For Quick Alerts
ALLOW NOTIFICATIONS  
For Daily Alerts

ಮೆಣಸಿನಕಾಯಿಯಲ್ಲಿರುವ 10 ಪ್ರಮುಖ ಗುಣಗಳು

By Super
|

ಭಾರತೀಯ ಅಡುಗೆ ಇರಬಹುದು ಅಥವಾ ಚೈನಾದ ಅಡುಗೆ ಅಥವಾ ಪಿಜ್ಜಾ ಇರಬಹುದು ಅವುಗಳಲ್ಲಿ ಮೆಣಸಿನ ಕಾಯಿಯನ್ನು ಬಳಸಿಯೇ ಬಳಸುತ್ತಾರೆ.ಖಾದ್ಯಗಳಲ್ಲಿ ಮೆಣಸಿನ ಕಾಯಿಗೆ ಹೆಚ್ಚಿನ ಮಹತ್ವವಿದೆ.ಅಡುಗೆಯ ರುಚಿ ಹೆಚ್ಚಿಸುವಲ್ಲಿ ಕೂಡ ಇದರ ಪ್ರಾಮುಖ್ಯತೆ ಹೆಚ್ಚು.ಮೆಣಸಿನ ಕಾಯಿ ಆರೋಗ್ಯಕ್ಕೆ ಕೂಡ ಅಷ್ಟೇ ಒಳ್ಳೆಯದು ಎಂಬುದರ ಬಗ್ಗೆ ಓದಿ ತಿಳಿಯಲೇಬೇಕು.

ಕ್ರಿಸ್ತ ಪೂರ್ವ 7500 ವರ್ಷಗಳಿಂದ ಮೆಣಸನ್ನು ಆಹಾರದಲ್ಲಿ ಬಳಸಲಾಗುತ್ತಿದೆ ಮತ್ತು ಇದನ್ನು ಮೊದಲು ಅಮೇರಿಕಾದಲ್ಲಿ ಬೆಳೆಯಲಾಯಿತು. ಅನ್ವೇಷಕ ಕ್ರಿಸ್ಟೋಪಸ್ ಕೊಲಂಬಸ್ 15 ನೇ ಶತಮಾನದಲ್ಲಿ ಅದನ್ನು ಸ್ಪೇನ್ ಗೆ ತಂದನು ಮತ್ತು ಅಲ್ಲಿಂದ ಏಷ್ಯಾ,ಭಾರತ,ಯುರೋಪ್,ಮತ್ತು ಆಫ್ರಿಕಾಗಳಲ್ಲಿ ಅದರ ಕೃಷಿ ಮಾಡಿ ಎಲ್ಲೆಡೆ ಮೆಣಸಿನಕಾಯಿ ತ್ವರಿತವಾಗಿ ಹರಡಿತು.

ಮೆಣಸಿನ ಕಾಯಿಯಲ್ಲಿ 200 ಕ್ಕೂ ಹೆಚ್ಚಿನ ಕೆಂಪು,ಹಸಿರು, ಹಳದಿ ವಿವಿಧ ಬಣ್ಣಗಳನ್ನು ಹೊಂದಿದ ಹದವಾದ ಖಾರದಿಂದ ಅತಿ ಖಾರದವರೆಗಿನ ಬಗೆಗಳನ್ನು ಕಾಣಬಹುದು. ಪ್ರತಿರೋಧಕ ಔಷಧೀಯ ಗುಣಗಳ ಜೊತೆಗೆ ಇತರ ಆರೋಗ್ಯಕರ ಗುಣಗಳು ಕೂಡ ಇದರಲ್ಲಿವೆ.

1.ಹೃದಯರಕ್ತ ನಾಳದ ಕಾಯಿಲೆಗಳನ್ನು ತಡೆಗಟ್ಟುತ್ತದೆ

1.ಹೃದಯರಕ್ತ ನಾಳದ ಕಾಯಿಲೆಗಳನ್ನು ತಡೆಗಟ್ಟುತ್ತದೆ

ಮೆಣಸಿನಕಾಯಿ ಕೇವಲ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಮಟ್ಟಗಳ ತಗ್ಗಿಸುವಲ್ಲಿ ಮಾತ್ರವಲ್ಲ ರಕ್ತ ಹೆಪ್ಪುಗತ್ತುವುದರಿಂದ ಆಗಬಹುದಾದ ಮಾರಣಾಂತಿಕ ಅವಘಡವನ್ನು ತಡೆಗಟ್ಟುವ ಗುಣವನ್ನು ಹೊಂದಿದೆ. ಹೃದಯ ರಕ್ತ ನಾಳದ ಕಾಯಿಲೆಗೆ ಒಳಪಟ್ಟವರಿಗೆ ಈ ಅವಘಡದಿಂದ ತಪ್ಪಿಸಿಕೊಳ್ಳುವುದು ಅತಿ ಅವಶ್ಯಕ. ಆದ್ದರಿಂದ ಮೆಣಸಿನ ಕಾಯಿಯನ್ನು ಬಳಸುವುದು ಕೂಡ ಆರೋಗ್ಯಕ್ಕೆ ಅನುಕೂಲಕರವಾಗಿದೆ.

2. ಉರಿಯೂತ ಕಡಿಮೆ ಮಾಡುತ್ತದೆ

2. ಉರಿಯೂತ ಕಡಿಮೆ ಮಾಡುತ್ತದೆ

ಮೆಣಸಿನ ಕಾಯಿಯಲ್ಲಿರುವ ಇನ್ನೊಂದು ಮುಖ್ಯ ಅಂಶಗಳೆಂದರೆ ಸಂಧಿವಾತದಲ್ಲಿ ಉಂಟಾಗುವ ಉರಿಯೂತ ಕಡಿಮೆ ಮಾಡುವುದು.ಮೆಣಸಿನ ಕಾಯಿಯನ್ನು ಪರಿಣಾಮಕಾರಿ ನೋವುನಿವಾರಕ ಎಂದು ಕೂಡ ಹೇಳಲಾಗುತ್ತದೆ.ಈ ಅರೋಗ್ಯ ಪ್ರಯೋಜನದ ಹಿಂದಿರುವ ಕಾರಣ ಪೆಪ್ಪರ್ ನಲ್ಲಿ ಅಧಿಕ ಪ್ರಮಾಣದಲ್ಲಿರುವ ಕ್ಯಾಪ್ಸೈಸಿನ್ ಅಂಶ.ಸಾಕಷ್ಟು ಕ್ರೀಂಗಳಲ್ಲಿ ಕ್ಯಾಪ್ಸಾಸಿನ್ ಅಧಿಕ ಪ್ರಮಾಣದಲ್ಲಿ ಬಳಸಲಾಗುತ್ತದೆ ಇದರಿಂದ ಸಂಧಿವಾತ,ಬೆನ್ನು ನೋವು ಮತ್ತು ಇನ್ನಿತರ ಕಾಯಿಲೆಗಳು ಕಡಿಮೆಯಾಗುತ್ತವೆ.

3. ಸುಧಾರಿತ ಜೀರ್ಣಕಾರಿ ಗುಣಗಳು

3. ಸುಧಾರಿತ ಜೀರ್ಣಕಾರಿ ಗುಣಗಳು

ಹಲವಾರು ವರ್ಷಗಳಿಂದ ವೈದ್ಯರು,ನರ್ಸ್ ಮತ್ತು ಇತರ ಅರೋಗ್ಯ ತಪಾಸಕರು ಹೊಟ್ಟೆಯಲ್ಲಿ ಅಲ್ಸರ್ ಅಥವಾ ಆಸಿಡ್ ಸಮಸ್ಯೆಗಳು ಇದ್ದಲ್ಲಿ ಮೆಣಸಿನ ಕಾಯಿಯನ್ನು ತಿನ್ನಬಾರದಂತೆ ತಿಳಿಸಿದ್ದಾರೆ.ಆದರೆ ಇತ್ತೀಚಿಗೆ ಸಂಶೋಧಕರು ಮೆಣಸಿನ ಕಾಯಿಯಲ್ಲಿ ಅಧಿಕ ಪ್ರಮಾಣದಲ್ಲಿ ಇರುವ ಕ್ಯಾಯೇನೆ ಎಂಬ ಅಂಶ ಅಲ್ಸರ್ ಕಡಿಮೆ ಮಾಡುತ್ತದೆ ಎಂದಿದ್ದಾರೆ.ಕೇವಲ ಜೀರ್ಣಾಂಗ ಕ್ರಿಯೆಗೆ ಮಾತ್ರವಲ್ಲ ಅಲ್ಸರ್ ನಿಂದ ಬರುವ ಹೊಟ್ಟೆನೋವಿಗೆ ಪರಿಣಾಮಕಾಯಿಯಾದ ಹೈಡ್ರೋಕ್ಲೋರಿಕ್ ಆಮ್ಲದ ಉತ್ಪಾದನೆಯಲ್ಲಿ ಕ್ಯಾಯನೆ ಅಧಿಕ ಪ್ರಮಾಣದಲ್ಲಿ ಕಂಡುಬರುತ್ತದೆ.ಜೊತೆಗೆ ಕ್ಯಯನೆ ಹೊಟ್ಟೆಯಲ್ಲಿ ವಾಯು ತುಂಬುವುದನ್ನು ತಡೆಯುತ್ತದೆ ಎನ್ನಲಾಗುತ್ತದೆ.

4. ಮೂಳೆ ಆರೋಗ್ಯ ಕಾಪಾಡುತ್ತದೆ

4. ಮೂಳೆ ಆರೋಗ್ಯ ಕಾಪಾಡುತ್ತದೆ

ಸಂಶೋಧಕರು ಮೆಣಸಿನ ಕಾಯಿಯಲ್ಲಿ ಮೂಳೆಯನ್ನು ಮತ್ತು ಹಲ್ಲನ್ನು ಕಾಪಾಡಲು ಬೇಕಾಗುವ ಅಧಿಕ ಪ್ರಮಾಣದ ಕ್ಯಾಲ್ಸಿಯಂ ಇರುತ್ತದೆ ಎನ್ನುತ್ತಾರೆ.ಕೆಲವು ಜನರಿಗೆ ಡೈರಿ ಉತ್ಪನ್ನಗಳಿಂದ ಅಲರ್ಜಿ ಸಂಭವಿಸುವುದರಿಂದ ಅದನ್ನು ಬಳಸಲಾಗುವುದಿಲ್ಲ ಅಂಥವರು ಮೆಣಸಿನ ಕಾಯಿಯನ್ನು ಬಳಸುವುದರಿಂದ ಅವರಿಗೆ ಮೂಳೆ ಮತ್ತು ಹಲ್ಲಿನ ಆರೋಗ್ಯಕ್ಕೆ ಬೇಕಾಗುವ ಖನಿಜಾಂಶಗಳು ದೊರೆಯುತ್ತವೆ.

5. ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆ ಮಾಡುತ್ತದೆ

5. ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆ ಮಾಡುತ್ತದೆ

ಅಧಿಕ ತೂಕ ಹೊಂದಿರುವವರು ಮತ್ತು ಮಧುಮೇಹ ಇರುವವರರು ಚಿಲ್ಲಿ ತಿನ್ನುವುದರಿಂದ ಧನಾತ್ಮಕ ಪರಿಣಾಮ ಉಂಟಾಗುತ್ತದೆ ಎಂದು 2006 ಜಲೈಯಲ್ಲಿ ಅಮೇರಿಕಾದ ಪತ್ರಿಕೆ ಕ್ಲಿನಿಕಲ್ ನ್ಯೂಟ್ರೀಶಿಯನ್ ಎಂಬುದರಲ್ಲಿ ಪ್ರಕಟಗೊಂಡ ತಾಸ್ಮೇನಿಯಾ ವಿಶ್ವವಿಧ್ಯಾಲಯದ ಸಂಶೋಧಕರು ತಿಳಿಸುತ್ತಾರೆ.

6. ಪಾರ್ಶ್ವವಾಯುವನ್ನು ತಪ್ಪಿಸುತ್ತದೆ

6. ಪಾರ್ಶ್ವವಾಯುವನ್ನು ತಪ್ಪಿಸುತ್ತದೆ

ಸಂಚಲನ ಪ್ರಚೋದಕದಂತೆ ಕೆಲಸ ಮಾಡುವ ಮೆಣಸಿನಕಾಯಿ ತಿನ್ನುವುದರಿಂದ ರಕ್ತ ಸಂಚಲನ ಸರಿಯಾಗಿ ಆಗಿ ಪಾರ್ಶ್ವವಾಯು ಬರದಂತೆ ತಡೆಯುತ್ತದೆ. ಆಹಾರದ ಜೊತೆ ಮೆಣಸಿನ ಕಾಯಿಯನ್ನು ಬಳಸುವುದರಿಂದ ಆಹಾರವೂ ರುಚಿಕರವಾಗುತ್ತದೆ ಮತ್ತು ಆರೋಗ್ಯಕ್ಕೂ ಸಹಾಯಕವಾಗುತ್ತದೆ.

7. ನೋವು ಮತ್ತು ಉರಿಯೂತಕ್ಕೆ ಪರಿಹಾರ ಒದಗಿಸುತ್ತದೆ

7. ನೋವು ಮತ್ತು ಉರಿಯೂತಕ್ಕೆ ಪರಿಹಾರ ಒದಗಿಸುತ್ತದೆ

ಕ್ಯಾಪ್ಸೈಸಿನ್ ನಲ್ಲಿ ಉರಿಯೂತ ಸಂಬಂಧಿಸಿದ neuropeptide ಇದೆ.ಸಂಧಿವಾತ ಇನ್ನಿತರ ಸಮಸ್ಯೆಗಳಿರುವ ರೋಗಿಗಳಿಗೆ ಮೆಣಸಿನ ಕಾಯಿಯಲ್ಲಿರುವ ಪ್ಲಾಸ್ಮಾ ಪ್ರೋಟಿನ್ ಸಂಧಿವಾತವನ್ನು ಮಾರ್ಪಾಡು ಮಾಡುವಲ್ಲಿ ಸಹಾಯಕವಾಗುತ್ತದೆ ಎನ್ನಲಾಗಿದೆ.

8. ಪ್ರಾಸ್ಟೇಟ್ ಕ್ಯಾನ್ಸರ್ ಹರಡುವುದನ್ನು ತಡೆಯುತ್ತದೆ

8. ಪ್ರಾಸ್ಟೇಟ್ ಕ್ಯಾನ್ಸರ್ ಹರಡುವುದನ್ನು ತಡೆಯುತ್ತದೆ

2006 ಮಾರ್ಚ್ ನಲ್ಲಿ ಪ್ರಕಟಗೊಂಡ ಕ್ಯಾನ್ಸರ್ ಸಂಶೋಧನೆಯಲ್ಲಿ ಮೆಣಸಿನ ಕಾಯಿಯಲ್ಲಿರುವ ಕ್ಯಾಪ್ಸಾಸಿನ್ ಪ್ರಾಸ್ಟೇಟ್ ಕ್ಯಾನ್ಸರ್ ಹರಡದಂತೆ ನೋಡಿಕೊಳ್ಳುತ್ತದೆ ಎನ್ನಲಾಗಿದೆ.ಈ ಕ್ಯಾಪ್ಸಾಸಿನ್ ಗಳು ಪ್ರಾಥಮಿಕ ಹಂತದಲ್ಲಿರುವ ಪ್ರಾಸ್ಟೇಟ್ ಕ್ಯಾನ್ಸರ್ ಕಣಗಳನ್ನು ಸಂಪೂರ್ಣವಾಗಿ ಹೋಗಲಾಡಿಸುವಲ್ಲಿ ಸಹಕರಿಸುತ್ತದೆ.

9. ಫ್ಯಾಟ್ ಕರಗಿಸುತ್ತದೆ

9. ಫ್ಯಾಟ್ ಕರಗಿಸುತ್ತದೆ

ಮೆಣಸಿನಕಾಯಿ ಫ್ಯಾಟ್ ಅನ್ನು ಕರಗಿಸುತ್ತದೆ.ಸಂಶೋಧಕರು ತಿಳಿಸುವ ಪ್ರಕಾರ ಮೆಣಸಿನ ಕಾಯಿಯಲ್ಲಿ ಉತ್ಪತ್ತಿಯಾಗುವ ಉಷ್ಣತೆ ಕ್ಯಾಲೋರಿ ಹೀರುವಿಕೆಯನ್ನು ಹೆಚ್ಚಿಸುತ್ತದೆ ಮತ್ತು ಫ್ಯಾಟ್ ಕಡಿಮೆ ಮಾಡುತ್ತದೆ.

10.ಹೊಟ್ಟೆ ಹುಣ್ಣನ್ನು ತಡೆಯುತ್ತದೆ

10.ಹೊಟ್ಟೆ ಹುಣ್ಣನ್ನು ತಡೆಯುತ್ತದೆ

ಮೆಣಸಿನಕಾಯಿ ಹೊಟ್ಟೆ ಹುಣ್ಣು ಅಥವಾ ಅಲ್ಸರ್ ನಿಂದಾಗಿ ತಪ್ಪು ಅಥವಾ ಕೆಟ್ಟ ಪ್ರಖ್ಯಾತಿ ಪಡೆದಿದೆ.ಅವು ಅಲ್ಸರ್ ತರುವುದು ಮಾತ್ರವಲ್ಲ ಹೊಟ್ಟೆಯ ಒಳಪದರದಲ್ಲಿ ರಕ್ಷಣಾ ರಸ ಉತ್ಪತ್ತಿಯಾಗುವ ಸಂದರ್ಭದಲ್ಲಿ ಉತ್ಪತ್ತಿಯಾಗುವ ಬ್ಯಾಕ್ಟೀರಿಯಗಳನ್ನು ಕೊಲ್ಲುವ ಗುಣವನ್ನು ಕೂಡ ಹೊಂದಿದೆ.

English summary

Health Benefits Of Eating Chillies

There are more than 200 varieties of chillies, coloured anything from yellow to green to red to black, and varying in heat from mildly warm to mouth-blisteringly hot. Besides being a potential and potent antibiotic, there are other health and medicinal benefits connected with chillies.
X
Desktop Bottom Promotion