For Quick Alerts
ALLOW NOTIFICATIONS  
For Daily Alerts

ನೆಲ್ಲಿಕಾಯಿ ಜ್ಯೂಸ್ ನಲ್ಲಿದೆ ಅತ್ಯದ್ಭುತ ಗುಣಗಳು

|

ನೆಲ್ಲಿಕಾಯಿ ಮಾರ್ಕೆಟ್ ನಲ್ಲಿ ಎಲ್ಲಾ ಕಾಲದಲ್ಲೂ ದೊರೆಯುತ್ತದೆ. ಇದನ್ನು ಪ್ರತಿನಿತ್ಯ ತಿಂದರೆ ದೇಹಕ್ಕೆ ಅಗತ್ಯವಾದ ಪೋಷಕಾಂಶ ದೊರೆಯುತ್ತದೆ, ಕೂದಲು ಉದುರುವ ಸಮಸ್ಯೆ ಕಂಡು ಬರುವುದಿಲ್ಲ. ನೆಲ್ಲಿ ಕಾಯಿಯಿಂದ ಆಮ್ಲ ಜ್ಯೂಸ್ ತಯಾರಿಸಲಾಗುತ್ತದೆ, ಯಾವುದೇ ಆರ್ಯುವೇದ ಅಂಗಡಿಗಳಲ್ಲಿ ಕೇಳಿದರೆ ಈ ಜ್ಯೂಸ್ ದೊರೆಯುತ್ತದೆ. ಇದನ್ನು ಪ್ರತಿನಿತ್ಯ ನಿಗದಿತ ಪ್ರಮಾಣದಲ್ಲಿ ಸೇವಿಸುತ್ತಾ ಬಂದರೆ ಅನೇಕ ಆರೋಗ್ಯಕರ ಗುಣಗಳನ್ನು ಪಡೆಯಬಹುದು. ಇಲ್ಲಿ ನಾವು ಆಮ್ಲ ಜ್ಯೂಸ್ ಯನ್ನು ಪ್ರತಿದಿನ ಕುಡಿದರೆ ದೊರೆಯುವ 14 ಪ್ರಮುಖ ಪ್ರಯೋಜನಗಳ ಬಗ್ಗೆ ಹೇಳಲಾಗಿದೆ ನೋಡಿ:

ಅಸ್ತಮಾವನ್ನು ಕಮ್ಮಿ ಮಾಡುತ್ತದೆ ಇದನ್ನು ನಿಗದಿತ ಪ್ರಮಾಣದಲ್ಲಿ ಜೇನು ಜೊತೆ ತೆಗೆದುಕೊಳ್ಳುತ್ತಾ ಬಂದರೆ ಅಸ್ತಮಾ ಕಾಯಿಲೆ ಕಡಿಮೆಯಾಗುವುದು. ಉಸಿರಾಟದ ತೊಂದರೆ ಅನುಭವಿಸುತ್ತಿರುವವರೆಗೆ ಇದು ಅತ್ಯುತ್ತಮವಾದ ಔಷಧಿಯಾಗಿದೆ.

Health Benefits Of Amla Juice

* ಮಲಬದ್ಧತೆ ಸಮಸ್ಯೆಯಿಂದ ತುಂಬಾ ಕಾಲದಿಂದ ಬಳಲುತ್ತಿರುವವರು ಆಮ್ಲ ಜ್ಯೂಸ್ ಕುಡಿದರೆ ಈ ಸಮಸ್ಯೆ ಗುಣಮುಖವಾಗುವುದು.

* ತಾಜಾ ಆಮ್ಲ ರಸವನ್ನು ಜೇನು ಜೊತೆ ಮಿಶ್ರಣ ಮಾಡಿ ಕುಡಿದರೆ ಇದು ರಕ್ತವನ್ನು ಶುದ್ಧೀಕರಿಸುತ್ತದೆ.

* 30mlಆಮ್ಲ ಜ್ಯೂಸ್ ಅನ್ನು ಪ್ರತಿದಿನ ಎರಡು ಬಾರಿ ಕುಡಿದರೆ ಉರಿ ಮೂತ್ರದ ಸಮಸ್ಯೆ ಇರುವುದಿಲ್ಲ.

* ಮುಟ್ಟಿನ ಸಮಯದಲ್ಲಿ ತುಂಬಾ ರಕ್ತಸ್ರಾವವಾಗುತ್ತಿದ್ದರೆ ಹಣ್ಣಾದ ಬಾಳೆ ಹಣ್ಣನ್ನು ತಿಂದು ಈ ಆಮ್ಲವನ್ನು ಕುಡಿದರೆ ತುಂಬಾ ರಕ್ತಸ್ರಾವವಾಗುವುದಿಲ್ಲ.

* ದೇಹದಲ್ಲಿ ಕೆಂಪು ರಕ್ತ ಕಣ ಕಡಿಮೆಯಾದರೆ ರಕ್ತ ಹೀನತೆ ಉಂಟಾಗುವುದು. ಆಮ್ಲ ಹಾಗಾಗದಂತೆ ತಡೆಯುತ್ತದೆ.
ಆಮ್ಲ ಜ್ಯೂಸ್ ಸ್ನಾಯುಗಳಿಗೆ ಶಕ್ತಿಯನ್ನು ತುಂಬುತ್ತದೆ, ಹೃದಯದ ನರಗಳ ಅರೋಗ್ಯ ಹೆಚ್ಚಿಸಿ, ಹೃದಯ ಸಂಬಂಧಿತ ಸಮಸ್ಯೆ ಬರುವುದನ್ನು ತಡೆಯುತ್ತದೆ.

English summary

Health Benefits Of Amla Juice

Regular basis then we get to know the real advantages of amla juice. Here top 15 reasons to take amla juice are being given. So look at the top 15 reasons.
Story first published: Saturday, November 9, 2013, 13:33 [IST]
X
Desktop Bottom Promotion