For Quick Alerts
ALLOW NOTIFICATIONS  
For Daily Alerts

ಉತ್ತಮ ಆರೋಗ್ಯಕ್ಕಾಗಿ ಅತ್ಯುತ್ತಮ ಆಹಾರಗಳು

By Super
|

ಆರೋಗ್ಯವೇ ಭಾಗ್ಯ. ಆರೋಗ್ಯವಿದ್ದರೆ ಜಗತ್ತಿನ ಎಲ್ಲಾ ಐಶ್ವರ್ಯ, ಸೌಲಭ್ಯ, ಸುಖಗಳಿಗೆ ಅರ್ಥವಿದೆ. ಉತ್ತಮ ಆರೋಗ್ಯವಿಲ್ಲದೆ ಜೀವನದ ಹೆಚ್ಚಿನ ಸಂತೋಷಗಳನ್ನು ಅನುಭವಿಸಲು ಸಾಧ್ಯವಿಲ್ಲ. ಮಾತು ಬಲ್ಲವನಿಗೆ ರೋಗವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಎಂಬುದೊಂದು ಗಾದೆ. ಅಂದರೆ ಕಾಲಕಾಲಕ್ಕೆ ಆರೋಗ್ಯಕ್ಕೆ ಉತ್ತಮವಾದ ಆಹಾರವನ್ನು ಸೇವಿಸುವ ಹಾಗೂ ಶರೀರಕ್ಕೆ ಅಗತ್ಯವಾದ ವ್ಯಾಯಾಮ, ಆರಾಮ ಹಾಗೂ ಮಾನಸಿಕವಾಗಿ ಶಾಂತವಾಗಿರುವ ಮೂಲಕ ಉತ್ತಮ ಆರೋಗ್ಯವನ್ನು ಹೊಂದಬಹುದು.

ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ, ಚರ್ಮದ, ಕೂದಲ ಕಾಂತಿಯನ್ನು ಹೆಚ್ಚಿಸುವ, ದೇಹದಾರ್ಢ್ಯತೆಯನ್ನು ಬಲಪಡಿಸುವ ಹಲವು ಆಹಾರಗಳು ನಮಗೆ ಲಭ್ಯವಿದೆ. ಅವುಗಳಲ್ಲಿ ಅತ್ಯುತ್ತಮವಾದ ಹತ್ತು ಆಹಾರಗಳನ್ನು ಈ ಕೆಳಗೆ ನೀಡಲಾಗಿದೆ. ಈ ಆಹಾರಗಳ ಸದುಪಯೋಗದೊಂದಿಗೆ ಆರೋಗ್ಯದಲ್ಲಿ ವೃದ್ಧಿ ಖಂಡಿತಾ ಸಾಧ್ಯ.

ಆವಕಾಡೋ (ಬೆಣ್ಣೆ ಹಣ್ಣು ಅಥವಾ ಬಟರ್ ಫ್ರೂಟ್)

ಆವಕಾಡೋ (ಬೆಣ್ಣೆ ಹಣ್ಣು ಅಥವಾ ಬಟರ್ ಫ್ರೂಟ್)

ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅಗತ್ಯವಿರುವ ಹೆಚ್ಚಿನ ಪೋಶಕಾಂಶಗಳನ್ನು (ಮುಫಾ - Mono Unsaturated Fatty Acids (MUFAs) ಹೊಂದಿರುವ ಹಣ್ಣುಗಳಲ್ಲಿ ಬೆಣ್ಣೆ ಹಣ್ಣು ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಈ ಹಣ್ಣಿನ ಸೇವನೆಯಿಂದ ಮೈಕಾಂತಿ, ಕೂದಲ ಆರೋಗ್ಯ ಹಾಗೂ ಹೃದಯಕ್ಕೂ ಒಳ್ಳೆಯದು. ಈ ಹಣ್ಣಿನ ತಿರುಳಿನಲ್ಲಿ ಸುಲಭವಾಗಿ ಜೀರ್ಣವಾಗಬಲ್ಲ ನಾರು, ವಿಟಮಿನ್ ಇ ಹಾಗೂ ಪೊಟಾಸಿಯಂ ಹೇರಳವಾಗಿರುವುದರಿಂದ ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿದೆ.

ಸೇವನೆಯ ಬಗೆ: ಈ ಹಣ್ಣಿನ ತಿರುಳನ್ನು ಊಟದ ಜೊತೆಗೆ ಸಾಲಾಡ್ ನಂತೆ ಸೇವಿಸಬಹುದು. ಬೆಳಗ್ಗಿನ ಉಪಾಹಾರಕ್ಕೆ ಬ್ರೆಡ್ ಮೇಲೆ ಸವರಲು ಮಾಯೋನೈಸ್ ಅಥವಾ ಚೀಸ್ (ಅಥವಾ ಬೆಣ್ಣೆ) ಯ ಬದಲಿಗೆ ಬೆಣ್ಣೆಹಣ್ಣಿನ ತಿರುಳನ್ನು ಸವರಿ ಬಳಸಬಹುದು.

ಬ್ರೊಕೋಲಿ (ಹಸಿರು ಹೂಕೋಸು)

ಬ್ರೊಕೋಲಿ (ಹಸಿರು ಹೂಕೋಸು)

ನೋಡಲು ಹಸಿರಾದ ಹೂಕೋಸಿನಂತಿರುವ ಬ್ರೋಕೋಲಿ ಜೀವಕ್ಕೆ ಅಪಾಯಕಾರಿಯಾದ ಕೆಲವು ಖಾಯಿಲೆಗಳಿಗೆ ನೈಸರ್ಗಿಕವಾಗಿ ಫಲಕಾರಿಯಾಗಿರುವ ಅಂಶಗಳನ್ನು ಹೊಂದಿದೆ. ಬ್ರೊಕೋಲಿಯ ನಿಯಮಿತ ಸೇವನೆ ಹೃದಯ ಸಂಬಂಧಿ ಖಾಯಿಲೆಗಳನ್ನು ಹಾಗೂ ಕ್ಯಾನ್ಸರ್ ರೋಗವನ್ನೂ ತಡೆಗಟ್ಟಬಹುದಾಗಿದೆ.

ಸೇವನೆಯ ಬಗೆ: ಬ್ರೊಕೋಲಿಯನ್ನು ಹಸಿಯಾಗಿ ಸೇವಿಸಲು ಸಾಧ್ಯವಿಲ್ಲದಿರುವುದರಿಂದ ಸಾರಿನೊಂದಿಗೆ ಬೇಯಿಸಿ ಸೇವಿಸಬಹುದು. ಗೋಬಿ ಫ್ರೈ ತರಹ ಕರಿದು ಸಹಾ ಸೇವಿಸಬಹುದು. ಆದರೆ ಕರಿಯುವ ಎಣ್ಣೆಯಲ್ಲಿ ಕೊಲೆಸ್ಟ್ರಾಲ್ ಇಲ್ಲದಿರುವುದನ್ನು ಮಾತ್ರ ಖಾತರಿಪಡಿಸಿಕೊಳ್ಳಬೇಕು.

ಒಣಫಲಗಳು

ಒಣಫಲಗಳು

ಪ್ರತಿದಿನ ಒಂದು ಮುಷ್ಟಿಯಷ್ಟು ಒಣಫಲಗಳನ್ನು ಸೇವಿಸುದರಿಂದ ಆರೋಗ್ಯ ವೃದ್ಧಿಯಾಗಿರುವುದನ್ನು ಸಂಶೋಧನೆಗಳು ಧೃಢಪಡಿಸಿವೆ. ಇದರಿಂದ ಮಧುಮೇಹ ಹಾಗೂ ಹೃದಯಸಂಬಂಧಿ ಕಾಯಿಲೆಗಳು ಬರುವ ಸಂಭವ ಕಡಿಮೆಯಾಗುತ್ತದೆ. ಈ ಒಣಫಲಗಳಲ್ಲಿ ಹೆಚ್ಚಿನ ಮಟ್ಟಿನ ಆಂಟಿಒಕ್ಸಿಡೆಂಟುಗಳೂ ಒಮೆಗಾ3ಎಸ್ ಹಾಗೂ ಅಗತ್ಯವಾದ ಎಣ್ಣೆಗಳು ಒಣಫಲಗಳಲ್ಲಿ ಹೇರಳವಾಗಿವೆ. ಬಾದಾಮಿ, ಶೇಂಗಾ, ಒಣ ಆಪ್ರಿಕೋಟ್, ಪಿಸ್ತಾ, ಒಣ ದಾಳಿಂಬೆ, ಗೇರುಬೀಜ, ಒಣ ಖರ್ಜೂರ, ಒಣ ಕುಂಬಳಬೀಜ, ಕೊಬ್ಬರಿ, ಒಣದ್ರಾಕ್ಷಿ, ಎಳ್ಳು, ಒಣ ಅಂಜೂರ, ಒಣ ಸೂರ್ಯಕಾಂತಿ ಬೀಜ, ಒಣ ನೆಲ್ಲಿಕಾಯಿ, ಅಕ್ರೋಟು, ಒಣ ಖರಬೂಜದ ಬೀಜಗಳು ಇತ್ಯಾದಿಗಳು ಆರೋಗ್ಯಕ್ಕೆ ಉತ್ತಮವಾಗಿದೆ.

ಸೇವನೆಯ ಬಗೆ: ಲಭ್ಯವಿರುವ ಒಣಫಲಗಳನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿಕೊಂಡು ಬೆಳಗ್ಗಿನ ಉಪಾಹಾರದೊಂದಿಗೆ ಸೇವಿಸಬಹುದು. ಎರಡು ಆಹಾರಗಳ ನಡುವೆ ಸ್ವಲ್ಪ ಪ್ರಮಾಣದಲ್ಲಿ ಒಣಫಲಗಳನ್ನು ಸೇವಿಸುವುದೂ ಶ್ರೇಯಸ್ಕರ. ವಿಶೇಷ ಸಂದರ್ಭಗಳಲ್ಲಿ ತಯಾರಿಸಲಾಗುವ ಸಿಹಿ ಪದಾರ್ಥಗಳಲ್ಲಿ ಒಣಫಲಗಳನ್ನು ಸೇರಿಸುವುದೂ ಉತ್ತಮವಾಗಿದೆ.

ಟೋಫು (ಸೋಯಾ ಅವರೆಯ ಹಾಲಿನ ಗಿಣ್ಣು)

ಟೋಫು (ಸೋಯಾ ಅವರೆಯ ಹಾಲಿನ ಗಿಣ್ಣು)

ಸೋಯಾ ಅವರೆಯ ಹಾಲಿನಿಂದ ತಯಾರಾಗುವ ಟೋಫುವಿನಲ್ಲಿ ಹೇರಳವಾದ ಸ್ಯಾಚುರೇಟೆಡ್ ಕೊಬ್ಬು ಇರುವುದದಿಂದ ದೇಹಕ್ಕೆ ಉತ್ತಮವಾದ ಆಹಾರವಾಗಿದೆ. ಇದರಲ್ಲಿರುವ ಪಾಲಿ ಅನ್ ಸ್ಯಾಚುರೇಟೆಡ್ ಕೊಬ್ಬು, ಹೆಚ್ಚಿನ ನಾರು ಹಾಗೂ ಉಪಯುಕ್ತ ವಿಟಮಿನ್ ಗಳು ಹಾಗೂ ಐಸೋಫ್ಲೇವೋನ್ ಗಳು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತವೆ. ಸ್ತನ ಕ್ಯಾನ್ಸರ್ ತಡೆಗಟ್ಟುವಲ್ಲಿಯೂ ಟೋಫು ಉಪಯುಕ್ತವಾಗಿದೆ.

ಸೇವನೆಯ ಬಗೆ: ಟೋಫು ಈಗ ಸಂಸ್ಕರಿತ ರೂಪದಲ್ಲಿ ಸೂಪರ್ ಮಾರ್ಕೆಟುಗಳಲ್ಲಿ ಪ್ಯಾಕೆಟ್ ನಲ್ಲಿ ದೊರಕುತ್ತಿದೆ. ಚಿಕ್ಕ ಇಟ್ಟಿಗೆಯಾಕಾರದಲ್ಲಿರುವ ಟೋಫು ಅನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿ ಸಲಾಡ್ ನಲ್ಲಿಯೂ ಸಾರಿನಲ್ಲಿಯೂ ಉಪಯೋಗಿಸಬಹುದು.

English summary

Superfoods For A Healthy Life

Not all foods were created equal -- some are so packed with vitamins, minerals, antioxidants, essential fatty acids and other beneficial substances that they've been deemed "superfoods." Superfoods have incredible health benefits, packing a powerful nutritional punch that helps protect against cancer and heart disease, lower cholesterol, protect the organs from toxins and improve digestive health. Some nutritionists even say superfoods can help you live longer.
X
Desktop Bottom Promotion