For Quick Alerts
ALLOW NOTIFICATIONS  
For Daily Alerts

ಕ್ಯಾರೆಟ್ ತಿನ್ನಿ, ಈ ಲಾಭಗಳನ್ನು ಪಡೆಯಿರಿ

|

ಕ್ಯಾರೆಟ್ ತಿನ್ನಲು ನನಗೆ ಇಷ್ಟವಿಲ್ಲ ಎಂದು ಹೇಳುವವರು ತುಂಬಾ ವಿರಳ. ಇದನ್ನು ಹಸಿಯಾಗಿಯೂ ತಿನ್ನಲು ರುಚಿಯಾಗಿರುವುದರಿಂದ ಹೆಚ್ಚಿನವರು ಪ್ರತೀದಿನ ತಮ್ಮ ಡಯಟ್ ನಲ್ಲಿ ಕ್ಯಾರೆಟ್ ಅನ್ನು ಸೇರಿಸುತ್ತಾರೆ. ದಿನಾ ಒಂದು ಕ್ಯಾರೆಟ್ ತಿಂದರೆ ಅದರಿಂದ ನೀವು ಪಡೆಯಬಹುದಾದ ಗುಣಗಳು ಹತ್ತಾರು.

ಇಲ್ಲಿ ನಾವು ಕ್ಯಾರೆಟ್ ತಿಂದರೆ ದೊರೆಯುವ ಕೆಲ ಪ್ರಮುಖ ಗುಣಗಳ ಬಗ್ಗೆ ಮಾಹಿತಿ ನೀಡಿದ್ದೇವೆ ನೋಡಿ:

Top Health Benefits Of Carrots

ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸುತ್ತದೆ
ಸಂತಾನೋತ್ಪತ್ತಿ ಸಾಮರ್ಥ್ಯ ಪಡೆಯಲು ನಾವು ತಿನ್ನುವ ಆಹಾರಗಳತ್ತಲೂ ಗಮನ ಹರಿಸಬೆಕು. ಕ್ಯಾರೆಟ್ ನಲ್ಲಿ ಬೀಟಾ ಕೆರೋಟಿನ್ ಅಂಶ ಪುರುಷರಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸುವುದು.

ಸೌಂದರ್ಯದ ದೃಷ್ಟಿಯಿಂದಲೂ ಒಳ್ಳೆಯದು
ಬೀಟಾ ಕೆರೋಟಿನ್ ತ್ವಚೆ ಕಳೆಯಿಂದ ಕೂಡಿರುವಂತೆ ಮಾಡುತ್ತದೆ. ನಾವು ಸುಂದರವಾಗಿ ಕಾಣಬೇಕೆಂದು ಸಾಕಷ್ಟು ದುಡ್ಡನ್ನು ಬ್ಯೂಟಿ ಪ್ರಾಡಕ್ಟ್ ಮೇಲೆ ಹಾಕುತ್ತೇವೆ. ಆದರೆ ದಿನಾ ಕ್ಯಾರೆಟ್ ತಿನ್ನಿ, ಯಾವ ಬ್ಯೂಟಿ ಪ್ರಾಡಕ್ಟ್ ನ ಸಹಾಯವಿಲ್ಲದೆಯೇ ನಿಮ್ಮ ತ್ವಚೆಯಲ್ಲಿ ಯೌವನದ ಕಳೆಯನ್ನು ಕಾಪಾಡಬಹುದು.

ಹೃದಯದ ಆರೋಗ್ಯಕ್ಕೂ ಒಳ್ಳೆಯದು
ಇದು ಕೊಲೆಸ್ಟ್ರಾಲ್ ವಿರುದ್ಧ ಹೋರಾಡಿ, ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ.

ಹಲ್ಲಿನ ಆರೋಗ್ಯಕ್ಕೆ
ಕ್ಯಾರೆಟ್ ತಿಂದರೆ ಹಲ್ಲುಗಳೂ ಬಲವಾಗುವುದು. ಇದು ಹಲ್ಲುಗಳು ಹುಳುಕಾಗದಂತೆ ರಕ್ಷಣೆ ಮಾಡುತ್ತದೆ.

ಲಿವರ್ ನ ಆರೋಗ್ಯಕ್ಕೂ ಒಳ್ಳೆಯದು
ಇದೊಂದು ಡಿಟಾಕ್ಸ್ ಆಹಾರವಾಗಿದೆ. ಇದು ಲಿವರ್ ನಲ್ಲಿರುವ ಕಲ್ಮಶಗಳನ್ನು ಹೋಗಲಾಡಿಸಿ, ಲಿವರ್ ನ ಆರೋಗ್ಯವನ್ನು ಹೆಚ್ಚಿಸುತ್ತದೆ.

ಸೋಂಕಾಣುಗಳ ವಿರುದ್ಧ ಹೋರಾಡುತ್ತದೆ
ಹಸಿ ಅಥವಾ ಬೇಯಿಸಿದ ಕ್ಯಾರೆಟ್ ಅನ್ನು ಪೇಸ್ಟ್ ಮಾಡಿ ಗಾಯದ ಮೇಲೆ ಹಚ್ಚಿದರೆ ಆಂಟಿ ಸೆಪ್ಟಿಕ್ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ.

English summary

Top Health Benefits Of Carrots

There are more health benefits of eating carrots. We list out the top health benefits of eating carrots.
Story first published: Friday, November 8, 2013, 12:44 [IST]
X
Desktop Bottom Promotion