For Quick Alerts
ALLOW NOTIFICATIONS  
For Daily Alerts

ಕ್ಯಾಲ್ಸಿಯಂ ಆಹಾರ ತಿನ್ನುವಾಗ ಎಚ್ಚರ!

|
Why We should Not Eat Too much Calcium
ಅತಿಯಾದರೆ ಅಮೃತವೂ ವಿಷ. ದೇಹದ ಆರೋಗ್ಯಕ್ಕೆ ಪೋಷಕಾಂಶಗಳು, ವಿಟಮಿನ್ ಗಳು, ಖನಿಜಾಂಶಗಳು ಮತ್ತು ಪ್ರೊಟೀನ್ ಅವಶ್ಯಕ, ಆದರೆ ಅವುಗಳನ್ನು ಅತಿಯಾಗಿ ಸೇವಿಸಿದರೆ ಅಡ್ಡ ಪರಿಣಾಮ ಉಂಟಾಗುತ್ತದೆ. ಇವತ್ತು ನಾವು ಎಷ್ಟು ಪ್ರಮಾಣದ ಕ್ಯಾಲ್ಸಿಯಂ ಅವಶ್ಯಕ ಹಾಗೂ ಕ್ಯಾಲ್ಸಿಯಂ ಅತಿಯಾಗಿ ಸೇವಿಸಿದರೆ ಉಂಟಾಗುವ ಅಡ್ಡ ಪರಿಣಾಮವೇನು ಎಂದು ತಿಳಿಯೋಣ:

ಪುರುಷರಿಗಿಂತ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಕ್ಯಾಲ್ಸಿಯಂ ಸ್ವಲ್ಪ ಅಧಿಕ ಪ್ರಮಾಣದಲ್ಲಿ ಬೇಕಾಗುತ್ತದೆ. ಮಕ್ಕಳಿಗೆಯ ಬೆಳವಣಿಗೆ ಸಮಯದಲ್ಲಿ ಮತ್ತು ಮಹಿಳೆಯರಿಗೆ ಗರ್ಭಾವಸ್ಥೆಯ ಸಮಯದಲ್ಲಿ, ಹೆರಿಗೆಯ ನಂತರ ಮತ್ತು 40 ವರ್ಷದ ನಂತರ ಸ್ವಲ್ಪ ಅಧಿಕ ಕ್ಯಾಲ್ಸಿಯಂ ಬೇಕಾಗುತ್ತದೆ.

ಸಾಮಾನ್ಯವಾಗಿ ಪುರುಷರಿಗೆ ದಿನದಲ್ಲಿ 1000-1200 ಮಿಗ್ರಾಂ ಬೇಕಾದರೆ ಮಹಿಳೆಯರಿಗೆ 1200-1500ಮಿಗ್ರಾಂ ಮತ್ತು ಮಕ್ಕಳಿಗೆ 1300ಮಿಗ್ರಾಂ ಕ್ಯಾಲ್ಸಿಯಂ ಬೇಕಾಗುತ್ತದೆ. ಹೆಚ್ಚೆಂದರೆ 2500ಮಿಗ್ರಾಂ ಕ್ಯಾಲ್ಸಿಯಂ ಬೇಕಾಗುತ್ತದೆ. ಇದಕ್ಕಿಂತ ಹೆಚ್ಚಿನ ಕ್ಯಾಲ್ಸಿಯಂ ಸೇವಿಸಿದರೆ ಈ ಕೆಳಗಿನ ಅಡ್ಡ ಪರಿಣಾಮ ಉಂಟಾಗುತ್ತದೆ.

1. ಅಧಿಕ ಕ್ಯಾಲ್ಸಿಯಂ ತಿಂದರೆ ಹೊಟ್ಟೆಯಲ್ಲಿ ತಳಮಳ, ವಾಂತಿ ಕಂಡು ಬರುತ್ತದೆ. ಕೆಲವರಿಗೆ ಮಿತಿಮೀರಿ ತೂಕಡಿಕೆ ಉಂಟಾಗುತ್ತದೆ. ತೂಕಡಿಕೆಯ ಸಮಸ್ಯೆ ಇದ್ದರೆ ವೈದ್ಯರನ್ನು ಕಂಡು ಕ್ಯಾಲ್ಸಿಯಂ ಪ್ರಮಾಣ ತಿಳಿದುಕೊಳ್ಳುವುದು ಒಳ್ಳೆಯದು.

2. ಕ್ಯಾನ್ಸರ್ ರೋಗಿಗಳು ಕ್ಯಾಲ್ಸಿಯಂ ಅಧಿಕವಿರುವ ಆಹಾರವನ್ನು ತಿನ್ನಲೇಬಾರದು. ರಕ್ತಸಂಚಾರಕ್ಕೂ ಅಡಚಣೆಯನ್ನು ಉಂಟು ಮಾಡುತ್ತದೆ. ಆದ್ದರಿಂದ ಅಧಿಕ ಕ್ಯಾಲ್ಸಿಯಂ ಇರುವ ಅಹಾರವನ್ನು ಹೆಚ್ಚಾಗಿ ತೆಗೆದುಕೊಳ್ಳಬಾರದು. ಹಾಲನ್ನು ಎರಡು ಲೋಟ ಕುಡಿಯುವುದು ಒಳ್ಳೆಯದು. ಅದೇ ಅಧಿಕ ಕುಡಿದರೆ ಕ್ಯಾಲ್ಸಿಯಂ ಹೆಚ್ಚಾಗಿ ಅಡ್ಡಪರಿಣಾಮ ಉಂಟಾಗುತ್ತದೆ.

3. ಓಸ್ಟೀಯೊಪ್ರೊಸಿಸ್ (Osteoporosis) ಎಂಬ ಅಂಶ ವಯಸ್ಸಾಗುತ್ತಿದ್ದಂತೆ ಮೂಳೆಯನ್ನು ಸವೆಯುವಂತೆ ಮಾಡುತ್ತದೆ. ಮೂಳೆಯನ್ನು ಆರೋಗ್ಯಕರವಾಗಿಡಲು ಕ್ಯಾಲ್ಸಿಯಂ ಅವಶ್ಯಕ. ಆದರೆ ತುಂಬಾ ಕ್ಯಾಲ್ಸಿಯಂ ತಿಂದರೂ ಮೂಳೆಗೆ ಒಳ್ಳೆಯದಲ್ಲ. ಅಧಿಕ ಕ್ಯಾಲ್ಸಿಯಂ ದೇಹದ್ದಲ್ಲಿ ಇದ್ದರೆ ಬೇಗನೆ ವಯಸ್ಸಾದಂತೆ ಕಾಣುವುದು.

4. ಕ್ಯಾಲ್ಸಿಯಂ ಅಧಿಕ ತಿಂದರೆ ಹೊಟ್ಟೆ ಕೆಡುತ್ತದೆ, ಇದರಿಂದ ಭೇದಿ ಅಥವಾ ಮಲಬದ್ಧತೆ ಮೂತ್ರವಿಸರ್ಜನೆಯಲ್ಲಿ ತೊಂದರೆ ಕಂಡುಬರುವುದು. ಅಲ್ಲದೆ ದೇಹದಲ್ಲಿ ನೀರಿನಂಶ ಕಡಿಮೆಯಾಗುವುದು.

5. ಅಧಿಕ ಕ್ಯಾಲ್ಸಿಯಂ ದೇಹದಲ್ಲಿ ಇದ್ದರೆ ಕಿಡ್ನಿಯ ಆರೋಗ್ಯವನ್ನು ಹಾಳು ಮಾಡುತ್ತದೆ.

English summary

Why We should Not Eat Too much Calcium | Tips For Health | ಅಧಿಕ ಕ್ಯಾಲ್ಸಿಯಂ ಏಕೆ ತಿನ್ನಬಾರದು | ಆರೋಗ್ಯಕ್ಕಾಗಿ ಕೆಲ ಸಲಹೆ

Calcium is also very good for your bones. And that is what makes it an essential part of your diet. But, the age old conception of more the better needs to be shred now. Here are a few reasons as to why excess calcium can be bad.
X
Desktop Bottom Promotion