For Quick Alerts
ALLOW NOTIFICATIONS  
For Daily Alerts

ಬೆಳಗಿನ ಜಾವ ಲಿಂಬೆ ರಸ ಬೆರೆಸಿದ ನೀರನ್ನು ಸೇವಿಸಲು ಮರೆಯದಿರಿ!

|

ನೈಸರ್ಗಿಕವಾಗಿ ದೊರೆಯುವ ತರಕಾರಿ ಹಣ್ಣುಗಳು ಒಂದಿಲ್ಲೊಂದು ವಿಸ್ಮಯಕಾರಿ ಅಂಶಗಳಿಂದ ಸಮ್ಮಿಳಿತವಾಗಿದೆ. ಬರೀ ಸಿಹಿಯಾದ ಹಣ್ಣು ಮತ್ತು ತರಕಾರಿಯಿಂದ ಮಾತ್ರ ಆರೋಗ್ಯವಲ್ಲ. ಹುಳಿ, ಒಗರು, ಕಹಿ ಇರುವ ತರಕಾರಿ ಹಣ್ಣುಗಳೂ ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

ಇಂತಹ ತರಕಾರಿ ಹಣ್ಣುಗಳ ದಿನನಿತ್ಯದ ಸೇವನೆಯಿಂದ ನಮಗೆ ಲಾಭವೇ ಹೆಚ್ಚು ಹೊರತು ನಷ್ಟವಲ್ಲ. ಇಂದು ನಾವು ಹೇಳಹೊರಟಿರುವ ಅಂತಹ ತರಕಾರಿ ಹಣ್ಣು ಲಿಂಬೆ ಹಣ್ಣಾಗಿದೆ. ಇದು ಸಿಹಿ ಅಂಶದಿಂದ ಕೂಡಿಲ್ಲದಿದ್ದರೂ ತನ್ನ ಚಮತ್ಕಾರಿ ಆರೋಗ್ಯ ಸುಧಾರಕ ಅಂಶಗಳಿಂದ ಶ್ರೀಮಂತವಾಗಿದೆ. ಲಿಂಬೆಯಿಂದ ಹಲವಾರು ಆರೋಗ್ಯಕಾರಿ ಪ್ರಯೋಜನಗಳಿವೆ.

ಲಿಂಬೆಯಲ್ಲಿರುವ ಸಿಟ್ರಿಕ್ ಆಸಿಡ್, ಕ್ಯಾಲ್ಶಿಯಂ, ಮೆಗ್ನೇಶಿಯಂ, ವಿಟಮಿನ್ ಸಿ ಮತ್ತು ರೋಗದ ವಿರುದ್ಧ ಹೋರಾಡುವ ಸತ್ವಗಳನ್ನು ಒಳಗೊಂಡಿದೆ. ಶುದ್ಧವಾದ ಲಿಂಬೆ ನೀರಿನಿಂದ ಹಲವಾರು ಪ್ರಯೋಜನಗಳಿವೆ ಅದು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.

ಜೀರ್ಣಕ್ರಿಯೆ

ಜೀರ್ಣಕ್ರಿಯೆ

ದೇಹದಲ್ಲಿರುವ ವಿಷಕಾರಿ ಅಂಶವನ್ನು ಲಿಂಬೆ ನೀರು ಹೊರಹಾಕುತ್ತದೆ. ಜೀರ್ಣಕ್ರಿಯೆ ವ್ಯವಸ್ಥೆಯಲ್ಲಿ ಕಂಡುಬರುವ ವಿಷಕಾರಿ ಅಂಶವನ್ನು ಹೋಗಲಾಡಿಸಲು ಲಿಂಬೆ ನೀರು ಅಗತ್ಯ. ಕ್ಯಾನ್ಸರ್ ರೋಗಿಗಳಲ್ಲಿ ಕರುಳಿನ ಸಮಸ್ಯೆಗಳು ಸುಧಾರಣೆಗೊಳ್ಳಲು ವೈದ್ಯರು ಲಿಂಬೆ ನೀರನ್ನು ಸೂಚಿಸುತ್ತಾರೆ.

ಸ್ವಚ್ಛಕಾರಿ

ಸ್ವಚ್ಛಕಾರಿ

ಮೂತ್ರವನ್ನು ನಿರ್ಬಂಧಿಸುವ ವಿಷಕಾರಿ ಅಂಶಗಳನ್ನು ಲಿಂಬೆ ನೀರು ಹೊರದೂಡುತ್ತದೆ. ಬೆಳಗಿನ ಜಾವ ಲಿಂಬೆ ರಸ ಬೆರೆಸಿದ ನೀರನ್ನು ಸೇವಿಸುವುದು ದೇಹದಲ್ಲಿ ಮೂತ್ರ ವಿಸರ್ಜನೆಯನ್ನು ಹೆಚ್ಚು ಮಾಡುತ್ತದೆ.

ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಲಿಂಬೆ ವಿಟಮಿನ್ ಸಿ ಮತ್ತು ಪೊಟಾಶಿಯಂ ಸತ್ವಗಳಿಂದ ಕೂಡಿದ್ದು ಮೆದುಳು ಹಾಗೂ ನರ ರಚನೆಗಳನ್ನು ಸದೃಢಗೊಳಿಸುತ್ತದೆ. ವಿಟಮಿನ್ ಸಿ ಯನ್ನು ಅಸ್ತಮಾ ಮತ್ತು ಇತರ ಉಸಿರಾಟ ತೊಂದರೆಗಳ ನಿವಾರಣೆಗೆ ಔಷಧವಾಗಿದೆ. ಲಿಂಬೆ ನೀರನ್ನು ನಿತ್ಯವೂ ಸೇವಿಸುವುದರಿಂದ ದೇಹದಲ್ಲಿರುವ ಅಸಿಡಿಟಿ ದೂರಾಗುತ್ತದೆ.

ಶುದ್ಧ ತ್ವಚೆ

ಶುದ್ಧ ತ್ವಚೆ

ತ್ವಚೆಯಲ್ಲಿರುವ ನೆರಿಗೆ ಮೊಡವೆಗಳನ್ನು ಹೋಗಲಾಡಿಸಲು ಲಿಂಬೆಯಲ್ಲಿರುವ ವಿಟಮಿನ್ ಸಿ ಮತ್ತು ಆಂಟಿಯೋಕ್ಸಿಡೆಂಟ್ ಸಹಕಾರಿಯಾಗಿದೆ. ಇದು ತ್ವಚೆಯಲ್ಲಿರುವ ಕೊಳೆಯನ್ನು ಹೋಗಲಾಡಿಸಿ ತ್ವಚೆಯನ್ನು ಶುಭ್ರಗೊಳಿಸುತ್ತದೆ.

ನಿಮ್ಮ ಮೂಡ್ ಅನ್ನು ಸರಿಪಡಿಸುತ್ತದೆ

ನಿಮ್ಮ ಮೂಡ್ ಅನ್ನು ಸರಿಪಡಿಸುತ್ತದೆ

ನಿಮ್ಮ ಒತ್ತಡಗಳನ್ನು ದೂರಮಾಡುವ ಶಕ್ತಿ ಲಿಂಬೆ ನೀರಿಗಿದೆ ಎಂಬುದು ನಿಮಗೆ ತಿಳಿದಿದೆಯೇ? ಜೀರ್ಣಕ್ರಿಯೆಯನ್ನು ಸುಧಾರಿಸುವ ಅಂಶ ಲಿಂಬೆ ನೀರಿಗಿದೆ ಇದರಿಂದ ನಮ್ಮ ದೇಹಕ್ಕೆ ಶಕ್ತಿ ಉಂಟಾಗಿ ಮನಸ್ಸು ಪ್ರಫುಲ್ಲಗೊಳ್ಳುತ್ತದೆ.

ತೂಕ ಇಳಿಸಲು ಸಹಕಾರಿ

ತೂಕ ಇಳಿಸಲು ಸಹಕಾರಿ

ಲಿಂಬೆ ನೀರನ್ನು ಜೇನಿನೊಂದಿಗೆ ಮಿಶ್ರ ಮಾಡಿ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ತೂಕ ಇಳಿದು ಸುಂದರ ಕಾಯ ನಿಮ್ಮದಾಗುತ್ತದೆ.

ನಿರ್ವಶೀಕರಣ

ನಿರ್ವಶೀಕರಣ

ಲಿಂಬೆ ಡಯೆಟ್ ದೇಹವನ್ನು ನಿರ್ವಶೀಕರಣಗೊಳಿಸಿ ದೇಹದ ಹಾನಿಕಾರಕ ವಿಷ ಅಂಶಗಳನ್ನು ನಿವಾರಿಸುವಲ್ಲಿ ಸಹಾಯ ಮಾಡುತ್ತದೆ.

ಜಠರ ಶುದ್ಧೀಕರಣ

ಜಠರ ಶುದ್ಧೀಕರಣ

ಜಠರದ ನಿರ್ವಶೀಕರಣ ಜೀರ್ಣಕ್ರಿಯೆಯಲ್ಲಿ ಸಹಾಯಕವಾಗುವಂತಹ ಪ್ರೋಟೀನ್ ಮತ್ತು ಬಯೋ ಕೆಮಿಕಲ್ಸ್‌ಗಳನ್ನು ಉತ್ಪಾದಿಸುತ್ತದೆ. ಪ್ರಾತಃ ಕಾಲದಲ್ಲಿ ಲಿಂಬೆಯುಕ್ತ ನೀರನ್ನು ಸೇವಿಸುವುದರಿಂದ ಎಂಜೀಮ್‌ಗಳ ಉತ್ಪಾದನೆ ಹೆಚ್ಚಾಗುತ್ತದೆ. ನೈಸರ್ಗಿಕ ಪಥ್ಯಾಹಾರವಾಗಿರುವ ಇದು, ಕಿಡ್ನಿಯನ್ನು ಸ್ವಚ್ಛವಾಗಿಡುವಲ್ಲಿ ನೆರವಾಗುವ ಮೂತ್ರವಿಸರ್ಜನೆಯನ್ನು ಹೆಚ್ಚಿಸಿ, ಸೋಂಕುಗಳಿಂದ ಕಿಡ್ನಿಯನ್ನು ರಕ್ಷಿಸುತ್ತದೆ.

ಉಸಿರಾಟ ಸಮಸ್ಯೆಗಳನ್ನು ನಿವಾರಿಸುತ್ತದೆ

ಉಸಿರಾಟ ಸಮಸ್ಯೆಗಳನ್ನು ನಿವಾರಿಸುತ್ತದೆ

ಕೆಮ್ಮನ್ನು ನಿವಾರಿಸುವುದು ಮಾತ್ರವಲ್ಲದೆ ಲಿಂಬೆ ನೀರು ಅಸ್ತಮಾ ಮತ್ತು ಅಲರ್ಜಿಗಳಿಂದ ಬಳಲುವವರನ್ನು ಸಂರಕ್ಷಿಸುತ್ತದೆ.

ಹೊಳೆಯುವ ತ್ವಚೆ

ಹೊಳೆಯುವ ತ್ವಚೆ

ಲಿಂಬೆ ಹೊಟ್ಟೆಯನ್ನು ಸ್ವಚ್ಛವಾಗಿಸಿ ಮತ್ತು ನಿರ್ವಶೀಕರಣಗೊಳಿಸಿದ್ದರ ಪರಿಣಾಮ ನಿಮ್ಮ ತ್ವಚೆಯಲ್ಲಿ ಉಂಟಾಗುತ್ತದೆ.

ಮುಪ್ಪು ನಿವಾರಕ

ಮುಪ್ಪು ನಿವಾರಕ

ಬೆಳಗ್ಗಿನ ಸಮಯದಲ್ಲಿ ಲಿಂಬೆ ನೀರನ್ನು ಕುಡಿಯುವುದರಿಂದ ಉಂಟಾಗುವ ಇನ್ನೊಂದು ಆರೋಗ್ಯಕಾರಿ ಪ್ರಯೋಜನ ಇದಾಗಿದೆ. ಲಿಂಬೆಯಲ್ಲಿರುವ ಸಿಟ್ರಿಕ್ ಕಪ್ಪು ವರ್ತುಲಗಳನ್ನು ಮಾತ್ರ ಹೋಗಲಾಡಿಸದೆ ಮೊಡವೆಯನ್ನು ನಿವಾರಿಸುತ್ತದೆ.

ಬಾಯಿಯ ಸ್ವಚ್ಛತೆ ಕೆಟ್ಟ ಉಸಿರಾಟ

ಬಾಯಿಯ ಸ್ವಚ್ಛತೆ ಕೆಟ್ಟ ಉಸಿರಾಟ

ಹಲ್ಲು ನೋವು ಮತ್ತು ದಂತಕ್ಷಯಿಸುವಿಕೆಯನ್ನು ನಿವಾರಿಸಿ ಬಾಯಿಯನ್ನು ಸ್ವಚ್ಛವಾಗಿಸುತ್ತದೆ.

ಬೆಳಗಿನ ಅಸ್ವಸ್ಥತೆಯನ್ನು ಉಪಚರಿಸುತ್ತದೆ

ಬೆಳಗಿನ ಅಸ್ವಸ್ಥತೆಯನ್ನು ಉಪಚರಿಸುತ್ತದೆ

ಗರ್ಭಿಣಿ ಸ್ತ್ರೀಯರು ಬೆಳ್ಳಂಬೆಳಗ್ಗೆ ಲಿಂಬೆ ನೀರನ್ನು ಸೇವಿಸುವುದು ವಾಕರಿಕೆ ಮತ್ತು ಬೆಳಗಿನ ಅಸ್ವಸ್ಥತೆಯನ್ನು ನಿವಾರಿಸುತ್ತದೆ.

ಕರುಳನ್ನು ಸ್ವಚ್ಛವಾಗಿಸುತ್ತದೆ

ಕರುಳನ್ನು ಸ್ವಚ್ಛವಾಗಿಸುತ್ತದೆ

ಅನಿಯಮಿತ ಕರುಳಿನ ಚಲನೆಗಳಿಗೆ ಲಿಂಬೆ ನೀರನ್ನು ಸೇವಿಸುವುದು ನೈಸರ್ಗಿಕ ಪರಿಹಾರವಾಗಿದೆ. ಜೀರ್ಣಕ್ರಿಯೆಗೆ ಸಹಕಾರಿಯಾಗಿರುವ ಇದು ವಿಷಕಾರಿ ಅಂಶಗಳನ್ನು ನಿವಾರಿಸುತ್ತದೆ ಮತ್ತು ಕರುಳಿನ ಚಲನೆಯನ್ನು ನಿಯಮಿತವಾಗಿಸುತ್ತದೆ.

ದುಗ್ಧರಸ ವ್ಯವಸ್ಥೆಯನ್ನು ಹೈಡ್ರೇಟ್ ಮಾಡುತ್ತದೆ

ದುಗ್ಧರಸ ವ್ಯವಸ್ಥೆಯನ್ನು ಹೈಡ್ರೇಟ್ ಮಾಡುತ್ತದೆ

ಲಿಂಬೆ ನೀರು ಮೂತ್ರಜನಕಾಂಗದ ಆಯಾಸವನ್ನು ಪರಿಹರಿಸಿ ನಿರ್ಜಲೀಕರಣವನ್ನು ನಿವಾರಿಸುತ್ತದೆ. ಒತ್ತಡ, ಮಲಬದ್ಧತೆ, ವಿಷಕಾರಿ ಅಂಶಗಳ ಸಂಗ್ರಹಣೆಯನ್ನು ತಪ್ಪಿಸಲು, ಲಿಂಬೆ ನೀರನ್ನು ಸೇವಿಸಿ.

ಹಾನಿಕಾರಕ ರಾಸಾಯನಿಕಗಳನ್ನು ನಾಶಮಾಡುತ್ತದೆ

ಹಾನಿಕಾರಕ ರಾಸಾಯನಿಕಗಳನ್ನು ನಾಶಮಾಡುತ್ತದೆ

ಲಿಂಬೆಯಲ್ಲಿರುವ ಸಿಟ್ರಸ್ ಅಂಶ ದೇಹವನ್ನು ನೈಸರ್ಗಿಕವಾಗಿ ಸ್ವಚ್ಛಮಾಡುತ್ತದೆ. ಇದು ವಿಟಮಿನ್ ಸಿ ಭರಿತವಾಗಿದ್ದು ಹಾನಿಕಾರಕ ರಾಸಾಯನಿಕಗಳನ್ನು ನಾಶಮಾಡುತ್ತದೆ.

ಪುದಿನ ಮತ್ತು ಲಿಂಬೆ

ಪುದಿನ ಮತ್ತು ಲಿಂಬೆ

ಪುದಿನ ಬರಿಯ ಸುವಾಸನಾ ವಸ್ತುವಲ್ಲ ಆರೋಗ್ಯದ ದೃಷ್ಟಿಯಿಂದಲೂ ಬಹಳ ಮಹತ್ವದ ಸೊಪ್ಪು. ಇದನ್ನು ಜ್ಯೂಸ್ ಮಾಡಿ ಇದಕ್ಕೆ ಲಿಂಬೆ ಹಣ್ಣಿನ ಹನಿಗಳನ್ನು ಹಾಕಿ ಜ್ಯೂಸ್ ಅನ್ನು ತಯಾರಿಸಬಹುದು. ಇದಕ್ಕೆ ಕಾಳುಮೆಣಸಿನ ಹುಡಿ ಮತ್ತು ಉಪ್ಪು ಹಾಕಿದರೆ ರುಚಿಗೂ ಬಹಳ ಹಿತಕರ.

ಜೀರ್ಣಕ್ರಿಯೆಗೆ

ಜೀರ್ಣಕ್ರಿಯೆಗೆ

ಜೀರ್ಣಕ್ರಿಯೆ ವ್ಯವಸ್ಥೆಯನ್ನು ಉತ್ತಮಗೊಳಿಸುವಲ್ಲಿ ಲಿಂಬೆ ಹಣ್ಣು ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿ ದಿನ ಲಿಂಬೆ ಹಣ್ಣಿನ ಜ್ಯೂಸ್ ಕುಡಿದರೆ ನಿಮ್ಮ ದೇಹವು ಆರೋಗ್ಯಕಾರಿ ಆಗಿರುವುದರ ಜೊತೆಗೆ ಜೀರ್ಣಕ್ರಿಯೆಗೂ ಉತ್ತಮವಾಗಿರುತ್ತದೆ

ಕರುಳನ್ನು ಸ್ವಚ್ಛಗೊಳಿಸುವ ಹಣ್ಣು

ಕರುಳನ್ನು ಸ್ವಚ್ಛಗೊಳಿಸುವ ಹಣ್ಣು

ಕರುಳನ್ನು ಸ್ವಚ್ಛಗೊಳಿಸುವ ಲಿಂಬೆ ಆಗಿದ್ದು ಇದು ತೊಂದರೆಕಾರಿ ಕೀಟಾಣುಗಳನ್ನು ನಾಶಪಡಿಸುತ್ತದೆ.

ಜಠರವನ್ನು ಕಾಪಾಡುತ್ತದೆ

ಜಠರವನ್ನು ಕಾಪಾಡುತ್ತದೆ

ಲಿಂಬೆ ಹಣ್ಣು ಕರುಳನ್ನು ಸ್ವಚ್ಛಗೊಳಿಸುವುದರೊಂದಿಗೆ ಜಠರವನ್ನು ಕಾಪಾಡುತ್ತದೆ.

ಫೈಬರ್ ಮತ್ತು ಇತರ ಆರೋಗ್ಯಕರವಾದ ಹಣ್ಣು

ಫೈಬರ್ ಮತ್ತು ಇತರ ಆರೋಗ್ಯಕರವಾದ ಹಣ್ಣು

ಫೈಬರ್ ಮತ್ತು ಇತರ ಆರೋಗ್ಯಕರ ವಿಟಮಿನ್ ಲಿಂಬೆ ಹಣ್ಣಿನಲ್ಲಿ ಅಧಿಕವಾಗಿದ್ದು, ನಿಯಮಿತವಾಗಿ ಇದರ ಸೇವನೆ ಆರೋಗ್ಯಕ್ಕೆ ಉತ್ತಮ.

ಕೊಲೆಸ್ಟ್ರಾಲ್ ಅನ್ನು ದೂರವಿರುಸುತ್ತದೆ

ಕೊಲೆಸ್ಟ್ರಾಲ್ ಅನ್ನು ದೂರವಿರುಸುತ್ತದೆ

ಕೊಲೆಸ್ಟ್ರಾಲ್ ಅನ್ನು ದೇಹದಿಂದ ಹೊರಹಾಕುವಲ್ಲಿ ಸಹಕಾರಿ. ದೇಹದಿಂದ ಹಾನಿಕಾರಿ ವೈರಸ್‌ಗಳನ್ನು ಹೊರದಬ್ಬಿ ರಕ್ತವನ್ನು ಕರುಳನ್ನು ಸ್ವಚ್ಛಮಾಡುವಲ್ಲಿ ಸಹಕಾರಿಯಾಗಿದೆ.

ಧೂಮಪಾನದಿಂದ ತುಟಿ ಕಪ್ಪಾಗಿದ್ದರೆ

ಧೂಮಪಾನದಿಂದ ತುಟಿ ಕಪ್ಪಾಗಿದ್ದರೆ

ತುಟಿಯ ಕಪ್ಪು ಕಲೆಯನ್ನು ಹೋಗಲಾಡಿಸುವಲ್ಲಿ ನಿಂಬೆರಸ ತುಂಬಾ ಪ್ರಯೋಜನಕಾರಿ. ನಿಂಬೆ ಹಣ್ಣನ್ನು ಕತ್ತರಿಸಿ ಅದರ ತುಂಡನ್ನು ತುಟಿಗೆ 3-4 ನಿಮಿಷ ಉಜ್ಜಬೇಕು. ನಂತರ ತಣ್ಣೀರಿನಿಂದ ತುಟಿಯನ್ನು ತೊಳೆದು ಲಿಪ್ ಬಾಮ್ ಹಚ್ಚ ಬೇಕು.

ತೂಕ ಇಳಿಕೆಗಾಗಿ ಲಿಂಬೆ ಚಹಾ

ತೂಕ ಇಳಿಕೆಗಾಗಿ ಲಿಂಬೆ ಚಹಾ

ಹೊಟ್ಟೆಯನ್ನು ಸ್ವಚ್ಛಗೊಳಿಸಿ ಬೇಡದ ಅಂಶಗಳನ್ನು ಹೊರಹಾಕಲು ಲಿಂಬೆ ಸಹಕಾರಿಯಾಗಿದೆ. ಲಿಂಬೆಯಿಂದ ದೈಹಿಕ ಸ್ವಾಸ್ಥ್ಯ ಉತ್ತಮವಾಗಿರುತ್ತದೆ. ಲಿಂಬೆ ಚಹಾ ಕೂಡ ಈ ದಿಶೆಯಲ್ಲಿ ಚೆನ್ನಾಗಿ ಕಾರ್ಯನಿರ್ವಹಿಸುತ್ತದೆ. ತೂಕವನ್ನು ಇಳಿಸಿ ಉತ್ತಮ ಆರೋಗ್ಯವನ್ನು ಕಾಪಾಡುವಲ್ಲಿ ಲಿಂಬೆ ಚಹಾ ಉತ್ತಮ ಪಾತ್ರ ನಿರ್ವಹಿಸುತ್ತದೆ. ಲಿಂಬೆ ಚಹಾ ನಿಮ್ಮ ಮನಸ್ಸನ್ನು ತಾಜಾಗೊಳಿಸಿ ಆರೋಗ್ಯವಂತರನ್ನಾಗಿಸುತ್ತದೆ.


English summary

Health benefits of Lime fruits

Lot of Health benefits of Lemon. The main preferable reason in lemon is it has rich in antibacterial, antiviral and immune boosting Power.
X
Desktop Bottom Promotion