For Quick Alerts
ALLOW NOTIFICATIONS  
For Daily Alerts

ಅತ್ಯಧಿಕ ಕ್ಯಾಲೋರಿಯ ಭಾರತೀಯ ಆಹಾರಗಳು

By Super
|

ಭಾರತೀಯ ಖಾದ್ಯಗಳು ತರಕಾರಿ, ಸೊಪ್ಪು, ಧಾನ್ಯಗಳನ್ನು ಒಳಗೊಂಡಿರುವುದರಿಂದ ಇವು ಆರೋಗ್ಯಕರವಾಗಿರುತ್ತವೆ. ಆದರೂ ಒಂದು ಖಾದ್ಯದಲ್ಲಿನ ಕ್ಯಾಲೋರಿಯ ಪರಿಮಾಣ ಅದನ್ನು ತಯಾರಿಸುವ ಶೈಲಿಯನ್ನು ಅವಲಂಭಿಸಿರುತ್ತದೆ. ನಾವು ಆ ಖಾದ್ಯಕ್ಕೆ ಬಳಸುವ ಎಣ್ಣೆ, ಬೆಣ್ಣೆ, ತುಪ್ಪ, ಕೆನೆ ಹಾಗು ಸಕ್ಕರೆಯ ಪ್ರಮಾಣಗಳಿಂದ ಆ ಆಹಾರದಲ್ಲಿ ಕ್ಯಾಲೋರಿ ಪ್ರಮಾಣ ಹೆಚ್ಚುತ್ತದೆ. ಅಂತಹ ಖಾದ್ಯಗಳು ತುಂಬಾ ರುಚಿಕರವಾಗಿರುವುದರಿಂದ ಅವುಗಳು ನಮ್ಮ ಫೇವರೆಟ್ ಫುಡ್ ಆಗಿರುತ್ತದೆ.

ಆದರೆ ಹೃದಯದ ಸ್ವಾಸ್ಥ್ಯಕ್ಕಾಗಿ ಮತ್ತು ನಿಮ್ಮ ಸೊಂಟದ ಸುತ್ತಲಿನ "ಟಯರ್" ಕರಗಬೇಕಾದರೆ, ನಮ್ಮ ಆಹಾರ ಪದ್ದತಿಯನ್ನು ಬದಲಾವಣೆ ಮಾಡಿಕೊಳ್ಳಬೇಕಾದ ಅವಶ್ಯಕತೆಯಿದೆ. ಅಂದರೆ ನೀವೀಗ ಬಳಸುತ್ತಿರುವ ಖಾದ್ಯಗಳಲ್ಲಿ ಕೆಲವನ್ನು ಮಿತಿಯಲ್ಲಿ ತಿನ್ನಬೇಕು. ಅತ್ಯಧಿಕ ಕ್ಯಾಲೋರಿಯ ಆಹಾರಗಳು ಯಾವುವು ಎಂದು ನೋಡೋಣವೇ?

1. ಚಿಕನ್ ಕುರ್ಮಾ ಕರಿ

1. ಚಿಕನ್ ಕುರ್ಮಾ ಕರಿ

ಮಾಂಸಾಹಾರ ತಿನ್ನುವ ಮನೆಗಳಲ್ಲಿ ಸಾಮಾನ್ಯವಾಗಿ ಸ್ವಲ್ಪಹೆಚ್ಚಾಗಿಯೇ ಇದನ್ನು ತಯಾರಿಸುತ್ತರೆ. ಇದು ಚಿಕನ್ ನ ಕ್ರೀಮ್ ನಂತಹ ಪದಾರ್ಥ. ಇದನ್ನು ತಯಾರಿಸಲು ಚಿಕನ್, ಶುಂಠಿ - ಬೆಳ್ಳುಳ್ಳಿ ಪೇಸ್ಟ್, ಬೆಣ್ಣೆ ಅಥವಾ ತುಪ್ಪವನ್ನು ಬಳಸುತ್ತಾರೆ.

ಇದರಲ್ಲಿನ ಕ್ಯಾಲೋರಿ - ಸುಮಾರು 800-870 ಕ್ಯಾ.

2. ಸಮೋಸ

2. ಸಮೋಸ

ಬಾಯಲ್ಲಿ ನೀರೂರಿಸುವ ಗರಿಗರಿಯಾಗಿ ಕರಿದ ಹಿಟ್ಟಿನ ಕವಚದ ಒಳಗೆ ಮಸಾಲೆಯುಕ್ತ ಆಲೂ, ಈರುಳ್ಳಿ ಅಥವಾ ಬಟಾಣೆಗಳನ್ನು ತುಂಬಿರುತ್ತಾರೆ. ಸಂಜೆ ಚಹಾದೊಂದಿಗೆ ಒಂದು ಸಮೋಸ ಇದ್ದರೆ ಆಹಾ! ಇನ್ನೇನು ಬೇಡವೆನ್ನುವಷ್ಟು ರುಚಿಕರವಾದ ಖಾದ್ಯವಿದು. ಇದರಲ್ಲಿ ಪ್ರಮುಖವಾಗಿ ಬೇಯಿಸಿದ ಆಲೂಗಡ್ಡೆ, ಬೇರೆ ತರಕಾರಿಗಳು, ಚಿಕನ್( ಮಾಂಸಾಹಾರದ ಸಮೋಸಾದಲ್ಲಿ ಮಾತ್ರ) ಎಣ್ಣೆ ಹಾಗೂ ಉಪ್ಪು.

2 ವೆಜ್ ಸಮೋಸಗಳಲ್ಲಿ ಸುಮಾರು 260 ಕಿ.ಕ್ಯಾಲೋರಿ ಮತ್ತು 2 ನಾನ್ ವೆಜ್ ಸಮೋಸಗಳಲ್ಲಿ 320 ಕ್ಯಾಲೋರಿಗಳಿರುತ್ತವೆ.

3. ತಂದೂರಿ ಚಿಕನ್

3. ತಂದೂರಿ ಚಿಕನ್

ಚಿಕನ್ ಲೆಗ್ ಪೀಸ್ ಗೆ ಮಸಾಲೆಗಳನ್ನು ಹಾಕಿ, ಹುರಿದ ಚಿಕನ್ ನಿಂದ ಮಾಡುವ ತಂದೂರಿ ಚಿಕನ್ ಮಾಂಸಾಹಾರಿ ಭಾರತೀಯರಿಗೆ ಬಲು ಪ್ರಿಯ. ಆದರೆ ಇದರಲ್ಲಿನ ಕ್ಯಾಲೋರಿ - ಚಿಕನ್ ನ ಒಂದು ಇಡೀ ಕಾಲಿನಲ್ಲಿ 264-300ಕ್ಯಾ

4. ಮದರಾಸಿ ಖಾದ್ಯ

4. ಮದರಾಸಿ ಖಾದ್ಯ

ಇದನ್ನು ಕೋಳಿ , ಹಂದಿಮಾಂಸ , ದನದ ಮಾಂಸಗಳಿಂದ ಮಾಡುವರು. ಕೆಲವೊಮ್ಮೆ ಗೋಮಾಂಸ ಅಥವಾ ಕುರಿ ಮಾಂಸದಿಂದ ಖೀಮಾ ಮದರಾಸ್ ಖಾದ್ಯ ಎಂದು ಬಡಿಸುವುದಿದೆ.

ಇದರಲ್ಲಿನ ಕ್ಯಾಲೋರಿ - 100 200 ಗ್ರಾಂ ನಲ್ಲಿ ಸುಮಾರು 450 - 500ಕ್ಯಾ

5. ಪಿಲೌ ರೈಸ್

5. ಪಿಲೌ ರೈಸ್

ಮಸಾಲೆಗಳೊಂದಿಗೆ ಸುವಾಸನೆಭರಿತ ಅಕ್ಕಿಯನ್ನು ಬೇಯಿಸಿ ಅನ್ನ ಮಾಡಿ ಅದಕ್ಕೆ ಮಾಂಸ , ಕೋಳಿ , ತರಕಾರಿಗಳು ಅಥವಾ ಮೀನು ಸೇರಿಸುವರು.

ಕ್ಯಾಲೋರಿ - ಒಂದು ಬಾರಿಗೆ ಸುಮಾರು 449 ಕ್ಯಾ.

6.ಈರುಳ್ಳಿ ಬಜ್ಜಿ

6.ಈರುಳ್ಳಿ ಬಜ್ಜಿ

ಆಲೂಗೆಡ್ಡೆಯಿಂದ ತಯಾರಿಸುವ ಟೈಂ ಪಾಸ್ ಕುರುಕಲುಗಳಂತೆ ಇದನ್ನೂ ಕೂಡ ಹಲವಾರು ಬಗೆಗಳಲ್ಲಿ ತಯಾರಿಸುವರು. ಭಾರಿ ಬೋಜನದಜೊತೆ ನೆಂಚಿ (ಬಾಡಿಸಿ)ಕೊಳ್ಳಲು ಬಜ್ಜಿ ಯನ್ನು ಹೆಚ್ಚಾಗಿ ಬಳಸುತ್ತಿದ್ದು, ಸಂಜೆಯ ಲಘು ಉಪಹಾರವಾಗಿಯೂ ತಿನ್ನುವರು. ಆದರೆ ಹೆಚ್ಚಿನ ಎಣ್ಣೆ ಮತ್ತು ಮಸಾಲೆ ಹೊಂದಿರುವ ಈರುಳ್ಳಿ ಬಜ್ಜಿಯಲ್ಲಿ ಕ್ಯಾಲೋರಿ ಕೂಡ ಹೆಚ್ಚಿದೆ.

ಕ್ಯಾಲೋರಿ - 2-3 ಚೂರುಗಳಲ್ಲಿ( ಗಾತ್ರವನ್ನು ಅವಲಂಬಿಸಿ) 190 ಕ್ಯಾ.

7. ಚಿಕನ್ ಟಿಕ್ಕಾ ಮಸಾಲಾ

7. ಚಿಕನ್ ಟಿಕ್ಕಾ ಮಸಾಲಾ

ಚಿಕನ್ ಟಿಕ್ಕಾ ಮಸಾಲಾವು ಮಸಾಲೆಯುಕ್ತ ಸಾಸ್ ನಲ್ಲಿ ಹುರಿದ ಕೋಳಿ ತುಂಡುಗಳಿಂದ ಮಾಡುವ ಭಕ್ಷ್ಯ. ಸಾಸ್ ಸಾಮಾನ್ಯವಾಗಿ ಕೆನೆ ಮತ್ತು ಮಸಾಲೆಭರಿತವಾಗಿದ್ದು, ಕಿತ್ತಳೆ ಬಣ್ಣ ಹೊಂದಿರುತ್ತದೆ. ಆದರೆ ಇದು ಸಾಂಪ್ರದಾಯಿಕ ಭಕ್ಷ್ಯ ಅಲ್ಲ . ಮಸಾಲೆಯಂತಹ ರುಚಿ ಮತ್ತು ಸುವಾಸನೆ ಇರುವುದರಿಂದ ಇದು ಚಿಕನ್ ಟಿಕ್ಕಾ ಎಂಬ ಹೆಸರಲ್ಲೂ ಪಡೆದಿದೆ. ಈ ಖಾದ್ಯವು ಮೊಘಲ್ ಪಾಕಪದ್ಧತಿಯಿಂದ ಬಂದಿದ್ದು, ಭಾರತದಲ್ಲಿ ಮತ್ತು ವಿದೇಶಗಳಲ್ಲಿ ಬಹಳ ಜನಪ್ರಿಯವಾಗುತ್ತಿದೆ .

ಕ್ಯಾಲೋರಿ - ಸಣ್ಣ ಬೌಲ್ ಪ್ರತಿ ಸುಮಾರು 438 - 557 ಕ್ಯಾಲೋರಿ ( ಬಳಸಲಾಗಿರುವ ಬೆಣ್ಣೆ ಪ್ರಮಾಣವನ್ನು ಅವಲಂಬಿಸಿ )

8. ಚಿಕನ್ ಕರಿ

8. ಚಿಕನ್ ಕರಿ

ಚಿಕನ್ ಕರಿ, ಭಾರತದಲ್ಲಿ ಸಾಮಾನ್ಯವಾಗಿ ತಿನ್ನುಲು ಇಷ್ಟಪಡುವ ಭಕ್ಷ್ಯವಾಗಿದೆ . ಕೋಳಿ ಮತ್ತು ಕರಿ ಈ ತಿನಿತಿನ ಮುಖ್ಯ ಅಂಶ. ಮಸಾಲಾ ಪುಡಿ, ಕೇಸರಿ , ಶುಂಠಿ ಮುಂತಾದವನ್ನು ಇತರ ಮಸಾಲೆಗಳೊಂದಿಗೆ ಸೇರಿದಂತೆ ಸಾಸ್ ತಯಾರಿಸಿ ಚಿಕನ್ ನೊಂದಿಗೆ ಬೆರೆಸಲಾಗುತ್ತದೆ .

ಕ್ಯಾಲೋರಿ - ಸುಮಾರು 583 ಕ್ಯಾ .

9. ಲ್ಯಾಂಬ್ ರೋಗನ್ ಜೋಶ್

9. ಲ್ಯಾಂಬ್ ರೋಗನ್ ಜೋಶ್

ರೋಗನ್ ಜೋಶ್ ಕಾಶ್ಮೀರಿ ಪಾಕಪದ್ಧತಿಯು ಕುರಿಮಾಂಸದ ಸುವಾಸನೆಭರಿತ ಒಂದು ಭಕ್ಷ. ರೋಗನ್ ಜೋಶ್ ತೀವ್ರ ಶಾಖದಲ್ಲಿ ಎಣ್ಣೆಯನ್ನು ಬಿಸಿಮಾಡಿ ಅದರಲ್ಲಿ ಬೇಯಿಸಿದ ಖಾದ್ಯ.

ಕ್ಯಾಲೋರಿ - ಸುಮಾರು 589 ಕ್ಯಾ .

10. ಲ್ಯಾಂಬ್ ಖೀಮಾ

10. ಲ್ಯಾಂಬ್ ಖೀಮಾ

ಕುರಿ ಮಾಂಸವನ್ನು ಮಸಾಲೆಗಳು ಮತ್ತು ಹಸಿರು ಬಟಾಣಿಕಾಳುಗಳೊಂದಿಗೆ ಬೇಯಿಸಿರುತ್ತಾರೆ.

ಕ್ಯಾಲೋರಿ - ಸುಮಾರು 502-562 ಕ್ಯಾ .

11. ನಾನ್ ಬ್ರೆಡ್

11. ನಾನ್ ಬ್ರೆಡ್

ನಾನ್ ಒಂದು ಎಲೆಯಂತಹ , ಒಲೆಯಲ್ಲಿ ಬೇಯಿಸಿದ ಚಪ್ಪಟ್ಟೆಯಾಕಾರದ ಬ್ರೆಡ್ .

ಕ್ಯಾಲೋರಿ - ಪ್ರತಿ ನಾನ್ 317 ಕ್ಯಾ.

12. ಬರ್ಫಿ

12. ಬರ್ಫಿ

ಸಾಮಾನ್ಯವಾಗಿ ದುಂಡನೆಯ ಆಕಾರದಲ್ಲಿರುವ ಭಾರತೀಯ ಸಿಹಿ ದಿನಿಸು ಈ ಬರ್ಫಿ. ಬರ್ಫಿಯನ್ನು ತಯಾರಿಸಲು ಸಕ್ಕರೆ, ಗಟ್ಟಿಹಾಲು ಮತ್ತು ಇತರೆ ಅಂಶಗಳನ್ನು ( ಒಣ ಹಣ್ಣುಗಳು ಮತ್ತು ಲಘುವಾದ ಮಸಾಲೆ ಪದಾರ್ಥಗಳೊಂದಿಗೆ ) ಬಳಸುವರು. ತೆಳುವಾದ ಬರ್ಫಿ ಮಿಶ್ರಣವನ್ನು ಅಗಲವಾಗಿ ಹರಡಿ ಅದು ಸ್ವಲ್ಪ ತಣಿದ ನಂತರ ಚಿಕ್ಕ-ವಜ್ರಾಕೃತಿಯ ಚೂರುಗಳಾಗಿ ಕತ್ತರಿಸುವರು. ಅಲಂಕಾರಕ್ಕೆ ಬೆಳ್ಳಿ ಹಾಳೆಗಳನ್ನು ಬಳಸುವರು.

ಕ್ಯಾಲೋರಿ - ಪ್ರತಿ ತುಂಡಿನಲ್ಲಿ ಸುಮಾರು 103 ಕ್ಯಾ .

13. ಹಲ್ವಾ

13. ಹಲ್ವಾ

ಹಲ್ವಾ ಎಂದರೆ ದಪ್ಪನೆಯ ಸಿಹಿ ತಿಂಡಿ. ಹಲ್ವಾಗಳಲ್ಲಿ ಅನೇಕ ತರಹಗಳಿವೆ. ಭಾರತದಲ್ಲಿ ಸೂರ್ಯಕಾಂತಿ ಬೀಜಗಳು , ವಿವಿಧ ರೀತಿಯ ನಟ್ಸ್, ಹುರುಳಿ , ಅವರೆ , ಕ್ಯಾರೆಟ್ , ಕುಂಬಳಕಾಯಿಗಳು , ಗೆಣಸುಗಳು ಮತ್ತು ಇತರ ಹಲವಾರು ಅಂಶಗಳನ್ನು ಬಳಸಿ ಹಲ್ವಾ ಮಾಡುವರು.

ಕ್ಯಾಲೋರಿ - ಸುಮಾರು 570 ಕ್ಯಾ .

14.ಜಿಲೇಬಿ

14.ಜಿಲೇಬಿ

ಜಿಲೇಬಿ ಭಾರತದ ಜನಪ್ರಿಯ ಸಿಹಿತಿನಿಸು. ಜಿಲೇಬಿ ಮಾಡಬೇಕೆಂದರೆ ಮೊಸರಿನಲ್ಲಿ ಕಲಸಿದ ಗೋದಿ ಹಿಟ್ಟನ್ನು ಚಕ್ರದ ಆಕಾರದಲ್ಲಿ ಎಣ್ಣೆಯಲ್ಲಿ ಕರಿದು ಸಕ್ಕರೆಪಾಕದಲ್ಲಿ ಹಾಕುವರು. ಜಿಲೇಬಿಗಳನ್ನು ಬಿಸಿಯಾಗಿ ಅಥವಾ ತಣ್ಣಗಾದ ಮೇಲೂ ತಿನ್ನಬಹುದು.

ಕ್ಯಾಲೋರಿ - ಸುಮಾರು 459 ಕ್ಯಾ .

15.ರಸ್ ಮಲಾಯ್

15.ರಸ್ ಮಲಾಯ್

ರಸ್ ಮಲಾಯ್ ಭಾರತದ ಜನಪ್ರಿಯ ಸಿಹಿತಿನಿಸು. ರಸ ಎಂದರೆ ರಸವತ್ತಾದ ಮತ್ತು ಮಲೈ ಕ್ರೀಮ್ ಅಂದರೆ ಕ್ರೀಮ್ .

ಕ್ಯಾಲೋರಿ - ಸುಮಾರು 250 ಕ್ಯಾ

16.ಛೋಲೆ ಬತುರೆ

16.ಛೋಲೆ ಬತುರೆ

ಛೋಲೆ ಬತುರೆ ಯನ್ನು ಕಡಲೆ ಪೂರಿ ಎಂತಲೂ ಕರೆಯುವರು. ಇದು ಕಡಲೆ ಮತ್ತು ಭತೂರ ಎಂದು ಕರೆಯಲ್ಪಡುವ ಕರಿದ ಬ್ರೆಡ್ ನ ಮಿಶ್ರಣವಾಗಿರುತ್ತದೆ.

17. ಬಟರ್ ಚಿಕನ್

17. ಬಟರ್ ಚಿಕನ್

ಬಟರ್ ಚಿಕನ್ ಮೂಲತಃ ಉತ್ತರ ಭಾರತೀಯ ಭಕ್ಷ್ಯ , ಬಹುತೇಕ ಎಲ್ಲಾ ಭಾರತೀಯ ರೆಸ್ಟೋರೆಂಟ್ ಮೆನುಗಳಲ್ಲಿ ಕಂಡುಬರುವ ಗ್ರೇವಿ ಐಟಂ ಇದು. ಚಿಕನ್, ಗೋಡಂಬಿ , ಬಾದಾಮಿ, ಟೊಮೆಟೊ ಮತ್ತು ಬೆಣ್ಣೆ ಗಳನ್ನು ಬಳಸಿ ತಯಾರಿಸುವ ಇದನ್ನು ಚಿಕನ್ ಮಖಾನಿ ಎಂತಲೂ ಕರೆಯಲಾಗುತ್ತದೆ.

ಕ್ಯಾಲೋರಿ - ಸುಮಾರು 490 ಕ್ಯಾ .

18.ಫಾಲೂಡ

18.ಫಾಲೂಡ

ಫಾಲೂಡ ಅನೇಕ ಅಂಶಗಳುಳ್ಳ ಒಂದು ತಂಪಾದ ಮತ್ತು ಸಿಹಿ ಪೇಯ . ಇದು ಹಾಲು , ನೀರು ಅಥವಾ ಐಸ್ ಕ್ರೀಮ್ ಜೊತೆಗೆ ಶ್ಯಾವಿಗೆ , ತುಳಸಿ ಬೀಜಗಳು , ಜೆಲ್ಲಿ ಚೂರುಗಳು ಮತ್ತು ಮರಗೆಣಸು ಮತ್ತು ಗುಲಾಬಿ ರಸ ಬೆರಸಿ ಇದನ್ನು ತಯಾರಿಸುವರು .

ಕ್ಯಾಲೋರಿ - ಒಂದು ದೊಡ್ಡ ಗಾಜಿನ ಲೋಟದಲ್ಲಿ ಸುಮಾರು 300 ಕ್ಯಾ.

19. ಪನ್ನೀರ್ ಭುರ್ಜಿ

19. ಪನ್ನೀರ್ ಭುರ್ಜಿ

ಪನ್ನೀರ್ ಭುರ್ಜಿ ಸಹ ಒಂದು ಒಳ್ಳೆಯ ಉಪಹಾರ ಭಕ್ಷ್ಯವಾಗಿದೆ . ಬಿಸಿ ಚಪಾತಿಗಳು ಅಥವಾ ಪರೋಟಗಳ ಜೊತೆ ಸೇವಿಸಿದಾಗ ಇದು ತ್ವರಿತ ಮತ್ತು ಸುಲಭ ಊಟವಾಗುತ್ತದೆ.

ಕ್ಯಾಲೋರಿ - ಒಂದು ಮಧ್ಯಮ ಬೌಲ್ ಸುಮಾರು 412 ಕ್ಯಾ.

20.ಪಾವ್ ಭಾಜಿ

20.ಪಾವ್ ಭಾಜಿ

ಪಾವ್ ಭಾಜಿ ಮರಾಠಿ ಪಾಕಪದ್ಧತಿಯ ಆಹಾರ . ಕೊತ್ತಂಬರಿಯಿಂದ ಅಲಂಕರಿಸಲ್ಪಟ್ಟ ( ಒಂದು ದಪ್ಪನೆಯ ಆಲೂಗೆಡ್ಡೆ ಆಧಾರಿತ ಕರಿ ) , ಕತ್ತರಿಸಿದ ಈರುಳ್ಳಿ ಮತ್ತು ನಿಂಬೆ ಮತ್ತು ಬೇಯಿಸಿದ ಪಾವ್ ಒಳಗೊಂಡಿದೆ . ಪಾವ್ ಗೆ ಸಾಮಾನ್ಯವಾಗಿ ಎಲ್ಲಾ ಕಡೆಗಳಲ್ಲಿ ಬೆಣ್ಣೆಹಚ್ಚಿರುತ್ತಾರೆ. ಇದರಿಂದ ಇದರ ಕ್ಯಾಲೋರಿ ಅಂಶ ಹೆಚ್ಚಾಗುವುದು.

ಕ್ಯಾಲೋರಿ - ಪ್ರತಿ ಪಾವ್ ಸುಮಾರು 600 ಕ್ಯಾ

Read more about: food ಆಹಾರ ಭಾರತ
English summary

20 High Calorie Indian Dishes To Avoid

If you are looking to adopt a heart healthy diet or just trying to watch your waistline, there are certain high calorie Indian foods that are best avoided. Let's have a look.
X
Desktop Bottom Promotion