For Quick Alerts
ALLOW NOTIFICATIONS  
For Daily Alerts

ಡೆಸ್ಕ್ ಜಾಬ್ ಬೊಜ್ಜನ್ನು ಹೆಚ್ಚಿಸುತ್ತದೆಯೇ?

By ಪೂರ್ಣಿಮಾ ಹೆಗಡೆ
|

ಕುಳಿತಲ್ಲೇ ಕುಳಿತು ಕೆಲಸಮಾಡುವುದು ಅಂದರೆ ಎಲ್ಲರಿಗೂ ಬೇಜಾರಿನ ವಿಷಯವೇ. ಅದರಲ್ಲೂ ಕುಳಿತಲ್ಲೇ ಕುಳಿತು ದಿನವಿಡೀ ಕೆಲಸ ಮಾಡುವವರಿಗೆ ಆರೋಗ್ಯ ಸಮಸ್ಯೆಗಳೂ ಕೂಡ ಅಷ್ಟೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ದೇಹದಲ್ಲಿ ಅನಾರೋಗ್ಯಕರವಾದ ಅತಿಯಾದ ಕೊಬ್ಬು ಕಾಣಿಸಿಕೊಳ್ಳುವುದಂತೂ ಸರ್ವೇ ಸಾಮಾನ್ಯ. ಹಾಗಂದ ಮಾತ್ರಕ್ಕೆ ಕುಳಿತಲ್ಲೇ ಮಾಡಬೇಕಾದ ಕೆಲಸ ನಿಮ್ಮದಾಗಿದ್ದರೆ ಅನಾರೋಗ್ಯದ ಅಥವಾ ಇನ್ಯಾವುದೋ ಕಾರಣಕ್ಕೆ ಕೆಲಸ ಬಿಡಲು ಸಾಧ್ಯವೇ ಇಲ್ಲ ಅಲ್ಲವೇ? ಆದ್ದರಿಂದಲೇ ಕುಳಿತಲ್ಲಿಯೇ ಕುಳಿತು ಕುಳಿತು ಕಂಪ್ಯೂಟರ್ ನಲ್ಲಿ ಕೆಲಸ ಮಾಡುವ ನಿಮಗೆ ಕೆಲವು ಪರಿಹಾರವನ್ನು ಸೂಚಿಸುವ ಪ್ರಯತ್ನ ನಮ್ಮದು.

ಸಾಕಷ್ಟು ಜನರು ಇಂತಹ ಕೆಲಸವನ್ನು ನಿರಂತರವಾಗಿ ಮಾಡುತ್ತಾ, ಅತಿಯಾದ ಕೊಬ್ಬು, ಅಧಿಕ ತೂಕ, ಒತ್ತಡ ಇನ್ನಿತ್ಯಾದಿ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ.

Is Desk Job Making You Fat?

ಕುಳಿತಲ್ಲೇ ವ್ಯಾಯಾಮ:

ಹೊಟ್ಟೆಯ ವ್ಯಾಯಾಮ: ಎತ್ತರವಾಗಿ/ನೇರವಾಗಿ ಕುಳಿತುಕೊಳ್ಳಿ. ಬೆನ್ನು ಮೂಳೆ ನೇರವಾಗಿರಬೇಕು. ನಂತರ ಕಿಬ್ಬೊಟ್ಟೆಯ ಸ್ನಾಯುಗಳು ಸಡಿಲವಾಗುವಂತೆ ಉಸಿರನ್ನು ತೆಗೆದುಕೊಂಡು ಬಿಡಿ. ಇದನ್ನು ಒಂದರಿಂದ ಐದು ಸೆಕೆಂಡುಗಳ ಕಾಲ ಮತ್ತು 20 ಬಾರಿ ಪುನರಾವರ್ತಿಸಿ . ಒಂದು ದಿನದಲ್ಲಿ ಕನಿಷ್ಠ ಮೂರು ಬಾರಿ ಇದನ್ನು ಮಾಡಲು ಪ್ರಯತ್ನಿಸಿ .

ತೊಡೆಯ ವ್ಯಾಯಾಮ: ಎರಡೂ ಮೊಣಕಾಲುಗಳನ್ನು ಜೋಡಿಸಿ ಕುಳಿತುಕೊಳ್ಳಬೇಕು. ಈ ಮೊಣಕಾಲುಗಳ ಜೋಡಣೆ ಬಿಡಿಸಲಾಗದಷ್ಟು ಗಟ್ಟಿಯಾಗಿ ಬೆಸೆದುಕೊಳ್ಳುವಂತೆ ಕುಳಿತುಕೊಳ್ಳಿ. ಈಗ ನಿಮ್ಮ ತೊಡೆಯ ಭಾಗ ಗಟ್ಟಿಯಾಗಿರುತ್ತದೆ. ಈಗ ನಿಮ್ಮ ಕೈಗಳಿಂದ ತೊಡೆಯನ್ನು ಒತ್ತಿ (ಮಸಾಜ್) ಇದನ್ನು ದಿನದಲ್ಲಿ ಕನಿಷ್ಠ ಮೂರು ಬಾರಿ ಮಾಡಿ.

ಸುಂದರ ಆಕೃತಿಗಾಗಿ: ನಿಮ್ಮ ತೊಡೆಗಳ ಸ್ನಾಯುಗಳು ಹಿಡಿದುಕೊಳ್ಳದಂತೆ ಇರಲು ಕೆಲಸದ ನಡುವೆ ಕೆಲವೊಮ್ಮೆ ನಿಂತುಕೊಳ್ಳಿ. ಮತ್ತು ಕೆಲಸವನ್ನು ಪುನರ್ ಆರಂಭಿಸುವ ಮೊದಲು ಸ್ವಲ್ಪ ನಡೆಯುವುದು ಒಳ್ಳೆಯದು.

ಆಹಾರ ಕ್ರಮಗಳು

ನಟ್ಸ್, ಬೀಜಗಳನ್ನು ಹೆಚ್ಚಾಗಿ ಸೇವಿಸಿ: ನಿಮ್ಮ ದೇಹಕ್ಕೆ ಅಗತ್ಯವಿರುವ ಪ್ರಮುಖ ಪೌಷ್ಟಿಕಾಂಶಗಳು; ಪ್ರೋಟೀನ್ , ಮ್ಯಾಗ್ನೀಶಿಯಂ , ವಿಟಮಿನ್ ಬಿ ಮತ್ತು ಆರೋಗ್ಯಕರ ಏಕಾಪರ್ಯಾಪ್ತ ಕೊಬ್ಬುಗಳಿರುವ ಬಾದಾಮಿ , ಗೋಡಂಬಿ , ಕುಂಬಳಕಾಯಿ ಬೀಜಗಳು ಮತ್ತು ಸೂರ್ಯಕಾಂತಿ ಬೀಜಗಳು ನಿಮ್ಮ ಆರೋಗ್ಯಕ್ಕೆ ಅತ್ಯಂತ ಅಗತ್ಯ. ಇವು ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚುವುದನ್ನು ನಿಯಂತ್ರಿಸುತ್ತವೆ. ದಿನದ ಆರಂಭದಲ್ಲಿ ಇವುಗಳನ್ನು ಸೇವಿಸಿ. ಇವು ನಿಮ್ಮ ಶಕ್ತಿಗೆ ಪೂರಕವಾದ ಆಹಾರಗಳು.

ಹಸಿ ತರಕಾರಿಗಳು ಮತ್ತು ಮಾಂಸ : ಈ ಆಹಾರಗಳಲ್ಲಿ ಫೈಬರ್ ಅಂಶ ಹೆಚ್ಚಾಗಿರುತ್ತದೆ. ಕೋಸುಗಡ್ಡೆ ಮತ್ತು ಸೆಲರಿ ರೀತಿಯ ತರಕಾರಿಗಳು ರಕ್ತದಲ್ಲಿ ಸಕ್ಕರೆ ಪ್ರಮಾಣ (ಬ್ಲಡ್ ಶುಗರ್) ವನ್ನು ನಿಯಂತ್ರಿಸುತ್ತವೆ. ಅಲ್ಲದೆ , ಪ್ರೊಟೀನ್ ಅಂಶ ಹೆಚ್ಚಾಗಿರುವ ಟರ್ಕಿ (ಮಾಂಸ) ಮತ್ತು ಚೀಸ್ ಚೂರುಗಳನ್ನು ಸೇವಿಸಿ.

ದಿನವೂ ಮೊಟ್ಟೆಯನ್ನು ಸೇವಿಸಿ: ಮೊಟ್ಟೆಯಲ್ಲಿ ಅತ್ಯುನ್ನತ ಗುಣಮಟ್ಟದ ಪ್ರೋಟೀನ್ ಹೊಂದಿದೆ. ಸ್ನಾಯುಗಳಲ್ಲಿ ಸಾರಜನಕ ಮಳಿಗೆಗಳು / ಅಂಶವನ್ನು ಹೆಚ್ಚಿಸಲು ಇವು ಸಹಾಯಕ. ಇದಲ್ಲದೆ ಇವುಗಳಲ್ಲಿ ಡಿ ಜೀವಸತ್ವವಿದ್ದು ಕೊಬ್ಬನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.

ಕೆಲಸದಿಂದ ಬಿಡುಗಡೆ ಪಡೆಯಲಾಗದಿದ್ದರೂ ಕೆಲವು ವ್ಯಾಯಾಮ ಮತ್ತು ಸರಿಯಾದ ಕ್ರಮದ ಆಹಾರಗಳು ಉತ್ತಮ ಆರೋಗ್ಯವನ್ನು ಕಾಯ್ದುಕೊಳ್ಳುವಲ್ಲಿ ಸಹಾಯ ಮಾಡುತ್ತವೆ.

English summary

Is Desk Job Making You Fat?

Don't let your desk job make you unhealthy and fat. Here are a few exercises and diet tips to stay fit in spite of a sit-down job Many people complain about this. Increasing stress and inactivity at work leads to weight gain. Here's what to do...
Story first published: Tuesday, November 12, 2013, 16:54 [IST]
X
Desktop Bottom Promotion