For Quick Alerts
ALLOW NOTIFICATIONS  
For Daily Alerts

ವಿಟಮಿನ್ ಸಪ್ಲಿಮೆಂಟ್ ತೆಗೆದುಕೊಳ್ಳುತ್ತಿದ್ದೀರಾ? ಎಚ್ಚರ!

|

ಪ್ರತೀದಿನ ವಿಟಮಿನ್ ಮಾತ್ರೆಗಳನ್ನು ತೆಗೆದುಕೊಳ್ಳುವುದನ್ನು ನೋಡಿದ್ದೇವೆ. ವಿಟಮಿನ್ ಮಾತ್ರೆಯನ್ನು ತೆಗೆದುಕೊಳ್ಳುವುದು ಒಂದು ಅಭ್ಯಾಸವೆಂಬಂತೆ ರೂಢಿಸಿಕೊಂಡಿರುತ್ತಾರೆ. ದೇಹದಲ್ಲಿ ಪೋಷಕಾಂಶದ ಕೊರತೆ ಉಂಟಾದಾಗ ವೈದ್ಯರೇ ವಿಟಮಿನ್ ಮಾತ್ರೆಗಳನ್ನು ತೆಗೆದುಕೊಳ್ಳಲು ಸಲಹೆ ನೀಡುತ್ತಾರೆ. ಆದರೆ ಅದು ನಿಯಮಿತ ಅವಧಿವರೆಗೆ ಮಾತ್ರ ಇರುತ್ತದೆ. ನಮ್ಮ ದೇಹದಲ್ಲಿ ವಿಟಮಿನ್ಸ್ ಬ್ಯಾಲೆನ್ಸ್ ಆದಾಗ ಮಾತ್ರೆ ನಿಲ್ಲಿಸಿ, ಆ ವಿಟಮಿನ್ ಗಳಿರುವ ಆಹಾರಗಳನ್ನು ತಿನ್ನುವಂತೆ ವೈದ್ಯರು ಆಯ್ಕೆ ಮಾಡುತ್ತಾರೆ.

ಆದರೆ ಕೆಲವರು ವಿಟಮಿನ್ ಮಾತ್ರೆಗೆ ಅಡಿಕ್ಟ್ ಆಗಿ ಬಿಡುತ್ತಾರೆ. ಆದ್ದರಿಂದ ಪ್ರತೀದಿನ ವಿಟಮಿನ್ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಮತ್ತೆ ಕೆಲವರು ಜಾಹೀರಾತುಗಳನ್ನು ನೋಡಿ ವೈದ್ಯರ ಸಲಹೆ ಪಡೆಯದೆಯೇ ವಿಟಮಿನ್ ಸಪ್ಲಿಮೆಂಟ್ ತೆಗೆದುಕೊಳ್ಳುತ್ತಾರೆ.

ಆದರೆ ವಿಟಮಿನ್ ಅಂಶ ದೇಹದಲ್ಲಿ ಅತಿಯಾದರೂ ತೊಂದರೆ ಎಂಬ ಅಂಶ ಗೊತ್ತಿದೆಯೇ? ಇಲ್ಲವೆಂದರೆ ಮುಂದೆ ಓದಿ:

ಕಬ್ಬಿಣದಂಶವಿರುವ ಮಾತ್ರೆಗಳು

ಕಬ್ಬಿಣದಂಶವಿರುವ ಮಾತ್ರೆಗಳು

ದೇಹದಲ್ಲಿ ರಕ್ತ ಕಮ್ಮಿಯಾದಾಗ ವೈದ್ಯರು ಈ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಇದನ್ನು ಸ್ವಲ್ಪ ದಿನಗಳವರೆಗೆ ಮಾತ್ರ ತಿನ್ನಿ, ನಂತರ ಕಬ್ಬಿಣದಂಶವಿರುವ ಆಹಾರವನ್ನು ತಿನ್ನಿ. ಇದರಿಂದ ದೇಹದಲ್ಲಿ ಕಬ್ಬಿಣದಂಶ ಬ್ಯಾಲೆನ್ಸ್ ಮಾಡಿ, ರಕ್ತ ಉತ್ಪತ್ತಿಯನ್ನು ಹೆಚ್ಚು ಮಾಡಬಹುದು.

ಅಡ್ಡ ಪರಿಣಾಮ ತಿಳಿಯಲು ಮುಂದಿನ ಸ್ಲೈಡ್ ನೋಡಿ

ಅಡ್ಡ ಪರಿಣಾಮ

ಅಡ್ಡ ಪರಿಣಾಮ

ಇಲ್ಲ ಕಬ್ಬಿಣದಂಶ ಇರುವ ಮಾತ್ರೆ ತಿನ್ನುವುದನ್ನು ಮುಂದುವರೆಸುತ್ತೇನೆ ಅನ್ನುವುದಾದರೆ ಮಲಬದ್ಧತೆ, ಹೊಟ್ಟೆ ಕೆಡುವುದು ಮುಂತಾದ ಸಮಸ್ಯೆ ಕಂಡು ಬರುವುದು.

ಕ್ಯಾಲ್ಸಿಯಂ ಮಾತ್ರೆ

ಕ್ಯಾಲ್ಸಿಯಂ ಮಾತ್ರೆ

ಮೂಳೆ ಸ್ಟ್ರಾಂಗ್ ಆಗಲು ಕ್ಯಾಲ್ಸಿಯಂ ವಿಟಮಿನ್ ಸಪ್ಲಿಮೆಂಟ್ ಇರುವ ಈ ಮಾತ್ರೆ ತಿನ್ನಿ, ಈ ಪುಡಿ ಒಳ್ಳೆಯದು ಮುಂತಾದ ಜಾಹೀರಾತು ಕೇಳಿರಬಹುದು. ಆದರೆ ಅವಕ್ಕೆಲ್ಲಾ ಕಿವಿ ಕೊಡದೆ ಕ್ಯಾಲ್ಸಿಯಂ ಇರುವ ಆಹಾರಗಳನ್ನು ತಿನ್ನುವುದು ಒಳ್ಳೆಯದು.

ಅಡ್ಡ ಪರಿಣಾಮ

ಅಡ್ಡ ಪರಿಣಾಮ

ಕ್ಯಾಲ್ಸಿಯಂ ಸಪ್ಲಿಮೆಂಟ್ ಅಧಿಕ ತೆಗೆದುಕೊಳ್ಳುವುದರಿಂದ ಕಿಡ್ನಿಯಲ್ಲಿ ಕಲ್ಲು ಬೆಳೆಯುವುದು.

ಸತುವಿನಂಶವಿರುವ ಸಪ್ಲಿಮೆಂಟ್

ಸತುವಿನಂಶವಿರುವ ಸಪ್ಲಿಮೆಂಟ್

ಸತು ತ್ವಚೆ ಮತ್ತು ಕೂದಲಿನ ಆರೋಗ್ಯಕ್ಕೆ ಅವಶ್ಯಕ. ಪುರುಷರಲ್ಲಿ ಸತುವಿನಂಶ ಕಮ್ಮಿಯಾದರೆ ಲೈಂಗಿಕ ನಿಶ್ಯಕ್ತಿ ಉಂಟಾಗುವುದು. ಸತುವಿನಂಶ ಕಮ್ಮಿಯಾದರೆ ಸಪ್ಲಿಮೆಂಟ್ ಬದಲು ಸತುವಿನಂಶವಿರುವ ಆಹಾರಗಳನ್ನು ತಿನ್ನುವುದು ಒಳ್ಳೆಯದು.

ಅಡ್ಡ ಪರಿಣಾಮ

ಅಡ್ಡ ಪರಿಣಾಮ

ಏಕೆಂದರೆ ಸತುವಿನಂಶ ಸಪ್ಲಿಮೆಂಟ್ ತಿಂದರೆ ರಕ್ತದೊತ್ತಡ ಅಧಿಕವಾಗುವ ಸಂಭವ ಅಧಿಕ. ಮತ್ತೆ ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತರಲು ಬೇರೆ ಔಷಧಿಯ ಮೊರೆ ಹೋಗುವ ಪರಿಸ್ಥಿತಿ ಬರಬಹುದು.

ವಿಟಮಿನ್ ಇ ಮಾತ್ರೆಗಳು

ವಿಟಮಿನ್ ಇ ಮಾತ್ರೆಗಳು

ವಿಟಮಿನ್ ಇ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಇದರ ಸಪ್ಲಿಮೆಂಟ್ ಅನ್ನು ಅಧಿಕವಾಗಿ ಸೇವಿಸುವುದು ಒಳ್ಳೆಯದಲ್ಲ.

ಅಡ್ಡಪರಿಣಾಮ

ಅಡ್ಡಪರಿಣಾಮ

ಏಕೆಂದರೆ ವಿಟಮಿನ್ ಇ ಅಂಶ ದೇಹದಲ್ಲಿ ಅಧಿಕವಾದರೆ ಮೈ ಊದಿಕೊಳ್ಳುವುದು, ತಲೆಸುತ್ತು, ಕಣ್ಣು ಮಂಜಾಗುವುದು ಮುಂತಾದ ಸಮಸ್ಯೆ ಕಂಡು ಬರುವುದು, ಜಾಗ್ರತೆ.

English summary

The Truth About Multivitamin Tablets

The answer to your question is that multivitamin tablets are far from harmless; they can have serious side effects in the long run. That is why, you need to know the whole truth about these tablets before popping them.
X
Desktop Bottom Promotion