For Quick Alerts
ALLOW NOTIFICATIONS  
For Daily Alerts

ಈ ಆಹಾರಗಳನ್ನು ರಾತ್ರಿ ತಿನ್ನದಿದ್ದರೆ ಒಳ್ಳೆಯದು

|

ಬೆಳಗ್ಗೆ ಎದ್ದಾಗ ಹೊಟ್ಟೆ ತೊಳೆಸಿದಂತಾಗುವುದು, ಮಲಬದ್ಧತೆ, ಅಜೀರ್ಣ, ಬೇಧಿ, ಹೊಟ್ಟೆ ಉಬ್ಬುವುದು ಈ ರೀತಿ ಕಾಣಿಸಿಕೊಂಡರೆ ಅದು ನೀವು ರಾತ್ರಿ ತಿಂದ ಆಹಾರದ ಪ್ರಭಾವದಿಂದ ಇರಬಹುದು. ಹೌದು, ಬೆಳಗ್ಗೆ ಕಾಣಿಸುವ ಹೊಟ್ಟೆಯ ಸಮಸ್ಯೆಗೆ ನಾವು ರಾತ್ರಿ ತಿಂದ ಆಹಾರ ಪ್ರಮುಖ ಕಾರಣವಾಗಿರುತ್ತದೆ.ಈ ರೀತಿಯ ಸಮಸ್ಯೆಗೆ ಪರಿಹಾರವೆಂದರೆ ರಾತ್ರಿ ಕೆಲವೊಂದು ಆಹಾರಗಳನ್ನು ತಿನ್ನದಿರುವುದು.

ಇಲ್ಲಿ ನಾವು ರಾತ್ರಿ ತಿನ್ನಬಾರದ ಕೆಲವೊಂದು ಆಹಾರಗಳ ಬಗ್ಗೆ ಹೇಳಿದ್ದೇವೆ, ಈ ಆಹಾರಗಳು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ತರುವುದು ಮಾತ್ರವಲ್ಲದೇ ರಾತ್ರಿಯ ಸುಖ ನಿದ್ದೆಗೂ ಭಂಗವನ್ನು ಉಂಟು ಮಾಡುತ್ತದೆ.

 ಚಿಪ್ಸ್

ಚಿಪ್ಸ್

ರಾತ್ರಿ ಹೊತ್ತಿನಲ್ಲಿ ಚಿಪ್ಸ್ ತಿಂದರೆ ಜೀರ್ಣಕ್ರಿಯೆಗೆ ತೊಂದರೆ ಉಂಟಾಗುವುದು ಮತ್ತು ಮೈ ತೂಕವೂ ಹೆಚ್ಚುವುದು.

ಪಾಸ್ತಾ

ಪಾಸ್ತಾ

ಇದರಲ್ಲಿ ಕಾರ್ಬೋಹೈಡ್ರೇಟ್ ಅಧಿಕವಿರುವುದರಿಂದ ಅಸಿಡಿಟಿ ಸಮಸ್ಯೆ ಇರುವವರು ಇದನ್ನು ರಾತ್ರಿ ಹೊತ್ತಿನಲ್ಲಿ ತಿನ್ನದಿರುವುದು ಒಳ್ಳೆಯದು.

 ಸೋಡಾ

ಸೋಡಾ

ರಾತ್ರಿ ಹೊತ್ತಿನಲ್ಲಿ ಸೋಡಾ ಕುಡಿದರೆ ಹೊಟ್ಟೆ ನೋವು, ಹೊಟ್ಟೆ ಉಬ್ಬುವುದು, ಬೆಳಗ್ಗೆ ಮಲಬದ್ಧತೆ , ಆಸಿಡ್ ರಿಫ್ಲೆಕ್ಸ್ ಈ ರೀತಿಯ ಸಮಸ್ಯೆ ಕಾಣಿಸಿಕೊಳ್ಳುವುದು.

 ಕಾಫಿ

ಕಾಫಿ

ಹೆಚ್ಚಿನವರಿಗೆ ರಾತ್ರಿ ಹೊತ್ತಿನಲ್ಲಿ ಕಾಫಿ ಕುಡಿಯುವ ಅಭ್ಯಾಸ ಇರುತ್ತದೆ. ಆದರೆ ಇದು ನಿಮ್ಮ ಸುಖ ನಿದ್ದೆಯನ್ನು ಹಾಳು ಮಾಡುತ್ತದೆ ಎನ್ನುವುದು ನೆನಪಿರಲಿ.

ಐಸ್ ಕ್ರೀಮ್

ಐಸ್ ಕ್ರೀಮ್

ಮಲಗುವ ಮುನ್ನ ಐಸ್ ಕ್ರೀಮ್ ತಿನ್ನದಿರುವುದು ಒಳ್ಳೆಯದು. ಐಸ್ ಕ್ರೀಮ್ ದೇಹದಲ್ಲಿ ಸಕ್ಕರೆಯಂಶವನ್ನು ಇದ್ದಕ್ಕಿದ್ದಂತೆ ಹೆಚ್ಚು ಮಾಡುತ್ತದೆ. ಅದರಲ್ಲೂ ಚಾಕಲೇಟ್ ಫ್ಲೇವರ್ ನ ಐಸ್ ಕ್ರೀಮ್ ತಿಂದರೆ ಕೆಫೀನ್ ಅಂಶ ಕೂಡ ಹೆಚ್ಚಾಗುವುದು.

ಚಾಕಲೇಟ್

ಚಾಕಲೇಟ್

ಚಾಕಲೇಟ್ ಅನ್ನು ಹಗಲಿನಲ್ಲಿ ತಿಂದರೆ ನಿಮ್ಮಲ್ಲಿ ಉತ್ಸಾಹ ತುಂಬುತ್ತದೆ, ರಾತ್ರಿ ಹೊತ್ತಿನಲ್ಲಿ ತಿಂದರೆ ಬೇಗನೆ ನಿದ್ದೆ ಬರುವುದಿಲ್ಲ.

ಬ್ರೆಡ್

ಬ್ರೆಡ್

ಬ್ರೆಡ್ ನಲ್ಲಿ ಕಾರ್ಬೋಹೈಡ್ರೇಟ್ ಅಧಿಕವಿರುವುದರಿಂದ ರಾತ್ರಿ ಹೊತ್ತಿನಲ್ಲಿ ತಿನ್ನುವುದು ಒಳ್ಳೆಯದಲ್ಲ. ಕೆಲವರಿಗೆ ಅಜೀರ್ಣ ಅಥವಾ ಮಲಬದ್ಧತೆ ಸಮಸ್ಯೆ ಉಂಟಾಗುವುದು.

ಖಾರ ಪದಾರ್ಥಗಳು

ಖಾರ ಪದಾರ್ಥಗಳು

ಹೆಚ್ಚು ಖಾರ ತಿಂದು ಮಲಗಿದರೆ ಎದೆ ಉರಿ ಕಾಣಿಸಿಕೊಂಡು ನಿದ್ದೆಗೆ ತೊಂದರೆ ಉಂಟಾಗಬಹುದು.

ಟೊಮೆಟೊ ಸಾಸ್

ಟೊಮೆಟೊ ಸಾಸ್

ಟೊಮೆಟೊ ಸಾಸ್ ತಿಂದು ಮಲಗಿದರೆ ಆಸಿಡ್ ರಿಫ್ಲೆಕ್ಸ್ ಸಮಸ್ಯೆ ಕಾಣಿಸಿಕೊಳ್ಳಬಹುದು. ಆದ್ದರಿಂದ ರಾತ್ರಿ ಹೊತ್ತಿನಲ್ಲಿ ಪಿಜ್ಜಾ, ಬರ್ಗರ್ ತಿನ್ನದಿರುವುದು ಒಳ್ಳೆಯದು.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಬೆಳ್ಳುಳ್ಳಿ ತಿಂದು ಮಲಗಿದರೆ ಬಾಯಿ ತುಂಬಾ ದುರ್ವಾಸನೆ ಬೀರುವುದರಿಂದ ಪಕ್ಕದಲ್ಲಿ ಮಲಗಿದ ಸಂಗಾತಿಗೆ ಕಿರಿಕಿರಿಯಾಗಬಹುದು.

ಕೆಂಪು ಮಾಂಸ

ಕೆಂಪು ಮಾಂಸ

ಕೆಂಪು ಮಾಂಸ ಸುಲಭದಲ್ಲಿ ಜೀರ್ಣವಾಗುವುದಿಲ್ಲ. ಇದರಿಂದ ನಿದ್ದೆ ಬರದೆ ಒದ್ದಾಡಬೇಕಾಗುತ್ತದೆ.

 ಫ್ರೂಟ್ ಸಲಾಡ್

ಫ್ರೂಟ್ ಸಲಾಡ್

ಫ್ರೂಟ್ ಸಲಾಡ್ ತಿಂದು ಮಲಗಿದರೆ ಆಗಾಗ ಮೂತ್ರ ವಿಸರ್ಜನೆಗೆ ಹೋಗಬೇಕೆಂದು ಅನಿಸುತ್ತದೆ. ಆದ್ದರಿಂದ ಫ್ರೂಟ್ ಸಲಾಡ್ ಅನ್ನು ಬೆಳಗ್ಗೆ ತಿನ್ನುವುದು ಒಳ್ಳೆಯದು.

 ಹಾಲು

ಹಾಲು

ಹಾಲಿನ ಸಂಪೂರ್ಣ ಗುಣ ಪಡೆಯಲು ರಾತ್ರಿ ಕುಡಿಯುವ ಬದಲು ಬ್ರೇಕ್ ಫಾಸ್ಟ್ ಗೆ ಅಥವಾ ಸಂಜೆ ಹೊತ್ತಿನಲ್ಲಿ ಕುಡಿಯುವುದು ಒಳ್ಳೆಯದು.

ಮದ್ಯ

ಮದ್ಯ

ಮದ್ಯ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದನ್ನು ರಾತ್ರಿ ಹೊತ್ತಿನಲ್ಲಿ ಕುಡಿದರೆ ಬೆಳಗ್ಗೆ ಎದ್ದಾಗ ಆಸಿಡ್ ರಿಫ್ಲೆಕ್ಸ್ ಸಮಸ್ಯೆ ಎದುರಿಸಬೇಕಾಗುವುದು.

ಕರಿದ ಪದಾರ್ಥಗಳು

ಕರಿದ ಪದಾರ್ಥಗಳು

ರಾತ್ರಿ ಹೊತ್ತಿನಲ್ಲಿ ಕರಿದ ಪದಾರ್ಥಗಳನ್ನು ತಿಂದರೆ ಮೈ ತೂಕ ಹೆಚ್ಚುವುದು ಮತ್ತು ಇದು ಜೀರ್ಣಕ್ರಿಯೆಗೂ ಅಡಚಣೆಯನ್ನು ಉಂಟು ಮಾಡಿ, ನಿದ್ದೆಯನ್ನು ಹಾಳು ಮಾಡುವುದು.

English summary

Foods To Avoid At Night

To have a peaceful sleep and a healthy morning, here are the foods that you must not eat at night. Take a look at the list and make sure you remove them from the dinner menu.
 
X
Desktop Bottom Promotion