಗಳನ್ನು ಅರಗಿಸಿಕೊಳ್ಳಲು ಜೀರ್ಣಕ್ರಿಯೆಗೆ ದೇಹದಲ್ಲಿ ಶೇಖರವಾಗಿರುವ ಕೊಬ್ಬನ್ನು ಉಪಯೋಗಿಸಬೇಕಾಗಿ ಬರುವುದರಿಂದ ತೂಕ ಕಳೆದುಕೊಳ್ಳಲು ನೆರವಾಗುತ್ತದೆ. ಆದರೆ ಈ ಪ್ರಮಾಣ ಕಡಿಮೆ ಇರಬೇಕು. ಒಂದು ವೇಳೆ ರುಚಿ ಹಿಡಿಸಿ ಹೆಚ್ಚು ತಿಂದರೆ ಶೇಖರವಾಗಿರುವ ಕೊಬ್ಬು ಕರಗುವ ಬದಲು ಈ ಆಹಾರದಿಂದ ಇನ್ನಷ್ಟು ಕೊಬ್ಬು ಉತ್ಪತ್ತಿಯಾಗಿ ಶೇಖರಗೊಂಡಿರುವ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸುತ್ತದೆ. ತೂಕ ಹೆಚ್ಚಲು ಇದೇ ಪ್ರಮುಖ ಕಾರಣ.

ಹೆಚ್ಚಿನ ಕಾರ್ಬೋಹೈಡ್ರೇಟುಗಳನ್ನು ಸೇವಿಸದಿರಿ


ದೇಹಕ್ಕೆ ಹೆಚ್ಚಿನ ಕೊಬ್ಬು ಕಾರ್ಬೋಹೈಡ್ರೇಟುಗಳು ಮತ್ತು ಸಕ್ಕರೆಯ ಮೂಲಕ ದೊರಕುತ್ತದೆ. ಅಕ್ಕಿ, ಸಿಹಿತಿಂಡಿಗಳು ಮೊದಲಾದವು ಹೆಚ್ಚಿನ ಕಾರ್ಬೋಹೈಡ್ರೇಟುಗಳನ್ನು ಹೊಂದಿರುವುದರಿಂದ ದೇಹದಲ್ಲಿ ಶೇಖರವಾದ ಕೊಬ್ಬನ್ನು ಉಪಯೋಗಿಸುವ ಪ್ರಮೇಯವೇ ಬರುವುದಿಲ್ಲ. ಸಕ್ಕರೆಯನ್ನು ದೇಹಕ್ಕೆ ನೀಡುವ ಅತಿದೊಡ್ಡ ಶತ್ರು ಎಂದರೆ ಲಘು ಪಾನೀಯಗಳು. ಪೆಪ್ಸಿ ಕೋಕಾಕೋಲ ಮೊದಲಾದವುಗಳಲ್ಲಿ ಸಾಮಾನ್ಯಕ್ಕಿಂತಲೂ ಏಳೆಂಟು ಪಟ್ಟು ಹೆಚ್ಚು ಸಕ್ಕರೆ ಇರುವುದರಿಂದ ಪ್ರತಿಬಾರಿ ಕುಡಿದಾಗ ಅತಿಹೆಚ್ಚಿನ ಪ್ರಮಾಣದಲ್ಲಿ ದೇಹಕ್ಕೆ ಸಕ್ಕರೆ ಪೂರೈಕೆಯಾಗಿ ಕೊಬ್ಬು ಕಳೆದುಕೊಳ್ಳುವ ಎಲ್ಲಾ ಪ್ರಯತ್ನಗಳಿಗೆ ತಣ್ಣೀರೆರೆಚುತ್ತವೆ.
English summary

The Best Diet Tips To Lose Weight In Just A Month

This diet, however, requires some bit of exercise if not too much of it. Let us go ahead and look at these diet tips for weight loss. Here are best ways to lose weight by following a diet only. Read on...
X
Desktop Bottom Promotion