For Quick Alerts
ALLOW NOTIFICATIONS  
For Daily Alerts

ಹೃದಯವನ್ನು ಹೀಗೆ ಜೋಪಾನ ಮಾಡಿ

By Hemanth Amin
|

ಹೃದಯ ನಮ್ಮ ದೇಹದ ಪ್ರಮುಖ ಅಂಗ. ಹೃದಯ ತನ್ನ ಕೆಲಸ ನಿಲ್ಲಿಸಿದರೆ ನಮ್ಮ ಜೀವನಕ್ಕೆ ಫುಲ್ ಸ್ಟಾಪ್ ಇಟ್ಟಂತೆ. ಆರೋಗ್ಯಕರ ಜೀವನ ಸಾಗಿಸಲು ಆರೋಗ್ಯಕರ ಹೃದಯ ಅತೀ ಮುಖ್ಯ. ಆರೋಗ್ಯಕರ ಜೀವನ ಶೈಲಿ ಪಾಲಿಸದೆ ಇದ್ದರೆ ಆರೋಗ್ಯಕರ ಹೃದಯವಿರದು. 66 ವರ್ಷಗಳ ಜೀವನದಲ್ಲಿ ನಮ್ಮ ಹೃದಯ ಸುಮಾರು 2.5 ಶತಕೋಟಿ ಸಲ ಬಡಿಯುತ್ತದೆ. ನಮ್ಮ ಜೀವನಕ್ಕೆ ಅತೀ ಪ್ರಾಮುಖ್ಯವಾಗಿರುವ ದೇಹದ ಈ ಭಾಗವನ್ನು ತುಂಬಾ ಗೌರವ ಮತ್ತು ಕಾಳಜಿಯಿಂದ ನೋಡಿಕೊಳ್ಳಬೇಕು. ತುಂಬಾ ಮಂದಿ ಹೃದಯದ ಆರೋಗ್ಯವನ್ನು ಕಡೆಗಣಿಸುತ್ತಾರೆ ಮತ್ತು ಅನಾರೋಗ್ಯಕರ ಜೀವನಶೈಲಿ ಆಯ್ಕೆ ಮಾಡಿ ಹೃದಯ ಆರೋಗ್ಯ ಕೆಡಿಸುತ್ತಾರೆ.

ನಿಮ್ಮ ಜೀವನಶೈಲಿಗೆ ಸಂಬಂಧಪಟ್ಟ ಹಲವಾರು ವಿಷಯಗಳು ನಿಮ್ಮ ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಕೆಲವೊಂದು ಅನುವಂಶಿಕವಾಗಿ ಹೃದಯಕ್ಕೆ ಬರುವ ಕಾಯಿಲೆಗಳ ಮೇಲೆ ನಮಗೆ ನಿಯಂತ್ರಣ ಸಾಧಿಸಲು ಸಾಧ್ಯವಿಲ್ಲ. ಅನಾರೋಗ್ಯಕರ ಫಾಸ್ಟ್ ಫುಡ್ ಮತ್ತು ಇತರ ಫಾಸ್ಟ್ ಫುಡ್ ಗಳ ಸೇವನೆಯಿಂದ ಬರುವಂತಹ ಟ್ರಾನ್ಸ್ ಫ್ಯಾಟ್ ನಿಂದಾಗಿ ಅಪಧಮನಿಗಳಿಗೆ ತಡೆಯೊಡ್ಡಿ ಹೃದಯ ತುಂಬಾ ಕಠಿಣವಾಗಿ ಕೆಲಸ ಮಾಡುವಂತೆ ಮಾಡಬಹುದು. ದೀರ್ಘಾವಧಿಗೆ ಹೀಗೆ ಆದರೆ ಆಗ ಹೃದಯದ ಮೇಲೆ ಹೆಚ್ಚಿನ ಒತ್ತಡ ಬಿದ್ದು ಸಮಸ್ಯೆಗಳು ಆರಂಭವಾಗಬಹುದು.

ಹೃದಯದ ಮೇಲೆ ಒತ್ತಡ ಬೀಳುವುದನ್ನು ತಡೆಯಲು ಧೂಮಪಾನ ಮತ್ತು ಅಲ್ಕೊಹಾಲ್ ನ್ನು ಅತಿಯಾಗಿ ಸೇವಿಸುವುದನ್ನು ಬಿಡಬೇಕು. ಆರೋಗ್ಯಕರ ಮತ್ತು ಸರಿಯಾಗಿ ತಿನ್ನುವುದರಿಂದ ದೇಹವು ಆರೋಗ್ಯಕರವಾಗಿರುತ್ತದೆ. ಹೆಚ್ಚಿನ ದೇಹಭಾರದಿಂದ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಸ್ಥಾಪನೆಯಾಗಿ ಅದು ನಿಮ್ಮ ಹೃದಯದ ತೊಂದರೆಗೆ ಕಾರಣವಾಗಬಹುದು. ಹೃದಯದ ಕಾರ್ಯನಿರ್ವಹಣೆ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುವ ಮತ್ತೊಂದು ಪ್ರಮುಖ ಅಂಶವೆಂದರೆ ಅದು ಒತ್ತಡ. ಜನರು ಯಶಸ್ಸು ಮತ್ತು ಸಂಪತ್ತಿನ ಬೆನ್ನೇರಿ ಓಡುವುದರಿಂದ ಅತಿಯಾದ ಒತ್ತಡ ಉಂಟಾಗಿ ಅದು ಹೃದಯದ ಅನಾರೋಗ್ಯಕ್ಕೆ ಕಾರಣವಾಗಬಹುದು.

ಹೃದಯವನ್ನು ಆರೋಗ್ಯಕರವಾಗಿಡಲು ಕೆಲವೊಂದು ವಿಧಾನಗಳು

ಆರೋಗ್ಯಕರ ಆಹಾರ

ಆರೋಗ್ಯಕರ ಆಹಾರ

ಆರೋಗ್ಯಕರವಾಗಿರುವುದನ್ನೇ ತಿನ್ನಬೇಕು. ಪೌಷ್ಠಿಕಾಂಶಗಳನ್ನು ಹೊಂದಿರುವ ಆರೋಗ್ಯಕರ ಆಹಾರ ಕ್ರಮದಿಂದ ಆರೋಗ್ಯಕರ ದೇಹ ಪಡೆಯಲು ಸಾಧ್ಯ. ಇದರಿಂದ ಹೃದಯದ ಮೇಲೆ ಒತ್ತಡ ಬೀಳುವುದು ಕಡಿಮೆಯಾಗಿ ಅದರ ಆರೋಗ್ಯ ಹೆಚ್ಚುತ್ತದೆ. ಅತಿಯಾದ ಟ್ರಾನ್ಸ್ ಫ್ಯಾಟ್ ಇರುವ ಆಹಾರ ತ್ಯಜಿಸಿ.

ತೂಕ ಸಮತೋಲದಲ್ಲಿರಲಿ

ತೂಕ ಸಮತೋಲದಲ್ಲಿರಲಿ

ದೈಹಿಕವಾಗಿ ಫಿಟ್ ಇರಬೇಕು ಮತ್ತು ದೇಹದ ತೂಕ ಸಮತೋಲದಲ್ಲಿಡಬೇಕು. ಬೊಜ್ಜು ವಿವಿಧ ಹೃದಯಸಂಬಂಧಿ ಕಾಯಿಲೆಗಳಿಗೆ ಕಾರಣವಾಗುತ್ತದೆ. ನಿಮ್ಮ ಎತ್ತರಕ್ಕೆ ಹೊಂದಿಕೊಂಡು ಎಷ್ಟು ತೂಕ ಅಗತ್ಯವಿದೆ ಎಂದು ತಿಳಿದುಕೊಳ್ಳಿ ಮತ್ತು ಅದರ ಮಿತಿಯಲ್ಲಿದ್ದೀರಾ ಎಂದು ತಿಳಿದುಕೊಳ್ಳಿ.

ಯೋಗಾಭ್ಯಾಸ ಮಾಡಿ

ಯೋಗಾಭ್ಯಾಸ ಮಾಡಿ

ನಿಯಮಿತವಾಗಿ ವ್ಯಾಯಾಮ ಅಥವಾ ಯೋಗ ಮಾಡುವುದರಿಂದ ದೇಹ ಮತ್ತು ಹೃದಯ ಆರೋಗ್ಯಕರವಾಗಿ ನಿರ್ವಹಿಸಲು ನೆರವಾಗುತ್ತದೆ. ನಿಯಮಿತವಾಗಿ ಮಾಡಬಹುದಾದ ದೈಹಿಕ ಚಟುವಟಿಕೆಗಳನ್ನು ಆಯ್ಕೆ ಮಾಡಿ. ಉತ್ತಮ ಆರೋಗ್ಯ ಕಾಪಾಡಲು ಕ್ರೀಡೆ, ಏರೋಬಿಕ್ಸ್ ಅಥವಾ ನೃತ್ಯ ನೆರವಾಗುತ್ತದೆ.

ದೈಹಿಕ ಚಟುವಟಿಕೆ

ದೈಹಿಕ ಚಟುವಟಿಕೆ

ದೈಹಿಕವಾಗಿ ತುಂಬಾ ಚಟುವಟಿಕೆ ಮಾಡಿ. ದಿನವಿಡೀ ಕಚೇರಿಯಲ್ಲಿ ಕುಳಿತುಕೊಂಡು ಕೆಲಸ ಮಾಡುವುದಿದ್ದರೆ ಬೆಳಿಗ್ಗೆ ಅಥವಾ ಸಂಜೆ ವೇಳೆ ವಾಕಿಂಗ್ ಅಥವಾ ಸೈಕಲ್ ತುಳಿಯಿರಿ. ಇದರು ದೈಹಿಕ ಚಟುವಟಿಕೆಗೆ ನೆರವಾಗುತ್ತದೆ.

ಕೆಟ್ಟ ಅಭ್ಯಾಸ ತ್ಯಜಿಸಿ

ಕೆಟ್ಟ ಅಭ್ಯಾಸ ತ್ಯಜಿಸಿ

ಧೂಮಪಾನ, ಅಲ್ಕೋಹಾಲ್ ಮತ್ತು ಇತರ ಅಮಲೇರಿಸುವ ಪದಾರ್ಥಗಳನ್ನು ತ್ಯಜಿಸಿ. ಇಂತಹ ಕೆಟ್ಟ ಅಂಶಗಳು ನಿಮ್ಮ ದೇಹದೊಳಗೆ ಸೇರಿದರೆ ಅದು ನಿಮ್ಮ ದೇಹ ಮತ್ತು ಹೃದಯಕ್ಕೆ ತೊಂದರೆಯನ್ನುಂಟು ಮಾಡುತ್ತದೆ. ಇಂತಹ ದುರಾಭ್ಯಾಸಗಳನ್ನು ನಿಧಾನವಾಗಿ ಆದರೆ ಖಚಿತವಾಗಿ ತ್ಯಜಿಸಿರಿ.

ಒತ್ತಡ ಕಡಿಮೆ ಮಾಡಿ

ಒತ್ತಡ ಕಡಿಮೆ ಮಾಡಿ

ನೀವು ಎಷ್ಟೇ ಮಹಾತ್ವಾಕಾಂಕ್ಷೆ ಹೊಂದಿದ್ದರು ಕೆಲಸ ಮತ್ತು ವೈಯಕ್ತಿಕ ಜೀವನದಲ್ಲಿ ಒತ್ತಡವನ್ನು ಕಡಿಮೆ ಮಾಡಿ. ಜೀವನ ಮತ್ತು ಕೆಲಸವನ್ನು ಒಂದೇ ಮಟ್ಟದಲ್ಲಿಟ್ಟು ಅದು ಬಂದಂತೆ ಸ್ವೀಕರಿಸಿ ಆನಂದಿಸಿ. ಅತಿಯಾದ ಒತ್ತಡದಿಂದ ಹೃದಯ ಕಾಯಿಲೆಗಳು ಬರುತ್ತದೆ.

ಆನುವಂಶಿಕತೆ

ಆನುವಂಶಿಕತೆ

ಹೃದಯಕ್ಕೆ ಸಂಬಂಧಿಸಿದ ಕೆಲವೊಂದು ಕಾಯಿಲೆಗಳು ಅನುವಂಶಿಕವಾಗಿ ಬರುತ್ತದೆ. ಇದರಿಂದ ಕುಟುಂಬದ ಹಿನ್ನೆಲೆ ತಿಳಿದುಕೊಂಡು ಸಮಸ್ಯೆ ಎದುರಾಗುವ ಮೊದಲೇ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಆರಂಭಿಕ ಹಂತದಲ್ಲಿ ಪತ್ತೆಯಾಗುವ ಕೆಲವೊಂದು ಹೃದಯ ಕಾಯಿಲೆಗಳಿಗೆ ಚಿಕಿತ್ಸೆ ನೀಡಬಹುದು.

ಮೀನು ಸೇವಿಸಿ

ಮೀನು ಸೇವಿಸಿ

ತೈಲಯುಕ್ತ ಮೀನು ಮತ್ತು ಒಮೆಗಾ-3 ಫ್ಯಾಟ್ ಇರುವ ಆಹಾರ ಸೇವಿಸಿ. ಇದು ಹೃದಯದ ಆರೋಗ್ಯಕ್ಕೆ ತುಂಬಾ ಲಾಭಕರ. ಬಂಗಡೆ, ಸಾರ್ಡೀನ್ ಗಳು, ತಾಜಾ ಮೀನು, ಸಾಲ್ಮನ್ ಮೀನಿನಲ್ಲಿ ಒಮೆಗಾ-3 ಕೊಬ್ಬು ಹೇರಳವಾಗಿದೆ ಮತ್ತು ಇದು ಹೃದಯದ ಕಾಯಿಲೆಗಳನ್ನು ತಡೆಯಲು ನೆರವಾಗುತ್ತದೆ.

ಸಾಕಷ್ಟು ನಿದ್ರೆ ಮಾಡಿ

ಸಾಕಷ್ಟು ನಿದ್ರೆ ಮಾಡಿ

ದಿನಾಲೂ ಸಾಕಷ್ಟು ಮತ್ತು ಗುಣಮಟ್ಟದ ನಿದ್ದೆ ಮಾಡಿ. ನಿದ್ದೆ ಕಡಿಮೆಯಾಗುವುದರಿಂದ ಆತಂಕ, ಒತ್ತಡ, ನಿದ್ದೆ ಅಸ್ವಸ್ಥತೆಯಂತಹ ಹಲವಾರು ಆರೋಗ್ಯ ಸಮಸ್ಯೆಗಳು ಬರಬಹುದು ಮತ್ತು ಇದು ನಿಮ್ಮ ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.

ಖುಷಿಯಾಗಿರಿ

ಖುಷಿಯಾಗಿರಿ

ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮ ಹೃದಯ ಆರೋಗ್ಯಕರವಾಗಿ ಇರಬೇಕೆಂದಿದ್ದರೆ ಸದಾ ಖುಷಿಯಾಗಿರಿ. ನೀವು ನಕ್ಕಷ್ಟು ನಿಮ್ಮ ಹೃದಯ ಚೆನ್ನಾಗಿರುತ್ತದೆ. ಅಧ್ಯಯನಗಳ ಪ್ರಕಾರ ದಿನಕ್ಕೆ 15 ನಿಮಿಷ ನಕ್ಕರೂ ಸಾಕು ನಿಮ್ಮ ರಕ್ತಪರಿಚಲನೆ 22% ಹೆಚ್ಚುತ್ತದೆ.

English summary

Ways To Keep Your Heart Healthy

The most critical aspect of leading a healthy life is that of having a healthy heart. They go hand-in-glove wherein you don't get to have a healthy heart without a healthy lifestyle and vice-versa. Our heart is said to beat approximately 2.5 billion times during a lifespan of 66 years.
Story first published: Thursday, November 28, 2013, 16:37 [IST]
X
Desktop Bottom Promotion