For Quick Alerts
ALLOW NOTIFICATIONS  
For Daily Alerts

ಮಳೆಗಾಲದಲ್ಲಿ ತಿನ್ನುವ ಮುನ್ನ ಗಮನಿಸಬೇಕಾದ ಅಂಶಗಳು

By Super
|

ಮಳೆ ಹೇಗೆ ಸಂತೋಷವನ್ನು ಕೊಡುತ್ತದೋ ಹಾಗೆಯೇ ವೈರಲ್ ಫೀವರ್,ಅಂಟು ರೋಗಗಳು, ಅಲರ್ಜಿ ಮತ್ತು ಇತರ ಮಳೆಗಾಲದಲ್ಲಿ ಕಾಡುವ ಸಮಸ್ಯೆಗಳು ಹೆಚ್ಚು ಕಿರಿಕಿರಿಯನ್ನು ತರುವುದು.

ಈ ಕಾಲದಲ್ಲಿ ಬ್ಯಾಕ್ಟೀರಿಯ ಮತ್ತು ಸೂಕ್ಷ್ಮ ಜೀವಾಣುಗಳ ಚಟುವಟಿಕೆ ಅಧಿಕ. ಅವುಗಳನ್ನು ದೂರವಿಡದಿದ್ದರೆ ಅನಾರೋಗ್ಯ ಉಂಟಾಗುವುದು. ಮಳೆಗಾಲದ ಖುಷಿ ಅನುಭವಿಸಲು ಇಲ್ಲಿ ಕೆಲವು ಟಿಪ್ಸ್ ನೀಡಲಾಗಿದೆ. ಇವುಗಳನ್ನು ಅನುಸರಿಸಿದಲ್ಲಿ ನೀವು ಬರುವ ರೋಗಗಳನ್ನು ತಡೆಗಟ್ಟಬಹುದು ಮತ್ತು ಇವುಗಳು ಅನುಸರಿಸಲು ಸುಲಭವಾದ ಟಿಪ್ಸ್ ಕೂಡ ಹೌದು.

ಆಹಾರದ ಸ್ವಚ್ಛತೆ

ಆಹಾರದ ಸ್ವಚ್ಛತೆ

*ಹಣ್ಣು ಮತ್ತು ತರಕಾರಿಗಳನ್ನು ಅದರಲ್ಲೂ ಸೊಪ್ಪುಗಳನ್ನು ಉಪಯೋಗಿಸುವಾಗ ಹೆಚ್ಚು ಗಮನ ಕೊಡಿ ಅವುಗಳ ಮೇಲೆ ದೂಳು,ಹುಳು ಇರುತ್ತವೆ.ಈ ಬ್ಯಾಕ್ಟೀರಿಯ ದಿಂದ ಮುಕ್ತಿ ನೀಡಲು ಅವುಗಳನ್ನು ನೀರಿನಲ್ಲಿ ತೊಳೆಯಿರಿ.ಉಪ್ಪು ನೀರಿನಲ್ಲಿ ಅವುಗಳನ್ನು ನೆನೆಸಿ ಹತ್ತು ನಿಮಿಷ ಇಡುವುದರಿಂದ ಅವುಗಳಲ್ಲಿರುವ ಕೀಟಾನುಗಳನ್ನು ಹೋಗಲಾಡಿಸಬಹುದು.

ಚೆನ್ನಾಗಿ ಬೇಯಿಸಿದ ಪದಾರ್ಥಉಪಯೋಗಿಸಿ

ಚೆನ್ನಾಗಿ ಬೇಯಿಸಿದ ಪದಾರ್ಥಉಪಯೋಗಿಸಿ

*ಮಳೆಗಾಲದಲ್ಲಿ ಚೆನ್ನಾಗಿ ಬೇಯಿಸಿದ ಆಹಾರವನ್ನು ಉಪಯೋಗಿಸಿ.ಹಸಿ ಮತ್ತು ಅರೆಬೆಂದ ಪದಾರ್ಥಗಳನ್ನು ತಿಂದರೆ ಸಮಸ್ಯೆಗಳು ಬರುವುದು ಖಂಡಿತ.

 ಬಿಸಿ ಬಿಸಿ ಬೋಂಡಾ ಬೇಕೆ? ಆರೋಗ್ಯ ಬೇಕೆ?

ಬಿಸಿ ಬಿಸಿ ಬೋಂಡಾ ಬೇಕೆ? ಆರೋಗ್ಯ ಬೇಕೆ?

*ಬಿಸಿಬಿಸಿ ಬೋಂಡಗಳನ್ನು ತಿನ್ನುವ ಬದಲು ತಾಜಾ ಹಣ್ಣುಗಳನ್ನು ಮತ್ತು ತರಕಾರಿಗಳನ್ನು ತಿಂದು ನೋಡಿ.

 ಫುಡ್ ಮಾಡರೇಶನ್

ಫುಡ್ ಮಾಡರೇಶನ್

*ಮಾಡರೇಶನ್ ಒಂದು ಕೀಲಿ,ಎಲಾ ಸಮಯದಲ್ಲೂ ಅದರಲ್ಲೂ ಮಳೆಗಾಲದಲ್ಲಿ ದೇಹ ಆಹಾರವನ್ನು ಅಷ್ಟು ಸುಲಭವಾಗಿ ಜೀರ್ಣಿಸಿಕೊಳ್ಳುವುದಿಲ್ಲ.ಜೀರ್ಣಕ್ರಿಯೆ ಹೆಚ್ಚಿಸಲು ಶುಂಠಿ, ಬೆಳ್ಳುಳ್ಳಿ, ಕಾಳುಮೆಣಸು, ಕೊತ್ತುಂಬರಿ ಮತ್ತು ಅರಿಶಿಣಗಳನ್ನು ಹೆಚ್ಚು ಬಳಸಿ.

ಸೂಪ್

ಸೂಪ್

*ನಾನ್ ವೆಜ್ ಪ್ರಿಯರಾದರೆ ಹೆಚ್ಚು ಮಾಂಸಾಹಾರ ತಿನ್ನುವ ಬದಲು ಲೈಟ್ ಆಗಿರುವ ಸೂಪ್ ಗಳನ್ನು ಬಳಸಿ.

ಸ್ಟ್ರೀಟ್ ಫುಡ್ ಗೆ ನೋ

ಸ್ಟ್ರೀಟ್ ಫುಡ್ ಗೆ ನೋ

*ಮಳೆಗಾಲದಲ್ಲಿ ಸ್ಟ್ರೀಟ್ ಫುಡ್ ನಿರಾಕರಿಸುವುದು ಕಷ್ಟವಾದರೂ ಕೂಡ ಅದರಲ್ಲಿ ವಿವಿಧ ರೀತಿಯ ರೋಗಗಳನ್ನು ಉಂಟುಮಾಡುವ ಸೂಕ್ಷ್ಮ ಜೀವಿಗಳಿರುವುದರಿಂದ ಅವುಗಳಿಂದ ಆದಷ್ಟು ದೂರವಿರುವ ಪ್ರಯತ್ನ ಮಾಡಿ.

ತಂಗಳು ಆಹಾರ ಬೇಡ

ತಂಗಳು ಆಹಾರ ಬೇಡ

*ತಂಗಳು ಅಥವಾ ನಿನ್ನೆ ಉಳಿದ ಆಹಾರಗಳನ್ನು ತಿನ್ನುವುದನ್ನು ತಪ್ಪಿಸಿ. .

ಶುಚಿತ್ವಕ್ಕೆ ಆದ್ಯತೆ

ಶುಚಿತ್ವಕ್ಕೆ ಆದ್ಯತೆ

*ತರಕಾರಿ ಕತ್ತರಿಸಲು ಬಳಸುವ ಮನೆಗಳನ್ನು ಉಪಯೋಗಿಸುವ ಮೊದಲು ಸರಿಯಾಗಿ ತೊಳೆದುಕೊಳ್ಳಿ. ಏನನ್ನಾದರೂ ತಿನ್ನುವ ಮೊದಲು ಸರಿಯಾಗಿ ಕೈ ತೊಳೆದುಕೊಳ್ಳಿ. ಟಾಯ್ಲೆಟ್ ಗೆ ಹೋದ ನಂತರ ಕೂಡ ಕೈಯನ್ನು ಸೋಪು ಹಾಕಿ ತೊಳೆಯಿರಿ. ಶುಚಿತ್ವ ಕಾಪಾಡಿಕೊಳ್ಳಿ.

ಕುದಿಸಿದ ನೀರು

ಕುದಿಸಿದ ನೀರು

*ಕುದಿಸಿ ಆರಿಸಿದ ನೀರನ್ನೇ ಕುಡಿಯಿರಿ ಮತ್ತು ಸೂಕ್ಷ್ಮಾಣುಗಳಿಂದ ದೂರವಿರಲು ಶುಂಠಿ ಟೀ, ಲೆಮನ್ ಟೀ ಇವುಗಳನ್ನು ಕುಡಿಯಿರಿ.ನೀವು ಟೀ ಕುಡಿಯದವರಾದರೆ ಬಿಸಿಬಿಸಿ ತರಕಾರಿ ಸೂಪ್ ಕುಡಿಯಿರಿ.

ಸೊಳ್ಳೆ, ನೊಣ ಬರದಂತೆ ತಡೆಯಿರಿ

ಸೊಳ್ಳೆ, ನೊಣ ಬರದಂತೆ ತಡೆಯಿರಿ

*ಸೊಳ್ಳೆ,ನೊಣ,ಜಿರಲೆಗಳಿಂದ ದೂರವಿರಲು ಕೀಟಾಣು ನಿವಾರಕಗಳನ್ನು ಬಳಸಿ.ಸೊಳ್ಳೆಗಳ ಹಾವಳಿಗಳಿಂದ ತಪ್ಪಿಸಿಕೊಳ್ಳಲು ಬೇವಿನ ಕರ್ಪೂರ ಮತ್ತು ಲವಂಗಗಳನ್ನು ಬಳಸಿ.

ಆರೋಗ್ಯಯುತ ಆಗಿರಲು ಆರೋಗ್ಯಕರ ಆಹಾರವನ್ನು ಈ ಮಳೆಗಾಲದಲ್ಲಿ ಸೇವಿಸಿ.

English summary

10 Health Tips For Mansoon

While the showers of first rain may bring joy, it can also give rise to various health problems like viral fever, leptospirosis, allergies and other rain problems.
 
X
Desktop Bottom Promotion