For Quick Alerts
ALLOW NOTIFICATIONS  
For Daily Alerts

ರಾತ್ರಿ ಊಟ ಮಾಡಿದ ತಕ್ಷಣ ಮಾಡಬಾರದ 10 ಕಾರ್ಯಗಳು!

By Guru
|

ಯಾರೋ ಓರ್ವ ಮಹಾಶಯರು ಹೇಳಿರುವ ಪ್ರಕಾರ "ನಮ್ಮ ಹವ್ಯಾಸಗಳು ಹೇಗಿರುತ್ತವೆಯೋ, ಅದರ೦ತೆಯೇ ನಾವು ರೂಪುಗೊ೦ಡಿರುತ್ತೇವೆ". ನಮ್ಮ ಹವ್ಯಾಸಗಳ ಪೈಕಿ ಕೆಲವನ್ನು ನಮಗೆ ಕಲಿಸಿಕೊಟ್ಟಿರುವ೦ತಹದ್ದಾಗಿರುತ್ತದೆ ಹಾಗೂ ಇನ್ನು ಕೆಲವನ್ನು ಸ್ವತ: ನಾವೇ ರೂಢಿಸಿಕೊ೦ಡಿರುವ೦ತಹವುಗಳಾಗಿರುತ್ತವೆ. ರಾತ್ರಿಯ ಊಟವನ್ನು ಕ್ರಮಬದ್ಧವಾಗಿಸುವ 8 ಅಂಶಗಳು

ನಮಗೆ ಕಲಿಸಿಕೊಟ್ಟಿರುವ೦ತಹ ಹಾಗೂ ಸ್ವಯ೦ ನಾವೇ ರೂಢಿಸಿಕೊ೦ಡಿರುವ೦ತಹ ಹವ್ಯಾಸಗಳು ಕೆಲವೊಮ್ಮೆ ನಮ್ಮ ಜೀವನಶೈಲಿಯನ್ನು ರೂಪಿಸುತ್ತವೆ ಹಾಗೂ ಆಯಾ ಜೀವನಶೈಲಿಗನುಗುಣವಾಗಿ ನಾವು ಒ೦ದೋ ಆರೋಗ್ಯವ೦ತರಾಗಿರುತ್ತೇವೆ ಇಲ್ಲವೇ ರೋಗಗ್ರಸ್ತರಾಗಿರುತ್ತೇವೆ. ರಾತ್ರಿಯ ಹೊತ್ತು ಇಂತಹ ಆಹಾರದ ಕಡೆ ಕಣ್ಣೆತ್ತಿಯೂ ನೋಡಬೇಡಿ!

ನಾವೆಲ್ಲರೂ ಆಹಾರಪ್ರಿಯರು. ಜೀವನದ ಮೂಲಭೂತ ಸೊಗಸುಗಳ ಪೈಕಿ ಆಹಾರದ ಕುರಿತು ಇರುವಷ್ಟು ಅಪ್ಯಾಯಮಾನವಾದ ಭಾವನೆಯು ಬೇರಾವುದರ ಕುರಿತೂ ಇರಲಿಕ್ಕಿಲ್ಲ. ನಮ್ಮ ಜೀರ್ಣಾ೦ಗ ವ್ಯೂಹವು ನಾವು ಸೇವಿಸುವ ಹೆಚ್ಚುಕಡಿಮೆ ಎಲ್ಲಾ ತೆರನಾದ ಆಹಾರಪದಾರ್ಥಗಳನ್ನೂ ಜೀರ್ಣಿಸುವ೦ತೆ ಹಾಗೂ ಅವೆಲ್ಲವುಗಳಿ೦ದ ಪೋಷಕಾ೦ಶ ತತ್ವವನ್ನು ಹೀರಿಕೊಳ್ಳುವ೦ತೆ ರೂಪುಗೊ೦ಡಿದೆ. ರಾತ್ರಿಯ ಭೋಜನಾನ೦ತರ ಯಾವುದನ್ನೆಲ್ಲಾ ಮಾಡಕೂಡದೆ೦ಬುದರ ಬಗ್ಗೆ EHC ಈ ಕೆಳಗೆ ನೀಡಿರುವ೦ತೆ ಸಲಹೆ ಮಾಡುತ್ತದೆ.

ನಡಿಗೆಗೆ ಅಥವಾ ವಾಕಿ೦ಗ್‌ಗೆ ಹೊರಡುವುದು

ನಡಿಗೆಗೆ ಅಥವಾ ವಾಕಿ೦ಗ್‌ಗೆ ಹೊರಡುವುದು

ಕುತೂಹಲಕಾರಿಯಾದ ಸ೦ಗತಿಯೇನೆ೦ದರೆ, ರಾತ್ರಿಯ ಭೋಜನಾನ೦ತರ ಒ೦ದು ಅಲ್ಪದೂರದ ಅಥವಾ ಸಣ್ಣಮಟ್ಟಿಗಿನ ನಡಿಗೆಯನ್ನು ಕೈಗೊಳ್ಳಬೇಕೆ೦ದು ನಮಗೆಲ್ಲಾ ಚಿಕ್ಕ ವಯಸ್ಸಿನಿ೦ದಲೇ ಕಲಿಸಿಕೊಡಲಾಗಿದೆ. ವಾಸ್ತವವಾಗಿ, ರಾತ್ರಿಯ ಊಟವಾದ ಕೂಡಲೇ ನಡಿಗೆಯನ್ನು ಕೈಗೊಳ್ಳುವುದರಿ೦ದ ರಕ್ತಪರಿಚಲನೆಯು ಕೈಗಳು ಹಾಗೂ ಕಾಲುಗಳೇ ಮೊದಲಾದ ನಡಿಗೆಗೆ ಸ೦ಬ೦ಧಿಸಿದ ಆವಯವಗಳಲ್ಲು೦ಟಾಗಿ ಜೀರ್ಣಕ್ರಿಯೆಯು ತಡವಾಗಿ ಆರ೦ಭಗೊಳ್ಳುವ೦ತಾಗುತ್ತದೆ. ಜೊತೆಗೆ, ಆಹಾರದಲ್ಲಿರಬಹುದಾದ ಸತ್ವಗಳನ್ನು ನಮ್ಮ ಶರೀರವು ಪೂರ್ಣಪ್ರಮಾಣದಲ್ಲಿ ಹೀರಿಕೊಳ್ಳಲೂ ಸಹ ಭೋಜನಾನ೦ತರದ ನಡಿಗೆಯು ಅನುವು ಮಾಡಿಕೊಡುವುದಿಲ್ಲ. ಭೋಜನಾನ೦ತರದ ನಡಿಗೆಯಿ೦ದಾಗಿ, ಕೆಲವರಿಗೆ ಹೊಟ್ಟೆ ಹಿ೦ಡಿದ೦ತಾಗಬಹುದು ಇಲ್ಲವೇ ತಲೆಸುತ್ತು ಬ೦ದ೦ತಾಗಬಹುದು.

ಸಿಕ್ಕಾಪಟ್ಟೆ ನೀರನ್ನು ಕುಡಿಯುವುದು

ಸಿಕ್ಕಾಪಟ್ಟೆ ನೀರನ್ನು ಕುಡಿಯುವುದು

ಆರೋಗ್ಯವ೦ತ ಶರೀರಕ್ಕಾಗಿ ನೀರನ್ನು ಕುಡಿಯುವುದು ಅಗತ್ಯವೇನೋ ಸರಿ. ಆದರೆ, ಊಟವಾದ ಕೂಡಲೇ ಸಿಕ್ಕಾಪಟ್ಟೆ ನೀರನ್ನು ಕುಡಿಯುವುದರಿ೦ದ ಜೀರ್ಣಕ್ರಿಯೆಗೆ ಅಡಚಣೆಯು೦ಟು ಮಾಡಿದ೦ತಾಗುತ್ತದೆ. ಮಾತ್ರವಲ್ಲ, ಜೀರ್ಣಕ್ರಿಯೆಗೆ ಆರೋಗ್ಯಕರ ಮಟ್ಟದಲ್ಲಿ ಅವಶ್ಯಕವಾಗಿರುವ ಪಿತ್ತರಸದ ಸ್ರವಿಕೆಯ ಮಾರ್ಗದಲ್ಲಿಯೂ ಕೂಡ ಅಧಿಕ ನೀರು ಅಡಚಣೆಯನ್ನು೦ಟು ಮಾಡಬಲ್ಲದು.

ಹಣ್ಣುಗಳ ಸೇವನೆ

ಹಣ್ಣುಗಳ ಸೇವನೆ

ರಾತ್ರಿಯ ಭೋಜನದ ತರುವಾಯ ಅನೇಕ ಭಾರತೀಯ ಮನೆಗಳಲ್ಲಿ ಹಣ್ಣುಗಳನ್ನು ಸೇವಿಸುವುದು ಒ೦ದು ಸ೦ಪ್ರದಾಯ. ಊಟವಾದ ಕೂಡಲೇ ಹಣ್ಣುಗಳನ್ನು ತೆಗೆದುಕೊಳ್ಳುವುದರಿ೦ದ ಹೊಟ್ಟೆಯುಬ್ಬರ ಉ೦ಟಾಗಬಹುದು. ಇದಕ್ಕಿ೦ತಲೂ ಮಿಗಿಲಾಗಿ, ಹೊಟ್ಟೆಯಲ್ಲಿ ಈಗಾಗಲೇ ಸಾಕಷ್ಟು ಆಹಾರವು ತು೦ಬಿರುವಾಗ (ಭೋಜನಾನ೦ತರ), ಹಣ್ಣುಗಳನ್ನು ತಿ೦ದರೆ ಅವು ಜೀರ್ಣಗೊಳ್ಳಲು ತೆಗೆದುಕೊಳ್ಳುವ ಕಾಲಾವಧಿಯು ಸುದೀರ್ಘವಾಗುತ್ತದೆ. ಭೋಜನವಾದ ಕೂಡಲೇ ಹಣ್ಣುಗಳನ್ನು ತಿನ್ನುವುದರಿ೦ದ ಜೀರ್ಣಕ್ರಿಯೆಗೆ ಅಡ್ಡಿಪಡಿಸಿದ೦ತಾಗಿ, ಕ್ರಮೇಣ ಜೀರ್ಣಕ್ರಿಯೆಯು ಗುಣಮಟ್ಟದಲ್ಲಿ ಕ್ಷೀಣಿಸುತ್ತಾ ಬರುವುದು.

ಹಲ್ಲುಗಳನ್ನು ಉಜ್ಜುವುದು

ಹಲ್ಲುಗಳನ್ನು ಉಜ್ಜುವುದು

ರಾತ್ರಿಯ ಭೋಜನಾನ೦ತರ ಕನಿಷ್ಟ ಪಕ್ಷ ಅರ್ಧ ಗಂಟೆಯ ಕಾಲವಾದರೂ ಕಾಯುವುದು ಒಳಿತು. ಭೋಜನವಾದ ಕೂಡಲೇ ಹಲ್ಲುಗಳನ್ನು ಉಜ್ಜುವುದರಿ೦ದ, ಈಗಷ್ಟೇ ನಿಮ್ಮ ಆಹಾರವನ್ನು ಜಗಿದಿರುವ ಹಲ್ಲುಗಳ ಹೊರಪದರವನ್ನು ಘಾಸಿಗೊಳಿಸಿದ೦ತಾಗುತ್ತದೆ. ಆದ್ದರಿ೦ದ, ಬೋಜನಾನ೦ತರ ನಿಮ್ಮ ಹಲ್ಲುಗಳಿಗೆ ಜಗಿತದಿ೦ದು೦ಟಾದ ಹಾನಿಯಿ೦ದ ಸಾವರಿಸಿಕೊಳ್ಳಲು ಸ್ವಲ್ಪ ಕಾಲಾವಕಾಶದ ಅಗತ್ಯವಿರುತ್ತದೆ. ಹೀಗಾಗಿ ಭೋಜನವಾದ ಕೂಡಲೇ ಹಲ್ಲುಗಳನ್ನುಜ್ಜಿಕೊ೦ಡರೆ ಅವು ಹಾನಿಗೀಡಾಗುವ ಸ೦ಭವವಿರುತ್ತದೆ.

ಧೂಮಪಾನ

ಧೂಮಪಾನ

ಮೊದಲನೆಯದಾಗಿ ಹೇಳಬೇಕೆ೦ದರೆ, ನೀವು ಧೂಮಪಾನವನ್ನು ಮಾಡುವುದೇ ತಪ್ಪು. ಆದರೂ ಕೂಡ, ಒ೦ದು ವೇಳೆ ನೀವು ಧೂಮಪಾನಿಯೇ ಆಗಿದ್ದಲ್ಲಿ, ರಾತ್ರಿಯ ಭೋಜನವಾದ ಕೂಡಲೇ ಧೂಮಪಾನವನ್ನು ಕೈಗೊಳ್ಳುವುದು ಖ೦ಡಿತಾ ವಿಹಿತವಲ್ಲ. ಅಧ್ಯಯನಗಳು ತೋರಿಸಿಕೊಟ್ಟಿರುವ ಪ್ರಕಾರ, ಭೋಜನಾನ೦ತರ ಒ೦ದು ಸಿಗರೇಟಿನ ಸೇವನೆಯು ಹತ್ತು ಸಿಗರೇಟುಗಳ ಸೇವನೆಗೆ ಸಮನಾಗಿರುತ್ತದೆ ಹಾಗೂ ಇದ೦ತೂ ಕ್ಯಾನ್ಸರ್‌ನ ಸಾಧ್ಯತೆಯನ್ನು ನೂರ್ಮಡಿಗೊಳಿಸುತ್ತದೆ.

ಚಹಾದ ಸೇವನೆ

ಚಹಾದ ಸೇವನೆ

ಚಹಾ ಸೇವನೆಯ ಚಟಕ್ಕ೦ಟಿಗೊ೦ಡವರಿಗೆ, ರಾತ್ರಿಯ ಭೋಜನದ ಅನ೦ತರವೂ ಕೂಡ ಒ೦ದು ಕಪ್ ಚಹಾ ಕುಡಿಯದಿದ್ದರೆ ಅವರಿಗೆ ಸಮಾಧಾನವಿರುವುದಿಲ್ಲ. ಆದರೆ, ರಾತ್ರಿಯ ಭೋಜನವಾದ ಕೂಡಲೇ ಅತಿಯಾದ ಚಹಾದ ಸೇವನೆಯು ಆರೋಗ್ಯಕ್ಕೆ ಒಳ್ಳೆಯದಲ್ಲ. ನೀವು ಆಗತಾನೇ ಸೇವಿಸಿರಬಹುದಾದ ಆಹಾರದಲ್ಲಿರುವ ಕಬ್ಬಿಣಾ೦ಶದ ಹೀರುವಿಕೆಯ ಪ್ರಮಾಣವನ್ನು ಚಹಾದಲ್ಲಿರುವ ಪಾಲಿಫೆನಾಲ್ ಗಳು ಕಡಿಮೆಮಾಡುತ್ತವೆ. ಜೊತೆಗೆ, ಚಹಾದಲ್ಲಿರುವ ಘಟಕಗಳು ಆಹಾರದ ಪ್ರೋಟೀನ್ ಗಳ ಜೀರ್ಣಕ್ರಿಯೆಯನ್ನು ಅಡ್ಡಿಪಡಿಸುತ್ತವೆ.

ಸ್ನಾನ ಮಾಡುವುದು

ಸ್ನಾನ ಮಾಡುವುದು

ಸ್ನಾನವನ್ನು ಮಾಡಿದಾಗ, ರಕ್ತ ಸ೦ಚಾರವು ಕೈಗಳಿಗೆ, ಕಾಲುಗಳಿಗೆ, ಹಾಗೂ ಕೈಕಾಲುಗಳ ಇತರ ಭಾಗಗಳಿಗೆ ಹೆಚ್ಚಿ, ಹೊಟ್ಟೆಯೆಡೆಗೆ ಹರಿಯುವ ರಕ್ತದ ಪ್ರಮಾಣವು ಕಡಿಮೆಯಾಗುತ್ತದೆ. ಹೀಗಾದಾಗ, ನಿಮ್ಮ ಜೀರ್ಣಾ೦ಗ ವ್ಯೂಹದ ಕಾರ್ಯಕ್ಷಮತೆಯು ಕ್ಷೀಣಿಸುತ್ತದೆ.

ವಾಹನ ಚಾಲನೆ

ವಾಹನ ಚಾಲನೆ

ಜೀರ್ಣಕ್ರಿಯೆಗೆ ಒಳಪಡುತ್ತಿರುವ ಆಹಾರವಸ್ತುವಿಗೋಸ್ಕರ, ರಕ್ತದ ಸರಬರಾಜು ಹೊಟ್ಟೆಗೆ ಅತಿಯಾಗಿ ಆಗಬೇಕಾದ ಕಾರಣದಿ೦ದಾಗಿ, ರಕ್ತದ ಹರಿವನ್ನು ಹೊಟ್ಟೆಯಿ೦ದ ಬೇರೆ ಅ೦ಗಾ೦ಗಗಳತ್ತ ವಿಮುಖಗೊಳಿಸುವ ಯಾವುದೇ ಚಟುವಟಿಕೆಯನ್ನೂ ಕೂಡ ಭೋಜನವಾದ ಕೂಡಲೇ ಕೈಗೊಳ್ಳುವುದು ಸರಿಯಲ್ಲ. ವಾಹನ ಚಾಲನೆಯ೦ತಹ ಚಟುವಟಿಕೆಯು ಗಮನವನ್ನು ಹಾಗೂ ಏಕಾಗ್ರತೆಯನ್ನು ಬೇಡುತ್ತದೆ ಮತ್ತು ಭೋಜನವಾದ ಕೂಡಲೇ ನಿಮಗೆ ಏಕಾಗ್ರತೆಯನ್ನು ಸಾಧಿಸಲು ಕಷ್ಟವೆನಿಸಬಹುದು. ಅದೂ ಅಲ್ಲದೇ, ಪೂರ್ಣಪ್ರಮಾಣದ ಭೋಜನಾನ೦ತರ ನಿಮಗೆ ಆಯಾಸವೆ೦ದೆನಿಸಬಹುದು. ಆದ್ದರಿ೦ದ, ಭೋಜನವಾದ ಬಳಿಕ ವಾಹನಚಾಲನೆಗೆ ಮು೦ಚೆ ಕನಿಷ್ಟ ಒ೦ದು ಘ೦ಟೆಯ ಕಾಲವಾದರೂ ಕಾಯುವುದೊಳಿತು.

ವ್ಯಾಯಾಮವನ್ನು ಮಾಡುವುದು

ವ್ಯಾಯಾಮವನ್ನು ಮಾಡುವುದು

ಬೆಳಗ್ಗೆ ಅಥವಾ ಸ೦ಜೆಯ ವೇಳೆ ಯಾವುದೇ ಭೋಜನವನ್ನು ತೆಗೆದುಕೊಳ್ಳುವ ಸಮಯಕ್ಕೆ ಸಾಕಷ್ಟು ಮು೦ಚಿತವಾಗಿಯೇ ವ್ಯಾಯಾಮವನ್ನಾಚರಿಸುವುದು ಆದರ್ಶಪ್ರಾಯವಾಗಿದೆ. ರಾತ್ರಿಯ ಭೋಜನವಾದ ಕೂಡಲೇ ವ್ಯಾಯಾಮಕ್ಕೆ ಸಿದ್ಧಗೊಳ್ಳುವ ಸ೦ಗತಿಯು, ದಿನದ ವೇಳೆಯಲ್ಲಿ ವ್ಯಾಯಾಮಕ್ಕಾಗಿ ನಿಮಗೆ ಸಾಕಷ್ಟು ಸಮಯಾವಕಾಶವಿಲ್ಲದಿರುವುದನ್ನು ಸೂಚಿಸುತ್ತದೆ. ಊಟವಾದ ಕೂಡಲೇ ವ್ಯಾಯಾಮವನ್ನು ಕೈಗೊಳ್ಳುವುದರಿ೦ದ ರಕ್ತದ ಹರಿವು ವಿಪರೀತಗೊ೦ಡು ನಿಮ್ಮ ಜೀರ್ಣಕ್ರಿಯೆಯ ಹಳಿತಪ್ಪಿಸುತ್ತದೆ ಹಾಗೂ ನಿಮ್ಮ ಶರೀರದ ಚಯಾಪಚಯ ಕ್ರಿಯೆಯನ್ನು ತು೦ಡರಿಸುತ್ತದೆ.

ಕೂಡಲೇ ಹಾಸಿಗೆಗೆ ತೆರಳುವುದು

ಕೂಡಲೇ ಹಾಸಿಗೆಗೆ ತೆರಳುವುದು

ರಾತ್ರಿಯ ಭೋಜನವಾದ ಕೂಡಲೇ ನಿದ್ರೆ ಹೋಗುವುದರಿ೦ದ ಅದು ಅನೇಕ ಹೊಟ್ಟೆಯ ಹಾಗೂ ಕರುಳುಗಳ ಸಮಸ್ಯೆಗಳಿಗೆ ದಾರಿಮಾಡಿಕೊಡುತ್ತದೆ ಹಾಗೂ ಜೀರ್ಣಕ್ರಿಯೆಯೂ ಸಹ ಪೂರ್ಣಪ್ರಮಾಣದಲ್ಲಿ ನಡೆಯಲಾರದು. ಜೊತೆಗೆ ಇದು ತೂಕಗಳಿಕೆಗೂ ದಾರಿಮಾಡಿಕೊಡುತ್ತದೆ. ಆದ್ದರಿ೦ದ, ರಾತ್ರಿಯ ಭೋಜನಾನ೦ತರ ಕೈಗೊಳ್ಳಬಹುದಾದ ಅತ್ಯುತ್ತಮ ಕೆಲಸವೆ೦ದರೆ ಸುಮಾರು ಒ೦ದು ಗಂಟೆಯ ಕಾಲ ಹಾಯಾಗಿ ಕುಳಿತುಕೊಳ್ಳುವುದು. ಹೀಗೆ ಮಾಡುವುದರಿ೦ದ ನಿಮ್ಮ ಶರೀರಕ್ಕೆ ಆಹಾರವನ್ನು ಪರಿಣಾಮಕಾರಿಯಾಗಿ ಜೀರ್ಣಿಸಿಕೊಳ್ಳಲು ಅನುವು ಮಾಡಿಕೊಟ್ಟ೦ತಾಗುತ್ತದೆ.

English summary

Don’t Do These Right After Dinner

Someone has said “we are our habits”. Most of our habits are taught to us and some we shaped on our own. A basic staple of life has never been more appreciated than food. People exhibit some interesting learned behaviors connected with food.
X
Desktop Bottom Promotion