For Quick Alerts
ALLOW NOTIFICATIONS  
For Daily Alerts

ಸುಖ ನಿದ್ದೆ ಬರಲು ಡಯಟ್ ಹೀಗಿರಲಿ

|

ಮಲಗುವ ಮುನ್ನ ನಾವು ತಿನ್ನುವ ಆಹಾರಗಳು ನಮ್ಮ ನಿದ್ದೆಯ ಮೇಲೆ ಗಾಢವಾದ ಪ್ರಭಾವ ಬೀರುತ್ತದೆ. ಕೆಲವೊಂದು ಆಹಾರಗಳು ನಿಮ್ಮ ರಾತ್ರಿಯ ಸುಖ ನಿದ್ದೆಯನ್ನು ಮೈಲಿ ದೂರ ಓಡಿಸಿದರೆ, ಮತ್ತೆ ಕೆಲವು ಆಹಾರಗಳು ಮಲಗಿದ ತಕ್ಷಣವೇ ನಿದ್ದೆ ಬರುವಂತೆ ಮಾಡುತ್ತದೆ.

ಇಲ್ಲಿ ನಾವು ಸುಖ ನಿದ್ದೆಗೆ ಯಾವ ಆಹಾರಗಳನ್ನು ತಿನ್ನಬೇಕು, ಯಾವುದನ್ನು ತಿನ್ನಬಾರದೆಂದು ಹೇಳಿದ್ದೇವೆ ನೋಡಿ:

Diet For Better Sleep

ಚೈನೀಸ್ ತಿಂಡಿ: ಮನೆಯಲ್ಲೇ ಅಡುಗೆ ತಯಾರಿಸೋದಕ್ಕೆ ಬೇಜಾರಾಗಿ ಚೈನೀಸ್ ತಿಂಡಿ, ಆಹಾರವನ್ನು ಹೋಟೆಲ್ ನಿಂದ ತರಿಸಿಕೊಂಡು ತಿನ್ನುತ್ತೀರಿ. ಆದರೆ ಇದು ನಿದ್ದೆಗೆ ಅಷ್ಟು ಒಳ್ಳೆಯದಲ್ಲ. ಆದರೆ ತರಕಾರಿ, ಅನ್ನ ಹೊಂದಿರುವ ಚೈನೀಸ್ ಆಹಾರವನ್ನು ಸೇವಿಸಿದರೆ ತೊಂದರೆಯಿಲ್ಲ.

ಚಾಕಲೇಟ್ : ಎಲ್ಲರಿಗೂ ಇಷ್ಟವಾಗುವ ಚಾಕಲೇಟ್ ಮರೆಯೋದು ಹೇಗೆ? ಆದರೆ ಇದು ರಾತ್ರಿ ಮಲಗುವ ಮುನ್ನ ಮಾತ್ರ ಸೇವಿಸಬಾರದು. ಇದರಲ್ಲಿರುವ ಹೆಚ್ಚಿನ ಸಕ್ಕರೆ ಮತ್ತು ಕೆಫಿನ್ ಅಂಶದಿಂದ ನಿದ್ದೆಗೆ ಕೆಡುಕಾಗಬಹುದು. ಚಾಕಲೇಟ್ ಬದಲಾಗಿ ಏನು ತಿನ್ನಬಹುದುದೆಂದರೆ, ಮೊಟ್ಟೆಯ ಬಿಳಿಭಾಗಕ್ಕೆ ಒಂದು ಚಮಚ ಚಾಕಲೇಟ್ ಪ್ರೊಟೀನ್ ಪೌಡರ್ ಸೇರಿಸಿ 1 1/2 ನಿಮಿಷ ಮೈಕ್ರೊವೇವ್ ನಲ್ಲಿಟ್ಟರೆ ತಕ್ಷಣದ ಚಾಕಲೇಟ್ ರೆಡಿಯಾಗುತ್ತೆ. ಇದರಿಂದ ತಾತ್ಕಾಲಿಕವಾಗಿ ಚಾಕಲೇಟ್ ದಾಹವನ್ನು ತೀರಿಸಿಕೊಳ್ಳಬಹುದು.

ಹಾಲು: ರಾತ್ರಿ ಹೊತ್ತು ಹಾಲು ಕುಡಿದರೆ ಚೆನ್ನಾಗಿ ನಿದ್ದೆ ಬರುತ್ತದೆ ಎಂದು ಹೇಳುವುದುಂಟು. ಆದರೆ ಹಾಲಿನ ಸೇವನೆ ರಾತ್ರಿ ಹೊತ್ತು ಜೀರ್ಣಕ್ರಿಯೆಗೆ ತೊಂದರೆ ಉಂಟುಮಾಡಬಹುದು ಅಥವಾ ಮಧ್ಯ ರಾತ್ರಿ ಹಸಿವನ್ನೂ ತಂದೊಡ್ಡಬಹುದು. ಇದರಿಂದ ಸಹಜವಾಗಿ ನಾವು ಎಚ್ಚರಗೊಂಡು ನಿದ್ದೆಗೆಡಬೇಕಾದ ಪರಿಸ್ಥಿತಿ ಬರುತ್ತದೆ.

ಪಿಜ್ಜಾ: ಪಿಜ್ಜಾ ರಾತ್ರಿ ಸಮಯ ತಿನ್ನಲು ಬಲು ಹಿತವೆನಿಸುತ್ತೆ. ಆದರೆ ಇದು ಕ್ಯಾಲೋರಿಗಳನ್ನು ಹೆಚ್ಚಿಸಿ ನಿಮ್ಮ ದೇಹಾರೋಗ್ಯವನ್ನು ಗುರಿತಪ್ಪಿಸಬಹುದು, ಅಜೀರ್ಣತೆಯೂ ಉಂಟಾಗಬಹುದು. ಪಿಜ್ಜಾ ತಿನ್ನಲೇ ಬೇಕು ಎನಿಸಿದ ಸಮಯದಲ್ಲಿ ಎರಡು ಮೊಟ್ಟೆ ಬೇಯಿಸಿ ತಿಂದರೆ ಹೊಟ್ಟೆ ತುಂಬುವುದಲ್ಲದೆ ಸರಿಯಾದ ಪ್ರೊಟೀನನ್ನೂ ಒದಗಿಸುತ್ತದೆ.

ಪಾಸ್ತಾ: ಪಾಸ್ತಾದಲ್ಲಿ ದೇಹಕ್ಕೆ ಅವಶ್ಯಕವಾದ ಕಾರ್ಬೊಹೈಡ್ರೇಡ್ ಇದ್ದರೂ ಸಹ ಇದು ಬೊಜ್ಜು ಹೆಚ್ಚಿಸಲು ಮುಖ್ಯ ಕಾರಣವಾಗುತ್ತದೆ. ಆದ್ದರಿಂದ ಪಾಸ್ತಾಗಿಂತ ಅದೇ ರುಚಿ ಹೊಂದಿರುವ ನೂಡಲ್ಸ್ ಸೇವನೆಯೇ ಉತ್ತಮ.

ನಿದ್ದೆ ತರುವ ಆಹಾರಗಳು

ಮೀನು: ಮೀನಿನಲ್ಲಿ ವಿಟಮಿನ್ ಬಿ6 ಮತ್ತು ಒಮೆಗಾ 3 ಕೊಬ್ಬಿನಂಶ ಇರುವುದರಿಂದ ನಿದ್ರಾಹೀನತೆ ಸಮಸ್ಯೆ ಹೋಗಲಾಡಿಸುವಲ್ಲಿ ತುಂಬಾ ಪರಿಣಾಮಕಾರಿಯಾಗಿದೆ

ಬಾದಾಮಿ: ಬಾದಾಮಿಯಲ್ಲಿ ಮೆಗ್ನಿಷ್ಯಿಯಂ ಇದ್ದು ಇದು ನಿಮಗೆ ವಿಶ್ರಾಂತಿಯ ಅನುಭವ ನೀಡುವುದರ ಜೊತೆಗೆ ಮಲಗಿದ ತಕ್ಷಣ ನಿದ್ದೆ ಬರುವಂತೆ ಮಾಡುತ್ತದೆ.

ಬಾಳೆಹಣ್ಣು: ಬಾಳೆಹಣ್ಣಿನಲ್ಲಿ ಮೆಗ್ನಿಷ್ಯಿಯಂ ಮತ್ತು ಪೊಟಾಷ್ಯಿಯಂ ಅಧಿಕವಿದ್ದು ಇವು ನಿದ್ದೆ ತರುವಂತಹ ಹಾರ್ಮೋನ್ ಗಳ ಬಿಡುಗಡೆಗೆ ಸಹಾಯ ಮಾಡುತ್ತದೆ.

ಮೊಸರು: ಇದು ಒತ್ತಡವನ್ನು ಕಡಿಮೆ ಮಾಡುತ್ತದೆ ಹಾಗೂ ಬೇಗನೆ ನಿದ್ದೆ ತರುತ್ತದೆ. ಮಲಗುವ 10 ನಿಮಿಷ ಮೊದಲು ಮೊಸರು ತಿಂದು ಮಲಗಿದರೆ ಬೇಗನೆ ನಿದ್ದೆ ಬರುವುದು.

ಬೇಯಿಸಿದ ಮೊಟ್ಟೆ: ನಿದ್ದೆ ಬೇಗನೆ ಬರಲು ಮಲಗುವ ಮುಂಚೆ ಬೇಯಿಸಿದ ಒಂದು ಮೊಟ್ಟೆ ಬೇಕಾದರೆ ತಿನ್ನಬಹುದು.

English summary

Diet For Better Sleep

To get sound sleep you have to fallow proper diet. Some tasty make you spend sleepless night. Some food are helps to get better sleep. Here we have give diet tips which will help you get proper sleep.
X
Desktop Bottom Promotion