For Quick Alerts
ALLOW NOTIFICATIONS  
For Daily Alerts

ಆರೋಗ್ಯಕ್ಕೆ ವರದಾನವಾಗಿರುವ ಕರಿಬೇವಿನೆಲೆಯ ವಿಶೇಷತೆ ಏನು?

By Super
|

ಕರಿಬೇವು ಸೊಪ್ಪು, ಈ ಸೊಪ್ಪನ್ನು ನಾವು ಊಟ ಮಾಡುವಾಗ ಎತ್ತಿ ಪಕ್ಕಕ್ಕೆ ಇಡುವುದೇ ಹೆಚ್ಚು. ತೀರಾ ಬೇಕಾದ ಮತ್ತು ಅದೇ ಸಮಯಕ್ಕೆ ತೀರಾ ಅಸಡ್ಡೆಗೆ ಗುರಿಯಾದ ಏಕೈಕ ಸೊಪ್ಪು ಇದು. ಹೌದು, ಕೊತ್ತಂಬರಿ ಮತ್ತು ಪುದಿನಾಗಳಿಗೆ ಹೋಲಿಸಿದರೆ ಇದನ್ನು ತ್ಯಾಜ್ಯ ವಸ್ತುವಿನಂತೆ ನೋಡಿ, ಊಟ ಮಾಡುವಾಗ ಪಕ್ಕಕ್ಕೆ ಎಸೆಯುತ್ತೇವೆ. ಅದು ಉಪ್ಪಿಟ್ಟು, ಚಿತ್ರಾನ್ನ, ಪಲ್ಯ ಯಾವುದೇ ಆಗಿರಬಹುದು, ಚಟ್ನಿಯಲ್ಲಿ ಸಿಕ್ಕಿದರೂ ಸಹ ಕರಿಬೇವಿಗೆ ನಾವು ಇದೇ ಗತಿಯನ್ನು ನೀಡುತ್ತೇವೆ. ಆದರೆ ಇದನ್ನು ಬಿಟ್ಟು ಮಾತ್ರ ನಾವು ಅಡುಗೆ ಮಾಡುವುದಿಲ್ಲ ಎಂಬುದನ್ನು ನಾವು ಮರೆಯಬಾರದು.

ಒಗ್ಗರಣೆಗೆ ಇದಿಲ್ಲದೆ ಇದ್ದರೆ ಹೇಗೆ? ಏಕೆಂದರೆ ಇದು ಇದ್ದರೆ ಊಟಕ್ಕೆ ಅದರದೇ ಆದ ರುಚಿ ಸಿಕ್ಕುತ್ತದೆ. ಇದನ್ನು ಬಿಟ್ಟು ನಾವು ಅಡುಗೆ ಮಾಡಿದರೆ ರುಚಿಯಲ್ಲಿ ವ್ಯತ್ಯಾಸ ಕಂಡು ಬರುತ್ತದೆ. ಅದಲ್ಲದೆ ಕರಿಬೇವು ಸೊಪ್ಪು ಆರೋಗ್ಯಕರ ಮತ್ತು ಪೋಷಕಾಂಶಭರಿತವು ಸಹ ಹೌದು. ಇದಲ್ಲದೆ ಇದನ್ನು ಬಳಸಿ ನಾವು ಅಡುಗೆಯನ್ನು ತಯಾರಿಸಿದಾಗ ಜೀರ್ಣಕ್ರಿಯೆಯು ಸಹ ಸುಗಮವಾಗಿ ಸಾಗುತ್ತದೆ. ಅಲ್ಲದೆ ಇದರಿಂದ ಡಯೋರಿಯಾ ಮತ್ತು ಅಜೀರ್ಣ ಸಮಸ್ಯೆಯನ್ನು ಸಹ ನಿವಾರಿಸಿಕೊಳ್ಳಬಹುದು. ಈಗ ಗೊತ್ತಾಯಿತಲ್ಲವೇ, ಕರಿಬೇವು ಸೊಪ್ಪನ್ನು ಎಸೆಯುವ ಮುನ್ನ ಆಲೋಚಿಸಿ

ಬೇವಿನಲ್ಲಿ ಎರಡು ವಿಧಗಳಿವೆ. ಕಹಿಬೇವು ಮತ್ತು ಕರಿಬೇವು. ಕಹಿಬೇವಿನ ಎಲೆಗಳ ಅಂಚು ಗರಗಸದಂತಿದ್ದರೆ ಕರಿಬೇವಿನ ಎಲೆ ಹೆಚ್ಚು ಗಾಢವಾಗಿದ್ದು ಅಂಚು ನಯವಾಗಿರುತ್ತದೆ. ಅಡುಗೆಯಲ್ಲಿ ಕಹಿಬೇವಿಗಿಂತಲೂ ಕರಿಬೇವನ್ನೇ ಹೆಚ್ಚಾಗಿ ಉಪಯೋಗಿಸಲಾಗುತ್ತದೆ. ಕಹಿಬೇವು ನಿಸರ್ಗದ ಅತ್ಯುತ್ತಮ ವಾಯುಶೋಧಕವಾಗಿದೆ. ಕಹಿಬೇವಿನ ಮರಗಳಿರುವ ಪ್ರದೇಶದಲ್ಲಿ ವಾಯುಮಾಲಿನ್ಯವನ್ನು ಈ ಎಲೆಗಳು ಹೀರಿಕೊಂಡು ಆಮ್ಲಜನಕದ ಪ್ರಮಾಣವನ್ನು ಬೇರೆ ಯಾವುದೇ ಮರಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿ ನೀಡುತ್ತವೆ. ಇದೇ ಕಾರಣಕ್ಕಾಗಿ ಹಸಿರು ಮೂಡಿಸುವ ಪ್ರಯತ್ನದಲ್ಲಿ ಅರಣ್ಯ ಇಲಾಖೆ ಕಹಿಬೇವಿನ ಸಸಿಗಳನ್ನೇ ಹೆಚ್ಚಾಗಿ ವಿತರಿಸುತ್ತಿದೆ. ಎಷ್ಟೋ ದೇಶಗಳಲ್ಲಿ ಲಕ್ಷಾಂತರ ಕಹಿಬೇವಿನ ಸಸಿಗಳನ್ನು ನೆಡಲಾಗುತ್ತಿದೆ. ಈ ಲೇಖನದಲ್ಲಿ ಕರಿಬೇವಿನ ಆರೋಗ್ಯಕರ ಏಳು ಗುಣಗಳನ್ನು ನೋಡೋಣ.

ರಕ್ತದ ಕ್ಯಾನ್ಸರ್‌ನ ಪ್ರಕೋಪವನ್ನು ಕಡಿಮೆಗೊಳಿಸುತ್ತದೆ

ರಕ್ತದ ಕ್ಯಾನ್ಸರ್‌ನ ಪ್ರಕೋಪವನ್ನು ಕಡಿಮೆಗೊಳಿಸುತ್ತದೆ

ನಮ್ಮ ಧಮನಿಗಳಲ್ಲಿ ಪ್ರತಿಕ್ಷಣ ಹರಡುತ್ತಾ ಇರುವ ರಕ್ತದಲ್ಲಿರುವ ಬಿಳಿರಕ್ತಕಣಗಳು ಅಗತ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಏರುತ್ತಾ ಹೋದರೆ ಜೀವ ರಕ್ಷಿಸುವ ಈ ಕಣಗಳೇ ಜೀವಭಕ್ಷಕಗಳಾಗಿ ಮಾರ್ಪಾಡು ಹೊಂದುತ್ತವೆ.ಇದನ್ನೇ ಲ್ಯೂಕೀಮಿಯಾ ಅಥವಾ ರಕ್ತದ ಕ್ಯಾನ್ಸರ್ ಎನ್ನುತ್ತೇವೆ.

ರಕ್ತದ ಕ್ಯಾನ್ಸರ್‌ನ ಪ್ರಕೋಪವನ್ನು ಕಡಿಮೆಗೊಳಿಸುತ್ತದೆ

ರಕ್ತದ ಕ್ಯಾನ್ಸರ್‌ನ ಪ್ರಕೋಪವನ್ನು ಕಡಿಮೆಗೊಳಿಸುತ್ತದೆ

ಇದುವರೆಗೂ ಇದಕ್ಕೆ ಸಿದ್ಧೌಷಧವನ್ನು ಕಂಡುಹಿಡಿಯಲಾಗಿಲ್ಲ. ಆದರೆ ಕರಿಬೇವಿನಲ್ಲಿರುವ carbazole alkaloid ಎಂಬ ಪೋಷಕಾಂಶ ಬಿಳಿರಕ್ತಕಣಗಳು ಅನಿಯಂತ್ರಿತವಾಗಿ ಬೆಳವಣಿಗೆ ಪಡೆಯುವುದನ್ನು ನಿಧಾನಗೊಳಿಸುತ್ತದೆ. ಪರಿಣಾಮವಾಗಿ ರಕ್ತದ ಕ್ಯಾನ್ಸರ್ ಹರಡುವ ಗತಿಯೂ ನಿಧಾನವಾಗುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ನಡೆಯಬೇಕಿದೆ. ಭವಿಷ್ಯದಲ್ಲಿ ರಕ್ತದ ಕ್ಯಾನ್ಸರ್ ಅನ್ನು ನಿಧಾನಗೊಳಿಸುವ ಕರಿಬೇವು ಒಂದು ಔಷಧಿಯ ರೂಪದಲ್ಲಿಯೂ ಬರಬಲ್ಲುದು.

ರಕ್ತಹೀನತೆಯನ್ನು ಹೋಗಲಾಡಿಸುತ್ತದೆ

ರಕ್ತಹೀನತೆಯನ್ನು ಹೋಗಲಾಡಿಸುತ್ತದೆ

ಕರಿಬೇವಿನಲ್ಲಿರುವ ಫೋಲಿಕ್ ಆಮ್ಲ ಮತ್ತು ಅಧಿಕವಾದ ಕಬ್ಬಿಣದ ಅಂಶ ರಕ್ತಹೀನತೆಯನ್ನು ಪುನಃಶ್ಚೇತನಗೊಳಿಸಲು ನೆರವಾಗುತ್ತದೆ. ನಮ್ಮ ಕೆಂಪುರಕ್ತಕಣಗಳಿಗೆ ಅಗತ್ಯವಿರುವ ಕಬ್ಬಿಣವನ್ನು ಸಿದ್ಧರೂಪದಲ್ಲಿ ಕರಿಬೇವು ನೀಡುವುದರಿಂದ ರಕ್ತಹೀನತೆ ಶೀಘ್ರ ಕಡಿಮೆಯಾಗುತ್ತದೆ. ಪ್ರತಿದಿನ ಕೆಲವು ಕರಿಬೇವುಗಳನ್ನು ಸೇವಿಸುವುದರಿಂದ ಉತ್ತಮ ಪರಿಣಾಮ ಕಂಡುಬರುತ್ತದೆ.

ಮೂತ್ರಪಿಂಡಗಳ ಕ್ಷಮತೆಗೂ ಒಳ್ಳೆಯದು

ಮೂತ್ರಪಿಂಡಗಳ ಕ್ಷಮತೆಗೂ ಒಳ್ಳೆಯದು

ಇಂದಿನ ದಿನಗಳಲ್ಲಿ ನಾವು ಸಿದ್ಧ ಆಹಾರಗಳ ಮೂಲಕ ಅಗತ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಪೌಷ್ಠಿಕಾಂಶಗಳನ್ನೂ, ಉಪ್ಪು, ಮೆಗ್ನೀಶಿಯಂ ಮೊದಲಾದ ಲವಣಗಳನ್ನೂ ಸೇವಿಸುತ್ತಿದ್ದೇವೆ. ಇವುಗಳನ್ನು ಸೋಸುವ ನಮ್ಮ ಮೂತ್ರಪಿಂಡಗಳು ಶೀಘ್ರವಾಗಿ ಲವಣಗಳನ್ನು ಸಾಂದ್ರೀಕರಿಸಿ ಕಲ್ಲು ಉಂಟಾಗಲು ಕಾರಣವಾಗುತ್ತವೆ. ಪ್ರತಿದಿನ ನಮ್ಮ ಆಹಾರದಲ್ಲಿ ಕರಿಬೇರು ಇರುವಂತೆ ನೋಡಿಕೊಳ್ಳುವ ಮೂಲಕ ನಮ್ಮ ಮೂತ್ರಪಿಂಡಗಳಲ್ಲಿ ಕಲ್ಲುಗಳಾಗದಂತೆ ತಡೆಯಬಹುದು. ಹೆಚ್ಚಿನ ತೊಂದರೆ ಕಂಡುಬಂದಲ್ಲಿ ಕರಿಬೇವಿನ ಎಲೆಗಳನ್ನು ಮಿಕ್ಸಿಯಲ್ಲಿ ಗೊಟಾಯಿಸಿ ಮಾಡಿದ ಜ್ಯೂಸ್ ಕುಡಿಯುವ ಮೂಲಕ ಉತ್ತಮ ಪರಿಹಾರ ದೊರಕುತ್ತದೆ.

 ಮಧುಮೇಹವನ್ನು ನಿಯಂತ್ರನದಲ್ಲಿರಿಸುತ್ತದೆ

ಮಧುಮೇಹವನ್ನು ನಿಯಂತ್ರನದಲ್ಲಿರಿಸುತ್ತದೆ

ಭಾರತದಲ್ಲಿ ದಾಖಲೆ ಪ್ರಮಾಣದ ಮಧುಮೇಹಿಗಳಿದ್ದಾರೆ. ಮಧುಮೇಹದಲ್ಲಿ ಟೈಪ್ ೧ ಮತ್ತು ೨ ಎಂಬ ಎರಡುವಿಧಗಳಿವೆ. ಭಾರತದಲ್ಲಿ ಟೈಪ್ ೨ ಮಧುಮೇಹಿಗಳು ಅತಿಹೆಚ್ಚಾಗಿದ್ದಾರೆ. ಮಧುಮೇಹವನ್ನು ಸಂಪೂರ್ಣವಾಗಿ ಗುಣಪಡಿಸಲಾಗದಿದ್ದರೂ ನಿಯಂತ್ರಣದಲ್ಲಿಟ್ಟುಕೊಂಡು ಸಾಮಾನ್ಯ ಜೀವನ ನಡೆಸಬಹುದು. ಪ್ರತಿದಿನ ಕರಿಬೇವಿನ ಎಲೆಗಳನ್ನು ಆಹಾರದ ಮೂಲಕ ಸೇವಿಸುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿರಿಸಲು ಸಾಧ್ಯವಾಗುತ್ತದೆ. ಇದರಿಂದ ರಕ್ತದಲ್ಲಿನ ಸಕ್ಕರೆ ಅಂಶ ಗಮನಾರ್ಹ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ.

ಮೂಲವ್ಯಾಧಿ, ತುರಿಕೆಗಳನ್ನು ಗುಣಪಡಿಸುತ್ತದೆ

ಮೂಲವ್ಯಾಧಿ, ತುರಿಕೆಗಳನ್ನು ಗುಣಪಡಿಸುತ್ತದೆ

ಕರಿಬೇವಿನಲ್ಲಿ ಉರಿಯನ್ನು ಶಮನಗೊಳಿಸುವ ಹಲವು ಪೋಷಕಾಂಶಗಳಿವೆ (Anti-inflammatory). ಈ ಕಾರಣದಿಂದಾಗಿ ದೇಹವನ್ನು ತಂಪಾಗಿರಿಸುತ್ತದೆ ಹಾಗೂ ಮೂಲವ್ಯಾಧಿ ಮತ್ತು ಚರ್ಮದ ತುರಿಕೆಯನ್ನು ಕಡಿಮೆಗೊಳಿಸುತ್ತದೆ. ಅಲ್ಲದೇ ದೇಹದಲ್ಲಿ ಕ್ಯಾನ್ಸರ್ ಉಂಟುಮಾಡಬಹುದಾದ ಜೀವಕೋಶಗಳನ್ನು ಉತ್ಪತ್ತಿಯಾಗದಂತೆ ತಡೆದು ಕ್ಯಾನ್ಸರ್‌ನಿಂದ ರಕ್ಷಿಸುತ್ತದೆ.

ಎದೆಯುರಿಯನ್ನು ಶಮನಗೊಳಿಸುತ್ತದೆ

ಎದೆಯುರಿಯನ್ನು ಶಮನಗೊಳಿಸುತ್ತದೆ

ಕೆಲವೊಮ್ಮೆ ಹೊಟ್ಟೆಯಲ್ಲಿ ಅಜೀರ್ಣವಾದ ಕಾರಣ ಹಲವು ಅನಿಲಗಳು ಉತ್ಪತ್ತಿಯಾಗಿ ಹೊಟ್ಟೆ ಮತ್ತು ಎದೆಯಲ್ಲಿ ಭಯಂಕರ ಉರಿ ತರಿಸುತ್ತವೆ. ಹುಳಿತೇಗು, ವಾಂತಿ ಮೊದಲಾದ ತೊಂದರೆಗಳು ಪ್ರಾರಂಭವಾಗುತ್ತವೆ. ಅಪಾನವಾಯುವಿನ ಪ್ರಕೋಪ ಹೆಚ್ಚುತ್ತದೆ. ಈ ಸಮಯದಲ್ಲಿ ಕರಿಬೇವುಗಳನ್ನು ಮಿಕ್ಸಿಯಲ್ಲಿ ಗೊಟಾಯಿಸಿ ತಯಾರಿಸಿದ ಒಂದು ಲೋಟ ಜ್ಯೂಸ್ ಕುಡಿದರೆ ತಕ್ಷಣ ಆರಾಮವಾಗುತ್ತದೆ. ಅಜೀರ್ಣವಾಗಿದ್ದ ಆಹಾರ ಜೀರ್ಣವಾಗಿ ಪಚನಕ್ರಿಯೆ ಸರಾಗವಾಗುತ್ತದೆ.

ವಾಕರಿಕೆ ಬರುವುದನ್ನು ತಡೆಯುತ್ತದೆ

ವಾಕರಿಕೆ ಬರುವುದನ್ನು ತಡೆಯುತ್ತದೆ

ಸಾಮಾನ್ಯವಾಗಿ ಬಸುರಿಯರಿಗೆ ಪ್ರಾರಂಭದ ತಿಂಗಳುಗಳಲ್ಲಿ ವಾಂತಿಯಾಗುವುದು ಸಾಮಾನ್ಯ. ಹೊಟ್ಟೆಗೆ ಹೋದ ಆಹಾರವೆಲ್ಲಾ ವಾಂತಿಯ ಮೂಲಕ ಹೊರಬಂದರೆ ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಉತ್ತಮ ಪೌಷ್ಟಿಕ ಆಹಾರ ಸಿಗುವುದಾದರೂ ಹೇಗೆ? ಇದಕ್ಕೆ ಕರಿಬೇವಿನ ಎಲೆಗಳನ್ನು ಅರೆದು ತಯಾರಿಸಿದ ಮಿಶ್ರಣವನ್ನು ನೀರಿನಲ್ಲಿ ಸೇರಿಸಿ ಕುಡಿಯುವ ಮೂಲಕ ಉತ್ತಮ ಪರಿಣಾಮ ದೊರಕುತ್ತದೆ. ವಾಕರಿಕೆ, ವಾಂತಿಯ ತೊಂದರೆ ಇರುವ ಬೇರೆಯವರು ಸಹಾ ಕರಿಬೇವಿನ ರಸವನ್ನು ಕುಡಿಯಬಹುದು.

English summary

Best Health Benefits Of Curry Leaves

The curry leaf plant claims its origin in India. Since ancient times, it was used as a taste enhancer with the good old spices.The classic 'tadka' is incomplete without curry leaves. Though the claims of its origins in India are debatable, what isn't arguable are the various health benefits of curry leaves.
X
Desktop Bottom Promotion