ಮಹಿಳೆಯರನ್ನು ಕಾಡುವ ಲೋ ಈಸ್ಟ್ರೋಜನ್ ಲಕ್ಷಣಗಳು

Posted By:
Subscribe to Boldsky

ಸಾಮಾನ್ಯವಾಗಿ ಲೋ ಈಸ್ಟ್ರೋಜನ್ ಲಕ್ಷಣಗಳು ಹೆಚ್ಚಾಗಿ ಮಹಿಳೆಯರಲ್ಲಿ ಕಂಡುಬರುತ್ತವೆ. ಆದರೆ ಈಸ್ಟ್ರೋಜನ್ ಹಾರ್ಮೋನ್ ಎಂದರೇನು, ಈಸ್ಟ್ರೋಜನ್ ಹೇಗೆ ಕಾರ್ಯ ನಿರ್ವಹಿಸುತ್ತದೆ, ಹಾಗೂ ಲೋ ಈಸ್ಟ್ರೋಜನ್ ಹೇಗೆ ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆ ಎಂಬುದಕ್ಕೆ ಈ ಲೇಖನವನ್ನು ಓದಿ:

ಈಸ್ಟ್ರೋಜನ್ ಒಂದು ಮಹಿಳಾ ಹಾರ್ಮೋನು ಆಗಿದ್ದು ಆಕೆಯ ಆಂಗಿಕ ಲಕ್ಷಣಗಳಿಗೆ ಕಾರಣವಾಗಿದೆ. ದೊಡ್ಡ ಸ್ತನಗಳು, ಉತ್ತಮ ಆಕಾರದ ನಿತಂಬಗಳು, ಗಂಡಸರಿಗಿಂತ ಹೆಚ್ಚಾಗಿ ಕಂಡುಬರುವ ದೇಹದ ಕೊಬ್ಬುಗಳು ಈ ಈಸ್ಟ್ರೋಜನ್ ಮಟ್ಟಗಳಿಂದ ಉಂಟಾಗಿದೆ.

ಮೃದುವಾದ ತ್ವಚೆ ಮತ್ತು ದೇಹದಲ್ಲಿ ಕೂದಲಿನ ಪ್ರಮಾಣ ಕಡಿಮೆ ಇರುವುದೂ ಸಹ ಮಹಿಳೆಯಲ್ಲಿರುವ ಸೆಕ್ಸ್ ಹಾರ್ಮೋನ್‌ನ ಫಲಿತಾಂಶವಾಗಿದೆ. ಮಹಿಳೆಯರು ಸಾಮಾನ್ಯ, ಅಸಹಜವಾದ ಅಥವಾ ಕಡಿಮೆ ಈಸ್ಟ್ರೋಜನ್ ಮಟ್ಟಗಳನ್ನು ಹೊಂದಬಹುದು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಹಾರ್ಮೋನುಗಳನ್ನು ಹೀಗೆ ಬ್ಯಾಲೆನ್ಸ್ ಮಾಡಿ

ಈ ಲಕ್ಷಣಗಳ ಮೂಲಕ ದೇಹದಲ್ಲಿರುವ ಹಾರ್ಮೋನಲ್ ಬದಲಾವಣೆಗಳನ್ನು ವೀಕ್ಷಿಸಬಹುದು. ಮಹಿಳೆಯ ಈಸ್ಟ್ರೋಜನ್ ಮಟ್ಟಗಳ ಏರಿಳಿತಗಳನ್ನು ಹಲವಾರು ಲಕ್ಷಣಗಳು ತೋರಿಸುತ್ತವೆ.

ಹೆಚ್ಚಿನ ಮಹಿಳೆಯರು ಕಡಿಮೆ ಮಟ್ಟದ ಈಸ್ಟ್ರೋಜನ್‌ನಿಂದ ಬಳಲುತ್ತಿದ್ದಾರೆ. ಮುಟ್ಟಿನ ನಂತರ ಮಾತ್ರ ಮಹಿಳೆಯರಾದ್ಯಂತ ಈ ಹಾರ್ಮೋನ್‌ನ ಕಡಿಮೆ ಪ್ರಮಾಣಗಳು ಕಂಡುಬರುವುದಿಲ್ಲ. ಯುವ ವಯಸ್ಸಿನ ಮಹಿಳೆಯರೂ ಸಹ ಈಸ್ಟ್ರೋಜನ್ ಮಟ್ಟದ ಇಳಿಕೆಯಿಂದ ಬಳಲುತ್ತಾರೆ.

ದೇಹದಲ್ಲಿ ಈಸ್ಟ್ರೋಜನ್ ಮಟ್ಟವು ಇಳಿಕೆಯಾಗಿದೆ ಎಂಬುದನ್ನು ತೋರಿಸುವ ಹಲವಾರು ಲಕ್ಷಣಗಳಿವೆ. ಬಳಲಿಕೆ, ಕಡಿಮೆ ಲೈಂಗಿಕ ಪ್ರಚೋದನೆ, ಅನಿಯಮಿತ ಅಥವಾ ಮುಟ್ಟಿನ ಕೊರತೆ, ಮರೆವು, ನಿದ್ರಾಹೀನತೆ, ಬೆವರು ಗುಳ್ಳೆಗಳು, ರಾತ್ರಿ ಬೆವರುವುದು ಮಹಿಳೆಯರಲ್ಲಿ ಕಾಣುವ ಲೋ ಈಸ್ಟ್ರೋಜನ್ ಮಟ್ಟದ ಲಕ್ಷಣಗಳಾಗಿವೆ.

ಭಾವನೆಗಳಲ್ಲಿ ಬದಲಾವಣೆಯುಂಟಾಗುವುದು ಸಹ ಲೋ ಈಸ್ಟ್ರೋಜನ್ ಕೊರತೆಯಿಂದಾಗಿ ಮಹಿಳೆಯರಲ್ಲಿ ಉಂಟಾಗುವ ಸಾಮಾನ್ಯ ಲಕ್ಷಣವಾಗಿದೆ. ನೀವು ಗರ್ಭಿಣಿಯಾಗಲು ಪ್ರಯತ್ನಿಸುತ್ತಿದ್ದರೂ ಯಶ್ವಸ್ವಿಯಾಗಲು ಸಾಧ್ಯವಾಗದಿದ್ದಲ್ಲಿ ಇದಕ್ಕೆ ಮುಖ್ಯ ಕಾರಣ ಈಸ್ಟ್ರೋಜನ್ ಮಟ್ಟದ ಇಳಿಕೆಯಾಗಿದೆ.

ಮಹಿಳೆಯರಲ್ಲಿ ಕಂಡು ಬರುವ ಕಡಿಮೆ ಈಸ್ಟ್ರೋಜನ್ ಮಟ್ಟವನ್ನು ಕಂಡುಹಿಡಿಯಲು ಕೆಲವೊಂದು ಸಾಮಾನ್ಯ ಚಿಹ್ನೆಗಳನ್ನು ಇಲ್ಲಿ ನೀಡಲಾಗಿದೆ. ಈಸ್ಟ್ರೋಜನ್ ಮಟ್ಟ ಹೇಗೆ ಇಳಿಕೆಯಾಗುತ್ತದೆ ಎಂಬುದನ್ನು ಆಧರಿಸಿ ಮಹಿಳೆಯರಲ್ಲಿ ಈ ಚಿಹ್ನೆಗಳು ಬದಲಾಗುತ್ತವೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮಲಗಿದ ತಕ್ಷಣ ನಿದ್ದೆ ಬರಬೇಕೆ? ಈ ಆಹಾರಗಳನ್ನು ತಿನ್ನಿ

ಬೇಗನೇ ಮುಟ್ಟು ನಿಲ್ಲುವುದು

ಬೇಗನೇ ಮುಟ್ಟು ನಿಲ್ಲುವುದು

ಮಹಿಳೆಯ ದೇಹದಲ್ಲಿ ಈಸ್ಟ್ರೋಜನ್ ಮಟ್ಟ ಕಡಿಮೆಯಾದಾಗ ಉಂಟಾಗುವ ಲಕ್ಷಣ ಇದಾಗಿದೆ. ಬೇಗನೇ ಮುಟ್ಟು ನಿಲ್ಲುವುದರೊಂದಿಗೆ ಬೆವರು ಗುಳ್ಳೆಗಳು, ಹೆಚ್ಚಿದ ಹೃದಯ ಬಡಿತ, ಶೀತ ಮತ್ತು ರಾತ್ರಿ ಬೆವರುವಿಕೆಗಳನ್ನು ಜೊತೆಗೂಡಿರುತ್ತವೆ.

ಬೆಳಗ್ಗಿನ ಸುಸ್ತು

ಬೆಳಗ್ಗಿನ ಸುಸ್ತು

ಬೆಳಗ್ಗಿನ ಸಮಯದಲ್ಲಿ ಸುಸ್ತು, ಬಳಲಿಕೆ ನಿಮ್ಮನ್ನು ಕಾಡುತ್ತಿದೆಯೇ? ಲೋ ಈಸ್ಟ್ರೋಜನ್ ಹಾರ್ಮೋನ್‌ನ ಲಕ್ಷಣ ಇದಾಗಿರಬಹುದು.

ನಿದ್ರಾ ಭಂಗಗಳು

ನಿದ್ರಾ ಭಂಗಗಳು

ನಿದ್ರೆಯ ಕೊರತೆ ಉಂಟಾಗುವುದು ಸಹ ಲೋ ಈಸ್ಟ್ರೋಜನ್ ಹಾರ್ಮೋನ್‌ನ ಲಕ್ಷಣವಾಗಿದೆ. ಭಾವನೆಗಳ ಬದಲಾಗುವಿಕೆ ಮತ್ತು ಬೆಳಗ್ಗಿನ ಸಮಯದ ಸುಸ್ತನ್ನು ಇದು ಒಳಗೊಂಡಿರುತ್ತದೆ.

ನೀರು ತುಂಬಿದ ತೂಕ

ನೀರು ತುಂಬಿದ ತೂಕ

ಲೋ ಈಸ್ಟ್ರೋಜನ್ ಹೊಂದಿದ ಮಹಿಳೆಯ ದೇಹ ತೂಕವು ಒಮ್ಮೆಲೇ ಏರುತ್ತದೆ. ಇದು ಮೂಲತಃ ನೀರು ತುಂಬಿದ ತೂಕವಾಗಿದೆ. ಅಥವಾ ವಾಟರ್ ವೈಟ್ ಆಗಿದೆ.

ಡ್ರೈನೆಸ್

ಡ್ರೈನೆಸ್

ತ್ವಚೆ, ಯೋನಿ ಮತ್ತು ಕಣ್ಣುಗಳಲ್ಲಿ ಡ್ರೈನೆಸ್ ಅನ್ನು ಲೋ ಈಸ್ಟ್ರೋಜನ್ ಹಾರ್ಮೋನ್ ಉಂಟು ಮಾಡುತ್ತದೆ.

ಲೈಂಗಿಕ ಆಸಕ್ತಿ ಇಳಿಕೆಯಾಗುವುದು

ಲೈಂಗಿಕ ಆಸಕ್ತಿ ಇಳಿಕೆಯಾಗುವುದು

ಮಹಿಳೆಯರಲ್ಲಿ ಲೈಂಗಿಕ ಆಸಕ್ತಿಯನ್ನು ಉಂಟು ಮಾಡುವ ಜವಬ್ದಾರಿ ಈಸ್ಟ್ರೋಜನ್ ಹಾರ್ಮೋನ್‌ನದ್ದಾಗಿದೆ. ಲೈಂಗಿಕ ತೃಪ್ತಿ ನಿಮಗುಂಟಾಗದಿದ್ದರೆ, ಸಂಭೋಗದ ಸಮಯದಲ್ಲಿ ನೋವು ಉಂಟಾಗುವುದು ಹಾರ್ಮೋನಲ್ ಅಸಮತೋಲದಿಂದ ಉಂಟಾಗುತ್ತದೆ.

ಕೀಲು ನೋವು

ಕೀಲು ನೋವು

ಈಸ್ಟ್ರೋಜನ್ ಮಟ್ಟ ಕಡಿಮೆಯಾದಾಗ ಮೂಳೆಗಳಲ್ಲಿರುವ ಕ್ಯಾಲ್ಶಿಯಂ ಕಡಿಮೆಯಾಗಿ ನೋವನ್ನು ಉತ್ಪತ್ತಿ ಮಾಡುತ್ತದೆ.

ಖಿನ್ನತೆ

ಖಿನ್ನತೆ

ಈ ಆರೋಗ್ಯ ಸಮಸ್ಯೆಯಿಂದ ಬಳಲುವ ಹೆಚ್ಚಿನ ಮಹಿಳೆಯರಲ್ಲಿ ಖಿನ್ನತೆ ತಲೆದೋರುತ್ತದೆ. ಒತ್ತಡ, ಕಿರಿಕಿರಿಯನ್ನು ಈ ಸಮಯದಲ್ಲಿ ಮಹಿಳೆ ಅನುಭವಿಸುತ್ತಾಳೆ.

ಯೋನಿ ಸೋಂಕು

ಯೋನಿ ಸೋಂಕು

ಮೂತ್ರಕೋಶ ಹಾಗೂ ಯೋನಿ ಸೋಂಕು ಈಸ್ಟ್ರೋಜನ್ ಪ್ರಮಾಣದ ಇಳಿಕೆಯಿಂದಾಗಿ ಉಂಟಾಗುತ್ತದೆ.

ಅನಿಯಮಿತ ಮುಟ್ಟು

ಅನಿಯಮಿತ ಮುಟ್ಟು

ಈಸ್ಟ್ರೋಜನ್ ಮಟ್ಟ ಕಡಿಮೆಯಾದಂತೆ, ತುಂಬಾ ಇಳಿಕೆಗೊಂಡಾಗ ಮಹಿಳೆ ತನ್ನ ಮುಟ್ಟಿನ ಚಕ್ರದಲ್ಲಿ ಏರಿಳಿತಗಳನ್ನು ಕಾಣಬಹುದು.

English summary

Low Estrogen Symptoms in Women

Low estrogen symptoms can be seen normally in women. The basic questions are, what is estrogen hormone, how estrogen works and the low estrogen effects in women. Read on to know more.
Please Wait while comments are loading...
Subscribe Newsletter