ಜೀರ್ಣಕ್ರಿಯೆ ಸರಿಯಾಗಿ ನಡೆಯಲು ಟಾಪ್ 20 ಟಿಪ್ಸ್

Posted By: Staff
Subscribe to Boldsky

ನೀವು ಹೊಟ್ಟೆ ಉಬ್ಬುವುದು,ಹುಳಿ ತೇಗು ಮತ್ತು ಗ್ಯಾಸ್ ಅಥವಾ ಇನ್ನಿತರ ಅಜೀರ್ಣ ಸಮಸ್ಯೆಯಿಂದ ಬಳಲುತ್ತಿದ್ದೀರಾ?

ಇವುಗಳಲ್ಲಿ ಹೆಚ್ಚು ಸಮಸ್ಯೆಗಳು ಚಿಕಿತ್ಸೆ ಬೇಕಿಲ್ಲ ಏಕೆಂದರೆ ಇದು ಗಂಭೀರ ಸಮಸ್ಯೆಯಲ್ಲ, ಆದರೆ ಇವುಗಳು ತುಂಬಾ ಸಮಯದವರೆಗೆ ಕಂಡು ಬಂದರೆ ಅವು ನಿಮ್ಮ ದೇಹವನ್ನು ಹದಗೆಡಿಸುತ್ತದೆ.ಇವುಗಳು ನಿಮಗೆ ಹೊಟ್ಟೆ ಹುಣ್ಣು (ಅಲ್ಸರ್) ತರಬಹುದು ಮತ್ತು ಕೆಲವೊಮ್ಮೆ ಹೊಟ್ಟೆಯನ್ನೇ ಹಾನಿಗೊಳಪಡಿಸಬಹುದು.

ಈ ಋಣಾತ್ಮಕ ಪರಿಣಾಮಗಳಿಂದ ದೂರವಿಡಲು ಈ ಕೆಳಗಿನ ಉತ್ತಮ ಜೀರ್ಣ ಕ್ರಿಯೆಗೆ ಸುಲಭ ಮಾರ್ಗಗಳನ್ನು ಅನುಸರಿಸಿ.

1.ಬಿಸಿ ನೀರನ್ನು ಕುಡಿಯಿರಿ

1.ಬಿಸಿ ನೀರನ್ನು ಕುಡಿಯಿರಿ

ನಿಮಗೆ ತಿಂದ ಆಹಾರವನ್ನು ಜೀರ್ಣಿಸಿಕೊಳ್ಳಲು ಕಷ್ಟವಾದರೆ ಬಿಸಿ ನೀರನ್ನು ಕುಡಿಯಿರಿ.ಪ್ರತಿದಿನ ಬೆಳಗ್ಗೆ ಅಥವಾ ಊಟಕ್ಕೆ ಅರ್ಧಗಂಟೆ ಮೊದಲು ಬಿಸಿ ನೀರನ್ನು ಕುಡಿಯುವುದರಿಂದ ಜೀರ್ಣ ಕ್ರಿಯೆ ಚೆನ್ನಾಗಿ ಆಗುತ್ತದೆ ಮತ್ತು ಹೊಟ್ಟೆಯಲ್ಲಿ ಗ್ಯಾಸ್ ರಸ ಉತ್ಪತ್ತಿಯಾಗುವುದನ್ನು ತಡೆಯುತ್ತದೆ.

2.ಸರಿಯಾಗಿ ತಿನ್ನಿ

2.ಸರಿಯಾಗಿ ತಿನ್ನಿ

ಊಟ ಮಾಡುವಾಗ, ಅಜೀರ್ಣ ತಪ್ಪಿಸಲು ಆಹಾರ ಪಿರಮಿಡ್ ರೂಪಿಸಿಕೊಳ್ಳಿ. ಮೊದಲು ಸುಲಭವಾಗಿ ಜೀರ್ಣವಾಗುವಂತಹ ಆಹಾರಗಳನ್ನು ಸೇವಿಸಿ ನಂತರ ಉಳಿದವನ್ನು ತಿನ್ನಿ.ಅಂದರೆ ಮೊದಲು ಜ್ಯೂಸ್ ಅಥವಾ ಹಣ್ಣಿನಿಂದ ತಿನ್ನಲು ಪ್ರಾರಂಭಿಸಿ ಮತ್ತು ಕೋಳಿ ಅಥವಾ ಮಾಂಸದಂತಹ ಭಕ್ಷ್ಯದ ಮೂಲಕ ಊಟ ಮುಗಿಸಿ ಇದರಿಂದ ನಿಮ್ಮ ದೇಹ ಅತಿ ಹೆಚ್ಚು ತಿನ್ನುವುದನ್ನು ಮತ್ತು ಅಜೀರ್ಣವನ್ನು ತಡೆಯುತ್ತದೆ.

3.ಯಾವಾಗಲೂ ಕುಳಿತು ಆಹಾರ ತಿನ್ನಿ

3.ಯಾವಾಗಲೂ ಕುಳಿತು ಆಹಾರ ತಿನ್ನಿ

ನೀವು ಹೇಗೆ ತಿನ್ನುತ್ತೀರಿ ಎಂಬುದು ಕೂಡ ಜೀರ್ಣ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ ಆದ್ದರಿಂದ ಸದಾ ಕುಳಿತು ಆರಾಮವಾಗಿ ನಿಮ್ಮ ಊಟವನ್ನು ಆನಂದಿಸಿ.ನಾವು ಕುಳಿತು ತಿಂದಾಗ ನಮ್ಮ ಹೊಟ್ಟೆ ಆರಾಮದಾಯಕ ಭಂಗಿಯಲ್ಲಿರುತ್ತದೆ ಮತ್ತು ಇದರಿಂದ ಜೀರ್ಣಕ್ರಿಯೆ ಹೆಚ್ಚುತ್ತದೆ.

4.ಸಾಕಷ್ಟು ನೀರು ಕುಡಿಯಿರಿ

4.ಸಾಕಷ್ಟು ನೀರು ಕುಡಿಯಿರಿ

ಅಜೀರ್ಣ ಸಮಸ್ಯೆಗೆ ಇದು ಉತ್ತಮ ಪರಿಹಾರ.ಪ್ರತಿದಿನ 8-10 ಲೋಟ ನೀರು ಕುಡಿಯಿರಿ ಇದು ನಿಮ್ಮ ದೇಹವನ್ನು ಕ್ಲೀನ್ ಮಾಡುತ್ತದೆ ಮತ್ತು ಅಜೀರ್ಣವಾಗದಂತೆ ನೋಡಿಕೊಳ್ಳುತ್ತದೆ.

5 ಲೆಮನ್ ಜ್ಯೂಸ್ ಕುಡಿಯಿರಿ

5 ಲೆಮನ್ ಜ್ಯೂಸ್ ಕುಡಿಯಿರಿ

ಮುಂಜಾನೆ ಬಿಸಿ ನೀರನ್ನು ಕುಡಿಯಲು ಇಷ್ಟವಾಗದಿದ್ದಲ್ಲಿ ಅದಕ್ಕೆ ಸ್ವಲ್ಪ ನಿಂಬೆ ರಸವನ್ನು ಸೇರಿಸಿ ಕುಡಿಯಿರಿ.ಪ್ರತಿ ದಿನ ಇದನ್ನು ಮಾಡಿದರೆ ಇದು ನಿಮ್ಮ ದೇಹವನ್ನು ಕ್ಲೀನ್ ಮಾಡುವುದರ ಜೊತೆಗೆ ದೇಹದಲ್ಲಿರುವ ಹೆಚ್ಚಿನ ಆಮ್ಲವನ್ನು ತೆಗೆಯುತ್ತದೆ.

6.ಮಸಾಜ್ ಮಾಡಿ

6.ಮಸಾಜ್ ಮಾಡಿ

ಜೀರ್ಣ ಕ್ರಿಯೆ ಹೆಚ್ಚಲು ಸಮಯವಿದ್ದಾಗಲೆಲ್ಲ ಹೊಟ್ಟೆ ವ್ಯಾಯಾಮ ಮತ್ತು ಮಸಾಜ್ ಮಾಡಿಕೊಳ್ಳಿ. ಪ್ರತೀದಿನ ಇದನ್ನು ಮಾಡಿದಲ್ಲಿ ನಿಮ್ಮ ಜೀರ್ಣ ಕ್ರಿಯೆ ಸುಲಭವಾಗಿಸುತ್ತದೆ.ಯಾವುದಾದರು ಎಣ್ಣೆ ಹಚ್ಚಿ ಹೊಟ್ಟೆಗೆ ಮಸಾಜ್ ಮಾಡುವುದನ್ನು ರೂಡಿಸಿಕೊಳ್ಳಿ.

 7.ಅಗೆದು ತಿನ್ನುವುದು ನಿಮ್ಮ ಮಂತ್ರವಾಗಿರಲಿ

7.ಅಗೆದು ತಿನ್ನುವುದು ನಿಮ್ಮ ಮಂತ್ರವಾಗಿರಲಿ

ಸಣ್ಣ ತುತ್ತು ತೆಗೆದುಕೊಂಡು ಚೆನ್ನಾಗಿ ಅಗೆದು ತಿನ್ನುವುದು ನಿಮ್ಮ ಮಂತ್ರವಾಗಿರಬೇಕು.ಈ ತಂತ್ರವನ್ನು ಅಳವಡಿಸಿಕೊಂಡಲ್ಲಿ ನಿಮ್ಮ ಬಾಯಿಯಲ್ಲಿ ಕಾರ್ಬೋಹೈಡ್ರೇಟ್ಸ್ ರಚಿಸಲು ಸಹಾಯ ಮತ್ತು ಎಮಿಲೇಸ್ ಉತ್ಪಾದನೆಗೆ ಅನುವು ಮಾಡುತ್ತದೆ - ಸರಿಯಾದ ರೀತಿಯಲ್ಲಿ ಜೀರ್ಣಕ್ರಿಯೆ ಹೆಚ್ಚಿಸುತ್ತದೆ.

8.ನಾರಿನಂಶ ಇರುವ ಆಹಾರ ಹೆಚ್ಚು ಬಳಸಿ

8.ನಾರಿನಂಶ ಇರುವ ಆಹಾರ ಹೆಚ್ಚು ಬಳಸಿ

ನಾರಿನಂಶ ಹೆಚ್ಚಿರುವ ಚೆರ್ರಿ,ದ್ರಾಕ್ಷಿ,ದೊಣ್ಣೆ ಮೆಣಸು,ಧಾನ್ಯಗಳು ಮತ್ತು ನಟ್ಸ್ ಗಳನ್ನು ಹೆಚ್ಚು ತಿನ್ನಿ.ಈ ಆಹಾರಗಳು ಜೀರ್ಣಕ್ರಿಯೆ ಸುಲಭವಾಗಿಸಲು ಸಹಾಯಮಾಡುತ್ತವೆ.

9.ಕೊಬ್ಬಿನಂಶ ಹೆಚ್ಚಿರುವ ಆಹಾರದಿಂದ ದೂರವಿರಿ

9.ಕೊಬ್ಬಿನಂಶ ಹೆಚ್ಚಿರುವ ಆಹಾರದಿಂದ ದೂರವಿರಿ

ಕೊಬ್ಬಿನಂಶ ಹೆಚ್ಚಿರುವ ಆಹಾರಗಳು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಆದ್ದರಿಂದ ಆ ರೀತಿಯ ಆಹಾರ ತೆಗೆದುಕೊಂಡರೆ ಅಜೀರ್ಣ ತೊಂದರೆ ಪ್ರಾರಂಭವಾಗುತ್ತದೆ.ಕೊಬ್ಬಿನ ಆಹಾರಗಳು ದೇಹಕ್ಕೆ ಅಗತ್ಯ ಕೂಡ ಆದ್ದರಿಂದ ಸಂಪೂರ್ಣವಾಗಿ ಬಿಟ್ಟು ಬಿಡಬೇಡಿ.ಬೇರೆ ಆರೋಗ್ಯಯುತ ಆಹಾರದೊಂದಿಗೆ ಇದನ್ನು ಸೇರಿಸಿ ಸೇವಿಸಿದಲ್ಲ್ಲಿ ಯಾವುದೇ ತೊಂದರೆ ಇಲ್ಲ.

10.ವಿಟಮಿನ್ ಸಿ ಹೆಚ್ಚಿರುವ ಆಹಾರ ಉಪಯೋಗಿಸಿ

10.ವಿಟಮಿನ್ ಸಿ ಹೆಚ್ಚಿರುವ ಆಹಾರ ಉಪಯೋಗಿಸಿ

ಬ್ರೊಕೋಲಿ,ಕಿವಿ,ಸ್ಟ್ರಾಬೆರ್ರಿ ಮತ್ತು ಟೊಮೆಟೊಗಳಂತ ಹೆಚ್ಚು ವಿಟಮಿನ್ ಸಿ ಅಂಶವಿರುವ ಆಹಾರವನ್ನು ಸೇವಿಸಿ.ಹೆಚ್ಚು ಹೆಚ್ಚು ಅನ್ನುಗಳನ್ನು ತಿನ್ನುವುದರ ಮೂಲಕ ನಿಮ್ಮ ಹೊಟ್ಟೆಯನ್ನು ಕ್ಲೀನ್ ಮಾಡಿಕೊಳ್ಳಿ ಮತ್ತು ವಿಸರ್ಜನೆ ಸುಲಭವಾಗಿಸಿಕೊಳ್ಳಿ.

11.ಖಾರವನ್ನು ಬಳಸಿ

11.ಖಾರವನ್ನು ಬಳಸಿ

ಶುಂಠಿ,ಕಾಳು ಮೆಣಸು,ಕಲ್ಲುಪ್ಪು ಮತ್ತು ಕೊತ್ತುಂಬರಿ ಹೆಚ್ಚು ಬಳಸಿ.ಇದು ಆಹಾರದಲ್ಲಿ ಫ್ಲೇವರ್ ನೀಡುವುದರ ಜೊತೆಗೆ ಜೀರ್ಣ ಕ್ರಿಯೆ ಹೆಚ್ಚಿಸುತ್ತದೆ.

12.ಊಟದ ಸಮಯ ಪಾಲಿಸಿ

12.ಊಟದ ಸಮಯ ಪಾಲಿಸಿ

ಪ್ರತೀದಿನ ಸಮಯಕ್ಕೆ ಸರಿಯಾಗಿ ಊಟ ಮಾಡುವುದು ಕೂಡ ಜೀರ್ಣ ಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ.ಪ್ರತೀದಿನ ನಿಗದಿತ ಸಮಯ ರೂಡಿಸಿಕೊಳ್ಳಿ.

13.ಆರೋಗ್ಯಕರ ತೂಕ ಕಾಪಾಡಿಕೊಳ್ಳಿ

13.ಆರೋಗ್ಯಕರ ತೂಕ ಕಾಪಾಡಿಕೊಳ್ಳಿ

ತೂಕ ಅತೀ ಹೆಚ್ಚು ಅಥವಾ ಕಡಿಮೆ ಇರುವುದು ಕೂಡ ಅಜೀರ್ಣ ತೊಂದರೆ ಮೂಲಕ ಎದೆ ಸುಡುವುದು ಮತ್ತು ಗ್ಯಾಸ್ ತೊಂದರೆಗಳನ್ನು ತರುತ್ತದೆ. ನಿಮ್ಮ ವೈದ್ಯರ ಸಲಹೆ ಪಡೆದು ಆರೋಗ್ಯಯುತ ತೂಕ ಕಾಪಾಡಿಕೊಳ್ಳಿ.

14.ತೆಳು ಮಾಂಸ ಬಳಸಿ

14.ತೆಳು ಮಾಂಸ ಬಳಸಿ

ನೀವು ಮಾಂಸ ಪ್ರಿಯರಾಗಿದ್ದಲ್ಲಿ ಕೊಬ್ಬಿನ ಭಾಗದಿಂದ ದೂರವಿರಿ ಏಕೆಂದರೆ ಇದು ಜೀರ್ಣವಾಗಲು ತೊಂದರೆ ನೀಡುತ್ತದೆ.ಆದ್ದರಿಂದ ನೀವು ಮಾಂಸ ತಿನ್ನಲೇಬೇಕಿದ್ದಲ್ಲಿ ಚರ್ಮರಹಿತ ಕೋಳಿ ಅಥವಾ ತೆಳು ಮಾಂಸವನ್ನು ಬಳಸಿ.

15.ಆಗಾಗ ಮೂತ್ರ ವಿಸರ್ಜನೆ ಮಾಡಿ

15.ಆಗಾಗ ಮೂತ್ರ ವಿಸರ್ಜನೆ ಮಾಡಿ

ನಿಮಗೆ ಟಾಯ್ಲೆಟ್ ಗೆ ಹೋಗುವುದು ಅರ್ಜೆಂಟ್ ಆದರೆ ತಕ್ಷಣ ಹೋಗಿಬನ್ನಿ. ತಡ ಮಾಡುವುದರಿಂದ ಗುದನಾಳಕ್ಕೆ ಪೆಟ್ಟು ಮತ್ತು ಕಷ್ಟವಾಗಬಹುದು. ಆದ್ದರಿಂದ ತಕ್ಷಣ ಹೋಗಿ ಮುಗಿಸಿ.

16. ಪ್ರತಿದಿನ ವ್ಯಾಯಾಮ ಮಾಡಿ

16. ಪ್ರತಿದಿನ ವ್ಯಾಯಾಮ ಮಾಡಿ

ಪ್ರತೀದಿನ ವ್ಯಾಯಾಮ ಮಾಡುವುದರಿಂದ ನಿಮ್ಮ ಜೀರ್ಣ ಕ್ರಿಯೆ ಸುಲಭವಾಗುತ್ತದೆ. ಪ್ರತೀದಿನದ ವ್ಯಾಯಾಮ ನಿಮ್ಮ ಚಯಾಪಚಯ ಕ್ರಿಯೆ ಮತ್ತು ರಕ್ತದ ಹರಿವನ್ನು ಉತ್ತಮಗೊಳಿಸುತ್ತದೆ.

17.ನಿಮ್ಮ ಆಹಾರದ ಅಳತೆಯನ್ನು ಗಮನದಲ್ಲಿಟ್ಟುಕೊಳ್ಳಿ

17.ನಿಮ್ಮ ಆಹಾರದ ಅಳತೆಯನ್ನು ಗಮನದಲ್ಲಿಟ್ಟುಕೊಳ್ಳಿ

ಅಳತೆ ಮೀರಿ ತಿನ್ನುವುದರಿಂದ ನಿಮ್ಮ ದೇಹಕ್ಕೆ ಪರಿಣಾಮ ಬೀರುತ್ತದೆ ಆದ್ದರಿಂದ ಸದಾ ಸ್ವಲ್ಪ ತಿನ್ನಿ ಮತ್ತು ಅತಿಯಾಗಿ ತಿನ್ನುವುದನ್ನು ಕಡಿಮೆ ಮಾಡಿ.

18.ಒತ್ತಡ ಕಡಿಮೆ ಮಾಡಿಕೊಳ್ಳಿ

18.ಒತ್ತಡ ಕಡಿಮೆ ಮಾಡಿಕೊಳ್ಳಿ

ಒತ್ತಡ ಕೂಡ ನಿಮ್ಮ ಜೀರ್ಣಾಂಗ ತೊಂದರೆಗೆ ಕಾರಣವಾಗಿರಬಹುದು. ಧ್ಯಾನ ಮತ್ತು ಉಸಿರಾಟದ ವ್ಯಾಯಾಮ ಮಾಡುವುದರ ಮೂಲಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ ಮತ್ತು ಜೀರ್ಣ ಕ್ರಿಯೆ ಹೆಚ್ಚಿಸಿಕೊಳ್ಳಿ.

19.ಜೈವಿಕ ಆಹಾರ ಬಳಸಿ

19.ಜೈವಿಕ ಆಹಾರ ಬಳಸಿ

ಕಡಿಮೆ ಕೊಬ್ಬಿನಂಶವಿರುವ ಮೊಸರನ್ನು ಪ್ರತೀದಿನ ಸೇವಿಸುವುದು ರೂಡಿಸಿಕೊಳ್ಳಿ. ಮೊಸರು ಆರೋಗ್ಯಯುತ ಜೈವಿಕ ಆಹಾರವಾಗಿದೆ. ಇದು ನಿಮ್ಮ ದೇಹವನ್ನು ಆರೋಗ್ಯಯುತವಾಗಿರಿಸುತ್ತದೆ,ಲಕ್ಟೊಸ್ ಒಡೆಯುತ್ತದೆ ಮತ್ತು ಸರಿಯಾದ ಪೌಷ್ಟಿಕಾಂಶ ಹೀರಲು ಸಹಕರಿಸುತ್ತದೆ.

20. ತಡ ರಾತ್ರಿ ಊಟ ಮಾಡುವುದನ್ನು ತಡೆಯುತ್ತದೆ

20. ತಡ ರಾತ್ರಿ ಊಟ ಮಾಡುವುದನ್ನು ತಡೆಯುತ್ತದೆ

ಜೀರ್ಣಕ್ರಿಯೆ ಸಂಜೆಯ ನಂತರ ನಿಧಾನವಾಗುತ್ತದೆ.ಆದ್ದರಿಂದ ಬೇಗೆ ಊಟ ಮಾಡಿ ಜೀರ್ಣ ಕ್ರಿಯೆಯ ತೊಂದರೆ ತಪ್ಪಿಸಿ.

English summary

Top 20 Tips For Good Digestion

Are you troubled with constant belch, gas or flatulence, stomach bloating and all other digestive problems? To avoid these negative effects in your life, follow these simple tips for better digestion.
 
Please Wait while comments are loading...
Subscribe Newsletter