For Quick Alerts
ALLOW NOTIFICATIONS  
For Daily Alerts

ಒಳ್ಳೆಯ ನಿದ್ರೆ ಆವರಿಸಲು ನೈಸರ್ಗಿಕ ವಿಧಾನ

By Arpitha Rao
|

ನಿದ್ದೆ ಅದರಲ್ಲೂ ಸರಿಯಾದ ನಿದ್ದೆ ಆರೋಗ್ಯಯುತವಾದ ಜೀವನಕ್ಕೆ ಅತಿ ಅವಶ್ಯಕ.ಒಳ್ಳೆಯ ನಿದ್ರೆಯಿಂದ ಮಾನಸಿಕ ಮತ್ತು ದೈಹಿಕ ಅನಾರೋಗ್ಯವನ್ನು ಹೋಗಲಾಡಿಸಬಹುದು. ಕೆಲಮೊಮ್ಮೆ ನಮಗೆ ನಿದ್ದೆಯ ಅಗತ್ಯವಿರುತ್ತದೆ. ನಿದ್ದೆ ಮಾಡಬೇಕು ಎಂದು ಕೂಡ ಅನ್ನಿಸುತ್ತದೆ ಆದರೆ ಮಲಗಿದರೆ ನಿದ್ರೆಯೇ ಬರುವುದಿಲ್ಲ.

ಈ ರೀತಿಯ ಸಮಸ್ಯೆ ಮಾನಸಿಕವಾಗಿ ತೊಳಲಾಡುವಂತೆ ಮಾಡಿಬಿಡುತ್ತದೆ. ನಿದ್ದೆ ಬರುವುದಿಲ್ಲ ಎಂಬುದು ದೇಹಕ್ಕೆ ಸುಸ್ತು,ತಳಮಳ, ಖಿನ್ನತೆ ಇನ್ನಿತರ ತೊಂದರೆ ತಂದುಬಿಡಬಹುದು. ಆದ್ದರಿಂದ ಮನುಷ್ಯನಿಗೆ ಸರಿಯಾದ ಸೌಂಡ್ ಸ್ಲೀಪ್ ನ ಅಗತ್ಯವಿದೆ.ಒಳ್ಳೆಯ ನಿದ್ರೆ ಒಳ್ಳೆಯ ಅರೋಗ್ಯ ಕಾಪಾಡಿಕೊಳ್ಳಲು ಅವಕಾಶ ಮಾಡಿಕೊಡಬಹುದು. ನೈಸರ್ಗಿಕವಾಗಿ ನಿದ್ದೆ ಪಡೆಯಲು ಇಲ್ಲಿ ಕೆಲವು ವಿಧಾನಗಳನ್ನು ನೀಡಲಾಗಿದೆ.

ತಂಪು ಗಾಳಿ ನೀಡುವ ಹವಾನಿಯಂತ್ರಿತದ ಬಳಕೆ ಹೆಚ್ಚು ಅಪಾಯಕಾರಿ!

Get Sleepy the Natural Way: Sleep Aids from Mother Nature

ಮೆಲಟೋನಿನ್ :-
ಮೆಲಟೋನಿನ್ ಎಂಬುದು ಹಾರ್ಮೊನಿನಲ್ಲಿ ನೈಸರ್ಗಿಕವಾಗಿ ಉತ್ಪತ್ತಿಯಾಗುತ್ತದೆ ಇದು ಮಾತ್ರೆಗಳ ಮೂಲಕವೂ ದೊರೆಯುತ್ತದೆ.ಸಾಮಾನ್ಯವಾಗಿ ಮೂರರಿಂದ ಐದು ಗ್ರಾಂನಷ್ಟು ಮೆಲಟೋನಿನ್ ಅಂಶ ನಮಗೆ ಸರಿಯಾದ ನಿದ್ದೆ ಪಡೆಯಲು ಅವಶ್ಯಕವಾಗಿರುತ್ತದೆ.ಇದು ಅತಿ ಅಗತ್ಯ ಎನಿಸಿದಾಗ ಮಾತ್ರ ಇದನ್ನು ತೆಗೆದುಕೊಳ್ಳಬಹುದು, ಆದರು ಇದು ನಿಮ್ಮ ದೇಹದಲ್ಲಿಯೇ ಉತ್ಪತ್ತಿಯಾಗುತ್ತದೆ.ಇದು ನಿಮ್ಮ ದೇಹದಲ್ಲಿಯೇ ಉತ್ಪತ್ತಿ ಆಗುವುದರಿಂದ ನಿಮಗೆ ಏರೋಪ್ಲೇನ್,ಬಸ್ ಪ್ರಯಾಣ ಅಥವಾ ಜೆಗ್ ಲಾಗ್ ನಿಂದ ತಪ್ಪಿಸಿಕೊಳ್ಳಲು ಸರಿಯಾದ ನಿದ್ದೆ ಬರಲು ನಿಮಗೆ ಅವಶ್ಯಕವಾಗುತ್ತದೆ.

ವ್ಯಾಯಾಮ :-
ಇದು ಸಾಮಾನ್ಯ ಜ್ಞಾನ ಎಂದು ನಿಮಗನಿಸಬಹುದು,ಆದರೆ ಸಾಕಷ್ಟು ಜನರು ವ್ಯಾಯಾಮಕ್ಕೆ ಮತ್ತು ನಿದ್ದೆಗೆ ತಾಳೆಯಾಗುವುದಿಲ್ಲ ಎನ್ನುತ್ತಾರೆ.ಪ್ರತಿದಿನ ಸಾಕಾಷ್ಟು ವ್ಯಾಯಾಮ ಮಾಡುವುದರಿಂದ ದೇಹ ದಣಿಯುತ್ತದೆ ಮತ್ತು ಬೇಗ ನಿದ್ದೆಗೆ ಜಾರುತ್ತದೆ.ಪ್ರತಿದಿನ ವ್ಯಾಯಾಮ ಮಾಡುವುದರಿಂದ ನಿಮ್ಮ ಒಟ್ಟಾರೆ ಆರೋಗ್ಯ ಹೆಚ್ಚುತ್ತದೆ ಕೂಡ.ಯಾವ ರೀತಿ ವ್ಯಾಯಾಮ ಮಾಡಬೇಕು,ಎಷ್ಟು ಸಮಯ ನಿದ್ರೆ ಮಾಡಬೇಕು,ಯಾವ ಆಹಾರ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ನ್ಯಾಷನಲ್ ಸ್ಲೀಪ್ ಫೌಂಡೆಶನ್ ಲೇಖನಗಳನ್ನು ಓದಿ.

ಮಸಲ್ ಬಿಲ್ಡ್ ಮಾಡಬೇಕೆ? ಈ ಸೂತ್ರಗಳನ್ನು ಪಾಲಿಸಿ

ಕಾಳುಜೀರಿಗೆ ಟೀ :-
ಇದು ಸಾವಿರಾರು ವರ್ಷಗಳಿಂದ ಒಳ್ಳೆಯ ನಿದ್ರೆಯನ್ನು ಪಡೆಯಲು ಸಹಕರಿಸುತ್ತಿರುವ ಒಂದು ರೀತಿಯ ಗಿಡಮೂಲಿಕೆ.ಇದರ ಬಗ್ಗೆ ವೈಜ್ಞಾನಿಕ ಸಂಶೋಧನೆಯ ಅಗತ್ಯವಿದ್ದರೂ ಕೂಡ ಜೆರ್ಮನಿ,ಇದರಿಂದ ನಿದ್ರೆ,ಹೊಟ್ಟೆ ಕೆಡುವುದು,ಚರ್ಮದ ತೊಂದರೆ ಇವುಗಳಿಗೆ ಇದು ಸಹಾಯಕವಾಗಬಹುದು ಎಂದು ಅಧ್ಯಯನ ನಡೆಸಿ ತಿಳಿಸಿದೆ.ಇದರಿಂದ ಗರ್ಭಪಾತ ಆಗುವ ಸಂಭವ ಇರುವುದರಿಂದ ಗರ್ಭಿಣಿ ಮಹಿಳೆಯರು Chamomile ಬಳಸುವ ಮೊದಲು ವೈದ್ಯರ ಸಲಹೆ ಪಡೆಯಬೇಕು.

ಓದುವುದು ಮತ್ತು ಬರೆಯುವುದು:-
ಇದಕ್ಕೆ ಇನ್ನಷ್ಟು ವೈಜ್ಞಾನಿಕ ಕಾರಣಗಳ ಅಗತ್ಯವಿದ್ದರೂ ಕೂಡ ಸಾಕಷ್ಟು ಜನರು ಮಲಗುವ ಮೊದಲು ಓದುವುದು ಮತ್ತು ಬರೆಯುವುದರ ಮೂಲಕ ನಿದ್ದೆ ಸುಲಭವಾಗಿ ಆಗಮಿಸುತ್ತದೆ ಎನ್ನುತ್ತಾರೆ.ಬರೆಯುವುದರಿಂದ ನಿಮ್ಮ ಮನಸ್ಸು ಶಾಂತಗೊಳ್ಳುತ್ತದೆ,ಯಾವುದೇ ರೀತಿಯ ತಳಮಳವನ್ನು ಹೋಗಲಾಡಿಸುತ್ತದೆ,ಇದರಿಂದ ಸುಲಭವಾಗಿ ನಿದ್ರೆ ಬರುತ್ತದೆ.ಇದನ್ನು ಅನುಸರಿಸಲು ಎರಡು ವಾರ ಮಲಗುವ ಮೊದಲು ಓದುವುದು ಅಥವಾ ಬರೆಯುವುದು ರೂಡಿಸಿಕೊಳ್ಳಿ.ಅರ್ಧ ಗಂಟೆಯಿಂದ ಒಂದು ಗಂಟೆಯ ಸಮಯವನ್ನು ಮಾತ್ರ ಇದಕ್ಕೆ ಮೀಸಲಿಡಿ,ಎಷ್ಟೇ ಕುತೂಹಲವಿದ್ದರೂ ಕೂಡ ಓದುವುದನ್ನು ನಿಲ್ಲಿಸಿ ಮಲಗಿಬಿಡಿ.ಈ ರೀತಿ ಪ್ರತಿದಿನ ರೂಡಿಸಿಕೊಂಡರೆ ನಿದ್ದೆ ಬರುತ್ತದೆ.

ಸೀಬೆಕಾಯಿಯಲ್ಲಿದೆ ಟಾಪ್ 13 ಆರೋಗ್ಯವರ್ಧಕ ಗುಣಗಳು

ಜಟಾಳಸಿ ಬೇರು:-
ಇದು ಕೂಡ ಒಂದು ರೀತಿಯ ಗಿಡಮೂಲಿಕೆ.ಹಿಂದಿನ ಕಾಲದಲ್ಲಿ ನರಗಳನ್ನು ಹಿಡಿತಕ್ಕೆ ತರಲು,ನಿದ್ರಾಹೀನತೆ ರೋಗದಿಂದ ಬಳಲುತ್ತಿದ್ದರೆ ಅದಕ್ಕೆ ಪರಿಹಾರ ಕಂಡುಕೊಳ್ಳಲು ಇದನ್ನು ಬಳಸುತ್ತಿದ್ದರು.ಇದನ್ನು ಕೊಂಡುಕೊಳ್ಳುವಾಗ ನೋಡಿಕೊಂಡು ಯಾವರೀತಿ ಪೂರಕಗಳನ್ನು ಒಳಗೊಂಡಿದೆ ಎಂಬುದನ್ನು ತಿಳಿದುಕೊಂಡು ತೆಗೆದುಕೊಳ್ಳಿ.

ಕೆಲವು ಆಹಾರಗಳು ಮತ್ತು ಪಾನೀಯ :-
ಚೆರ್ರಿ ,ಮೀನು ,ವೈನ್ ಮತ್ತು ವಿಸ್ಕಿ ಸಾಕಷ್ಟು ಸಂಶೋಧನೆಗಳು ತಿಳಿಸಿರುವ ಪ್ರಕಾರ ಮೀನು ಮತ್ತು ಚೆರ್ರಿ ಹಣ್ಣುಗಳನ್ನು ಆಹಾರದಲ್ಲಿ ಬಳಸುವುದರಿಂದ ಒಳ್ಳೆಯ ನಿದ್ದೆ ನಿಮ್ಮದಾಗುತ್ತದೆ. ಹಾಗೆಯೇ ಮೀನಿನ ಜೊತೆ ಸ್ವಲ್ಪ ವೈನ್ ಅಥವಾ ಚೆರ್ರಿ ಜೊತೆ ವಿಸ್ಕಿ ಬಳಸುವುದರಿಂದ ನಿದ್ದೆ ಬೇಗ ಆವರಿಸುತ್ತದೆ.ಅಧ್ಯಯನದ ಪ್ರಕಾರ ಸ್ವಲ್ಪ ಪ್ರಮಾಣದ ಅಲ್ಕೋಹಾಲ್ ನಿಂದಾಗಿ ನಿದ್ದೆ ಆವರಿಸುತ್ತದೆ .

English summary

Get Sleepy the Natural Way: Sleep Aids from Mother Nature

Get Sleepy the Natural Way: Sleep Aids from Mother Nature
Story first published: Wednesday, April 30, 2014, 15:27 [IST]
X
Desktop Bottom Promotion