For Quick Alerts
ALLOW NOTIFICATIONS  
For Daily Alerts

ಹೋಮಿಯೋಪತಿ ಬಗ್ಗೆ ಕೆಲ ಮುನ್ನೆಚ್ಚರಿಕೆಗಳು

|

ಯಾವುದಾದರೂ ಕಾಯಿಲೆಗೆ ತಕ್ಷಣವೇ ಶಮನ ಬೇಕೆಂದು ಬಯಸುವವರು ಅಲೋಪತಿ ಔಷಧಿ ತೆಗೆದುಕೊಳ್ಳಬೇಕು. ಅದೇ ಸ್ವಲ್ಪ ನಿಧಾನಕ್ಕೆ ಗುಣಮುಖವಾದರೂ ಪರ್ವಾಗಿಲ್ಲ, ಯಾವುದೇ ಅಡ್ಡ ಪರಿಣಾಮವಿಲ್ಲದೆ ಸಂಪೂರ್ಣ ಗುಣಮುಖವಾಗಬೇಕೆಂದು ಬಯಸುವವರು ಹೋಮಿಯೋಪತಿ ಔಷಧಿಯನ್ನು ತೆಗೆದುಕೊಳ್ಳುತ್ತಾರೆ. ಅಲೋಪತಿ (english medicine) ಕೆಲವೊಮ್ಮೆ ಅಡ್ಡ ಪರಿಣಾಮ ಬೀರುತ್ತವೆ. ಅದೇ ಹೋಮಿಯೋಪತಿ ಔಷಧಿಯನ್ನು ಸರಿಯಾದ ರೀತಿಯಲ್ಲಿ ತೆಗೆದುಕೊಂಡರೆ ಯಾವುದೇ ರೀತಿಯ ಅಡ್ಡ ಪರಿಣಾಮ ಬಿರುವುದಿಲ್ಲ.

ಹೋಮಿಯೋಪತಿ ಔಷಧಿ ತೆಗೆದುಕೊಳ್ಳುವವರು ಈ ಕೆಳಗಿನ ಅಂಶಗಳನ್ನು ಮುಖ್ಯವಾಗಿ ಗಮನದಲ್ಲಿಡಬೇಕು.

Precaution To Take Homeopathic Medicin

* ಹೋಮಿಯೋಪತಿ ಮಾತ್ರೆಗಳನ್ನು ಡಬ್ಬಿಯ ಮುಚ್ಚಳ ತೆಗೆದು ಇಡಬಾರದು. ಮಾತ್ರೆ ತೆಗೆದುಕೊಂಡ ತಕ್ಷಣ ಮುಚ್ಚಬೇಕು.

* ಹೋಮಿಯೋಪತಿ ಔಷಧಿಯನ್ನು ಕೈಗೆ ಹಾಕಿ ನಂತರ ಬಾಯಿಗೆ ಹಾಕಬೇಡಿ. ಹೋಮಿಯೋಪತಿ ಮಾತ್ರೆಯನ್ನು ನೇರವಾಗಿ ಬಾಯಿಗೆ ಹಾಕಿ. ಕೈಗೆ ಹಾಕಿದರೆ ಆ ಮಾತ್ರೆಯ ಶಕ್ತಿ ಕಮ್ಮಿಯಾಗುವುದು.

* ಹೋಮಿಯೋಪತಿ ಔಷಧಿ ತೆಗೆದುಕೊಳ್ಳುವವರು ಮಾತ್ರೆ ತೆಗೆದು ಕೊಳ್ಳುವ ಅರ್ಧ ಗಂಟೆ ಮೊದಲು, ಮಾತ್ರೆ ತೆಗೆದುಕೊಂಡ ನಂತರ ಅರ್ಧ ಗಂಟೆಯ ಒಳಗೆ ಊಟ ಮಾಡಬಾರದು.

* ಹೋಮಿಯೋಪತಿ ಔಷಧಿ ತೆಗೆದುಕೊಳ್ಳುವಾದ ಮದ್ಯಪಾನ, ಧೂಮಪಾನ , ತಂಬಾಕು ತಿನ್ನುವುದು ಮಾಡಬಾರದು. ಈ ಕೆಟ್ಟ ಚಟಗಳು ಹೋಮಿಯೋಪತಿ ಔಷಧಿ ದೇಹದ ಮೇಲೆ ಧನಾತ್ಮಕವಾಗಿ ಪರಿಣಾಮ ಬೀರದಂತೆ ಮಾಡುತ್ತವೆ.

* ಹೋಮಿಯೋಪತಿ ಔಷಧಿ ತೆಗದುಕೊಳ್ಳುವಾಗ ಏನು ತಿನ್ನುತ್ತಿದ್ದೇವೆ ಅನ್ನುವುದನ್ನು ಗಮನಿಸಬೇಕು. ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಈ ರೀತಿಯ ಘಾಟು ವಾಸನೆ ಇರುವ ಆಹಾರಗಳು ಹೋಮಿಯೋಪತಿ ಔಷಧಿಯ ಶಕ್ತಿಯನ್ನು ಕಮ್ಮಿ ಮಾಡುತ್ತವೆ.

* ಹೋಮಿಯೋಪತಿ ಔಷಧಿ ತೆಗೆದುಕೊಳ್ಳುತ್ತಿರುವಾಗ ಅಲೋಪತಿ ಅಥವಾ ಆರ್ಯುವೇದ ಔಷಧಿಗಳನ್ನು ಹೋಮಿಯೋಪತಿ ವೈದ್ಯರ ಸಲಹೆ ಇಲ್ಲದೆ ತೆಗೆದುಕೊಳ್ಳಬಾರದು.

* ಹೋಮಿಯೋಪತಿ ಔಷಧಿ ತೆಗೆದುಕೊಳ್ಳುವಾಗ ಹುಳಿ ಪದಾರ್ಥಗಳನ್ನು ತಿನ್ನಬಾರದು.

ಯಾವ ಆಹಾರಗಳನ್ನು ತಿನ್ನಬಾರದು, ಯಾವುದನ್ನು ತಿನ್ನಬಹುದು ಎಂದು ಹೋಮಿಯೋಪತಿ ವೈದ್ಯರ ಸಲಹೆ ಪಡೆದ ಮೇಲಷ್ಟೆ ತಿನ್ನಿ.

English summary

Precaution While Taking Homeopathic Medicine | ಹೋಮಿಯೋಪತಿ ಔಷಧಿ ತೆಗೆದುಕೊಳ್ಳುತ್ತಿರುವವರು ಗಮನಿಸಬೇಕಾದ ಅಂಶಗಳು

Homeopathy is a gradual remedy to treat health issues and anyone can prescribe to this natural medications. But, there are few precautions that you must keep in mind before taking homeopathic medicines.
X
Desktop Bottom Promotion