For Quick Alerts
ALLOW NOTIFICATIONS  
For Daily Alerts

ನಾವು ಬಳಸಬಾರದ ಏಳು ಅಪಾಯಕಾರಿ ಮನೆ ಮದ್ದುಗಳು

By Arpitha Rao
|

ನಾವೆಲ್ಲರೂ ನೋವುಗಳನ್ನು ತಡೆಯಲು ಹಳೆಯಕಾಲದ ಮನೆ ಮದ್ದುಗಳನ್ನು ನಮಗೆ ತಿಳಿಸಿರುವ ಅಜ್ಜಿಗೆ ಧನ್ಯವಾದಗಳನ್ನು ಹೇಳಲೇಬೇಕು. ಆದಾಗ್ಯೂ ಎಲ್ಲಾ ಮನೆ ಮದ್ದುಗಳು ಕ್ಷೇಮವಲ್ಲ, ಕೆಲವೊಂದು ಮನೆ ಮದ್ದುಗಳು ಅಪಾಯಕಾರಿಯಾಗಿರುತ್ತವೆ. ಆರೋಗ್ಯ ವೆಬ್ ಸೈಟ್‌ನಲ್ಲಿ ಪ್ರಕಟಿಸಿದಂತೆ ಈ ಕೆಳಗೆ ನೀಡಿರುವ ಮನೆ ಮದ್ದುಗಳು ಅಪಾಯಕಾರಿ ಮತ್ತು ಅವುಗಳನ್ನು ಬಳಸದಿರುವುದು ಸೂಕ್ತ ಎನ್ನಲಾಗಿದೆ.

ಕಿವಿ ಶುದ್ಧೀಕರಿಸಲು ಮುಂಬತ್ತಿ ಬಳಕೆ

ಕಿವಿ ಶುದ್ಧೀಕರಿಸಲು ಮುಂಬತ್ತಿ ಬಳಕೆ

ಕಿವಿಯನ್ನು ಶುದ್ಧೀಕರಿಸಲು ಕ್ಯಾಂಡಲ್ ಅನ್ನು ಎರಡೂ ಕಿವಿಯ ಬಾಡಿಗೆ ಉರಿಸಲಾಗುತ್ತದೆ,ಆದರೆ ಇದರಿಂದ ಕಿವಿ ಸೋಂಕು ಅಥವಾ ಕಿವಿ ಮುಚ್ಚಿಹೋಗುವ ಸಾಧ್ಯತೆ ಹೆಚ್ಚಿರುವುದರಿಂದ ಇದನ್ನು ಬಳಸುವುದು ಅಪಾಯಕಾರಿ.

ಪರಿಹಾರ: ಮೌಂಟ್ ಎಲಿಜಬೆತ್ ವೈದ್ಯಾಲಯದ ಗಂಟಲು,ಮೂಗು ಮತ್ತು ಕಿವಿ ತಜ್ಞರಾದ ಡಾ. ಎ , ಬಿ ಜಾನ್ ನೀಡುವ ಸಲಹೆ ಎಂದರೆ ಕಿವಿ ಸ್ವಚ್ಚಗೊಳಿಸಲು ಕಿವಿ ಡ್ರಾಪ್ಸ್ ಬಳಸಿ.

ಮೊಡವೆಗಳನ್ನು ಗುಣಪಡಿಸಲು ಟೂತ್ ಪೇಸ್ಟ್

ಮೊಡವೆಗಳನ್ನು ಗುಣಪಡಿಸಲು ಟೂತ್ ಪೇಸ್ಟ್

ಹಲ್ಲುಗಳನ್ನು ಸ್ವಚ್ಚಗೊಳಿಸಲು ಬಳಸುವ ಟೂತ್ ಪೇಸ್ಟ್ ನಿಂದ ಕೆಲವರು ಮೊಡವೆ ಹೋಗಲಾಡಿಸಲು ಕುಸ ಬಳಸುತ್ತಾರೆ. ಆದರೆ ಪೇಸ್ಟ್ ಬಳಕೆಯಿಂದ ಮೊಡವೆಯಾದ ಜಾಗ ಸುಟ್ಟು ಅಥವಾ ಕೆರೆತದಿಂದ ಇನ್ನಷ್ಟು ಉಲ್ಬಣಗೊಳಿಸುವ ಸಾಧ್ಯತೆ ಇರುವುದರಿಂದ ಪೇಸ್ಟ್ ಬಳಕೆ ಅಪಾಯಕಾರಿ.

ಚರ್ಮರೋಗ ತಜ್ಞರಾದ ಡಾ ಚೆಂಗ್ ವೈ ಕ್ವಾಂಗ್ ಹೇಳುವ ಪ್ರಕಾರ ವಿನೆಗರ್ ಅಥವಾ ಉಪ್ಪು ನೀರಿನ ಬಳಕೆಯಿಂದ ಮೊಡವೆ ಗುಣಪಡಿಸಬಹುದು ಎನ್ನುತ್ತಾರೆ.

ಕೈಯಲ್ಲಾಗುವ ಗಂಟು ಕತ್ತರಿಸುವುದು

ಕೈಯಲ್ಲಾಗುವ ಗಂಟು ಕತ್ತರಿಸುವುದು

ಕೆಲವು ಜನರು ಕೈಯಲ್ಲಾಗುವ ಸಣ್ಣ ಗುಳ್ಳೆಯ ರೀತಿಯ ಗಂಟನ್ನು ಬ್ಲೇಡ್ ಅಥವಾ ಇತರ ವಸ್ತುಗಳಿಂದ ಕೆತ್ತಲು ಪ್ರಯತ್ನಿಸುತ್ತಾರೆ.ಆದರೆ ಈ ರೀತಿ ಮಾಡುವುದರಿಂದ ತನ್ನ ಕೈ ಕೊಯ್ದು ಕೊಳ್ಳುವುದು ಅಥವಾ ಸೋಂಕು ಆಗುವ ಸಾಧ್ಯತೆ ಇರುತ್ತದೆ ಆದ್ದರಿಂದ ಇದು ಅಪಾಯಕಾರಿ.

ಪರಿಹಾರ: ರತ್ನಂ ಅಲರ್ಜಿ ಮತ್ತು ಚರ್ಮ ತಜ್ಞರಾದ ರತ್ನಂ,ಇದಕ್ಕೆ ವೈದ್ಯರಿಂದ ಚಿಕಿತ್ಸೆ ಪಡೆಯುವುದು ಸೂಕ್ತ ಎಂದು ಸಲಹೆ ನೀಡುತ್ತಾರೆ.

ಸುಟ್ಟ ಗಾಯಕ್ಕೆ ಬೆಣ್ಣೆ

ಸುಟ್ಟ ಗಾಯಕ್ಕೆ ಬೆಣ್ಣೆ

ಸುಟ್ಟು ಹೋದಾಗ ತಕ್ಷಣ ಬೆಣ್ಣೆ ಸವರುವುದು ಒಂದು ಮೆನೆ ಮದ್ದು. ಆದರೆ ಬೆಣ್ಣೆಯನ್ನು ಹಚ್ಚುವುದರಿಂದ ಬ್ಯಾಕ್ಟೀರಿಯ ಸೋಂಕು ತಗುಲಬಹುದು.

ಪರಿಹಾರ: ಡಾ ರತ್ನಂ ಈ ರೀತಿ ಸುಟ್ಟ ಗಾಯಕ್ಕೆ ತಣ್ಣನೆಯ ನೀರು ಹಾಕಿ ಎಂದು ಸಲಹೆ ನೀಡುತ್ತಾರೆ.

ಮೀನು ಮೂಳೆ ಕೈಯಲ್ಲಿ ತೆಗೆಯುವುದು

ಮೀನು ಮೂಳೆ ಕೈಯಲ್ಲಿ ತೆಗೆಯುವುದು

ಗಂಟಲಲ್ಲಿ ಮೀನಿನ ಮೂಳೆ ಸಿಕ್ಕಿಕೊಂಡರೆ ಕೈಯಲ್ಲಿ ತೆಗೆಯುವ ಪ್ರಯತ್ನ ಮಾಡುವುದು ಸಾಮಾನ್ಯ. ಆದರೆ ಈ ರೀತಿ ಮಾಡುವುದರಿಂದ ಮೂಳೆ ಇನ್ನಷ್ಟು ಒಳಗೆ ಸೇರಿ ಬಿಡುವ ಸಾಧ್ಯತೆ ಕೂಡ ಇರುತ್ತದೆ. ಜೊತೆಗೆ ನಿಮ್ಮ ಉಗುರು ತಗುಲಿ ಗಂಟಲಿಗೆ ಕೂಡ ಹಾನಿ ಸಂಭವಿಸಬಹುದು.

ಪರಿಹಾರ: ವೈ ಹೆಚ್ ಗೋಹ್ ಗಂಟಲು,ಕಿವಿ ಕುತ್ತಿಗೆ ಚಿಕಿತ್ಸಾಲಯದ ಡಾ ವೈ ಹೆಚ್ ಗೋಹ್ ಹೇಳುವ ಪ್ರಕಾರ ಈ ರೀತಿಯಾದಾಗ ತಕ್ಷಣ ವೈದ್ಯರನ್ನು ಕಾಣುವುದು ಸೂಕ್ತ ,ಅವರು ಸೂಕ್ತ ಮಾರ್ಗದಿಂದ ಮೂಳೆ ಹೊರ ತೆಗೆಯುತ್ತಾರೆ ಎನ್ನುತ್ತಾರೆ.

ಕಣ್ಣು ಗುಳ್ಳೆ ತೆಗೆಯಲು ಸೂಜಿ ಬಳಕೆ

ಕಣ್ಣು ಗುಳ್ಳೆ ತೆಗೆಯಲು ಸೂಜಿ ಬಳಕೆ

ಸಾಕಷ್ಟು ಜನರು ಕಣ್ಣಿಗೆ ಗುಳ್ಳೆ ಆದಾಗ ಸೂಜಿ ಬಳಸುವುದರ ಮೂಲಕ ಅದನ್ನು ತೆಗೆಯುವ ಪ್ರಯತ್ನ ಮಾಡುತ್ತಾರೆ.ಆದರೆ ಸ್ವಲ್ಪ ಕೈತಪ್ಪಿದರೆ ಕಣ್ಣಿಗೆ ಸೂಜಿ ಚುಚ್ಚುವ ಸಾಧ್ಯತೆ ಇರುತ್ತದೆ.

ಪರಿಹಾರ:ಅಂತರಾಷ್ಟ್ರೀಯ ಮಟ್ಟದ ಕಣ್ಣು ತಜ್ಞರಾದ ಡಾ ಕರ್ರಿ ಚುಂಗ್ ಸಲಹೆ ಎಂದರೆ ಹೀಗಾದಾಗ ನಂಜು ನಿರೋಧಕ ಕಣ್ಣಿನ ಕ್ರೀಂ ಬಳಸಿ.

ಮಗುವಿನ ವಸಡುಗಳಿಗೆ ಆಲ್ಕೋಹಾಲ್ ಬಳಕೆ

ಮಗುವಿನ ವಸಡುಗಳಿಗೆ ಆಲ್ಕೋಹಾಲ್ ಬಳಕೆ

ಸಾಕಷ್ಟು ಜನ ಆಲ್ಕೊಹಾಲ್ ಬಳಸುತ್ತಾರೆ ಆದರೆ ಕೆಲವು ಜನರು ಮಗು ಹಲ್ಲು ಪಡೆದುಕೊಳ್ಳುವಾಗ ಆಗುವ ನೋವನ್ನು ತಡೆಯಲು ಆಲ್ಕೋಹಾಲ್ ಬಳಸುತ್ತಾರೆ.ಆಲ್ಕೋಹಾಲ್ ಮಗುವಿಗೆ ಸುಟ್ಟ ಅನುಭವ ನೀಡಿ ಇನ್ನಷ್ಟು ಗಾಬರಿಗೊಳಿಸುತ್ತದೆ.ಜೊತೆಗೆ ಕೆ,ಕೆ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ತಜ್ಞರಾದ ಡಾ ವಾರೆನ್ ಲೀ ಹೇಳುವಂತೆ ಅಲ್ಕೋಹಾಲ್ ಬಳಕೆ ಮಕ್ಕಳಿಗೆ ಸೂಕ್ತವಲ್ಲ.

ಪರಿಹಾರ: ಡಾ ಲೀ ಹೇಳುವಂತೆ ಮಕ್ಕಳಿಗೆ ಏನಾದರೂ ಕಚ್ಚಿ ತಿನ್ನಲು ಕೊಡಿ,ಇದರಿಂದ ಮಕ್ಕಳು ನೋವನ್ನು ಮರೆಯಬಹುದು.

English summary

7 Dangerous Home Remedies To Avoid

We must definitely thank Grandma for all those old home remedies which work wonders in curing our aches and pains. According to an article published on the YourHealth website, here are dangerous home remedies which you should avoid.
X
Desktop Bottom Promotion