For Quick Alerts
ALLOW NOTIFICATIONS  
For Daily Alerts

ಮಹಿಳೆಯರು ಬ್ರಾ ಧರಿಸದಿದ್ದರೆ ಸಿಗುವ 7 ಪ್ರಯೋಜನಗಳು

By Super
|

ಮಹಿಳೆಯರಿಗೆ ಉಡುಪುಗಳು ಸರಿಯಾಗಿ ಒಪ್ಪುವಂತಾಗಲು ಸಮರ್ಪಕವಾದ ಒಳ ಉಡುಪುಗಳೂ ಅಷ್ಟೇ ಅಗತ್ಯವಾಗಿದೆ. ಆದರೆ ದಿನವಿಡೀ ಬಿಗಿಯಾದ ಒಳ ಉಡುಪುಗಳನ್ನು ಧರಿಸುವುದು ಆರೋಗ್ಯಕ್ಕೆ ಮಾರಕ. ಆದುದರಿಂದ ಏಕಾಂತದ ಮತ್ತು ಮನೆಯಲ್ಲಿ ಸಾಧ್ಯವಿದ್ದಷ್ಟು ಹೊತ್ತು ಒಳ ಉಡುಪುಗಳಿಂದ ದೇಹಕ್ಕೆ ಬಿಡುವು ನೀಡುವುದು ಆರೋಗ್ಯಕರ ಸಲಹೆಯಾಗಿದೆ.

ಈ ನಿಟ್ಟಿನಲ್ಲಿ ನಡೆದ ಸಂಶೋಧನೆಗಳು ಹಗಲಿನಲ್ಲಿಯೂ ಮಹಿಳೆಯರು ಬ್ರಾ ಧರಿಸದಿರಲು ಸಲಹೆ ನೀಡುತ್ತವೆ. ಹಲವು ಪಾಶ್ಚಾತ್ಯ ದೇಶಗಳಲ್ಲಿ ಇದು ಈಗಾಗಲೇ ಚಾಲನೆಗೆ ಬಂದಿದೆ. ಆದರೆ ಭಾರತದಂತಹ ಸಾಂಪ್ರಾದಾಯಿಕ ರಾಷ್ಟ್ರದಲ್ಲಿ ಈ ಸಲಹೆಗಳನ್ನು ಶಿರಸಾವಹಿಸಿ ಪಾಲಿಸುವುದು ಅತ್ಯಂತ ಕಷ್ಟಕರ. ಆ ದೇಹ ಸೌಂದರ್ಯವನ್ನು ಹೆಚ್ಚಿಸಲು ಒಳ ಉಡುಪುಗಳ ಜೊತೆಗೆ ಹೆಚ್ಚುವರಿ ಸಾಧನಗಳನ್ನು ಅಳವಡಿಸಿಕೊಳ್ಳುವವರಿಗೆ ಬ್ರಾ ಧರಿಸದಿರುವುದು ಹೆಚ್ಚು ಅಗತ್ಯವಾಗಿದೆ. ಏಕೆಂದರೆ ಈ ಸಾಧನಗಳು ಹೆಚ್ಚಿದಷ್ಟೂ ದೇಹಕ್ಕಾಗುವ ಬಿಗಿಯೂ ಹೆಚ್ಚುವುದರಿಂದ ಸುಗಮ ರಕ್ತಪರಿಚಲನೆಗೆ ಅಡ್ಡಿಯಾಗುವುದು ಮಾತ್ರವಲ್ಲ, ಸರಾಗ ಉಸಿರಾಟಕ್ಕೂ ತೊಂದರೆಯಾಗುತ್ತದೆ. ಅದರಲ್ಲೂ ಕೊಂಚ ಸ್ಥೂಲಕಾಯವುಳ್ಳವರು ಈ ತೊಂದರೆಯನ್ನು ಹೆಚ್ಚು ಅನುಭವಿಸುತ್ತಾರೆ.

ಮಲಗುವಾಗ ಬ್ರಾ ಧರಿಸದೇ ಇರಲು ಕಾರಣಗಳು

ಬ್ರಾದ ಒಳಭಾಗದ ಕೆಳಗೆ ಪ್ಯಾಡ್ ಅಥವಾ ಸಿಲಿಕಾನ್ ಬಟ್ಟೆಯನ್ನು ಅಳವಡಿಸುವುದರಿಂದ ಸೌಂದರ್ಯದಕ್ಕೆ ಕಳೆ ಬಂದರೂ ಸತತವಾಗು ಒತ್ತುವ ಕಾರಣ ಸ್ತನಗಳು ಸಹಜ ಸೌಂದರ್ಯವನ್ನು ಕಳೆದುಕೊಳ್ಳುತ್ತಾ ಬರುತ್ತವೆ. ಬ್ರಾ ರಹಿತರಾಗುವುದರಿಂದ ಎದುರಿನವರ ಕಾಮನೆಗಳು ಕೆರಳುವುದು ಎಂಬ ಅನುಮಾನವನ್ನು ಸೂಕ್ತ ಹಾಗೂ ಸಡಿಲವಾದ, ಗಾಢ ಬಣ್ಣಗಳ ಬಟ್ಟೆಗಳನ್ನು ತೊಡುವ ಮೂಲಕ ಪರಿಹರಿಸಿಕೊಂಡು ಬ್ರಾ ರಹಿತ ಸ್ವಾತಂತ್ರ್ಯದ ಮೂಲಕ ಉತ್ತಮ ಆರೋಗ್ಯ ಪಡೆಯಬಹುದು. ರಾತ್ರಿ ಮಲಗುವಾಗ ಬ್ರಾ ಧರಿಸಿ ಮಲಗುವುದು ಮಾತ್ರ ಅಸಡ್ಡೆಯ ಪರಮಾವಧಿಯಾಗಿದೆ.

ಸರಾಗ ಉಸಿರಾಟದ ಸ್ವಾತಂತ್ರ್ಯ

ಸರಾಗ ಉಸಿರಾಟದ ಸ್ವಾತಂತ್ರ್ಯ

ಬ್ರಾ ಕಳಚಿದಾಕ್ಷಣ ಶ್ವಾಸಕೋಶಕ್ಕೆ ಪೂರ್ಣವಾಗಿ ಉಸಿರನ್ನೆಳೆದುಕೊಳ್ಳಲು ಸಾಧ್ಯವಾಗುವುದನ್ನು ಗಮನಿಸಿದಿರೇ? ಬ್ರಾ ಕಳಚಿದ ಬಳಿಕ ಪೂರ್ಣ ಉಸಿರನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಸರಾಗವಾದ ಉಸಿರಾಟದ ಮೂಲಕ ದೇಹಕ್ಕೆ ಹೆಚ್ಚಿನ ಆಮ್ಲಜನಕ ದೊರೆತು ದಿನದ ಆಯಾಸ ಪರಿಹಾರವಾಗುತ್ತದೆ.

ಸರಾಗವಾಗುವ ಎದೆಗೂಡು

ಸರಾಗವಾಗುವ ಎದೆಗೂಡು

ಬ್ರಾದಲ್ಲಿರುವ ಪಟ್ಟಿಗಳು ಎದೆಯನ್ನು ಬಿಗಿಯಾಗಿ ಹಿಡಿದಿರುವುದರಿಂದ ಎದೆಗೂಡು ಪೂರ್ಣವಾಗಿ ವಿಸ್ತರಿಸಲು ಅನಾನುಕೂಲವಾಗಿದ್ದು ಈಗ ನಿರಾಳವಾಗುತ್ತದೆ. ಆಧುನಿಕ ಬ್ರಾಗಳು ಹೆಚ್ಚಿನ ಎಲಾಸ್ಟಿಕ್ ಅಥವಾ ಹಿಗ್ಗುವ ಗುಣ ಹೊಂದಿದ್ದು ಎದೆಗೂಡಿಗೆ ಕಡಿಮೆ ಒತ್ತಡ ನೀಡುತ್ತವೆ. ಆದರೂ ಹೆಚ್ಚಿನ ಮಹಿಳೆಯರಿಗೆ ಈ ಬಿಗಿ ನೀಡುವ ಕಿರಿಕಿರಿ ಬ್ರಾ ಕಳಚುವವರೆಗೂ ಅನುಭವಿಸಲೇಬೇಕಾಗುತ್ತದೆ. ಬ್ರಾ ಆವರಿಸಿದ್ದ ಭಾಗಗಳು ಈಗ ಗಾಳಿಗೆ ತೆರೆದು ಹಾಯೆನಿಸುತ್ತದೆ. ಹೊರಗೆ ಓಡಾಡುವಾಗ ಬೆವರಿನಿಂದ ತೋಯ್ದಿದ್ದ ಬಟ್ಟೆ ತುರಿಕೆಯನ್ನುಂಟು ಮಾಡಿದ್ದು ತುರಿಸಲಾರದ ಅಸಹಾಯಕತೆಗೆ ಈಗ ಕಡಿವಾಣ ಬೀಳುತ್ತದೆ. ಅದರಲ್ಲೂ ಬಿಸಿಲಿಗೆ ಮೈ ಒಡ್ಡಬೇಕಾದವರಿಗೆ ಪಟ್ಟಿಯಿರುವ ಸ್ಥಳ ಬೆಳ್ಳಗಿದ್ದು ಉಳಿದ ಸ್ಥಳ ಹೆಚ್ಚು ಗಾಢವಾಗುವ ಅಂತಹ ಕಡಿಮೆಯಾಗಿ ಸೌಂದರ್ಯ ಹೆಚ್ಚುತ್ತದೆ.

ಸುಖ ನಿದ್ದೆಯ ಸ್ವಾತಂತ್ರ್ಯ

ಸುಖ ನಿದ್ದೆಯ ಸ್ವಾತಂತ್ರ್ಯ

ರಾತ್ರಿ ಮಲಗುವ ಮುನ್ನ ಬ್ರಾ ರಹಿತರಾಗುವುದು ಆರೋಗ್ಯದ ದೃಷ್ಟಿಯಿಂದ ಅತಿ ಅಗತ್ಯವಾಗಿದೆ. ಸ್ವತಂತ್ರವಾದ ದೇಹದ ಕಾರಣ ರಕ್ತಪರಿಚಲನೆಗೆ ಯಾವುದೇ ಅಡ್ಡಿಯಾಗದಿರುವುದರಿಂದ ಸುಖನಿದ್ದೆ ಆವರಿಸುತ್ತದೆ.

ಧೃಢವಾದ ಬ್ರಾದಿಂದ ಮುಕ್ತಿ

ಧೃಢವಾದ ಬ್ರಾದಿಂದ ಮುಕ್ತಿ

ಈ ವಿನ್ಯಾಸದಲ್ಲಿ ದೇಹ ಸೌಂದರ್ಯವನ್ನು ಹೆಚ್ಚಿಸಲು ಬ್ರಾದ ಒಳಭಾಗವನ್ನು ಕೊಂಚ ಧೃಢವಾದ ಎಳೆಗಳಿಂದ ನೇಯ್ದಿರುವ ಕ್ಯಾನ್ ವಾಸ್ ನಂತಹ ಒರಟು ಬಟ್ಟೆಯಿಂದ ಹೊದಿಸಲಾಗಿರುತ್ತದೆ. ಈ ಎಳೆಗಳನ್ನು ಸಾಮಾನ್ಯವಾಗಿ ಲೋಹ, ಧೃಢ ಪ್ಲಾಸ್ಟಿಕ್ ಅಥವಾ ರೆಸಿನ್ ಉಪಯೋಗಿಸಿ ತಯಾರಿಸುತ್ತಾರೆ. ಕಬ್ಬಿಣದ ಚಿಕ್ಕಚಿಕ್ಕ ಕಿಂಡಿಯ ಜಾಲರಿಯಂತಿರುವ ಬಟ್ಟೆಯನ್ನು ಹೊಂದಿರುವ ಈ ಬ್ರಾವನ್ನು ಅನಿವಾರ್ಯವಾಗಿ ಧರಿಸಿದ್ದಷ್ಟೂ ಹೊತ್ತು ಅಹಿತಕರ ಭಾವನೆಯನ್ನು ಅನುಭವಿಸುತ್ತಲೇ ಇರಬೇಕಾಗುತ್ತದೆ. ಬ್ರಾ ರಹಿತ ವೇಳೆಯಲ್ಲಿ ಈ ಅಹಿತಕರ ಅನುಭವದಿಂದ ಪಾರಾಗಬಹುದು. ವಸ್ತ್ರ ವಿನ್ಯಾಸಕಾರರು ಈ ಕಂಚುಕಗಳನ್ನು ವಾರಕ್ಕೆರಡು ದಿನಕ್ಕಿಂತ ಹೆಚ್ಚು ತೊಡದಿರಲು ಸಲಹೆ ನೀಡುತ್ತಾರೆ. ತಪ್ಪಿದರೆ ಸ್ತನಗಳಲ್ಲಿ ನೋವು ಕಾಣಿಸಿಕೊಳ್ಳುವ ಅಪಾಯವಿದೆ.

ಸ್ತನ ಕ್ಯಾನ್ಸರ್ ಗೆ ಒಳಗಾಗುವ ಸಾಧ್ಯತೆ ಕಡಿಮೆ

ಸ್ತನ ಕ್ಯಾನ್ಸರ್ ಗೆ ಒಳಗಾಗುವ ಸಾಧ್ಯತೆ ಕಡಿಮೆ

ದಿನದ ಹೆಚ್ಚು ಹೊತ್ತು ಕಂಚುಕ ಧರಿಸಿದ್ದಷ್ಟೂ ರಕ್ತಸಂಚಾರ ಸುಗಮವಾಗಿ ಸಾಗದೇ ನಿಧಾನವಾಗಿ ಸ್ತನಕ್ಯಾನ್ಸರ್ ಆವರಿಸಿಕೊಳ್ಳುವ ಸಂಭವ ಹೆಚ್ಚುತ್ತಾ ಹೋಗುತ್ತದೆ. ಇದರಿಂದ ಪಾರಾಗಲು ಬ್ರಾ ರಹಿತರಾಗುವುದು ಅತ್ಯಂತ ಸುಲಭವಾದ ಮತ್ತು ಫಲಕಾರಿಯಾದ ವಿಧಾನವಾಗಿದೆ. ಇತ್ತೀಚಿನ ಮಾಮ್ಮೋಗ್ರಫಿ ಪರೀಕ್ಷೆಯ ಫಲಿತಾಂಶಗಳ ಅಂಕಿ ಅಂಶಗಳು ಈ ವಿಷಯವನ್ನು ಧೃಢಪಡಿಸುತ್ತವೆ.

ಬ್ರಾರಹಿತ ಸ್ವಾತಂತ್ರ್ಯದಿಂದ ದೊರಕುವ ಆರಾಮಕ್ಕೆ ಸಾಟಿಯಿಲ್ಲ

ಬ್ರಾರಹಿತ ಸ್ವಾತಂತ್ರ್ಯದಿಂದ ದೊರಕುವ ಆರಾಮಕ್ಕೆ ಸಾಟಿಯಿಲ್ಲ

ಬ್ರಾ ರಹಿತ ಸ್ಥಿತಿಯಲ್ಲಿದ್ದಷ್ಟೂ ಹೊತ್ತು ದೇಹ ಯಾವುದೇ ಬಿಗಿ ಇಲ್ಲದ ಸ್ಥಿತಿ ಇರುವುದರಿಂದ ಅನುಭವಿಸುವ ಸ್ವಾತಂತ್ರ್ಯಕ್ಕೆ ಬೆಲೆ ಕಟ್ಟಲಾಗದು. ಪೂರ್ಣವಾಗಿ ವಿಶ್ರಾಂತಿ ಪಡೆಯುವ ದೇಹ ಹಾಗೂ ಮನಗಳಿಗೆ ಆರಾಮ ಲಭಿಸುವುದು.

ತಿಂಗಳ ದಿನಗಳ ಕಷ್ಟದಿಂದ ಶೀಘ್ರ ಮುಕ್ತಿ

ತಿಂಗಳ ದಿನಗಳ ಕಷ್ಟದಿಂದ ಶೀಘ್ರ ಮುಕ್ತಿ

ತಿಂಗಳ ದಿನಗಳಲ್ಲಿ ವಕ್ಷಸ್ಥಲ ಹೆಚ್ಚು ಸಂವೇದಿಯಾಗುವ ಕಾರಣ ವಕ್ಷಸ್ಥಲವನ್ನು ಮುಚ್ಚುವ ಯಾವುದೇ ಉಡುಪು ಕಿರಿಕಿರಿಯುಂಟುಮಾಡುತ್ತದೆ. ಈ ದಿನಗಳಲ್ಲಿ ಕಂಚುಕರಹಿತರಾಗಿರುವುದು ಈ ಕಿರಿಕಿರಿಯಿಂದ ರಕ್ಷಿಸುತ್ತದೆ. ಪರಿಣಾಮವಾಗಿ ಈ ದಿನಗಳಿಂದ ಕಡಿಮೆ ಸಮಯದಲ್ಲಿ ಮುಕ್ತಿ ದೊರಕುತ್ತದೆ ಹಾಗೂ ಆರೋಗ್ಯ ವೃದ್ಧಿಸುತ್ತದೆ.

English summary

7 Healthy Reasons To Go Braless

Padded bras, underwire bras and much more have become a fashion craze among Indian women. From wearing it colourful to going with patterns, women around the world feel wearing bra is the best for breast health. Going braless is healthy for many reasons. It allows good blood circulation.
Story first published: Saturday, August 30, 2014, 9:38 [IST]
X
Desktop Bottom Promotion