For Quick Alerts
ALLOW NOTIFICATIONS  
For Daily Alerts

ಕರುಳಿನ ಕಲ್ಮಶಗಳನ್ನು ಹೊರಹಾಕುವ ಟಾಪ್ 10 ಫುಡ್ಸ್

|

ಕರುಳು ನೀರು, ಸೋಡಿಯಂ ಹಾಗೂ ವಿಟಮಿನ್ ಗಳನ್ನು ಹೀರಿಕೊಂಡು ಜೀರ್ಣಕ್ರಿಯೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಜೀರ್ಣಕ್ರಿಯೆ ಆರೋಗ್ಯಕರವಾಗಿ ನಡೆಯಲು ಕರುಳು ತನ್ನ ಕೆಲಸವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಿದರೆ ಮಾತ್ರ ಸಾಧ್ಯ. ಕರುಳಿನಲ್ಲಿ ರಾಸಾಯನಿಕಗಳು ಸೇರಿಕೊಂಡರೆ ಕರುಳಿನಲ್ಲಿ ಸಮಸ್ಯೆ ಕಂಡು ಬಂದು ಆರೋಗ್ಯ ಹಾಳಾಗುವುದು.

ಆದ್ದರಿಂದ ಕರುಳನ್ನು ಕ್ಲೆನ್ಸ್ ಮಾಡುವ ಆಹಾರಗಳನ್ನು ತಿನ್ನಬೇಕು. ಕರುಳು ಕ್ಲೆನ್ಸ್ ಆದರೆ ಹೊಟ್ಟೆ ಉಬ್ಬುವ ಸಮಸ್ಯೆ, ತೂಕ ಹೆಚ್ಚಾಗುವ ಸಮಸ್ಯೆ ಕಂಡು ಬರುವುದಿಲ್ಲ. ಕರುಳು ತನ್ನ ಕೆಲಸ ನಿರ್ವಹಿಸಿಲು ಅಸಮರ್ಥವಾದಾಗ ಮಲಬದ್ಧತೆ, ಅಜೀರ್ಣದಂತಹ ಸಮಸ್ಯೆ ಕಂಡು ಬರುವುದು.

ನಾರು ಪದಾರ್ಥಗಳಿಗೆ ಕರುಳಿನಲ್ಲಿರುವ ಬೇಡದ ರಾಸಾಯನಿಕಗಳನ್ನು ಹೊರಹಾಕುವ ಸಾಮರ್ಥ್ಯವಿದೆ. ಅದರಲ್ಲೂ ಈ ಕೆಳಗಿನ ಆಹಾರಗಳು ಕರುಳನ್ನು ಕ್ಲೆನ್ಸ್ ಮಾಡುವಲ್ಲಿ ಸಹಕಾರಿಯಾಗಿದೆ.

ಮೊಳಕೆ ಬಂದ ಬ್ರೊಕೋಲಿ

ಮೊಳಕೆ ಬಂದ ಬ್ರೊಕೋಲಿ

ಮೊಳಕೆ ಬಂದ ಬ್ರೊಕೋಲಿಯಲ್ಲಿ antioxidants ಅಧಿಕವಿದ್ದು, ಕರುಳನ್ನು ಶುದ್ಧವಾಗಿಟ್ಟು, ಜೀರ್ಣಕ್ರಿಯೆ ಸರಿಯಾಗಿ ನಡೆಯುವಂತೆ ಮಾಡುತ್ತದೆ. ಜೀರ್ಣಕ್ರಿಯೆಯಲ್ಲಿ ತೊಂದರೆ ಇರುವವರು ಇದನ್ನು ತಿಂದು ನೋಡಿ ಉತ್ತಮ ಪ್ರಯೋಜನ ದೊರೆಯುವುದು.

ಬೆಳ್ಳುಳ್ಳಿ ಎಸಳು

ಬೆಳ್ಳುಳ್ಳಿ ಎಸಳು

ಈ ಬೆಳ್ಳುಳ್ಳಿ ಎಲ್ಲಾ ರೀತಿಯಲ್ಲೂ ಆರೋಗ್ಯಕರ. ಕೊಬ್ಬನ್ನು ಕರಗಿಸುತ್ತದೆ, ಹೃದಯಕ್ಕೆ ಒಳ್ಳೆಯದು, ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿಡುತ್ತದೆ ಹಾಗೂ ಕರುಳನ್ನೂ ಕ್ಲೆನ್ಸ್ ಮಾಡುತ್ತದೆ.

 ಗ್ರೀನ್ ಟೀ

ಗ್ರೀನ್ ಟೀ

ಗ್ರೀನ್ ಟೀ ದೇಹದ ತೂಕವನ್ನು ಕಡಿಮೆ ಮಾಡುವುದು ಮಾತ್ರವಲ್ಲ ಲಿವರ್ ಹಾಗೂ ಕರುಳನ್ನು ಕ್ಲೆನ್ಸ್ ಮಾಡಿ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

 ದವಸಧಾನ್ಯಗಳು

ದವಸಧಾನ್ಯಗಳು

ದವಸಧಾನ್ಯಗಳಲ್ಲಿ ನಾರಿನಂಶ ಇರುವುದರಿಂದ ಕರುಳಿನ ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲೂ ಧಾನ್ಯಗಳನ್ನು ಮೊಳಕೆ ಬರಿಸಿ ತಿಂದರೆ ಮತ್ತಷ್ಟು ಒಳ್ಳೆಯದು.

ಗೋಧಿ, ರಾಗಿ

ಗೋಧಿ, ರಾಗಿ

ಗೋಧಿ, ರಾಗಿ ಇವುಗಳಲ್ಲಿ ನಾರಿನಂಶ ಹಾಗೂ ವಿಟಮಿನ್ಸ್ ಅಧಿಕವಿರುತ್ತದೆ. ಕರುಳು ದೇಹಕ್ಕೆ ಅಗ್ಯತವಾದ ಪೋಷಕಾಂಶಗಳನ್ನು ಹೀರಿಕೊಳ್ಳುತ್ತದೆ, ಕರುಳೂ ಕ್ಲೆನ್ಸ್ ಆಗುತ್ತದೆ.

ಬೆಣ್ಣೆ ಹಣ್ಣು

ಬೆಣ್ಣೆ ಹಣ್ಣು

ಬೆಣ್ಣೆ ಹಣ್ಣಿನಲ್ಲಿ ಒಮೆಗಾ 3 ಕೊಬ್ಬಿನಂಶವಿರುವುದರಿಂದ ಕರುಳಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಒಮೆಗಾ 3 ದೇಹದಲ್ಲಿರುವ ಬೇಡದ ಕಲ್ಮಶಗಳನ್ನು ಹೊರಹಾಕುತ್ತದೆ.

ಮೀನು

ಮೀನು

ಮೀನಿನಲ್ಲೂ ಒಮೆಗಾ 3 ಕೊಬ್ಬಿನಂಶವಿದೆ. ಮೀನು ಹಾಗೂ ಫಿಶ್ ಆಯಿಲ್ ತಿಂದರೆ ಆರೋಗ್ಯಕರ ಗುಣಗಳನ್ನು ಪಡೆಯಬಹುದು.

ಹಣ್ಣಿನ ಜ್ಯೂಸ್

ಹಣ್ಣಿನ ಜ್ಯೂಸ್

0% ಆರೋಗ್ಯಕರ ಗುಣವನ್ನು ಹೊಂದಿರುವ ತಂಪು ಪಾನೀಯಾಗಳನ್ನು ಕುಡಿಯುವ ಬದಲು, ದೇಹಕ್ಕೆ ಗುಣವಿರುವ ಹಣ್ಣಿನ ಜ್ಯೂಸ್ ಗಳನ್ನು ಕುಡಿಯುವುದು ಒಳ್ಳೆಯದು.

 ಸೊಪ್ಪು

ಸೊಪ್ಪು

ಪಾಲಾಕ್ , ಮೆಂತೆ ಹೀಗೆ ಹಸಿರು ಸೊಪ್ಪುಗಳು ಕೂಡ ಕರುಳನ್ನು ಶುದ್ಧ ಮಾಡುವಲ್ಲಿ ಸಹಕಾರಿಯಾಗಿದೆ. ಸೊಪ್ಪು ಅಧಿಕ ತಿನ್ನುವವರಿಗೆ ಪೋಷಕಾಂಶದ ಕೊರತೆ ಉಂಟಾಗುವುದಿಲ್ಲ.

ನಿಂಬೆ ಹಣ್ಣು

ನಿಂಬೆ ಹಣ್ಣು

ಪ್ರತೀದಿನ ಒಂದು ಲೋಟ ನಿಂಬೆ ಪಾನೀಯಾ ಕುಡಿಯಿರಿ, ಅನೇಕ ಆರೋಗ್ಯಕರ ಗುಣಗಳನ್ನು ಪಡೆಯಬಹುದು. ನಿಂಬೆ ಜೀರ್ಣಕ್ರಿಯೆ ಸರಾಗವಾಗಿ ನಡೆಯುವಂತೆ ಮಾಡುವುದರಿಂದ ಅನೇಕ ಕಾಯಿಲೆಗಳನ್ನು ನಮ್ಮಿಂದ ದೂರವಿಡುತ್ತದೆ.

English summary

10 Foods To Cleanse Colon | Tips For Health | ಕರುಳಿನ ಆರೋಗ್ಯಕ್ಕೆ ಟಾಪ್ 10 ಫುಡ್ಸ್ | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Once you cleanse the colon, you will not feel bloated and this will help you manage your body weight. As the toxins are flushed out from the system, you will feel light and get relief from digestive discomforts.
X
Desktop Bottom Promotion