For Quick Alerts
ALLOW NOTIFICATIONS  
For Daily Alerts

ಈ ಹೂಗಳಲ್ಲಿದೆ ನಿದ್ರಾಹೀನತೆ ಸಮಸ್ಯೆಗೆ ಮದ್ದು

|

ನಿದ್ರಾಹೀನತೆ ಸಮಸ್ಯೆಯಿಂದ ಹೊರಬರಲು ಅನೇಕ ನೈಸರ್ಗಿಕ ವಿಧಾನಗಳಿವೆ. ಅವುಗಳಲ್ಲಿ ಒಂದು ಹೂವಿನ ಸುವಾಸನೆ. ನಿದ್ರಾಹೀನತೆ ಉಂಟಾದರೆ ಖಿನ್ನತೆ, ಕೋಪ ಬರುವುದು, ಜಿಗುಪ್ಸೆ , ಅಧಿಕ ರಕ್ತದೊತ್ತಡ ಈ ರೀತಿ ಅನೇಕ ಸಮಸ್ಯೆಗಳು ಉಂಟಾಗುವುದು.

ಸುವಾಸನೆ ಇರುವ ಎಣ್ಣೆಯಿಂದ ಪಾದಗಳಿಗೆ ಮಸಾಜ್ ಮಾಡಿದರೆ ಬೇಗನೆ ನಿದ್ದೆ ಬರುವುದು. ಈ ಎಣ್ಣೆಯ ಸುವಾಸನೆಗೆ ಮೆದುಳು ಪ್ರಭಾವಿತವಾಗುವುದು, ಇದರಿಂದ ಮಾನಸಿಕ ಒತ್ತಡ ಕಡಿಮೆಯಾಗಿ ನಿದ್ದೆ ಸರಿಯಾಗಿ ಬರುವುದು. ಅದರಲ್ಲೂ ಈ ಕೆಳಗಿನ ಹೂಗಳು ಅಥವಾ ಅವುಗಳಿಂದ ಮಾಡಿದ ಎಣ್ಣೆ ನಿದ್ದೆ ಬರಿಸುವಲ್ಲಿ ತುಂಬಾ ಸಹಕಾರಿ:

3 Flowers To Get Rid of Insomnia

1 ಮಲ್ಲಿಗೆ ಹೂ
ಮಲ್ಲಿಗೆ ಎಣ್ಣೆಯನ್ನು ಮಸಾಜ್ ಮಾಡಿ. ಸ್ವಲ್ಪ ಮಲ್ಲಿಗೆಯನ್ನು ತಲೆಯ ಹತ್ತಿರ ಇಟ್ಟು ಮಲಗಿದರೆ ಅದರ ಸುವಾಸನೆಯಿಂದ ಬೇಗನೆ ನಿದ್ದೆ ಬರುತ್ತದೆ. ಟ್ರೈ ಮಾಡಿ ನೋಡಿ.

2. ಲ್ಯಾವಂಡರ್ ಎಣ್ಣೆ
ಇದರ ಸುವಾಸನೆ ಕೇಳಿದರೆ ಅಧಿಕ ರಕ್ತದೊತ್ತಡ ಕಡಿಮೆಯಾಗುವುದು. ಇದರ ಎಣ್ಣೆಯಿಂದ ಪಾದಕ್ಕೆ ಮಸಾಜ್ ಮಾಡಿ ಎಣ್ಣೆಯನ್ನು ಒಂದು ಬಟ್ಟಲಿಗೆ ಹಾಕಿ ಮಲಗುವ ರೂಮಿನಲ್ಲಿಡಿ. ಇದರ ಸುವಾಸನೆ ಬೇಗನೆ ನಿದ್ದೆ ಮಾಡಿ, ಬೆಳಗ್ಗೆ ಫ್ರೆಶ್ ಆಗಿ ಎದ್ದೇಳುವಿರಿ.

3. ಗಾರ್ಡೇನಿಯಾ(gardenia)
ಇದನ್ನು ಆರ್ಯುವೇದದಲ್ಲಿ ಹೆಚ್ಚಾಗಿ ಬಳಸಲಾಗುವುದು. ಈ ಹೂ ಕೂಡ ಬೇಗನೆ ನಿದ್ದೆ ಬರುವಂತೆ ಮಾಡುವಲ್ಲಿ ತುಂಬಾ ಸಹಕಾರಿ.

ಸಲಹೆ: ನಿದ್ದೆ ಬರಲು ಮಾತ್ರೆ ನುಂಗಿ ಆರೋಗ್ಯ ಹಾಳುಮಾಡಬೇಡಿ, ನೈಸರ್ಗಿಕ ವಿಧಾನ ಪಾಲಿಸಿ, ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ.

English summary

3 Flowers To Get Rid of Insomnia | Tips For Health | ನಿದ್ರಾಹೀನತೆ ಸಮಸ್ಯೆಯಿಂದ ಹೊರಬರುವಂತೆ ಮಾಡುವ 3 ಹೂಗಳು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

There are many natural ways that you can do to get rid of insomnia, one of them by wearing floral fragrances. sleeplessness condition will worsen high blood pressure. So you have to get rid from this problem.
X
Desktop Bottom Promotion