For Quick Alerts
ALLOW NOTIFICATIONS  
For Daily Alerts

ಕೆಫೀನ್ ಬಿಡಲು ಕೆಲವು ಸಲಹೆಗಳು

By Deepak M
|

ಆರೋಗ್ಯವಂತ ದೇಹದಲ್ಲಿ ಆರೋಗ್ಯವಂತ ಮನಸ್ಸು ಇರುತ್ತದೆ. ಆಯಾಸಗೊಂಡಿರುವ ಮೈಮನಗಳನ್ನು ಪುನಃ ಪುನಶ್ಚೇತನಗೊಳಿಸಲು ನಮಗೆ ಪ್ರಕೃತಿ ನಿದ್ದೆ, ವಿರಾಮ, ಮುಂತಾದ ಆಯ್ಕೆಗಳನ್ನು ನೀಡಿರುತ್ತದೆ. ಆದರೆ ಆಯಾಸಗೊಂಡ ದೇಹಕ್ಕೆ ನಾವು ಕೆಫೀನ್ ಎಂಬ ಪದಾರ್ಥವನ್ನು ಆಮಿಷವಾಗಿ ನೀಡುತ್ತೇವೆ. ಒಂದು ಹಂತಕ್ಕೆ ಕೆಫೀನ್ ನಮ್ಮ ದೇಹಕ್ಕೆ ಪೂರಕ ಆದರೆ ಹೆಚ್ಚಾಗಿ ಇದನ್ನು ಸೇವಿಸಿದರೆ ನಮಗೆ ಹಾನಿ. ಆಯಾಸಗೊಂಡ ದೇಹವನ್ನು ಮತ್ತೆ ಹಳಿಗೆ ತರಲು ಕೆಫೀನ್ ಎಷ್ಟು ಅವಶ್ಯಕ ಪಾತ್ರವನ್ನು ನಿರ್ವಹಿಸುತ್ತದೊ, ದೇಹವನ್ನು ಹಾಳು ಮಾಡುವಲ್ಲಿ ಕೆಫೀನ್ ಅಷ್ಟೇ ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ ಎಂಬುದನ್ನು ಮರೆಯಬಾರದು. ಮೊದಮೊದಲು ಜನರು ಕೆಫೀನನ್ನು ತಮ್ಮ ಮನಸ್ಸಿಗೆ ಪ್ರೇರಣೆಯನ್ನು ಒದಗಿಸುವ ಸಲುವಾಗಿ ಬಳಸುತ್ತಾರೆ. ಆದರೆ ಬರ ಬರುತ್ತ ಇವರು ಅದಕ್ಕೆ ದಾಸರಾಗಿ ಪರಿವರ್ತನೆಗೊಳ್ಳುತ್ತಾರೆ. ಇಂತಹ ಅವಲಂಬನೆಗಳು ನಮ್ಮ ದೇಹದ ಆರೋಗ್ಯದ ಹಳಿಯನ್ನು ತಪ್ಪಿಸುತ್ತವೆ. ಇದಲ್ಲದೆ ಉದ್ವಿಗ್ನತೆ, ಆತಂಕ, ಸ್ನಾಯು ಸೆಳೆತ ಮತ್ತು ಅನಿಯಮಿತ ಎದೆ ಬಡಿತದಂತಹ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಇಂದಿನ ಜೀವನಶೈಲಿಯಲ್ಲಿ ಹಲವಾರು ಜನರು ಕೆಫೀನ್ ನಂತಹ ಪದಾರ್ಥಗಳ ಮೇಲೆ ಅಥವಾ ಅವುಗಳನ್ನು ಬೆರೆಸಿ ತಯಾರಿಸಿದ ಕೆಲವು ಎನರ್ಜಿ ಡ್ರಿಂಕುಗಳ ಮೇಲೆ ಅವಲಂಬನೆಯನ್ನು ಬೆಳೆಸಿಕೊಂಡಿರುತ್ತಾರೆ. ಇದರಿಂದಾಗಿ ಅವರಿಗೆ ತಕ್ಷಣ ಶಕ್ತಿ ದೊರೆಯಬಹುದಾದರು ಮುಂದೆ ಅದರಿಂದ ಆನಾರೋಗ್ಯ ಕಟ್ಟಿಟ್ಟ ಬುತ್ತಿ ಎಂಬುದನ್ನು ಮರೆಯಬಾರದು.

ಕೆಫೀನ್ ಒಂದು ರೀತಿಯ ಉತ್ತೇಜಕವನ್ನುಂಟು ಮಾಡುವ ಮಾದಕ ವಸ್ತು. ಆದರೂ ಸಹ ಕೆಫೀನ್ ಕೋಕೆನ್ ಅಥವಾ ಅಂಪೀಟಮಿನ್ಸ್ ತರದ ಮಾದಕ ವಸ್ತುಗಳಂತೆಯೇ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ಮರೆಯಬೇಡಿ. ಕೆಫೀನ್ ಮೇಲೆ ಅವಲಂಬನೆಯು ನಮಗೆ ಗೊತ್ತಿಲ್ಲದೆಯೇ ಚಟವಾಗಿ ಬೆಳೆದುಬಿಡುತ್ತದೆ. ಆದರೂ ಸಹ ಕೆಫೀನ್ ಸೇವನೆಯ ಪ್ರಮಾಣ ದಿನಕ್ಕೆ 300 ಗ್ರಾಂಗಿಂತ ಹೆಚ್ಚಾದಲ್ಲಿ ನಮ್ಮ ಆರೋಗ್ಯಕ್ಕೆ ಆಪತ್ತು ಎಂಬುದನ್ನು ಮರೆಯುವಂತಿಲ್ಲ. ಒಂದು ವೇಳೆ ಇದು ಚಟವಾಗಿ ಅಂಟಿಕೊಂಡರೆ ಬಿಡುವುದು ಬಾರಿ ಕಷ್ಟ.

Steps To Quit caffeine

ಹೆಚ್ಚಾಗಿ ಕೆಫೀನ್ ಸೇವನೆಯು ನಮ್ಮ ಮೂಡ್ ಹಾಳು ಮಾಡುತ್ತದೆ ಮತ್ತು ಮೂಡ್ ಡಿಸಾರ್ಡರ್ ಎಂಬ ಕಾಯಿಲೆಯನ್ನು ದಯಪಾಲಿಸುತ್ತದೆ. ನಾವು ಸೇವಿಸುವ ಕಾಫೀ,ಟೀ, ಕೋಕೋ ಕೋಲಾದಲ್ಲಿ ಕೆಫೀನ್ ಹೆಚ್ಚಾಗಿ ಅಡಗಿರುತ್ತದೆ. ಅದಕ್ಕಾಗಿ ಇಂತಹ ಪಾನೀಯಗಳ ಸೇವನೆಯನ್ನು ನಾವು ನಿಯಂತ್ರಿಸುವುದು ಉತ್ತಮ. ಇವುಗಳು ನಮ್ಗೆ ಗೊತ್ತಿಲ್ಲದೆ ನಮ್ಮ ದೇಹದಲ್ಲಿ ಕೆಫೀನಿನ ದುಷ್ಪರಿಣಾಮವನ್ನು ಶುರು ಮಾಡಿಬಿಡುತ್ತದೆ.

1. ಬದಲಿ ವ್ಯವಸ್ಥೆ ಮಾಡಿ
ಕೆಫೀನ್ ಬಿಡಲು ಬಯಸುವವರು ಮೊದಲು ಕೆಫೀನಿಗೆ ಬದಲಿ ವ್ಯವಸ್ಥೆಯನ್ನು ಮಾಡಿ. ಅದು ಆರೋಗ್ಯಕಾರಿ ಪದಾರ್ಥವಾಗಿರುವಂತೆ ನೋಡಿಕೊಳ್ಳಿ. ಗ್ರೀನ್ ಟೀ, ಚಾಮೊಮೈಲ್ ಇತ್ಯಾದಿ ಪಾನೀಯಗಳು ಕೆಫೀನಿಗೆ ಬದಲಿಯಾಗಿ ಸೇವಿಸಬಹುದು ಎಂಬುದನ್ನು ಮರೆಯಬೇಡಿ. ಇವು ಆರೋಗ್ಯಕ್ಕು ಉತ್ತಮ ಮತ್ತು ನಿಮ್ಮ ಕೆಫೀನ್ ಸೇವನೆಯ ಚಪಲಕ್ಕು ತಡೆ ಹಾಕುತ್ತವೆ.

2. ಗಮನವನ್ನು ಬೇರೆಡೆ ಸೆಳೆಯಿರಿ
ಕೆಫೀನ್ ಬಿಡಬೇಕೆಂದು ಬಯಸುವವರು ಅದರ ಆಲೋಚನೆ ಬಂದಾಗ ಗಮನವನ್ನು ಬೇರೆಡೆ ಕೇಂದ್ರೀಕರಿಸಿ. ಕೆಫೀನ್ ಸೇವಿಸಬೇಕೆಂದು ಬಯಸಿದಾಗ ನಮ್ಮ ಗಮನವನ್ನು ಯಾವುದಾದರು ರಚನಾತ್ಮಕವಾದ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ಕೆಫೀನ್ ಮೇಲಿನ ಅವಲಂಬನೆಯನ್ನು ಬಿಟ್ಟು ಬಿಡಬಹುದು. ಅದಕ್ಕಾಗಿ ಮೊಬೈಲಿನಲ್ಲಿ ಆಟವಾಡಿ, ಯೂಟ್ಯಬಿನಲ್ಲಿ ವಿಡೀಯೊ ನೋಡಿ ಮತ್ತಿತರ ಕೆಲಸಗಳನ್ನು ಮಾಡಿ.

3. ಪಥ್ಯದಲ್ಲಿ ಎಚ್ಚರವಹಿಸಿ
ಹಲವಾರು ಜನರು ತನ್ನ ನಿಶ್ಶಕ್ತಿ ಮತ್ತು ಸುಸ್ತನು ಹೊಡೆದೋಡಿಸಲು ಕೆಫೀನ್ ಮೇಲೆ ಅವಲಂಬನೆಯನ್ನು ಬೆಳೆಸಿಕೊಂಡಿರುತ್ತಾರೆ. ಆದರೆ ಒಂದು ಮಾತು ನೆನಪಿನಲ್ಲಿಟ್ಟುಕೊಳ್ಳಿ, ನಿಶ್ಶಕ್ತಿಗೆ ಕೇವಲ ಕೆಫೀನ್ ಮಾತ್ರವೇ ಪರಿಹಾರವಲ್ಲ. ನಮ್ಮ ಮೈ ಮತ್ತು ಮನಸ್ಸುಗಳನ್ನು ಉದ್ದೀಪಿಸುವ ಅತ್ಯುತ್ತಮ ಆಹಾರವೆಂದರೆ ಬಾಳೆಹಣ್ಣು ಎಂಬುದನ್ನು ಮರೆಯಬೇಡಿ. ಇದರ ಜೊತೆಗೆ ಸಾಲ್ಮನ್ , ಮೊಟ್ಟೆಗಳು, ವಾಲ್ ನಟ್ ಇತ್ಯಾದಿಗಳು ಉತ್ತಮ ಶಕ್ತಿ ಸಂಚಯನವನ್ನುಂಟು ಮಾಡುತ್ತವೆ. ಇವುಗಳು ನಿಮ್ಮನ್ನು ಕೆಫೀನಿನ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸುತ್ತದೆ. ಇದಲ್ಲದೆ ಇವುಗಳು ಕೆಫೀನ್ ಸೇವಿಸುವ ಚಟವನ್ನು ಸಹ ಬಿಡಲು ಸಹಾಯ ಮಾಡುತ್ತವೆ.

4. ಪವರ್ ನ್ಯಾಪ್
ನಾವು ಅತಿಯಾಗಿ ಕೆಫೀನ್ ಮೇಲೆ ಅವಲಂಬನೆಯಾಗಲು ಕಾರಣ ಮಧ್ಯಾಹ್ನದ ಹೊತ್ತು ನಮಗೆ ಕಾಡುವ ನಿಶ್ಶಕ್ತಿ ಮತ್ತು ಸುಸ್ತು ಕಾರಣವಾಗಿರುತ್ತದೆ. ಅದಕ್ಕಾಗಿ ನೀವು ಮಧ್ಯಾಹ್ನ ಅಥವಾ ಸಂಜೆಯ ಹೊತ್ತು ಪವರ್ ನ್ಯಾಪ್ ( ಗುಕ್ಕು ನಿದ್ದೆ) ಮಾಡಿ. ಇದು ನಿಮ್ಮ ಮೈಮನಕ್ಕೆ ಮುದವನ್ನು ನೀಡುವುದರ ಜೊತೆಗೆ ಪುನಃಶ್ಚೇತನವನ್ನು ಒದಗಿಸುತ್ತದೆ. ಪವರ್ ನ್ಯಾಪ್ ಯಾವುದೇ ಕೆಫೀನಿರುವ ಪಾನೀಯಗಳಿಗಿಂತ ಹೆಚ್ಚಿನ ಚೈತನ್ಯವನ್ನು ದೇಹಕ್ಕೆ ಒದಗಿಸುತ್ತದೆ. ಜೊತೆಗೆ ಕೆಫೀನ್ ಬಿಡಲು ಇದು ಸಹಕರಿಸುತ್ತದೆ.

5. ಚೆನ್ನಾಗಿ ನಿದ್ರಿಸಿ
ಸುಸ್ತು ಮತ್ತು ನಿಶ್ಶಕ್ತಿಗೆ ಪ್ರಮುಖ ಕಾರಣ ನಿದ್ರಾಹೀನತೆ. ನಮ್ಮ ದೇಹಕ್ಕೆ ಅಗತ್ಯವಾಗಿರುವಷ್ಟು ನಿದ್ದೆಯನ್ನು ನಾವು ತಪ್ಪದೆ ಮಾಡಬೇಕು ಆಗಲೇ ನಮ್ಮ ದೇಹದ ಸ್ಥಿತಿ ಗತಿಗಳು ಉತ್ತಮವಾಗಿರುತ್ತವೆ. ಇಲವಾದಲ್ಲಿ ನಾವು ಕೆಫೀನ್ ರೀತಿಯ ಉತ್ತೇಜಕಗಳ ಮೊರೆ ಹೋಗುವುದು ತಪ್ಪುವುದಿಲ್ಲ. ನೀವು ಇಂದು ನಿದ್ದೆಗೆಟ್ಟರೆ ನಾಳೆ ಅಧಿಕವಾಗಿ ಕೆಫೀನ್ ಸೇವಿಸಬೇಕಾಗುವುದು. ಅದಕ್ಕಾಗಿ 6-8 ಗಂಟೆಗಳ ಕಾಲ ನಿದ್ದೆಯನ್ನು ತಪ್ಪದೆ ಮಾಡಲೇಬೇಕು. ನಿದ್ದೆ ಮಾಡಿ, ಕೆಫೀನ್ ಮೇಲಿನ ಅವಲಂಬನೆಯನ್ನು ಬಿಡಿ.

English summary

Steps To Quit caffeine

Addiction to caffeine starts of seamlessly without being a noticeable change. However, if the consumption of caffeine increases by more than 300mg per day, the health hazards starts to kick in. It turns to addiction and requires effort to quit caffeine.
Story first published: Friday, November 15, 2013, 10:11 [IST]
X
Desktop Bottom Promotion