For Quick Alerts
ALLOW NOTIFICATIONS  
For Daily Alerts

ಬಾಯಾರಿಕೆಯಾದಾಗ ಕೂಲ್ ಡ್ರಿಂಕ್ಸ್ ಒಳ್ಳೆಯದಲ್ಲ!

|

ನೆನ್ನೆಯ ಲೇಖನದಲ್ಲಿ ಬೇಸಿಗೆಯಲ್ಲಿ ಬೆವರು ಬರುವುದನ್ನು ತಡೆಯಲು ಯಾವ ಆಹಾರಗಳನ್ನು ತಿಂದರೆ ಒಳ್ಳೆಯದೆಂದು ತಿಳಿಸಿದ್ದೆವು. ಇವತ್ತು ಬೇಸಿಗೆಯಲ್ಲಿ ಅವಶ್ಯಕವಾಗಿ ಕುಡಿಯಬೇಕಾದ ಡ್ರಿಂಕ್ಸ್(ಪಾನೀಯ) ಬಗ್ಗೆ ತಿಳಿಯೋಣ.

ಈಗೀನ ಯುವ ಪೀಳಿಗೆಗೆ ಬಾಯಾರಿಕೆಯಾದಾಗ ಎಳನೀರು, ಫ್ರೂಟ್ ಜ್ಯೂಸ್ ಬೇಡ, ತಂಪು ಪಾನೀಯಗಳೇ ಬೇಕು. ಆದರೆ ತಂಪು ಪಾನೀಯಗಳನ್ನು ಕುಡಿಯುವುದರಿಂದ ಆರೋಗ್ಯಕ್ಕೆ 1% ಕೂಡ ಪ್ರಯೋಜವಿಲ್ಲ, ಕುಡಿಯಲು ಖುಷಿ ನೀಡುತ್ತದೆ ಆದರೆ ಇಲ್ಲದ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಇಲ್ಲಿ ನಾವು ಕೆಲವೊಂದು ಜ್ಯೂಸ್ ಬಗ್ಗೆ ಹೇಳಿದ್ದೇವೆ. ಇದನ್ನು ಕುಡಿದರೆ ಇವು ಬೇಸಿಗೆಯಲ್ಲಿ ನಿಮ್ಮ ದೇಹದ ಉಷ್ಣತೆಯನ್ನು ಸಮತೋಲನದಲ್ಲಿಟ್ಟು, ದೇಹದ ಆರೋಗ್ಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಬೇಸಿಗೆಯಲ್ಲಿ ಈ ಜ್ಯೂಸ್ ಗಳನ್ನು ಕುಡಿಯಲು ಮರೆಯಬೇಡಿ.

ಎಳನೀರು

ಎಳನೀರು

ಬೇಸಿಗೆಯಲ್ಲಿ ದೇಹದ ಉಷ್ಣತೆ (body heat) ಹೆಚ್ಚಾದರೆ ಉರಿಮೂತ್ರ ಕಂಡು ಬರುತ್ತದೆ. ಚಿಕನ್ ಪಾಕ್ಸ್ ಕಾಣಿಸಿಕೊಳ್ಳುವ ಅಪಾಯವೂ ಇದೆ. ಈ ರೀತಿಯ ಸಮಸ್ಯೆ ಬರುವುದನ್ನು ತಡೆಯಲು ಎಳನೀರನ್ನು ಕಡಿಮೆಯೆಂದರೂ ವಾರದಲ್ಲಿ 3-4 ಬಾರಿ ಕುಡಿಯುವುದು ಒಳ್ಳೆಯದು.

ಮಾವಿನ ಹಣ್ಣಿನ ಜ್ಯೂಸ್

ಮಾವಿನ ಹಣ್ಣಿನ ಜ್ಯೂಸ್

ಮಾವಿನ ಹಣ್ಣಿನ ಜ್ಯೂಸ್ ಬೇಸಿಗೆ ಕಾಲದಲ್ಲಿ ದೊರೆಯುವ ಹಣ್ಣಾಗಿದ್ದು ಇದರ ಜ್ಯೂಸ್ ಕುಡಿಯುವುದು ಒಳ್ಳೆಯದು. ಕೆಲವರು ಇದನ್ನು ಕುಡಿದರೆ ದಪ್ಪಗಾಗುತ್ತಾರೆ ಎಂದು ಕುಡಿಯುವುದಿಲ್ಲ. ಇದರಲ್ಲಿ ಕೊಬ್ಬಿನಂಶದಷ್ಟೇ, ನಾರಿನಂಶ ಕೂಡ ಇರುವುದರಿಂದ ಮಾವಿನ ಹಣ್ಣಿನ ಜ್ಯೂಸ್ ಕುಡಿಯುವುದು ಒಳ್ಳೆಯದು.

ಆಂ ಪನ್ನಾ

ಆಂ ಪನ್ನಾ

ಇದನ್ನು ಮಾವಿನ ಕಾಯಿಯನ್ನು ಬೇಯಿಸಿ ಮಾಡುವ ಪಾನೀಯವಾಗಿದ್ದು ಇದು ಕೂಡ ಬೇಸಿಗೆ ಕಾಲದಲ್ಲಿ ಕುಡಿಯಲು ಸೂಕ್ತವಾದ ಪಾನೀಯವಾಗಿದೆ.

ನಿಂಬೆ ರಸ

ನಿಂಬೆ ರಸ

ನಿಂಬೆ ಪಾನೀಯ ಎಲ್ಲಾ ಕಾಲದಲ್ಲೂ ಕುಡಿಯಲು ಸೂಕ್ತವಾದ ಹಣ್ಣಾಗಿದೆ. ಇದರಲ್ಲಿ ವಿಟಮಿನ್ ಸಿ ಅಧಿಕವಿರುವುದರಿಂದ ರೋಗ ನಿರೋಧಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

 ಪುದೀನಾ ಪಾನೀಯಾ

ಪುದೀನಾ ಪಾನೀಯಾ

ಪುದೀನಾಕ್ಕೆ ದೇಹವನ್ನು ತಂಪಾಗಿಡುವ ಸಾಮರ್ಥ್ಯವಿದೆ. ಇದರ ಜ್ಯೂಸ್ ಕುಡಿದರೆ ದೇಹಕ್ಕೂ ತಂಪು, ಬಾಯಿಗೂ ರುಚಿಕರವಾಗಿರುತ್ತದೆ. ತಂಪು ಪಾನೀಯಾಗಳು ಬಾಯಿ ದುರ್ವಾಸನೆ ಬೀರುವಂತೆ ಮಾಡಿದರೆ, ಈ ಪಾನೀಯಾ ಬಾಯಿಯನ್ನು ಫ್ರೆಶ್ ಆಗಿಡುತ್ತದೆ.

ಟೊಮೆಟೊ ಜ್ಯೂಸ್

ಟೊಮೆಟೊ ಜ್ಯೂಸ್

ಟೊಮೆಟೊ ಜ್ಯೂಸ್ ದೇಹದಲ್ಲಿರುವ ಕೊಬ್ಬನ್ನು ಕರಗಿಸುತ್ತದೆ, ದೇಹದಲ್ಲಿ ನೀರಿನಂಶವಿರುವಂತೆ ಮಾಡಿ, ತ್ವಚೆ ರಕ್ಷಣೆಯನ್ನು ಮಾಡುತ್ತದೆ.

ಪಪ್ಪಾಯಿ ಜ್ಯೂಸ್

ಪಪ್ಪಾಯಿ ಜ್ಯೂಸ್

ಪಪ್ಪಾಯಿಯಲ್ಲಿ ಅನೇಕ ಆರೋಗ್ಯಕರ ಗುಣಗಳಿವೆ. ಇದರ ಜ್ಯೂಸ್ ದೇಹದ ಆರೋಗ್ಯವನ್ನು ಹೆಚ್ಚಿಸುತ್ತದೆ. ಬಾಯಾರಿಕೆಯನ್ನು ಕಡಿಮೆ ಮಾಡುತ್ತದೆ. ಗರ್ಭಿಣಿಯರು ಇದನ್ನು ಕುಡಿಯುವುದು ಒಳ್ಳೆಯದಲ್ಲ. ಮುಟ್ಟು ನಿಯಮಿತವಾಗಿ ಆಗಲು ಪಪ್ಪಾಯಿ ಸಹಾಯ ಮಾಡುತ್ತದೆ.

ಸೌತೆಕಾಯಿ ಜ್ಯೂಸ್

ಸೌತೆಕಾಯಿ ಜ್ಯೂಸ್

ಸೌತೆಕಾಯಿಯಲ್ಲಿ ನೀರಿನಂಶ ಅಧಿಕವಿದ್ದು ಅನೇಕ ಆರೋಗ್ಯಕರ ಗುಣಗಳಿವೆ. ಆದ್ದರಿಂದ ದೇಹವನ್ನು ತಂಪಾಗಿಡಲು ಈ ಜ್ಯೂಸ್ ಕುಡಿಯುವುದು ಒಳ್ಳೆಯದು.

ಕಲ್ಲಂಗಡಿ ಹಣ್ಣಿನ ಜ್ಯೂಸ್

ಕಲ್ಲಂಗಡಿ ಹಣ್ಣಿನ ಜ್ಯೂಸ್

ಕಲ್ಲಂಗಡಿ ಹಣ್ಣಿನ ಜ್ಯೂಸ್ ಕುಡಿಯಲು ರುಚಿಕರವಾಗಿರುತ್ತದೆ. ಇದು ಬೇಸಿಗೆಯಲ್ಲಿ ತಿನ್ನಲೇಬೇಕಾದ ಆಹಾರಗಳಲ್ಲಿ ಒಂದಾಗಿದೆ.

ಬ್ರೊಕೋಲಿ

ಬ್ರೊಕೋಲಿ

ಕ್ಯಾಬೇಜ್ ಗಾತ್ರದಷ್ಟು ದೊಡ್ಡದಿರುವ ಬ್ರೊಕೋಲಿಗೆ ನೂರು ರುಪಾಯಿ ಎಂದು ಹೇಳಿದರೆ ಅದರ ಬೆಲೆ ಜಾಸ್ತಿಯಾಯಿತು, ಇದನ್ನು ತಿನ್ನದಿರುವುದೇ ಒಳ್ಳೆಯದು ಅನಿಸುತ್ತೆ. ಆದರೆ ಇದರಲ್ಲಿ ಔಷಧೀಯ ಗುಣಗಳಿದ್ದು ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುವ ಸಮಸ್ಯೆಯನ್ನು ಹೊಂದಿದೆ.

English summary

Healthy n Nutritious Summer Drinks | Tips For Health | ಬೇಸಿಗೆಗೆ ಆರೋಗ್ಯಕರ ಪಾನೀಯಗಳು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Summer vegetables and fruits like broccoli, carrots, mangoes,cucumber, tomatoes to name a few can be used to prepare healthy juices. These summer foods are loaded with vitamins, nutrients and minerals.
X
Desktop Bottom Promotion