For Quick Alerts
ALLOW NOTIFICATIONS  
For Daily Alerts

ಡಯಟ್ ನಲ್ಲಿರುವವರು ತಿನ್ನಬಾರದ ಆಹಾರಗಳು

|

ಮೈತೂಕ ಹೆಚ್ಚಾಗಬಾರದೆಂದು ಡಯಟ್ ನಲ್ಲಿರುವವರು ಕೆಲವೊಮ್ಮೆ ತಮಗೆ ಅರಿಯದೆ ಕೆಲವೊಂದು ತಪ್ಪುಗಳನ್ನು ಮಾಡುತ್ತಾರೆ. ಇದರಿಂದಾಗಿ ಡಯಟ್ ನಿಂದ ಅವರು ಬಯಸಿದ ಫಲಿತಾಂಶ ಸಿಗದೇ ಹೋಗುವುದು. ಡಯಟ್ ಮಾಡುವುದು ಅಂದರೆ ಕೆಲವರ ಪ್ರಕಾರ ಕೊಬ್ಬಿನಂಶ ಇರುವ ಆಹಾರಗಳಿಂದ ದೂರ ಇರಬೇಕು, ಉಳಿದೆಲ್ಲಾ ಪದಾರ್ಥಗಳನ್ನು ತಿನ್ನಬಹುದು, ಇನ್ನು ಕೆಲವರಿಗೆ ಡಯಟ್ ಮಾಡುವುದು ಅಂದರೆ ಒಂದು ಹೊತ್ತು ಅಥವಾ ಎರಡು ಹೊತ್ತು ಊಟ ಬಿಡುವುದು. ಈ ಎರಡೂ ವಿಧಾನವೂ ತಪ್ಪು.

ಸರಿಯಾದ ಡಯಟ್ ಅಂದರೆ ಹೊತ್ತಿಗೆ ಸರಿಯಾಗಿ ಊಟ ಮಾಡಬೇಕು, ತಿನ್ನುವ ಮಿತ ಆಹಾರದಲ್ಲಿ ಎಲ್ಲಾ ರೀತಿಯ ಪೋಷಕಾಂಶಗಳು ಇರುವಂತೆ ನೋಡಿಕೊಳ್ಳಬೇಕು. ಅದರ ಜೊತೆಗೆ ಈ ಕೆಳಗಿನ ಆಹಾರಗಳಿಂದಲೂ ದೂರ ಇರಬೇಕು, ಅಂದರೆ ಮಾತ್ರ ನೀವು ಬಯಸಿದ ಫಲಿತಾಂಶ ದೊರೆಯುವುದು.

ಡಯಟ್ ನಲ್ಲಿರುವವರು ತಿನ್ನಬಾರದ ಆಹಾರಗಳು

ವೈಟ್ ಬ್ರೆಡ್

ವೈಟ್ ಬ್ರೆಡ್

ನೀವು ಡಯಟ್ ನಲ್ಲಿದ್ದರೆ ಸಂಪೂರ್ಣವಾಗಿ ವೈಟ್ ಬ್ರೆಡ್ ನಿಂದ ಮಾಡಿದ ಸ್ಯಾಂಡ್ ವಿಚ್ ಗಳಿಂದ ದೂರವಿರಬೇಕು. ಸ್ಯಾಂಡ್ ವಿಚ್ ಅನ್ನು ಬ್ರೌನ್ ಬ್ರೆಡ್ ನಲ್ಲಿ ಮಾಡಿ ತಿನ್ನಬಹುದು.

ಕ್ಯಾಂಡಿ

ಕ್ಯಾಂಡಿ

ಕ್ಯಾಂಡಿ ನೋಡಿದ ತಕ್ಷಣ ಯಾರಿಗಾದರೂ ಅದರ ರುಚಿ ನೋಡಬೇಕೆನಿಸುವುದು, ನೀವು ಮೈ ತೂಕ ಕಮ್ಮಿಯಾಗಬೇಕೆಂದು ತೀವ್ರವಾದ ಪ್ರಯತ್ನದಲ್ಲಿ ಇದ್ದರೆ ನಿಮ್ಮ ಆಸೆಗೆ ಗಮನ ಕೊಡದಿರುವುದು ಒಳ್ಳೆಯದು. ಕ್ಯಾಂಡಿಯಲ್ಲಿ ಸಕ್ಕರೆಯಂಶ ಅಧಿಕವಾಗಿರುವುದರಿಂದ ಮೈ ತೂಕ ಹೆಚ್ಚಾಗುವುದೇ ಹೊರತು ಕಮ್ಮಿಯಾಗುವುದಿಲ್ಲ.

ಸಿಹಿ ವಸ್ತುಗಳು

ಸಿಹಿ ವಸ್ತುಗಳು

ಮಾರ್ಕೆಟ್ ಗೆ ಹೋದಾಗ ಆಕರ್ಷಕ ವಿನ್ಯಾಸ, ಬಣ್ಣ-ಬಣ್ಣದ ಮಿಠಾಯಿಗಳು, ಕ್ಯಾಂಡಿಗಳು ನಮ್ಮನ್ನು ಸೆಳೆಯುತ್ತವೆ, ಆ ಸೆಳೆತಕ್ಕೆ ನೀವು ಬಲಿಯಾದರೆ ತೆಳ್ಳಗಾಗಬೇಕೆಂಬ ನಿಮ್ಮ ಪ್ರಯತ್ನಕ್ಕೆ ತಡೆ ಉಂಟಾಗಬಹುದು.

ಎಣ್ಣೆ

ಎಣ್ಣೆ

ಎಣ್ಣೆಯಲ್ಲಿ ಮಿತಿಯಲ್ಲಿ ಬಳಸಿ, ಅದರಲ್ಲೂ ಸಂಸ್ಕರಿಸಿದ ಎಣ್ಣೆಯಿಂದ ದೂರವಿರಿ, ನೈಸರ್ಗಿಕವಾದ ಎಣ್ಣೆಯನ್ನು ಬಳಸಿ, ಆಲೀವ್ ಎಣ್ಣೆ, ಸೂರ್ಯಕಾಂತಿ ಎಣ್ಣೆ ಇವುಗಳನ್ನು ಅಡುಗೆಗೆ ಬಳಸಿದರೆ ಒಳ್ಳೆಯದು.

 ಹಾಲಿನ ಉತ್ಪನ್ನಗಳು

ಹಾಲಿನ ಉತ್ಪನ್ನಗಳು

ಹಾಲಿನ ಉತ್ಪನ್ನಗಳನ್ನು ಮಿತಿಯಲ್ಲಿ ತಿನ್ನುವುದು ಒಳ್ಳೆಯದು. ಕೊಬ್ಬಿನಂಶ ತೆಗೆದ ಹಾಲನ್ನು ಕುಡಿಯುವುದು ಒಳ್ಳೆಯದು.

ಆಲೂಗಡ್ಡೆ

ಆಲೂಗಡ್ಡೆ

ಆಲೂಗಡ್ಡೆಯಲ್ಲಿ ಕಾರ್ಬೋಹೈಡ್ರೇಟ್ ಅಧಿಕ ಇರುವುದರಿಂದ ಮಿತಿಯಲ್ಲಿ ತಿನ್ನಿ. ಹೆಚ್ಚು ತಿನ್ನುವುದರಿಂದ ಮೈ ತೂಕ ಹೆಚ್ಚುವುದು.

ಸೋಡಾ

ಸೋಡಾ

ತಂಪು ಪಾನೀಯಗಳು ಬಾಯಿಗೆ ರುಚಿ ಅನಿಸಿದರೂ ಇದರಿಂದ ಆರೋಗ್ಯಕ್ಕೆ ಸ್ವಲ್ಪ ಪ್ರಯೋಜನವಿಲ್ಲ. ತಂಪು ಪಾನೀಯಗಳನ್ನು ಕುಡಿಯುವುದರಿಂದ ಮೈ ತೂಕ ಹೆಚ್ಚುವುದು ಮಾತ್ರವಲ್ಲ ಅನೇಕ ಆರೋಗ್ಯ ಸಮಸ್ಯೆ ಕಂಡು ಬರುವುದು.

ಜಂಕ್ ಫುಡ್

ಜಂಕ್ ಫುಡ್

ಮೈ ತೂಕ ಕಮ್ಮಿಯಾಗಬೇಕೆಂದು ಬಯಸುವವರು ಮೊದಲು ಮಾಡಬೇಕಾದ ಕೆಲಸವೆಂದರೆ ಜಂಕ್ ಆಹಾರಗಳಿಂದ ದೂರವಿರುವುದು.

ಸಂಸ್ಕರಿಸಿದ ಮಾಂಸ

ಸಂಸ್ಕರಿಸಿದ ಮಾಂಸ

ಡಯಟ್ ನಲ್ಲಿ ಇರುವವರು ತೆಳು ಮಾಂಸವನ್ನು ತಿನ್ನಬಹುದು, ಆದರೆ ಸಂಸ್ಕರಿಸಿದ ಮಾಂಸ, ಅಲ್ಲದೆ ಫ್ರಿಜ್ ನಲ್ಲಿಟ್ಟ ಮಾಂಸವನ್ನು ತಿನ್ನಬಾರದು.

English summary

Foods Dieters Should Avoid

For those of you who are on a weight loss diet plan, take a look at these fattening foods which should be avoided at any cost. So, it is best to divert your craving to a new and healthy form of food. Take a look at these foods dieters should avoid.
X
Desktop Bottom Promotion